ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Titanic in Bollywood: ಬಾಲಿವುಡ್‌ ವರ್ಶನ್‌ನಲ್ಲಿ ಟೈಟಾನಿಕ್ ಸಿನಿಮಾ- ಹೀರೋ, ಹಿರೋಯಿನ್‌ ಯಾರು ಗೊತ್ತಾ?

ಹಾಲಿವುಡ್‌ನ ಐಕಾನಿಕ್ ಚಿತ್ರ (Hollywood's iconic film) ಟೈಟಾನಿಕ್ (Titanic) 1997ರಲ್ಲಿ ತೆರೆಗೆ ಬಂದಿದ್ದರೂ ಇಂದಿಗೂ ಈ ಸಿನಿಮಾ ಸಾಕಷ್ಟು ಜನಪ್ರಿಯತೆ ಉಳಿಸಿಕೊಂಡಿದೆ. ಇದೀಗ ಬಾಲಿವುಡ್ (bollywood) ನಲ್ಲಿ ಟೈಟಾನಿಕ್ ಸಿನಿಮಾ ಮಾಡಿದರೆ ಹೇಗಿರುತ್ತೆ, ಚಿತ್ರದ ನಾಯಕ, ನಾಯಕಿ ಯಾರಾಗಬಹುದು ಮೊದಲಾದ ಪ್ರಶ್ನೆಗಳಿಗೆ ಎಐ ಉತ್ತರ ಕಂಡುಕೊಂಡಿದೆ. ಟೈಟಾನಿಕ್ ಚಿತ್ರವನ್ನು ಬಾಲಿವುಡ್ ಶೈಲಿಯಲ್ಲಿ ಮಾಡಿದರೆ ಹೇಗಿರುತ್ತೆ ಎಂಬುದನ್ನು ಎಐ (AI) ತೋರಿಸಿಕೊಟ್ಟಿದೆ.

ಬಾಲಿವುಡ್‌ ವರ್ಶನ್‌ನಲ್ಲಿ ಟೈಟಾನಿಕ್ ಸಿನಿಮಾ- ಈ ವಿಡಿಯೊ ನೋಡಿ

ಮುಂಬೈ: ಹಾಲಿವುಡ್ ನ ಐಕಾನಿಕ್ ಚಿತ್ರ (Hollywood's iconic film) ಟೈಟಾನಿಕ್ (Titanic) 1997ರಲ್ಲಿ ತೆರೆಗೆ ಬಂದಿದ್ದರೂ ಇಂದಿಗೂ ಈ ಸಿನಿಮಾ ಸಾಕಷ್ಟು ಜನಪ್ರಿಯತೆ ಉಳಿಸಿಕೊಂಡಿದೆ. ಇದೀಗ ಬಾಲಿವುಡ್ (Bollywood Movie) ನಲ್ಲಿ ಟೈಟಾನಿಕ್ ಸಿನಿಮಾ ಮಾಡಿದರೆ ಹೇಗಿರುತ್ತೆ, ಚಿತ್ರದ ನಾಯಕ, ನಾಯಕಿ ಯಾರಾಗಬಹುದು ಮೊದಲಾದ ಪ್ರಶ್ನೆಗಳಿಗೆ ಎಐ ಉತ್ತರ ಕಂಡುಕೊಂಡಿದೆ. ಟೈಟಾನಿಕ್ ಚಿತ್ರವನ್ನು ಬಾಲಿವುಡ್ ಶೈಲಿಯಲ್ಲಿ (Bollywood Version) ಮಾಡಿದರೆ ಹೇಗಿರುತ್ತೆ ಎಂಬುದನ್ನು ಎಐ (AI) ತೋರಿಸಿಕೊಟ್ಟಿದೆ. ಕೃತಕ ಬುದ್ದಿ ಮತ್ತೆಯನ್ನು ಬಳಸಿ ನಿರ್ಮಿಸಿರುವ ಈ ಚಿತ್ರದಲ್ಲಿ ಬಾಲಿವುಡ್ ನ ಜನಪ್ರಿಯ ಜೋಡಿಗಳಲ್ಲಿ ಒಂದಾದ ಹಮ್ ಆಪ್ಕೆ ಹೈ ಕೌನ್ ಚಿತ್ರದ ತಾರೆಯರಾದ ಸಲ್ಮಾನ್ ಖಾನ್ (Salman Khan) ಮತ್ತು ಮಾಧುರಿ ದೀಕ್ಷಿತ್ (Madhuri Dixit) ಅವರನ್ನು ಪ್ರಮುಖ ಪಾತ್ರಧಾರಿಗಳನ್ನಾಗಿ ಮಾಡಲಾಗಿದೆ.

ಎಐ ನಿರ್ಮಿಸಿರುವ ಈ ಚಿತ್ರದಲ್ಲಿ ರೋಸ್ ಪಾತ್ರದಲ್ಲಿ ಮಾಧುರಿ ದೀಕ್ಷಿತ್, ಜ್ಯಾಕ್ ಪಾತ್ರದಲ್ಲಿ ಸಲ್ಮಾನ್ ಖಾನ್ , ಆದಿತ್ಯ ಪಾಂಚೋಲಿ- ಕ್ಯಾಲೆಡನ್ ಹಾಕ್ಲಿ, ಆಮಿರ್ ಖಾನ್- ಫ್ಯಾಬ್ರಿಜಿಯೊ, ಅನುಪಮ್ ಖೇರ್- ಕ್ಯಾಪ್ಟನ್ ಎಡ್ವರ್ಡ್, ನಸೀರುದ್ದೀನ್ ಶಾ- ಥಾಮಸ್ ಆಂಡ್ರ್ಯೂಸ್, ಫರೀದಾ ಜಲಾಲ್- ಮಾರ್ಗರೇಟ್ ಬ್ರೌನ್ ಆಗಿ ಮತ್ತು ಸಿಮಿ ಗರೆವಾಲ್- ರುತ್ ಡಿವಿಟ್ ಆಗಿದ್ದಾರೆ. ಇದರ ವೈರಲ್ ವಿಡಿಯೊದಲ್ಲಿ ರೋಸ್ ಮತ್ತು ಜ್ಯಾಕ್ ನಡುವಿನ ಕೆಲವು ರೊಮ್ಯಾಂಟಿಕ್ ದೃಶ್ಯಗಳನ್ನು ಕಾಣಬಹುದು. ಟೈಟಾನಿಕ್ ಭಂಗಿಯಲ್ಲಿ ಮಾಧುರಿ ಮತ್ತು ಸಲ್ಮಾನ್ ಸಮುದ್ರದಲ್ಲಿನ ಮರದ ದಿಮ್ಮಿಯ ಮೇಲೆ ತೇಲುತ್ತಿರುವ ದೃಶ್ಯವನ್ನು ಇದು ಒಳಗೊಂಡಿದೆ.



ಕೃತಕ ಬುದ್ಧಿಮತ್ತೆಯಿಂದ ರಚಿಸಿರುವ ಈ ಚಿತ್ರದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ಕಾಮೆಂಟ್ ಗಳೂ ಕೂಡ ಹರಿದು ಬರುತ್ತಿವೆ. ಒಬ್ಬರು ಇದು ಅದ್ಭುತ. ನನಗೆ ಮೊದಲ ಬಾರಿಗೆ ಎಐ ಇಷ್ಟವಾಯಿತು. ಎಂತಹ ಕಲೆ. ಪೂರ್ಣ ಚಲನಚಿತ್ರ ಮಾಡಿ ಎಂದಿದ್ದಾರೆ. ಹೀಗೆಯೇ ಚಿತ್ರವನ್ನು ಮೆಚ್ಚಿ ಹಲವಾರು ಕಾಮೆಂಟ್ ಗಳು ಬಂದಿವೆ.

ಟೈಟಾನಿಕ್ ಚಿತ್ರವು ಒಂದು ದುರಂತ ಕಥೆಯನ್ನು ಒಳಗೊಂಡಿದೆ. ಜೇಮ್ಸ್ ಕ್ಯಾಮರೂನ್ ನಿರ್ಮಿಸಿರುವ ಈ ಚಿತ್ರ 1997ರಲ್ಲಿ ತೆರೆಗೆ ಬಂದಿತ್ತು. ಲಿಯೊನಾರ್ಡೊ ಡಿಕಾಪ್ರಿಯೊ ಮತ್ತು ಕೇಟ್ ವಿನ್ಸ್ ಲೆಟ್ ಜ್ಯಾಕ್ ಮತ್ತು ರೋಸ್ ಪಾತ್ರದಲ್ಲಿ ನಟಿಸಿದ್ದರು. 11 ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದಿರುವ ಈ ಚಿತ್ರ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ.

ಈ ಸುದ್ದಿಯನ್ನೂ ಓದಿ: B. Saroja Devi: ಎಸ್.ಎಂ. ಕೃಷ್ಣ ಅವರಿಗೆ ಮನಸೋತಿದ್ದರೆ ಅಭಿನಯ ಸರಸ್ವತಿ? ಈ ಪ್ರೇಮ್ ಕಹಾನಿ ಬಗ್ಗೆ ಗೊತ್ತೇ?

ಬಾಲಿವುಡ್ ನ ಜನಪ್ರಿಯ ಜೋಡಿಗಳಲ್ಲಿ ಒಂದಾದ ಮಾಧುರಿ ದೀಕ್ಷಿತ್ ಮತ್ತು ಸಲ್ಮಾನ್ ಖಾನ್ ಹಮ್ ಆಪ್ಕೆ ಹೈ ಕೌನ್..!,ಸಜನ್, ಹಮ್ ತುಮ್ಹಾರೆ ಹೈ ಸನಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.