ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಸನ್‌ರೈಸರ್ಸ್‌ ಹೈದರಾಬಾದ್‌ಗೆ ಸೇರ್ಪೆಡಯಾದ ಹರ್ಷ್‌ ದುಬೆ!

ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮತ್ತೊಂದು ದೊಡ್ಡ ಬದಲಾವಣೆಯಾಗಿದೆ. ಗಾಯಾಳು ಸ್ಮರಣ್ ರವಿಚಂದ್ರನ್ ಬದಲಿಗೆ ಹೈದರಾಬಾದ್ ತಂಡದಲ್ಲಿ ಹೊಸ ಆಟಗಾರನಿಗೆ ಪ್ರವೇಶ ನೀಡಲಾಗಿದೆ.‌ ವಿದರ್ಭ ತಂಡದ ಹರ್ಷ್‌ ದುಬೆಗೆ ಸ್ಥಾನವನ್ನು ನೀಡಲಾಗಿದೆ.

ಸನ್‌ರೈಸರ್ಸ್‌ ಹೈದರಾಬಾದ್‌ಗೆ ಸೇರ್ಪೆಡಯಾದ ಹರ್ಷ್‌ ದುಬೆ!

ಸನ್‌ರೈಸರ್ಸ್‌ ಹೈದರಾಬಾದ್‌ ಸೇರಿದ ಹರ್ಷ್‌ ದುಬೆ.

Profile Ramesh Kote May 5, 2025 11:37 AM

ನವದೆಹಲಿ: ಹದಿನೆಂಟನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಆರಂಭವಾದ ಕೆಲವು ದಿನಗಳಲ್ಲೇ ಆಸ್ಟ್ರೇಲಿಯಾ ಸ್ಪಿನ್ನರ್‌ ಆಡಂ ಝಾಂಪ ಗಾಯಗೊಂಡು ಇಡೀ ಟೂರ್ನಿಯಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸ್ಮರಣ್ ರವಿಚಂದ್ರನ್ ಸೇರ್ಪಡೆಯಾಗಿದ್ದರು. ಆದರೆ ಈಗ ಈ ಆಟಗಾರ ಕೂಡ ಗಾಯಗೊಂಡು ಐಪಿಎಲ್‌ ಟೂರ್ನಿಯ ಇನ್ನುಳಿದ ಭಾಗದಿಂದ ಹೊರಗುಳಿದಿದ್ದಾರೆ. ಸ್ಮರಣ್ ಬದಲಿಗೆ ಹೈದರಾಬಾದ್ ತಂಡಕ್ಕೆ ಹೊಸ ಆಟಗಾರ ಸೇರ್ಪಡೆಗೊಂಡಿದ್ದಾರೆ.‌ ವಿದರ್ಭ ತಂಡದ ಆಲ್‌ರೌಂಡರ್‌ ಹರ್ಷ್‌ ದುಬೆಗೆ (Harsh Dubey) ಎಸ್‌ಆರ್‌ಎಚ್‌ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡ, ಸೋಮವಾರ 22ರ ವಯಸ್ಸಿನ ವಿದರ್ಭ ಆಲ್‌ರೌಂಡರ್ ಹರ್ಷ್ ದುಬೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಕರ್ನಾಟಕದ ಬ್ಯಾಟ್ಸ್‌ಮನ್ ಸ್ಮರಣ್ ರವಿಚಂದ್ರನ್ ಬದಲಿಗೆ ಹರ್ಷ್ ದುಬೆ ಅವರು ಆಡಲಿದ್ದಾರೆ. ಗಾಯದ ಕಾರಣದಿಂದಾಗಿ ರವಿಚಂದ್ರನ್ ತಂಡದಿಂದ ಹೊರಗುಳಿದಿದ್ದಾರೆ. ರವಿಚಂದ್ರನ್ ಈ ಹಿಂದೆ ಆಡಮ್ ಝಾಂಪ ಅವರ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಈ ಸೀಸನ್‌ನಲ್ಲಿ ಸ್ಮರಣ್‌ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಹರ್ಷ್ ದುಬೆ ಒಬ್ಬ ಆಲ್ ರೌಂಡರ್. ಅವರು 16 ಟಿ20, 20 ಲಿಸ್ಟ್ ಎ ಮತ್ತು 18 ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಟ್ಟು 127 ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು 941 ರನ್‌ಗಳನ್ನು ಗಳಿಸಿದ್ದಾರೆ.

GT vs SRH: ಟೈಟಾನ್ಸ್‌ ಆಟಕ್ಕೆ ಬೆದರಿದ ಸನ್‌ರೈಸರ್ಸ್‌; 38 ರನ್‌ ಸೋಲು

ಹರ್ಷ್ ದುಬೆ ಅವರನ್ನು ಹೈದರಾಬಾದ್ ಫ್ರಾಂಚೈಸಿ ಮೂಲ ಬೆಲೆ 30 ಲಕ್ಷ ರೂಗೆ ತೆಗೆದುಕೊಂಡಿದೆ. ಇತ್ತೀಚಿನ ರಣಜಿ ಟ್ರೋಫಿಯಲ್ಲಿ ಹರ್ಷ್ ದುಬೆ ಅದ್ಭುತ ಪ್ರದರ್ಶನ ನೀಡಿದ್ದರು. ಈ ವರ್ಷದ ಆರಂಭದಲ್ಲಿ ಅವರನ್ನು ʻಟೂರ್ನಿ ಶ್ರೇಷ್ಠ ಪ್ರಶಸ್ತಿಗೆ' ಆಯ್ಕೆ ಮಾಡಲಾಗಿತ್ತು. ಆ ಟೂರ್ನಿಯಲ್ಲಿ ಅವರು 476 ರನ್ ಗಳಿಸಿ 69 ವಿಕೆಟ್‌ಗಳನ್ನು ಕಬಳಿಸಿದರು. ಅವರ ಪ್ರದರ್ಶನದಿಂದಾಗಿ, ವಿದರ್ಭ ತಂಡವು ರಣಜಿ ಟ್ರೋಫಿಯನ್ನು ಗೆದ್ದುಕೊಂಡಿತ್ತು.



ಹರ್ಷ್ ದುಬೆ 2021ರ ಫೆಬ್ರವರಿಯಲ್ಲಿ ವಿಜಯ್ ಹಝಾರೆ ಟ್ರೋಫಿಯಲ್ಲಿ ತಮಿಳುನಾಡು ವಿರುದ್ಧ ಲಿಸ್ಟ್ ಎ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಒಂಬತ್ತು ತಿಂಗಳ ನಂತರ, ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಟಿ20ಗೆ ಪದಾರ್ಪಣೆ ಮಾಡಿದ್ದರು. ಹರ್ಷ್ ದುಬೆ 2022ರ ಡಿಸೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು. ಅವರು ತಮ್ಮ ಮೊದಲ ಪ್ರಥಮ ದರ್ಜೆ ಪಂದ್ಯದಲ್ಲಿಯೇ ಅರ್ಧಶತಕ ಗಳಿಸಿದರು.

ಅವರು ಈಗ 18 ಪ್ರಥಮ ದರ್ಜೆ ಪಂದ್ಯಗಳಲ್ಲಿ 24.44 ಸರಾಸರಿಯಲ್ಲಿ 709 ರನ್ ಗಳಿಸಿದ್ದಾರೆ. ಅವರು 7 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಹರ್ಷ್ ದುಬೆ ಎಡಗೈ ಸ್ಪಿನ್ ಬೌಲರ್. ಅವರು 18 ಪಂದ್ಯಗಳಲ್ಲಿ 2.87 ರ ಎಕಾನಮಿಯಲ್ಲಿ 97 ವಿಕೆಟ್‌ಗಳನ್ನು ಪಡೆದಿದ್ದಾರೆ.