Pahalgam Terror Attack: ಪೂಂಚ್‌ನಲ್ಲಿ ಭಯೋತ್ಪಾದಕ ಅಡಗುತಾಣ ಪತ್ತೆ; 5 ಐಇಡಿಗಳು, ಸಂವಹನ ಸಾಧನ ವಶಕ್ಕೆ
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಭಯೋತ್ಪಾದಕ (Terror hideout busted) ಅಡಗುತಾಣದಿಂದ ಭದ್ರತಾ ಪಡೆಗಳು ಐದು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ವಶಪಡಿಸಿಕೊಂಡಿವೆ ಎಂದು ತಿಳಿದು ಬಂದಿದೆ. ಪಹಲ್ಗಾಮ್‌ನಲ್ಲಿ 26 ಜನರನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರಿಗಾಗಿ ಭಾರಿ ಶೋಧ ನಡೆಯುತ್ತಿದೆ.


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಭಯೋತ್ಪಾದಕ ಅಡಗುತಾಣದಿಂದ ಭದ್ರತಾ ಪಡೆಗಳು ಐದು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ವಶಪಡಿಸಿಕೊಂಡಿವೆ ಎಂದು ತಿಳಿದು ಬಂದಿದೆ. ಪಹಲ್ಗಾಮ್‌ನಲ್ಲಿ (Pahalgam Terror Attack) 26 ಜನರನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರಿಗಾಗಿ ಭಾರಿ ಶೋಧ ನಡೆಯುತ್ತಿದೆ. ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಪೂಂಚ್‌ನ ಸುರಂಕೋಟೆ ಅರಣ್ಯ ಪ್ರದೇಶದಲ್ಲಿ ಅಡಗುತಾಣವನ್ನು ಪತ್ತೆಹಚ್ಚಿದ್ದಾರೆ. ಮೂಲಗಳು ತಿಳಿಸಿರುವಂತೆ, ಟಿಫಿನ್ ಬಾಕ್ಸ್‌ಗಳಲ್ಲಿ ಮೂರು ಮತ್ತು ಸ್ಟೀಲ್ ಬಕೆಟ್‌ಗಳಲ್ಲಿ ಎರಡು ಐಇಡಿಗಳನ್ನು ಮರೆಮಾಡಲಾಗಿತ್ತು.
ಕಣಿವೆಯಾದ್ಯಂತ ದೊಡ್ಡ ಪ್ರಮಾಣದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ಸೇನೆ ಪ್ರಾರಂಭಿಸಿದೆ. ಸುರನ್‌ಕೋಟ್ ಸೆಕ್ಟರ್‌ನ ಹರಿ ಮರೋಟೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಭಾನುವಾರ ಸಂಜೆ ಉಗ್ರರ ಅಡಗುತಾಣವನ್ನು ಭೇದಿಸಲಾಗಿದೆ ಎಂದು ಪೂಂಚ್ ಪೊಲೀಸರು ತಿಳಿಸಿದ್ದಾರೆ. ಐದು ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು), ಎರಡು ರೇಡಿಯೋ ಸೆಟ್‌ಗಳು, ಸಂವಹನ ಸಾಧನಗಳು, ಮೂರು ಕಂಬಳಿಗಳು ಮತ್ತು ಇತರ ದೋಷಾರೋಪಣೆ ಮಾಡುವ ವಸ್ತುಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಐಇಡಿಗಳನ್ನು ಟಿಫಿನ್ ಬಾಕ್ಸ್‌ಗಳು ಮತ್ತು ಸ್ಟೀಲ್ ಬಕೆಟ್‌ಗಳಲ್ಲಿ ಮರೆಮಾಡಲಾಗಿತ್ತು ಎಂದು ತಿಳಿದು ಬಂದಿದೆ.
Security forces busted a terrorist hideout in Hari Marote village, Surankot, Poonch, J&K in a joint op by Army, Police & SOG. Forces Recovered 5 IEDs, wireless sets & other material from the hideout. pic.twitter.com/HnKR3mI3aw
— Defence Core (@Defencecore) May 5, 2025
ಅಧಿಕಾರಿಗಳು ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಶಂಕಿತ ಅಡಗುತಾಣಗಳ ಮೇಲೆ ದಾಳಿ ಮಾಡಿದ್ದಾರೆ, ಭಯೋತ್ಪಾದಕರು ಬಳಸುತ್ತಿದ್ದ ಆಶ್ರಯಗಳನ್ನು ಧ್ವಂಸ ಮಾಡಿದ್ದಾರೆ ಮತ್ತು ನೂರಾರು ಭಯೋತ್ಪಾದಕ ಸಹಚರರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಏತನ್ಮಧ್ಯೆ, ಪಾಕಿಸ್ತಾನವು ನಿನ್ನೆ ರಾತ್ರಿ ಪೂಂಚ್ ಮತ್ತು ಇತರ ವಲಯಗಳಲ್ಲಿನ LOC ಬಳಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಪಾಕ್‌ನ ಉದ್ದಟತನಕ್ಕೆ ಭಾರತೀಯ ಸೇನೆ ಪ್ರತ್ಯುತ್ತರ ನೀಡಿದೆ. "2025 ರ ಮೇ 04 -05 ರ ರಾತ್ರಿ, ಪಾಕಿಸ್ತಾನ ಸೇನಾ ಠಾಣೆಗಳು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಪೂಂಚ್, ರಾಜೌರಿ, ಮೆಂಧರ್, ನೌಶೇರಾ, ಸುಂದರ್‌ಬಾನಿ ಮತ್ತು ಅಖ್ನೂರ್ ಪ್ರದೇಶದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆದಿದೆ.
ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮತ್ತೊಂದು ವೈರಲ್ ವಿಡಿಯೋದಲ್ಲಿ ಏನಿದೆ ಗೊತ್ತೇ
ಏಪ್ರಿಲ್ 22, ಮಂಗಳವಾರ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ಬಳಿಕ ಭಾರತ ಹಾಗೂ ಪಾಕ್ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದೆ. ಭಾರತ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ನಡೆಯನ್ನು ಅನುಸರಿಸಿದೆ. ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಹೊರ ಹಾಕಲಾಗುತ್ತಿದೆ. ಅಲ್ಲಿನ ಪ್ರಜೆಗಳಿಗೆ ವೀಸಾ ನಿಷೇಧಿಸಲಾಗಿದೆ.