ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Union Minister Raksha Khadse: ಫಾಲೋ ಮಾಡ್ತಾ ವಿಡಿಯೊ ರೆಕಾರ್ಡ್‌ ಮಾಡಿ ಕೇಂದ್ರ ಸಚಿವೆಯ ಪುತ್ರಿಗೆ ದುಷ್ಕರ್ಮಿಗಳಿಂದ ಕಿರುಕುಳ!

ಕೇಂದ್ರ ಸಚಿವೆ ರೇಖಾ ಖಡ್ಸೆ ಅವರ ಪುತ್ರಿ ಹಾಗೂ ಆಕೆಯ ಸ್ನೇಹಿತರಿಗೆ ದುಷ್ಕರ್ಮಿಗಳು ಕಿರುಕುಳ ನೀಡಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ನಡೆದಿದೆ. ಸಂತ ಮುಕ್ತೈ ಯಾತ್ರೆಯಲ್ಲಿ ರೇಖಾ ಖಡ್ಸೆ ತಮ್ಮ ಕುಟುಂಬಸ್ಥರೊಂದಿಗೆ ಆಗಮಿಸಿದ್ದರು. ಈ ವೇಳೆ ಕಿಡಿಗೇಡಿಗಳು ಕಿರುಕುಳ ನೀಡಿರುವ ಬಗ್ಗೆ ಆರೋಪ ಕೇಳಿಬಂದಿದೆ.

ಕೇಂದ್ರ ಸಚಿವೆಯ ಪುತ್ರಿಗೆ ದುಷ್ಕರ್ಮಿಗಳಿಂದ ಕಿರುಕುಳ

Profile Rakshita Karkera Mar 2, 2025 2:14 PM

ಮುಂಬೈ: ಕೇಂದ್ರ ಸಚಿವೆ ರಕ್ಷಾ ಖಡ್ಸೆ(Union Minister Raksha Khadse) ಅವರು ಪುತ್ರಿ ಮತ್ತು ಆಕೆ ಸ್ನೇಹಿತರಿಗೆ ಕಿಡಿಗೇಡಿಗಳು ಕಿರುಕುಳ ನೀಡಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ನಡೆದಿದೆ. ಮುಕ್ತೈನಗರದ ಕೊಥಳಿ ಗ್ರಾಮದಲ್ಲಿ ನಡೆದ ಸಂತ ಮುಕ್ತೈ ಯಾತ್ರೆಯಲ್ಲಿ ಕೇಂದ್ರ ಸಚಿವೆ ರಕ್ಷಾ ಖಡ್ಸೆ ಅವರ ಪುತ್ರಿ ಮತ್ತು ಅವರ ಸ್ನೇಹಿತರಿಗೆ ದುಷ್ಕರ್ಮಿಗಳು ಕಿರುಕುಳ ನೀಡಲು ಯತ್ನಿಸಿದ್ದಾರೆ ಎಂಬ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಚಿವೆ ಒತ್ತಾಯಿಸಿದ್ದಾರೆ ಮತ್ತು ಅವರ ಭದ್ರತಾ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ, ಮುಕ್ತೈನಗರ ಪೊಲೀಸರು ನಾಲ್ವರು ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನಡೆದಿದ್ದೇನು?

ವರದಿಗಳ ಪ್ರಕಾರ, ಸಚಿವೆ ರಕ್ಷಾ ಖಡ್ಸೆ ತಮ್ಮ ಕುಟುಂಬಸ್ಥರು ಮತ್ತು ಭದ್ರತಾ ಸಿಬ್ಬಂದಿ ಜೊತೆ ಕೊಥಳಿ ಗ್ರಾಮದಲ್ಲಿ ಯಾತ್ರೆಯನ್ನು ವೀಕ್ಷಿಸಲು ಆಗಮಿಸಿದ್ದರು. ಕಾರ್ಯಕ್ರಮದ ಸಮಯದಲ್ಲಿ, ಯುವಕರ ಗುಂಪೊಂದು ಸಚಿವರ ಕುಟುಂಬದ ವೀಡಿಯೊಗಳನ್ನು ಅನುಮಾನಾಸ್ಪದವಾಗಿ ರೆಕಾರ್ಡ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸಾಲದೆನ್ನುವಂತೆ ಸಚಿವೆಯ ಮಗಳು ಮತ್ತು ಆಕೆ ಸ್ನೇಹಿತರನ್ನು ಫಾಲೋ ಮಾಡಿ ಕಿರುಕುಳ ನೀಡಿದ್ದಾರೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ಒಬ್ಬ ಯುವಕನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡು ಪರಿಶೀಲಿಸಿದರು. ಇದು ಘರ್ಷಣೆಗೆ ಕಾರಣವಾಯಿತು, ನಾಲ್ವರು ಆರೋಪಿಗಳು ಭದ್ರತಾ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.



ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವೆ ರಕ್ಷಾ ಖಡ್ಸೆ, ಕಿರುಕುಳದಲ್ಲಿ ಭಾಗಿಯಾಗಿರುವವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ಅವರು ಸ್ವತಃ ಮುಕ್ತೈನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಇಷ್ಟು ಭದ್ರತೆ ಇದ್ದರೂ ಇಂತಹ ಘಟನೆ ನಡೆಯುತ್ತದೆ ಎಂದಾದರೆ ಸಾಮಾನ್ಯ ಜನ ಗತಿಯೇನು ಎಂದು ಅವರು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಕುಡಿದ ಮತ್ತಿನಲ್ಲಿ ಫುಟ್‌ಪಾತ್ ಮೇಲೆ ಗಾಡಿ ಓಡಿಸಿದ್ದಲ್ಲದೇ, ವೃದ್ಧನಿಗೆ ಥಳಿಸಿದ ಬೈಕ್‌ ಸವಾರ; ವಿಡಿಯೊ ಪುಲ್‌ ವೈರಲ್

ಸಂತ ಮುಕ್ತೈ ಯಾತ್ರೆ ಮಹಾಶಿವರಾತ್ರಿಯಂದು ನಡೆಯುವ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾತೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಸಚಿವೆ ಖಡ್ಸೆ ಅವರ ಮಗಳು ಕಾರ್ಯಕ್ರಮದಲ್ಲಿ ಉಪಾಹಾರ ವಿತರಿಸುತ್ತಿದ್ದಾಗ ಭೋಯ್ ಎಂಬ ಯುವಕನೊಬ್ಬ ಅವರನ್ನು ಹಿಂಬಾಲಿಸುತ್ತಿರುವುದನ್ನು ಗಮನಿಸಿದ್ದಾರೆ ಎಂದು ವರದಿಯಾಗಿದೆ. ಸಂಜೆಯ ನಂತರ, ಅವರು ತಮ್ಮ ಸ್ನೇಹಿತರೊಂದಿಗೆ ಸುತ್ತಾಡಲು ಹೋದಾಗ, ಅದೇ ವ್ಯಕ್ತಿ, ಇತರರೊಂದಿಗೆ, ಅವರನ್ನು ನಿರಂತರವಾಗಿ ಹಿಂಬಾಲಿಸಿದನು.