Shah Rukh Khan: ಮೆಟ್ಗಾಲಾ ರೆಡ್ ಕಾರ್ಪೆಟ್ಗೆ ಶಾರುಖ್ ಎಂಟ್ರಿ ನೀಡಲಿದ್ದಾರಾ..? ಇಲ್ಲಿವೆ ಕಿಂಗ್ಖಾನ್ ಹ್ಯಾಂಡ್ಸಮ್ ಲುಕ್!
Met Gala 2025: ಭಾರತದಿಂದ ಬಾಲಿವುಡ್ನ ಸೂಪರ್ ಸ್ಟಾರ್ ಶಾರುಖ್ ಖಾನ್ ಈ ಬಾರಿಯ ಮೆಟ್ಗಾಲಾ ಫ್ಯಾಷನ್ ಇವೆಂಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಈ ವಿಚಾರ ಕೇಳಿ ಅವರ ಅಭಿಮಾನಿಗಳು ಬಹಳಷ್ಟು ಎಕ್ಸೈಟ್ ಆಗಿದ್ದು ಕಿಂಗ್ ಖಾನ್ ಅವರ ಕೆಲವು ಅದ್ಭುತ ಫ್ಯಾಷನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿವೆ.



ಸಿನಿಮಾ ಜೊತೆಗೆ ಫ್ಯಾಷನ್ ಪ್ರಪಂಚದಲ್ಲಿ ಮಿಂಚಲು ಹೆಚ್ಚಿನ ಸಿನಿ ನಾಯಕ ನಾಯಕಿಯರು ಅವಕಾಶಕ್ಕಾಗಿ ಕಾಯುತ್ತಿ ರುತ್ತಾರೆ. ಈಗಾಗಲೇ ಹಲವಾರು ರೀತಿಯ ಫ್ಯಾಷನ್ ಕಾರ್ಯಕ್ರಮಗಳು ಆಯೋಜನೆ ಗೊಂಡಿದ್ದು ಈ ಪೈಕಿ ಮೆಟ್ಗಾಲಾ ಕೂಡ ಒಂದು. ಈ ಕಾರ್ಯಕ್ರಮಕ್ಕೆ ಆಹ್ವಾನ ಪಡೆಯುವುದೇ ಪ್ರತಿಷ್ಠೆಯಾಗಿದೆ. ಹಲವು ವಿಶ್ವವಿಖ್ಯಾತ ನಟ ನಟಿಯರು ಈ ಬಾರಿ ಮೆಟ್ಗಾಲಾದಲ್ಲಿ ಹೆಜ್ಜೆ ಹಾಕಲಿದ್ದು ಸೂಪರ್ ಸ್ಟಾರ್ ಶಾರುಖ್ ಖಾನ್ ಕೂಡ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಮೆಟ್ ಗಾಲ ಕಾರ್ಪೆಟ್ ನಲ್ಲಿ ಶಾರುಖ್ ಖಾನ್ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವಾಗಲೇ ಕಿಂಗ್ ಖಾನ್ ಅವರ ಕೆಲವು ಅದ್ಭುತ ಫ್ಯಾಷನ್ ಫೋಟೋ ವೈರಲ್ ಆಗಿವೆ.

ಮೆಟ್ಗಾಲಾದ ರೆಡ್ ಕಾರ್ಪೆಟ್ ನಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಸೂಪರ್ ಸೂಪರ್ ಸ್ಟಾರ್ ಶಾರುಖ್ ಖಾನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಇದೀಗ ಶಾರುಖ್ ಹಲವು ಫೋಟೋ ವೈರಲ್ ಆಗಿದ್ದು ಶಾರುಖ್ ಫುಲ್ ಬ್ಲಾಕ್ ಡ್ರೆಸ್ನಲ್ಲಿ ಅತ್ಯಂತ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.. ಬ್ಲಾಕ್ ಡ್ರೆಸ್ ಗೆ ಮ್ಯಾಚ್ ಆಗುವಂತೆ ಜಾಕೆಟ್ ಧರಿಸಿದ್ದು ಅವರ ಲುಕ್ಗೆ ಇನ್ನಷ್ಟು ಶೋಭೆ ನೀಡಿದೆ.

ಕಪ್ಪು ಬಣ್ಣದ ಡ್ರೇಸ್ ನಲ್ಲಿ ರೆಟ್ರೋ ಥೀಮ್ ಡ್ರೆಸ್ನಲ್ಲಿ ಶಾರುಖ್ ಮಿಂಚಿದ್ದಾರೆ. ಡೈಮಂಡ್ ನೆಕ್ ಚೈನ್ ಅವರ ಈ ಲುಕ್ನ ಪ್ರಮುಖ ಆಕರ್ಷಣೆ ಯಾಗಿದೆ.

ಆಲಿವ್ ಗ್ರೀನ್ ಲಾಟೆಕ್ಸ್ ಜಾಕೆಟ್ ಮತ್ತು ಬ್ರೌನ್ ಸಿಲ್ಕ್ ಶರ್ಟ್ನಲ್ಲಿ ಶಾರುಖ್ ಸ್ಮಾರ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಇವರ ಈ ಲುಕ್ ಗೂ ಅಭಿಮಾನಿಗಳು ಫಿದಾ ಆಗಿದ್ದಾರೆ.

ಬ್ಲಾಕ್ ಟಕ್ಸೆಡೋ ಡ್ರೆಸ್ನಲ್ಲಿ ಶಾರುಖ್ ಮಿಂಚಿದ್ದು ಡೈಮಂಡ್ ಬ್ರೂಚ್ ಮತ್ತು ಸನ್ಗ್ಲಾಸ್ಗಳು ಶಾರುಖ್ ಲುಕ್ಗೆ ಗ್ಲಾಮರ್ ಲುಕ್ ನೀಡಿವೆ.

ಬಿಳಿ ಶರ್ಟ್ ಜೊತೆಗೆ ಸೆಮಿ-ಕ್ಯಾಸುವಲ್ ಬ್ಲೇಜರ್ನಲ್ಲಿ ಶಾರುಖ್ ಕೂಲ್ ಲುಕ್ ನೀಡಿದ್ದಾರೆ. ಅವರ ಲಾಂಗ್ ಹೇರ್ ಲುಕ್ ಅವರ ಡ್ರೆಸ್ ಗೆ ಮತ್ತಷ್ಟು ಆಕರ್ಷಣೆ ನೀಡಿದೆ.

ಮತ್ತೊಂದು ಬ್ಲಾಕ್ ಡ್ರೆಸ್ ಲುಕ್ ನಲ್ಲಿ ಶಾರುಖ್ ಸ್ಟೈಲಿಸ್ ಆಗಿ ಕಾಣಿಸಿದ್ದಾರೆ. ರಾಪ್-ಸ್ಟೈಲ್ ಶರ್ಟ್ ಮತ್ತು ಮ್ಯಾಚಿಂಗ್ ಬ್ಲಾಕ್ ಬ್ಲೇಜರ್ನಲ್ಲಿ ಅವರು ಕಂಗೊಳಿಸಿದ್ದಾರೆ.