ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishab Shetty: ಮಂಗಳೂರಿನಲ್ಲಿ ನಟ ರಿಷಬ್ ಶೆಟ್ಟಿ ಪತ್ನಿ ಜತೆ ಟೆಂಪಲ್ ರನ್

Rishab Shetty: ನಟ, ನಿರ್ದೇಶಕ ರಿಷಬ್ ಶೆಟ್ಟಿ, ಕುಟುಂಬ ಸಮೇತರಾಗಿ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕುತ್ತಾರು ಕೊರಗಜ್ಜನ ಆದಿಸ್ಥಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಕುರಿತ ವಿವರ ಇಲ್ಲಿದೆ.

ಮಂಗಳೂರಿನಲ್ಲಿ ನಟ ರಿಷಬ್ ಶೆಟ್ಟಿ ಪತ್ನಿ ಜತೆ ಟೆಂಪಲ್ ರನ್

Profile Siddalinga Swamy Mar 6, 2025 4:16 PM

ಮಂಗಳೂರು: ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಹಾಗೂ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty), ಕುಟುಂಬ ಸಮೇತರಾಗಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಮೊದಲು ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಪತ್ನಿ ಮತ್ತು ಮಕ್ಕಳೊಂದಿಗೆ ಭೇಟಿ ನೀಡಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕುತ್ತಾರು ಕೊರಗಜ್ಜನ ಆದಿಸ್ಥಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕುಂದಾಪುರದಲ್ಲಿ ʼಕಾಂತಾರ ಪ್ರಿಕ್ವೇಲ್ʼ ಚಿತ್ರೀಕರಣವು ಭರದಿಂದ ಸಾಗಿದ್ದು, ಚಿತ್ರೀಕರಣ ಯಶಸ್ವಿಯಾಗಿ ನೆರೆವೇರುವಂತೆ ಈ ವೇಳೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

'ಕಾಂತಾರ' ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಸ್ಯಾಂಡಲ್‌ವುಡ್‌ ನಟ ರಿಷಬ್‌ ಶೆಟ್ಟಿ ಸದ್ಯ 'ಕಾಂತಾರ 2' ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. 'ಕಾಂತಾರ' ಚಿತ್ರದ ಪ್ರಿಕ್ವೇಲ್‌ ಆಗಿರುವ ʼಕಾಂತಾರ: ಚಾಪ್ಟರ್‌ 1ʼ ಸಿನಿಮಾದ ಶೂಟಿಂಗ್‌ ಕುಂದಾಪುರದಲ್ಲಿ ನಡೆಯುತ್ತಿದೆ.

ಈ ಸುದ್ದಿಯನ್ನೂ ಓದಿ | Nandini Milk: ಇನ್ನು ಉತ್ತರ ಪ್ರದೇಶದಲ್ಲೂ ಸಿಗುತ್ತೆ ನಂದಿನಿ ಹಾಲು, ಹತ್ರಾಸ್‌ನಲ್ಲಿ ಪ್ಲಾಂಟ್‌ ಶುರು

ಛತ್ರಪತಿ ಶಿವಾಜಿಯಾಗಿ ರಿಷಬ್‌ ಶೆಟ್ಟಿ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ

ಬೆಂಗಳೂರು: ರಿಷಬ್‌ ಶೆಟ್ಟಿ (Rishab Shetty) ಅಭಿನಯದ ಮುಂಬರುವ ಐತಿಹಾಸಿಕ ಚಲನಚಿತ್ರ 'ದಿ ಪ್ರೈಡ್ ಆಫ್ ಭಾರತ್‌: ಛತ್ರಪತಿ ಶಿವಾಜಿ ಮಹಾರಾಜ್'ನ (The Pride of Bharat: Chhatrapati Shivaji Maharaj) ಮೊದಲ ಪೋಸ್ಟರ್‌ (First poster) ಅನಾವರಣಗೊಂಡಿದೆ. ಇದರಲ್ಲಿ ರಿಷಬ್‌ ಶೆಟ್ಟಿ ಛತ್ರಪತಿ ಶಿವಾಜಿಯಾಗಿ ಕಂಗೊಳಿಸಿದ್ದಾರೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಮರಾಠ ಯೋಧನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಅಧಿಕೃತ ಎಕ್ಸ್ ಖಾತೆಯಲ್ಲಿ ಬಿಡುಗಡೆಯಾದ ಫಸ್ಟ್ ಲುಕ್ ಪೋಸ್ಟರ್, ಮರಾಠಾ ದೊರೆಯ ಶಕ್ತಿ, ಭಕ್ತಿ ಮತ್ತು ಶೌರ್ಯವನ್ನು ಪ್ರದರ್ಶಿಸುವಂತಿದೆ.

ಛತ್ರಪತಿ ಶಿವಾಜಿ ಮಹಾರಾಜರ 395ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಶಿವಾಜಿ ಜಯಂತಿಯ ಹಿನ್ನೆಲೆಯಲ್ಲಿ ಈ ಪೋಸ್ಟರ್‌ ಹೊರತರಲಾಗಿದೆ. ಪೋಸ್ಟರ್ ಜೊತೆಗೆ ನಿರ್ಮಾಪಕರು "ಜೈ ಭವಾನಿ! ಜೈ ಶಿವಾಜಿ! ಹರಹರ ಮಹಾದೇವ್!! ಮಹಾನ್ ಯೋಧ ರಾಜ, #ThePrideOfBharat #ChhatrapatiShivajiMaharaj ಅವರ 395ನೇ ಜನ್ಮ ವಾರ್ಷಿಕೋತ್ಸವದಂದು, ನಾವು ಮೊದಲ ನೋಟವನ್ನು ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದ್ದೇವೆ. ಇಡೀ ಭರತಖಂಡ ಇತಿಹಾಸವನ್ನೇ ಬದಲಿಸಿದ, ದಂತಕಥೆ ಎನಿಸಿದ ಛತ್ರಪತಿಯ ಶಕ್ತಿ ಮತ್ತು ಭಕ್ತಿಯನ್ನು ಪ್ರದರ್ಶಿಸುತ್ತೇವೆ. ಜನವರಿ 21, 2027ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅವರ ಅಸಾಧಾರಣ ಸಾಹಸ, ಗೌರವ ಮತ್ತು ಸ್ವರಾಜ್ಯ ಹೋರಾಟದ ತೆರೆಗೆ ತರಲಿದ್ದೇವೆ" ಎಂದಿದ್ದಾರೆ.

ಶಿವಾಜಿ ಪಾತ್ರದ ಬಗ್ಗೆ ರಿಷಬ್ ಶೆಟ್ಟಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. "ಛತ್ರಪತಿ ಶಿವಾಜಿ ಮಹಾರಾಜರ ಪವಿತ್ರ ಜನ್ಮ ವಾರ್ಷಿಕೋತ್ಸವದಂದು ನನ್ನ ಹೃದಯ ಗೌರವ ಮತ್ತು ಜವಾಬ್ದಾರಿಯಿಂದ ಉಬ್ಬಿದೆ. ಅವರು ಕೇವಲ ಯೋಧನಾಗಿರಲಿಲ್ಲ, ಸ್ವರಾಜ್ಯದ ಆತ್ಮ - ಧೈರ್ಯ, ಬುದ್ಧಿವಂತಿಕೆ ಮತ್ತು ಭಕ್ತಿಯ ದಾರಿದೀಪವಾಗಿದ್ದರು. ಪದಗಳನ್ನು ಮೀರಿ ನಾನು ಅವರ ಅಪ್ರತಿಮ ಪರಂಪರೆಗೆ ನ್ಯಾಯ ಸಲ್ಲಿಸುತ್ತೇನೆ ಮತ್ತು ಪ್ರತಿಯೊಬ್ಬ ಭಾರತೀಯನೂ ಅವರ ಅಸಾಧಾರಣ ಶೌರ್ಯದ ಜ್ವಾಲೆಯನ್ನು ಅನುಭವಿಸುವಂತೆ ಮಾಡುತ್ತೇನೆ" ಎಂದಿದ್ದಾರೆ.

ʼದ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ʼ ಜನವರಿ 21, 2027 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇತ್ತೀಚೆಗೆ ಶಿವಾಜಿ ಮಹಾರಾಜರ ಮಗ ಸಂಭಾಜಿಯ ಕತೆಯನ್ನು ಹೇಳುವ ʼಛಾವಾʼ ಸಿನೆಮಾ ಬಿಡುಗಡೆಯಾಗಿದ್ದು, ದೇಶಾದ್ಯಂತ ಜನರನ್ನು ಆಕರ್ಷಿಸುತ್ತಿದೆ.

ಈ ಸುದ್ದಿಯನ್ನೂ ಓದಿ | Womens Day Fashion: ಮಹಿಳಾ ದಿನಾಚಾರಣೆ ಸೆಲೆಬ್ರೇಷನ್‌ಗೆ ಬಂತು ಫೆಮಿನೈನ್‌ ಲುಕ್‌ ನೀಡುವ ಡಿಸೈನರ್‌ವೇರ್ಸ್

ಈ ನಡುವೆ ರಿಷಬ್‌ ಶೆಟ್ಟಿ ಅವರ ಬಳಿ ಇನ್ನೂ ಎರಡು ಮೆಗಾ ಯೋಜನೆಗಳಿವೆ. ನಟ ಪ್ರಶಾಂತ್ ವರ್ಮಾ ಅವರ 'ಜೈ ಹನುಮಾನ್' ಚಿತ್ರದಲ್ಲಿ ಭಗವಾನ್ ಹನುಮಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ ಹಿಟ್ ಸೂಪರ್ ಹೀರೋ ಚಿತ್ರ 'ಹನುಮಾನ್'ನ ಮುಂದುವರಿದ ಭಾಗ. ಇದಲ್ಲದೆ ಅವರು 'ಕಾಂತಾರ: ಚಾಪ್ಟರ್‌ 1' ಅವರ ಯಶಸ್ವಿ ಚಲನಚಿತ್ರ 'ಕಾಂತಾರ'ದ ಪ್ರೀಕ್ವೆಲ್‌ ಆಗಿ ಬರಲಿದೆ. ರಿಷಬ್‌ ಅದನ್ನು ನಿರ್ದೇಶಿಸುತ್ತಿದ್ದಾರೆ ಮತ್ತು ನಟಿಸುತ್ತಿದ್ದಾರೆ. ಇದು ಈ ವರ್ಷದ ಕೊನೆಯಲ್ಲಿ ಅಕ್ಟೋಬರ್ 2, 2025 ರಂದು ಬಿಡುಗಡೆಯಾಗಲಿದೆ.