ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹಾರ್ನ್‌ ಮಾಡಬೇಡ ಎಂದಿದ್ದಕ್ಕೆ ವ್ಯಕ್ತಿ ಮೇಲೆ ಥಾರ್ ಜೀಪು ಹರಿಸಿದ ಚಾಲಕ

ದೆಹಲಿಯ ಮಹಿಪಾಲ್‌ಪುರ್‌ನಲ್ಲಿ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಹಾರ್ನ್‌ ಮಾಡದಂತೆ ಕೇಳಿಕೊಂಡಿದ್ದಕ್ಕೆ ಆತನ ಮೇಲೆ ಥಾರ್ ಎಸ್‌ಯುವಿ ಚಾಲಕನೊಬ್ಬ ಕೋಪಗೊಂಡು ವಾಹನವನ್ನು ಹರಿಸಿರುವ ಘಟನೆ ನಡೆದಿದೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ

ಅಪಘಾತದ ದೃಶ್ಯ

Profile Sushmitha Jain May 5, 2025 9:09 PM

ನವದೆಹಲಿ: ದೆಹಲಿಯ (Delhi) ಮಹಿಪಾಲ್‌ಪುರ್‌ನಲ್ಲಿ (Mahipalpur) ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಹಾರ್ನ್‌ ಮಾಡದಂತೆ ಕೇಳಿಕೊಂಡಿದ್ದಕ್ಕೆ ಆತನ ಮೇಲೆ ಥಾರ್ ಎಸ್‌ಯುವಿ (Thar SUV) ಚಾಲಕನೊಬ್ಬ ಕೋಪಗೊಂಡು ವಾಹನವನ್ನು ಹರಿಸಿರುವ ಘಟನೆ ನಡೆದಿದೆ. ಬಿಹಾರ ಮೂಲದ ರಾಜೀವ್ ಕುಮಾರ್ (32) ಎಂಬ ಭದ್ರತಾ ಸಿಬ್ಬಂದಿ, ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ರಾತ್ರಿ ಕೆಲಸ ಮುಗಿಸಿ ಮಹಿಪಾಲ್‌ಪುರ್‌ನಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದರು. ಕ್ಯಾಬ್‌ನಿಂದ ಮಹಿಪಾಲ್‌ಪುರ್ ಕ್ರಾಸಿಂಗ್‌ನಲ್ಲಿ ಇಳಿದು ನಡೆಯುತ್ತಿರುವಾಗ, ಜೋರಾಗಿ ಹಾರನ್ ಮಾಡುತ್ತಿದ್ದ ಒಂದು ಎಸ್‌ಯುವಿ ಹತ್ತಿರ ಬಂದಿದೆ. ರಾಜೀವ್ ಕುಮಾರ್ ಚಾಲಕನಿಗೆ ಹಾರನ್ ಮಾಡದಂತೆ ಕೇಳಿಕೊಂಡಾಗ, ವಿಜಯ್ ಎಂಬ ಚಾಲಕ ಆತನ ಲಾಠಿ ಕೊಡುವಂತೆ ಒತ್ತಾಯಿಸಿದ್ದಾನೆ.

ಕುಮಾರ್ ನಿರಾಕರಿಸಿದಾಗ, ವಿಜಯ್ ರಸ್ತೆ ದಾಟಿ ಆತನ ಮೇಲೆ ವಾಹನವನ್ನು ಹರಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ವಿಡಿಯೊ ವೈರಲ್ ಆಗಿದೆ. ಕುಮಾರ್ ರಸ್ತೆ ದಾಟುತ್ತಿದ್ದಂತೆ ಎಸ್‌ಯುವಿ ಆತನನ್ನು ಗುದ್ದಿದೆ. ಇದರಿಂದ ಆತ ಬಿದ್ದು ನೋವಿನಿಂದ ಕೂಗಾಡಿದ್ದಾನೆ. ವಿಡಿಯೊದಲ್ಲಿ, ವಿಜಯ್ ವಾಹನವನ್ನು ಹಿಂದಕ್ಕೆ ತೆಗೆದು ಮತ್ತೆ ಕುಮಾರ್ ಮೇಲೆ ಹರಿಸಿರುವುದು ಕಂಡುಬಂದಿದೆ.

ಈ ಸುದ್ದಿಯನ್ನು ಓದಿ: Viral Video: ಏರ್‌ಪೋರ್ಟ್‌ನಲ್ಲಿ 'ತೇರಿ ಮಿಟ್ಟಿ' ಹಾಡಿಗೆ ಕೊಳಲು ನುಡಿಸಿದ ಮೆಹಬೂಬ್; ಭದ್ರತಾ ಸಿಬ್ಬಂದಿ ಮಾಡಿದ್ದೇನು?

ಈ ದಾಳಿಯಿಂದ ರಾಜೀವ್ ಕುಮಾರ್‌ ಅವರ ಎರಡೂ ಕಾಲುಗಳು ಮುರಿದಿದ್ದು, ಹಲವು ಫ್ರಾಕ್ಚರ್‌ಗಳಾಗಿವೆ ಎಂದು ವರದಿಗಳು ತಿಳಿಸಿವೆ. ಕುಮಾರ್‌ನನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ವಿಜಯ್ ಘಟನಾ ಸ್ಥಳದಿಂದ ಪರಾರಿಯಾಗಿದ್ದ. ಆದರೆ ಪೊಲೀಸರು ಕೊಲೆ ಯತ್ನದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರು ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿದ್ದಾರೆ.

ಒಂದು ತಿಂಗಳ ಹಿಂದೆ ದೆಹಲಿಯ ಮಯೂರ್ ವಿಹಾರ್ ಪ್ರದೇಶದಲ್ಲಿ ಥಾರ್ ಎಸ್‌ಯುವಿಯೊಂದು ಟ್ರಾಫಿಕ್ ಸಿಗ್ನಲ್‌ನಲ್ಲಿ ಸ್ಕೂಟರ್‌ಗೆ ಡಿಕ್ಕಿಯಾದ ಪರಿಣಾಮ ಒಬ್ಬ ವೃದ್ಧ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಅದೇ ವಾರದಲ್ಲಿ ನೊಯ್ಡಾದ ಸೆಕ್ಟರ್ 16 ಮಾರುಕಟ್ಟೆಯಲ್ಲಿ, ಒಬ್ಬ ವ್ಯಕ್ತಿ ಅಂಗಡಿಯ ಮಾಲೀಕನೊಂದಿಗಿನ ಜಗಳ ಮಾಡಿ ನಂತರ ತನ್ನ ಥಾರ್ ಎಸ್‌ಯುವಿಯನ್ನು ರಾಂಗ್ ರೂಟ್‌ನಲ್ಲಿ ವೇಗವಾಗಿ ಚಲಾಯಿಸಿ, ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದ. ಈ ಘಟನೆಯಲ್ಲಿ ಆತ ಸಾರ್ವಜನಿಕರಿಂದ ತಪ್ಪಿಸಿಕೊಂಡಿದ್ದರೂ ನಂತರ ಅರೆಸ್ಟ್ ಆಗಿದ್ದ.