Khalistan Protest: ಖಲಿಸ್ತಾನಿಗಳ ಪುಂಡಾಟ- ಹಿಂದೂಗಳನ್ನು ಕೆನಡಾದಿಂದ ಭಾರತಕ್ಕೆ ಗಡೀಪಾರು ಮಾಡುವಂತೆ ಆಗ್ರಹ
Parade At Canada: ಕೆನಡಾದ ಟೊರೊಂಟೊದ ಮಾಲ್ಟನ್ ಗುರುದ್ವಾರದಲ್ಲಿ ಹಿಂದೂ ವಿರೋಧಿ ಮೆರವಣಿಗೆ ನಡೆದಿದ್ದು, ಹಿಂದೂ ಸಮುದಾಯದ ಜನರನ್ನು ಭಾರತಕ್ಕೆ ಗಡಿಪಾರು ಮಾಡಬೇಕೆಂದು ಒತ್ತಾಯಿಸಲಾಗಿದೆ. ಇದು ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಮಾರ್ಕ್ ಕಾರ್ನೆ ಅವರ ಆಡಳಿತದಲ್ಲಿ ಕೆನಡಾದ ಪರಿಸ್ಥಿತಿ ಜಸ್ಟಿನ್ ಟ್ರೂಡೋ ಆಡಳಿತಕ್ಕಿಂತ ಭಿನ್ನವಾಗಿರುತ್ತದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.


ಟೊರೊಂಟೊ: ಕೆನಡಾದ ಟೊರೊಂಟೊದ (Toronto) ಮಾಲ್ಟನ್ ಗುರುದ್ವಾರದಲ್ಲಿ (Malton Gurdwara) ಹಿಂದೂ ವಿರೋಧಿ ಮೆರವಣಿಗೆ (Anti-Hindu Parade) ನಡೆದಿದ್ದು, ಹಿಂದೂ ಸಮುದಾಯದ ಜನರನ್ನು ಭಾರತಕ್ಕೆ ಗಡಿಪಾರು ಮಾಡಬೇಕೆಂದು ಒತ್ತಾಯಿಸಲಾಗಿದೆ. ಇದು ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಮಾರ್ಕ್ ಕಾರ್ನೆ (Mark Carney) ಅವರ ಆಡಳಿತದಲ್ಲಿ ಕೆನಡಾದ (Canada Khalistan Protest) ಪರಿಸ್ಥಿತಿ ಜಸ್ಟಿನ್ ಟ್ರೂಡೋ (Justin Trudeau) ಆಡಳಿತಕ್ಕಿಂತ ಭಿನ್ನವಾಗಿರುತ್ತದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಪ್ರತಿಭಟನೆಯನ್ನು ದೇಶದ ಖಾಲಿಸ್ತಾನಿ ಗುಂಪುಗಳು ನಡೆಸಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರ ಪ್ರತಿಮೆಗಳನ್ನು ಕೂಡ ಮೆರವಣಿಗೆಯಲ್ಲಿ ಪ್ರದರ್ಶಿಸಲಾಗಿತ್ತು.
ಕೆನಡಾದ ಪತ್ರಕರ್ತ ಡೇನಿಯಲ್ ಬೋರ್ಡ್‌ಮನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಜಿಹಾದಿಗಳು ನಮ್ಮ ಬೀದಿಗಳಲ್ಲಿ ಹಿಂಸಾಚಾರ ನಡೆಸುತ್ತಿದ್ದಾರೆ, ಯಹೂದಿಗಳಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಮತ್ತು ಸಾಮಾಜಿಕ ಸೌಹಾರ್ದಕ್ಕೆ ಗಂಭೀರ ಹಾನಿಯುಂಟುಮಾಡುತ್ತಿದ್ದಾರೆ. ಆದರೆ, ಖಾಲಿಸ್ತಾನಿಗಳು ವಿದೇಶಿ ಧನಸಹಾಯದೊಂದಿಗೆ ಸಮಾಜಕ್ಕೆ ಅತ್ಯಂತ ದ್ವೇಷಪೂರಿತ ಬೆದರಿಕೆಯಾಗಿ ಮಾರ್ಪಟ್ಟಿದ್ದಾರೆ. ಮಾರ್ಕ್ ಕಾರ್ನೆ ಅವರ ಕೆನಡಾ, ಜಸ್ಟಿನ್ ಟ್ರೂಡೋ ಅವರ ಕೆನಡಾದಿಂದ ಭಿನ್ನವಾಗಿರುತ್ತದೆಯೇ?" ಎಂದು ಪ್ರಶ್ನಿಸಿದ್ದಾರೆ.
ಶಾನ್ ಬಿಂದಾ ಎಂಬ ಬಳಕೆದಾರನ ಎಕ್ಸ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬೋರ್ಡ್‌ಮನ್, ಈ ಪ್ರತಿಭಟನೆಯನ್ನು ಖಾಲಿಸ್ತಾನಿ ಭಯೋತ್ಪಾದಕ ಗುಂಪು "ಹಿಂದೂ ವಿರೋಧಿ ದ್ವೇಷ"ದಿಂದ ನಡೆಸಿತು ಎಂದು ಆರೋಪಿಸಿದ್ದಾರೆ.
ಈ ಸುದ್ದಿಯನ್ನು ಓದಿ: Pahalgam Terror Attack: ಪೂಂಚ್‌ನಲ್ಲಿ ಭಯೋತ್ಪಾದಕ ಅಡಗುತಾಣ ಪತ್ತೆ; 5 ಐಇಡಿಗಳು, ಸಂವಹನ ಸಾಧನ ವಶಕ್ಕೆ
"ಟೊರೊಂಟೊದ ಮಾಲ್ಟನ್ ಗುರುದ್ವಾರದಲ್ಲಿ ಖಾಲಿಸ್ತಾನಿ ಗುಂಪು, ಟ್ರಿನಿಡಾಡ್, ಗಯಾನ, ಸುರಿನಾಮ್, ಜಮೈಕಾ, ದಕ್ಷಿಣ ಆಫ್ರಿಕಾ, ನೆದರ್‌ಲ್ಯಾಂಡ್ಸ್, ಮಲೇಷಿಯಾ, ಶ್ರೀಲಂಕಾ, ಸಿಂಗಾಪುರ, ಕೀನ್ಯಾ ಮತ್ತು ಇತರೆಡೆ ವೈವಿಧ್ಯಮಯ ಸಮುದಾಯಗಳನ್ನು ಹೊಂದಿರುವ 8 ಲಕ್ಷ ಹಿಂದೂಗಳನ್ನು ಹಿಂದುಸ್ತಾನಕ್ಕೆ ಗಡೀಪಾರು ಮಾಡಬೇಕೆಂದು ಒತ್ತಾಯಿಸಿದೆ. ಇದು ಭಾರತ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲ; ಇದು ಕೆನಡಾದ ಅತ್ಯಂತ ಘೋರ ದಾಳಿಗೆ ಕಾರಣವಾದ ಖಾಲಿಸ್ತಾನಿ ಭಯೋತ್ಪಾದಕ ಗುಂಪಿನಿಂದ ಬಹಿರಂಗವಾದ ಹಿಂದೂ ವಿರೋಧಿ ದ್ವೇಷವಾಗಿದೆ" ಎಂದು ಬಿಂದಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೆನಡಾದ ಪ್ರಧಾನಮಂತ್ರಿ ಮಾರ್ಕ್ ಕಾರ್ನೆ ಮತ್ತು ಅವರ ಲಿಬರಲ್ ಪಾರ್ಟಿ ರಾಷ್ಟ್ರೀಯ ಚುನಾವಣೆಯಲ್ಲಿ ಗೆದ್ದ ಕೆಲವೇ ದಿನಗಳ ನಂತರ ಟೊರೊಂಟೊದಲ್ಲಿ ಈ ಹಿಂದೂ ವಿರೋಧಿ ಮೆರವಣಿಗೆ ನಡೆದಿದೆ. ಕಾರ್ನೆ, ಹೊಸ ಜನಾದೇಶಕ್ಕಾಗಿ ಸಂಸತ್ತನ್ನು ವಿಸರ್ಜಿಸಿದ್ದರಿಂದ ಚುನಾವಣೆಯನ್ನು ಮೊದಲಿಗಿಂತ ಮುಂಚಿತವಾಗಿ ನಡೆಸಲಾಯಿತು. ಜಸ್ಟಿನ್ ಟ್ರೂಡೋ, ತಮ್ಮ ಅವಧಿಯ ಕೊನೆಯಲ್ಲಿ ಪಕ್ಷದ ಬೆಂಬಲ ಕಳೆದುಕೊಂಡು ಕೆಳಗಿಳಿದ ನಂತರ ಕಾರ್ನೆ ಅಧಿಕಾರ ವಹಿಸಿಕೊಂಡಿದ್ದರು.