ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Bro Gowda: ಎಂಟು ವರ್ಷದ ಪ್ರೀತಿಯನ್ನು ಬಚ್ಚಿಟ್ಟಿದ್ದೇಕೆ ಶಮಂತ್?: ಮೇಘನಾ ಬಗ್ಗೆ ಬ್ರೋ ಗೌಡ ಏನಂದ್ರು?

ಬ್ರೋ ಗೌಡ ಅವರು ಪ್ರೇಮಿಗಳ ದಿನದಂದೇ ನಿಶ್ಚಿತಾರ್ಥ ಆಗಿರುವ ಕುರಿತ ವಿಡಿಯೋ ಹಂಚಿಕೊಂಡು ಎಲ್ಲರಿಗೂ ಶಾಕ್ ಕೊಟ್ಟರು. ಮೇಘನಾ ಎನ್ನುವವರ ಜತೆ ಶಮಂತ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ಶಮಂತ್ ಅವರು ತಮ್ಮ ಲವ್ ಸ್ಟೋರಿ ಬಗ್ಗೆ ವಿಶ್ವವಾಣಿ ಟಿವಿ ಸ್ಪೆಷಲ್ ಯೂಟ್ಯೂಬ್ ಜೊತೆಗಿನ ಸಂದರ್ಶನದಲ್ಲಿ ಕೆಲವು ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ.

8 ವರ್ಷದ ಪ್ರೀತಿಯನ್ನು ಬಚ್ಚಿಟ್ಟಿದ್ದೇಕೆ ಶಮಂತ್?: ಮೇಘನಾ ಬಗ್ಗೆ ಏನಂದ್ರು?

Shamanth Gowda Interview

Profile Vinay Bhat Feb 24, 2025 7:01 AM

ಬ್ರೋ ಗೌಡ (Bro Gowda) ಎಂದೇ ಖ್ಯಾತಿಯಾಗಿರುವ ಕಿರುತೆರೆ ನಟ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿ ಶಮಂತ್ ಇತ್ತೀಚೆಗಷ್ಟೆ ಫೆಬ್ರವರಿ 14 ರಂದು ತಮ್ಮ ಅಭಿಮಾನಿಗಳಿಗೆ ಬಿಗ್ ಸರ್​ಪ್ರೈಸ್ ಕೊಟ್ಟರು. ಸಿಂಗರ್ ಆಗಿ, ಲವ್ವರ್ ಬಾಯ್ ಆಗಿ ಈಗ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಪಕ್ಕ ಫ್ಯಾಮಿಲಿ ಮ್ಯಾನ್ ಆಗಿ ಎಲ್ಲರ ಮನಸ್ಸನ್ನು ಗೆದ್ದಿರುವ ಶಮಂತ್ ರಿಯಲ್ ಲೈಫ್ ನಲ್ಲೂ ಹೊಸ ಬಾಳಿನ ಕಡೆಗೆ ಹೆಜ್ಜೆಯಾಕುತ್ತಿದ್ದೇನೆ ಎಂದರು.

ಬ್ರೋ ಗೌಡ ಅವರು ಪ್ರೇಮಿಗಳ ದಿನದಂದೇ ನಿಶ್ಚಿತಾರ್ಥ ಆಗಿರುವ ಕುರಿತ ವಿಡಿಯೋ ಹಂಚಿಕೊಂಡು ಎಲ್ಲರಿಗೂ ಶಾಕ್ ಕೊಟ್ಟರು. ಮೇಘನಾ ಎನ್ನುವವರ ಜತೆ ಶಮಂತ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರು ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಇಬ್ಬರ ಪ್ರೀತಿ ವಿಚಾರವನ್ನು ಹೇಳುವುದಕ್ಕೆಂದೆ ಒಂದು ಬ್ಯೂಟಿಫುಲ್ ವಿಡಿಯೋ ಮಾಡಿದ್ದರು. ಇದೀಗ ಶಮಂತ್ ಅವರು ತಮ್ಮ ಲವ್ ಸ್ಟೋರಿ ಬಗ್ಗೆ ವಿಶ್ವವಾಣಿ ಟಿವಿ ಸ್ಪೆಷಲ್ ಯೂಟ್ಯೂಬ್ ಜೊತೆಗಿನ ಸಂದರ್ಶನದಲ್ಲಿ ಕೆಲವು ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ.

ನಮ್ಮ ಪ್ರೀತಿ ವಿಚಾರ ಕೆಲವು ಆತ್ಮೀಯರಿಗೆ ಗೊತ್ತಿತ್ತು ಆದರೆ ನಾನೇ ಬಾಯಿ ಮುಚ್ಚಿಸಿದ್ದೆ. ನಾನು ಯಾವುದೋ ಒಂದು ಒಳ್ಳೆ ಕೆಲಸ ಆಗಬೇಕು ಎಂದರೆ ಮೊದಲೇ ಯಾರಿಗೂ ಹೇಳುವುದಿಲ್ಲ. ಸಿನಿಮಾ ಕೂಡ ಅಷ್ಟೇ ಎಲ್ಲಾ ಒಕೆಯಾಗಿ ಶುರುವಾಗುವ ಸಮಯ ಬಂದರೂ ನಾನು ಯಾರಿಗೂ ಹೇಳಿರಲಿಲ್ಲ. ಮೊದಲಿನಿಂದಲೂ ಕೆಲಸ ಮಾಡಿದ ಮೇಲೆ ಹೇಳುವುದು ನನ್ನ ಅಭ್ಯಾಸ. ಇದನ್ನು ನಾನು ಜೀವನದಲ್ಲಿ ರೂಢಿಸಿಕೊಂಡು ಬಂದಿದ್ದೇನೆ ಎಂದು ಶಮಂತ್‌ ಗೌಡ ಹೇಳಿದರು.

ನಾವು ಎಂಟು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವು. ಯಾರಿಗೂ ಹೇಳದೇ ಆ ಸಿಕ್ರೇಟ್‌ ಅನ್ನು ಕಾಪಾಡಿಕೊಂಡಿದ್ದೆವು ಎಂದು ತಮ್ಮ ಪ್ರೀತಿಯ ರಹಸ್ಯ ಬಿಚ್ಚಿಟ್ಟಿದ್ದಾರೆ. ಕಾಲೇಜಿನಲ್ಲಿ ನನ್ನ ಸ್ನೇಹಿತರದು ಗೆಟ್‌ ಟುಗೆದರ್‌ ಇತ್ತು. ಅದೇ ಸಮಯದಲ್ಲಿ ಫೆಸ್ಟ್‌ ಕೂಡ ನಡೆಯುತ್ತಿತ್ತು. ಆ ಫೆಸ್ಟ್‌ಗೆ ಹೋದಾಗ ಅಲ್ಲಿ ಅವರ ಪರಿಚಯ ಆಯ್ತು. ಅಲ್ಲಿಂದ ಮುಂದುವರಿದು ಇಲ್ಲಿದೆ ಬಂದಿದೆ. ಹಿಂದೆ ತಿರುಗಿ ನೋಡಿದಾಗ ಎಂಟು ವರ್ಷ ಆಗಿ ಬಿಟ್ಟಿದೆ. ಇದು ಸೂಕ್ತವಾದ ಸಮಯ ಎಂದುಕೊಂಡು ಮನೆಯಲ್ಲಿ ಒಪ್ಪಿಸಿ ಎಲ್ಲರಿಗೂ ಹೇಳಿದೆವು. ಬಳಿಕ ಫೆ. 14 ರಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡೆವು ಎಂದರು.



ಭಾವಿ ಪತ್ನಿ ಮೇಘನಾ ಬಗ್ಗೆ ಮಾತನಾಡಿದ ಶಮಂತ್, ಅವರು ಸಿಕ್ಕಾಪಟ್ಟೆ ಆ್ಯಕ್ಟಿವ್‌. ನಾನು ಡಲ್‌ ಆಗಿದ್ದಾಗ ಅವರೇ ನನ್ನನ್ನು ಆ್ಯಕ್ಟಿವ್‌ ಮಾಡಿಸುತ್ತಾರೆ. ಅವರು ನನಗಿಂತ ಬ್ಯುಸಿ. ಅವರಿಗೆ ದಿನೇ ಕೆಲಸ ಇದ್ದೇ ಇರುತ್ತದೆ. ನಾನು ಅವರು ಸಿಗುವುದು ತುಂಬಾ ಕಡಿಮೆ ಸಮಯ. ಆದರೆ ಸಿಗೋ ಸಮಯ ತುಂಬಾ ಚೆನ್ನಾಗಿರುತ್ತದೆ. ನಾನು ಬಿಗ್‌ ಬಾಸ್‌ಗೆ ಹೋದಾಗ ನನ್ನ ಸಂಪೂರ್ಣ ಸೋಷಿಯಲ್ ಮೀಡಿಯಾ ಹ್ಯಾಂಡೆಲ್, ನನ್ನ ಬಟ್ಟೆ, ನನ್ನ ಮೇಕಪ್‌ ಕಿಟ್‌, ಮತ್ತೆ ದಿನಾ ಬಳಸುವ ವಸ್ತುಗಳು ಹೀಗೆ ಪ್ರತಿಯೊಂದು ಸಂಪೂರ್ಣವಾಗಿ ಅವರೇ ನೋಡಿಕೊಂಡಿದ್ದು ಎಂದು ಹಾಡಿ ಹೊಗಳಿದ್ದಾರೆ.

Karunya Ram: ಭಕ್ತರು ತಿಂದು ಬಿಟ್ಟಿದ್ದ ತಟ್ಟೆ ಎತ್ತುತ್ತಿರುವ ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ: ಏನಾಯಿತು?