ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಅಬ್ಬಾ.. ಇದೆಂಥಾ ಹುಚ್ಚು ಭಯ!? ಕೋವಿಡ್‌ ಮುಗಿದು ವರ್ಷಗಳು ಕಳೆದರೂ ಈ ಮಕ್ಕಳಿಗಿನ್ನೂ ಮುಗಿದಿಲ್ಲ ಲಾಕ್‌ಡೌನ್‌!

ಸ್ಪೇನ್‍ನಲ್ಲಿ ವಾಸಿಸುತ್ತಿದ್ದ ಪೋಷಕರು ಕೋವಿಡ್ ಭಯದಿಂದ 2021 ರಿಂದ ತಮ್ಮ ಮೂವರು ಮಕ್ಕಳನ್ನು ಮನೆ ಒಳಗೆ ಲಾಕ್ ಮಾಡಿದ್ದು, ಇತ್ತೀಚೆಗೆ ಪೊಲೀಸರು ಮೂವರು ಜರ್ಮನ್ ಮಕ್ಕಳನ್ನು ಲಾಕ್‍ಡೌನ್ ಮಾಡಿದ್ದ ಮನೆಯಿಂದ ರಕ್ಷಿಸಿದ್ದಾರೆ. ಈ ಸುದ್ದಿ ಈಗ ವೈರಲ್‌(Viral News) ಆಗಿದೆ.

ಕೋವಿಡ್‌ ಭೀತಿಗೆ ಮಕ್ಕಳಿಗೆ ಇನ್ನೂ ಲಾಕ್‌ಡೌನ್; ಇದೆಂಥಾ ಹುಚ್ಚು ಭಯ!?

Profile pavithra May 5, 2025 12:46 PM

ಮ್ಯಾಡ್ರಿಡ್‌: ಕೊರೊನಾ ಮಾರಕ ರೋಗದ ಕಾರಣದಿಂದ ಜನರನ್ನು ಕಾಪಾಡಲು ಇಡೀ ದೇಶಗಳನ್ನು ಲಾಕ್‍ಡೌನ್ ಮಾಡಲಾಗಿತ್ತು. ಈ ಲಾಕ್‍ಡೌನ್‌ಗೆ ಸಂಬಂಧಪಟ್ಟಂತೆ ಸ್ಪೇನ್‌ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸ್ಪೇನ್‍ನಲ್ಲಿ 2021ರಿಂದ ಗೃಹಬಂಧನದಿಂದ ಮೂವರು ಜರ್ಮನ್ ಮಕ್ಕಳನ್ನು ಈಗ ರಕ್ಷಿಸಲಾಗಿದೆಯಂತೆ. ವರದಿ ಪ್ರಕಾರ,ಕೋವಿಡ್ ಭಯದಿಂದ ಪೋಷಕರು 10 ವರ್ಷದ ಹಾಗೂ 8 ವರ್ಷದ ಅವಳಿ ಮಕ್ಕಳು ಸೇರಿದಂತೆ ಒಟ್ಟು ಮೂವರು ಮಕ್ಕಳನ್ನು ಮನೆಯೊಳಗೆ ಲಾಕ್‌ಡೌನ್‌ ಮಾಡಿದ್ದಾರಂತೆ. ಅಧಿಕಾರಿಗಳು ಸೋಮವಾರ ಸ್ಪೇನ್‌ನ ವಾಯುವ್ಯ ಭಾಗದಲ್ಲಿರುವ ಮನೆಯಿಂದ ಮಕ್ಕಳನ್ನು ಸ್ಥಳಾಂತರಿಸಿದ್ದಾರೆ.ಈ ಸುದ್ದಿ ಈಗ ವೈರಲ್‌(Viral News) ಆಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಅವರ ಪೋಷಕರಾದ 53 ವರ್ಷದ ಜರ್ಮನ್ ವ್ಯಕ್ತಿ ಮತ್ತು ಜರ್ಮನ್ ಪಾಸ್‌ಪೋರ್ಟ್‌ ಹೊಂದಿದ್ದ ಅವರ 48 ವರ್ಷದ ಅಮೆರಿಕನ್ ಪತ್ನಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಅವರ ಮೇಲೆ ಕೌಟುಂಬಿಕ ಹಿಂಸೆ, ಮಾನಸಿಕ ಕಿರುಕುಳ ಮತ್ತು ಮಕ್ಕಳನ್ನು ತ್ಯಜಿಸಿದ ಆರೋಪಗಳನ್ನು ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಗಳು ತಿಳಿಸಿದ ಮಾಹಿತಿ ಪ್ರಕಾರ, ಇಬ್ಬರೂ ಪೋಷಕರು ಕೋವಿಡ್ ಸಿಂಡ್ರೋಮ್‍ನಿಂದ ಬಳಲುತ್ತಿದ್ದರು ಮತ್ತು ಇಡೀ ಕುಟುಂಬವನ್ನು ಹಲವಾರು ವರ್ಷಗಳಿಂದ ಲಾಕ್‍ಡೌನ್‍ನಲ್ಲಿರಲು ಒತ್ತಾಯಿಸಿದ್ದಾರಂತೆ. ಒಳಗೆ ವಾಸಿಸುವ ಮಕ್ಕಳು ಕೂಡ ಬಹಳ ಸಮಯದಿಂದ ಶಾಲೆಗೆ ಹೋಗುತ್ತಿಲ್ಲವಂತೆ. ಈ ವಿಚಾರವನ್ನು ನೆರೆಹೊರೆಯವರು ವರದಿ ಮಾಡಿದ ನಂತರ ಪೊಲೀಸರಿಗೆ ಕುಟುಂಬದ ಬಗ್ಗೆ ಮಾಹಿತಿ ತಿಳಿದುಬಂದಿದೆ. ಹೀಗಾಗಿ ಅವರು ಮನೆಗೆ ಬಂದು ಮಕ್ಕಳನ್ನು ರಕ್ಷಿಸಿದ್ದಾರೆ. ಆದರೆ ಮಕ್ಕಳಿಗೆ ಆಹಾರ ತಿನ್ನಲು ಸಿಕ್ಕಿದೆಯಾದರೂ ಅವರು ಹೊರಗಿನ ಪ್ರಪಂಚವನ್ನು ಕಾಣದ ಕಾರಣ ಮನೆಯ ಹೊರಗೆ ಇದ್ದ ಬಸವನಹುಳವನ್ನು ಕಂಡು ಹೆದರಿಕೊಂಡಿದ್ದಾರಂತೆ.

ವೈರಲ್‌ ವಿಡಿಯೊ ಇಲ್ಲಿದೆ



ವರದಿ ಪ್ರಕಾರ, ಕುಟುಂಬವು ಅಕ್ಟೋಬರ್ 2021 ರಲ್ಲಿ ಮನೆಯನ್ನು ಬಾಡಿಗೆಗೆ ತೆಗೆದುಕೊಂಡ ಕಾರಣ ತಂದೆಯ ಹೆಸರನ್ನು ಮಾತ್ರ ನೋಂದಾಯಿಸಲಾಗಿದೆ. ತನಿಖೆಯ ನಂತರ, ದಿನಸಿ ತರಲು ಹಾಗೂ ಇತರೇ ಕೆಲಸಕ್ಕೆ ತಂದೆ ಮಾತ್ರ ಮನೆಯಿಂದ ಹೊರಹೋಗುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ರೀತಿಯ ಪ್ರಕರಣ ನಡೆದಿದ್ದು ಇದೇ ಮೊದಲಲ್ಲ. ಇದಕ್ಕೂ ಮೊದಲು 2023 ರಲ್ಲಿ, ಕೋವಿಡ್ -19 ಭಯದಿಂದ ಗುರುಗ್ರಾಮದ ಚಕ್ಕರ್ಪುರ ಪ್ರದೇಶದ ಬಾಡಿಗೆ ಮನೆಯಲ್ಲಿ ಮೂರು ವರ್ಷಗಳ ಕಾಲ ಲಾಕ್ ಆಗಿದ್ದ 33 ವರ್ಷದ ಮಹಿಳೆ ಮತ್ತು ಆಕೆಯ 10 ವರ್ಷದ ಮಗನನ್ನು ಅಧಿಕಾರಿಗಳ ತಂಡ ರಕ್ಷಿಸಿತ್ತು. ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸದಸ್ಯರ ತಂಡವು ಮನೆಯ ಮುಖ್ಯ ಬಾಗಿಲನ್ನು ಮುರಿದು ಮುನ್ಮುನ್ ಮಾಝಿ ಮತ್ತು ಅವರ 10 ವರ್ಷದ ಮಗನನ್ನು ರಕ್ಷಿಸಿದ್ದರು. ನಂತರ ತಾಯಿ-ಮಗನನ್ನು ಗುರುಗ್ರಾಮದ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ:Viral Video: ರಸ್ತೆಯಲ್ಲಿದ್ದ ಪಾಕ್ ಧ್ವಜ ತೆಗೆದುಹಾಕಿದ ವಿದ್ಯಾರ್ಥಿನಿ; ಆಮೇಲೆ ಆಗಿದ್ದೇನು?ವಿಡಿಯೊ ನೋಡಿ!

ವರದಿ ಪ್ರಕಾರ ಮಹಿಳೆ ಮಾನಸಿಕ ಅಸ್ವಸ್ಥಳಾಗಿದ್ದು, ಕೊರೊನಾಗೆ ಹೆದರಿ ತನ್ನ ಮಗನೊಂದಿಗೆ ಮೂರು ವರ್ಷಗಳ ಮನೆಯೊಳಗೆ ಲಾಕ್ ಆಗಿದ್ದಳಂತೆ. ಆ ವೇಳೆ ಮಹಿಳೆ ತನ್ನ ಗಂಡನನ್ನು ಸಹ ಮನೆಯೊಳಗೆ ಬಿಡಲಿಲ್ಲ. ಹೀಗಾಗಿ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿರುವ ಮುನ್ಮುನ್ ಅವರ ಪತಿ ಸುಜನ್ ಮಾಝಿ ಫೆ.17 ರಂದು ಚಕ್ಕರ್ಪುರ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ ಪ್ರವೀಣ್ ಕುಮಾರ್ ಅವರನ್ನು ಸಂಪರ್ಕಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.