ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The kesari price: ಗಗನಕ್ಕೇರಿದ ಕಾಶ್ಮೀರಿ ಕೇಸರಿ ಬೆಲೆ; ಪರ್ಯಾಯವಾಗಿ ಏನನ್ನು ಬಳಕೆ ಮಾಡಬಹುದು ಗೊತ್ತಾ?

ಪಹಲ್ಗಾಮ್‌ನಲ್ಲಿ ನಡೆದ ದಾಳಿ ಬಳಿಕ ಆರ್ಥಿಕತೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಕಾಶ್ಮೀರದಲ್ಲಿಯೇ ಬೆಳೆಯುವ ಕೇಸರಿ ಬೆಲೆ ಗಗನಕ್ಕೇರಿದ್ದು, ಐತಿಹಾಸಿಕ ಗರಿಷ್ಠ ಮಟ್ಟ ತಲುಪಿದೆ. ಪ್ರತಿ ಕೆಜಿ ಕೇಸರಿ ಬೆಲೆ ಇದೀಗ 4.50 ಲಕ್ಷ ರೂ ನಿಂದ 5 ಲಕ್ಷ ರೂ ವರೆಗೆ ತಲುಪಿದೆ. ಕೇವಲ ಎರಡು ವಾರಗಳಲ್ಲಿ ಕೇಸರಿ ಬೆಲೆ ದುಪ್ಪಟ್ಟಾಗಿದೆ.

ಗಗನಕ್ಕೇರಿದ ಕಾಶ್ಮೀರಿ ಕೇಸರಿ ಬೆಲೆ!

Profile Vishakha Bhat May 5, 2025 6:39 PM

ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ದಾಳಿ ಬಳಿಕ ಆರ್ಥಿಕತೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಕಾಶ್ಮೀರದಲ್ಲಿಯೇ ಬೆಳೆಯುವ ಕೇಸರಿ ಬೆಲೆ (Kesari price) ಗಗನಕ್ಕೇರಿದ್ದು, ಐತಿಹಾಸಿಕ ಗರಿಷ್ಠ ಮಟ್ಟ ತಲುಪಿದೆ. ಪ್ರತಿ ಕೆಜಿ ಕೇಸರಿ ಬೆಲೆ ಇದೀಗ 4.50 ಲಕ್ಷ ರೂ ನಿಂದ 5 ಲಕ್ಷ ರೂ ವರೆಗೆ ತಲುಪಿದೆ. ಕೇವಲ ಎರಡು ವಾರಗಳಲ್ಲಿ ಕೇಸರಿ ಬೆಲೆ ದುಪ್ಪಟ್ಟಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಬಳಿಕ ಕೇಂದ್ರ ಸರ್ಕಾರ ರಾಜತಾಂತ್ರಿಕ ನಡೆಯನ್ನು ಅನುಸರಿಸುತ್ತಿದೆ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಪರ್ಕವನ್ನು ಮುಚ್ಚಲಾಗಿದೆ. ವಾಫಾ ಅಟ್ಟಾರಿ ಗಡಿಯನ್ನು ಬಂದ್‌ ಮಾಡಿ ಆದೇಶ ಹೊರಡಿಸಲಾಗಿದೆ. ವ್ಯಾಪಾರ ಸಂಪೂರ್ಣವಾಗಿ ಬಂದ್‌ ಮಾಡಲಾದ ಬಳಿಕ ಈ ತೀವ್ರ ಏರಿಕೆ ಕಂಡುಬಂದಿದೆ.

ಪಾಕಿಸ್ತಾನದ ಮೂಲಕ ಸ್ಥಳೀಯ ವ್ಯಾಪಾರ ಮಾರ್ಗಗಳು ಮುಚ್ಚಿರುವುದರಿಂದ ಅಫ್ಘಾನ್ ಕೇಸರಿ ಆಮದು ನಿಂತಿದ್ದು, ಇದು ಭಾರತದ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಗಡಿ ಮುಚ್ಚಿದ ಕೇವಲ ನಾಲ್ಕು ದಿನಗಳಲ್ಲಿ ಬೆಲೆಯು ಶೇ.10ರಷ್ಟು ಏರಿಕೆಯಾಗಿದೆ. ಅಫ್ಘಾನ್ ಕೇಸರಿಯು ತನ್ನ ರೋಮಾಂಚಕ ಬಣ್ಣ ಮತ್ತು ಸುಗಂಧಕ್ಕೆ ಹೆಸರುವಾಸಿಯಾಗಿದ್ದು, ಜಗತ್ತಿನಾದ್ಯಂತ ಇದಕ್ಕೆ ಬೇಡಿಕೆ ಇದೆ.

ಭಾರತದಲ್ಲಿ ಕೇಸರಿಯನ್ನು ಕಾಶ್ಮೀರದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಸೆಪ್ಟೆಂಬರ್‌ ತಿಂಗಳು ಮುಗಿದು ಶರತ್ಕಾಲ ಆರಂಭವಾಗುವಾಗ ಇದರ ಕಟಾವು ಮಾಡಲಾಗುತ್ತದೆ. ವರ್ಷದಲ್ಲಿ ಒಮ್ಮೆ ಮಾತ್ರ ಕೇಸರಿ ಹೂ ಬಿಡುತ್ತೆ. ಅದೂ ಅಕ್ಟೋಬರ್ ಕೊನೆಯ ವಾರದಿಂದ ನವೆಂಬರ್ ಮೊದಲ ವಾರದವರೆಗೆ ಮಾತ್ರ. ಬಳಿಕ ವಾರದಲ್ಲಿ ಹೂ ಖಾಲಿಯಾದರೆ ಮತ್ತೆ ಕೇಸರಿ ಹೂ ಬರುವುದು ಮುಂದಿನ ವರ್ಷಕ್ಕೆ. ಏಪ್ರಿಲ್ ತಿಂಗಳಲ್ಲಿ ಕೇಸರಿ ಗಡ್ಡೆಯನ್ನು ನಾಟಿ ಮಾಡಲಾಗುತ್ತದೆ. ಅದು ಸೆಪ್ಟೆಂಬರ್ ತಿಂಗಳಲ್ಲಿ ಮೊಳಕೆ ಬಿಡಲು ಶುರು ಮಾಡಿ, ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ಹೂ ಬಿಡುತ್ತೆ. ದಾಸವಾಳದ ಹೂವಿನ ಮಧ್ಯದಿಂದ ಬರುವ ಶಲಾಕೆಯಂತೆ ಇಲ್ಲಿಯೂ ಕೇಸರಿ ಶಲಾಕೆಗಳು ಹೂವಿನಿಂದ ಆಚೆ ಬರುತ್ತವೆ. ಕೇಸರಿ ಶಲಾಕೆಗಳನ್ನು ನಿಧಾನವಾಗಿ ಬೇರ್ಪಡಿಸಲಾಗುತ್ತದೆ. ಈ ಹೂ ಬಿಡುವ ಸಮಯ ಅಂದರೆ ಎರಡು ಮೂರು ತಿಂಗಳು ಮಾತ್ರ ಈ ಕೋಲ್ಡ್ ಸ್ಟೋರೇಜ್ ಅವಶ್ಯಕತೆ ಇರುತ್ತದೆ.

ಭಾರತದಲ್ಲಿ ಪ್ರತಿ ವರ್ಷ ಅಂದಾಜು 55 ಟನ್ ಕೇಸರಿ ದಳಗಳನ್ನು ಬಳಸಲಾಗುತ್ತದೆ. ಅದರಲ್ಲಿ ಮೂರು ಪ್ರಬೇಧಗಳನ್ನು ನಾವು ಕಾಣಬಹುದು.

ಮೊಂಗ್ರಾ (ಕಾಶ್ಮೀರಿ)

ಮೊಂಗ್ರಾ ಎನ್ನುವುದು ಕೇಸರಿ ಪ್ರಭೇದವಾಗಿದ್ದು, ಇದು ಗಾಢವಾದ ಕಡುಗೆಂಪು ಬಣ್ಣದ ಎಳೆಗಳು, ಬಲವಾದ ಸುವಾಸನೆಯನ್ನು ಹೊಂದಿದೆ. ಇದಕ್ಕೆ ಹೆಚ್ಚಿನ ಬೆಲೆ ಇರುತ್ತದೆ.

ಲಾಚಾ (ಕಾಶ್ಮೀರಿ)

ಇದೂ ಕೂಡ ಕಾಶ್ಮೀರದಲ್ಲಿಯೇ ಬೆಳೆಯುವ ಕೇಸರಿಯ ಒಂದು ಪ್ರಭೇದ. ಇದು ಅಷ್ಟೊಂದು ಗಾಢವಾಗಿರುವುದಿಲ್ಲ.‌ ಇದರಲ್ಲಿ ಶಕ್ತಿಯಲ್ಲಿ ಸ್ವಲ್ಪ ಕಡಿಮೆ.

ಪುಶಾಲ್ (ಅಫ್ಘಾನ್, ಇರಾನಿಯನ್)

ಇದನ್ನು ಅಫ್ಘಾನ್, ಇರಾನ್‌ನಿಂದ ತರಿಸಿಕೊಳ್ಳಲಾಗುತ್ತದೆ. ಇದು ಹಳದಿ ಬಣ್ಣದೊಂದಿಗೆ ಹಗುರವಾದ ಎಳೆಗಳನ್ನು ಹೊಂದಿದೆ. ಅಟ್ಟಾರಿ- ವಾಘಾ ಗಡಿಯನ್ನು ಮುಚ್ಚಲಾದ ಪರಿಣಾಮ ಈ ತಳಿಯ ಕೇಸರಿಯನ್ನು ಆಮದು ಮಾಡಿಕೊಳ್ಳಲಾಗುತ್ತಿಲ್ಲ. ಇದರಿಂದ ಏಕಾಏಕಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ವರದಿಗಳ ಪ್ರಕಾರ, ಇರಾನಿನ ಕೇಸರಿ ಬೆಲೆ ಹೆಚ್ಚುವರಿಯಾಗಿ 5% ರಷ್ಟು ಹೆಚ್ಚಾಗಿದೆ.

ಕೇಸರಿಗೆ ಪರ್ಯಾಯವೇನು?

ಕೇಸರಿ ಕೈಗೆಟುಕದ ಕುಸುಮವಾಗಿದೆ. ಕೇಸರಿ ಬದಲು ನಮ್ಮ ಅಡುಗೆ ಮನೆಯಲ್ಲಿ ಹಲವಾರು ಪರ್ಯಾಯ ವಸ್ತುಗಳು ದೊರಕುತ್ತವೆ.

ಚೆಂಡು ಹೂವಿನ ದಳ:

ಮಾರಿಗೋಲ್ಡ್‌ ಅಥವಾ ಚೆಂಡು ಹೂವಿನ ದಳ. ಇದನ್ನು ಚಹಾದಲ್ಲಿ ಬಳಸಬಹುದು. ಕೇಸರಿಯಷ್ಟಲ್ಲದಿದ್ದರೂ ಅದರಲ್ಲಿಯೇ ತಿಳಿ ಬಣ್ಣವನ್ನು ನೀಡುತ್ತದೆ. ಊರಿಯೂತ ಅಥವಾ ಚರ್ಮಕ್ಕೆ ಸಂಬಂಧಿಸಿದ ಕೆಲ ಕಾಯಿಲೆಗಳಿಗೆ ಇದನ್ನು ರಾಮಬಾಣವಾಗಿ ಬಳಸುತ್ತಾರೆ.

ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್ ಉಗ್ರ ದಾಳಿಯ ಮತ್ತೊಂದು ವಿಡಿಯೊ ವೈರಲ್-ಏನಿದೆ ಅದ್ರಲ್ಲಿ?

ಅರಿಶಿಣ:

ಅರಿಶಿಣ ಪುಡಿಯು ಕೇಸರಿಯದೇ ಬಣ್ಣವನ್ನು ಹೊಂದಿರುವ ಅರಿಶಣದ ಪರಿಮಳ ಮಾತ್ರ ಸಂಪೂರ್ಣ ಭಿನ್ನ. ಸಾಮಾನ್ಯವಾಗಿ ಅಡುಗೆ ಪದಾರ್ಥಗಳ ಜೊತೆಗೆ ಸಾಮಾನ್ಯವಾಗಿ ಸೌಂದರ್ಯವರ್ಧಕಗಳಿಗೆ ಬಳಕೆ ಮಾಡಲಾಗುತ್ತದೆ.

ಕುಸುಮ

ಹಲವರು ಕುಸುಮವನ್ನು ಕೇಸರಿ ಎಂದು ತಪ್ಪಾಗಿ ಭಾವಿಸಿದ್ದಾರೆ. ಬಿರಿಯಾನಿಯಂತಹ ಅಡುಗೆಯಲ್ಲಿ ಕುಸುಮವನ್ನು ಬಳಸಲಾಗುತ್ತದೆ. ಇದು ಕೇಸರಿಯ ತೀವ್ರವಾದ ಸುವಾಸನೆಯನ್ನು ಹೊಂದಿರದಿದ್ದರೂ, ಇದು ಹೃದಯದ ಆರೋಗ್ಯಕ್ಕೆ ಅತ್ಯುತ್ತಮ ಎಂದು ಹೇಳುತ್ತಾರೆ ವೈದ್ಯರು.