ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Merchant navy officer murder: ಹತ್ಯೆಗೂ ಮುನ್ನ ಮಗಳ ಹುಟ್ಟುಹಬ್ಬದಂದು ಪತಿ ಕೈ ಹಿಡಿದು ಮಸ್ತ್‌ ಸ್ಟೆಪ್‌ ಹಾಕಿದ್ದ ಮುಸ್ಕಾನ್‌ ; ವಿಡಿಯೋ ವೈರಲ್‌

ಮರ್ಚೆಂಟ್‌ ನೇವಿ ಅಧಿಕಾರಿ ಸೌರಭ್‌ ಹಾಗೂ ಅವರ ಪತ್ನಿ ತಮ್ಮ ಮಗಳ ಹುಟ್ಟು ಹಬ್ಬದಂದು ನೃತ್ಯ ಮಾಡಿದ್ದ ವಿಡಿಯೋ ವೈರಲ್‌ ಆಗಿದೆ. ಮಗಳ ಹುಟ್ಟುಹಬ್ಬವನ್ನು ಮುಸ್ಕಾನ್‌ ಹಾಗೂ ಸೌರಭ್‌ ಅದ್ಧೂರಿಯಾಗಿ ಆಚರಿಸಿದ್ದರು. ಅಲ್ಲಿ ಮುಸ್ಕಾನ್‌ ಗಂಡನ ಜೊತೆ ನೃತ್ಯ ಮಾಡಿದ್ದಾಳೆ. ಗಂಡನ ಮೇಲೆ ಅತೀವ ಪ್ರೀತಿಯಿರುವಂತೆ ನಟಸಿದ್ದಾಳೆ. ಸೌರಭ್‌ ಕೈ ಹಿಡಿದು, ಹಾಡಿಗೆ ಸ್ಟೆಪ್‌ ಹಾಕಿದ್ದಾಳೆ.

ಹತ್ಯೆಗೂ ಮೊದಲು ಪತಿಯ ಕೈ ಹಿಡಿದು ನೃತ್ಯ ಮಾಡಿದ್ದ ಮುಸ್ಕಾನ್‌

ಮುಸ್ಕಾನ್‌ ಹಾಗೂ ಸೌರಭ್‌ ನೃತ್ಯ ಮಾಡುತ್ತಿರುವುದು

Profile Vishakha Bhat Mar 21, 2025 3:44 PM

ಲಖನೌ: ಮೀರತ್‌ನಲ್ಲಿ ಮರ್ಚೆಂಟ್‌ ನೇವಿ ಅಧಿಕಾರಿ ಸೌರಭ್‌ ಅವರ ಕೊಲೆಗೆ (Merchant navy officer murder) ಸಂಬಂಧಿಸಿದ ವಿಷಯಗಳು ಒಂದೊಂದೇ ಬೆಳಕಿಗೆ ಬರುತ್ತಿವೆ. ಸೌರಭ್ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಸೌರಭ್‌ ಅವರನ್ನು ಕೊಲೆ ಮಾಡಿದ್ದಾರೆ. ಹತ್ಯೆಗೂ ಕೆಲ ದಿನಗಳ ಮೊದಲು ಮುಸ್ಕಾನ್‌ ಹಾಗೂ ಸೌರಭ್‌ ತಮ್ಮ ಆರು ವರ್ಷದ ಮಗಳು ಪಿಹುವಿನ ಹುಟ್ಟುಹಬ್ಬದ ದಿನ ನೃತ್ಯ ಮಾಡಿದ್ದು ಅದು ಈಗ ವೈರಲ್‌ ಆಗಿದೆ. ಫೆಬ್ರವರಿ 28 ರಂದು ರೆಸ್ಟೋರೆಂಟ್‌ನಲ್ಲಿ ತಮ್ಮ ಮಗಳ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಮಗಳ ಹುಟ್ಟುಹಬ್ಬವನ್ನು ಮುಸ್ಕಾನ್‌ ಹಾಗೂ ಸೌರಭ್‌ ಅದ್ಧೂರಿಯಾಗಿ ಆಚರಿಸಿದ್ದರು. ಅಲ್ಲಿ ಮುಸ್ಕಾನ್‌ ಗಂಡನ ಜೊತೆ ನೃತ್ಯ ಮಾಡಿದ್ದಾಳೆ. ಗಂಡನ ಮೇಲೆ ಅತೀವ ಪ್ರೀತಿಯಿರುವಂತೆ ನಟಸಿದ್ದಾಳೆ. ಸೌರಭ್‌ ಕೈ ಹಿಡಿದು, ಹಾಡಿಗೆ ಸ್ಟೆಪ್‌ ಹಾಕಿದ್ದಾಳೆ.



ಏನಿದು ಘಟನೆ?

ಲಂಡನ್‍ನಲ್ಲಿ ಖಾಸಗಿ ಹಡಗಿನ ಕಂಪನಿಯಲ್ಲಿ ನೇವಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಸೌರಭ್ ರಜಪೂತ್ ಫೆಬ್ರವರಿಯಲ್ಲಿ ತಮ್ಮ ಮಗಳ ಹುಟ್ಟುಹಬ್ಬವನ್ನು ಆಚರಿಸಲು ಮೀರತ್‍ಗೆ ಭೇಟಿ ನೀಡಿದ್ದರು. ಮಾರ್ಚ್ 4ರಂದು ಮಗಳ ಹುಟ್ಟುಹಬ್ಬದ ಪಾರ್ಟಿಯಂದು ಸೌರಭ್ ಅನ್ನು ಪತ್ನಿ ಮುಸ್ಕಾನ್ ತನ್ನ ಪ್ರಿಯಕರ ಸಾಹಿಲ್ ಜೊತೆ ಸೇರಿಕೊಂಡು ಷಡ್ಯಂತ್ರ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನಂತರ ಅವರು ಸೌರಭ್ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್ ಡ್ರಮ್‌ನಲ್ಲಿ ಸಿಮೆಂಟ್ ತುಂಬಿ ಶವವನ್ನು ಮುಚ್ಚಿಟ್ಟಿದ್ದಾರೆ. ಸೌರಭ್ ಕಾಣೆಯಾದ ಬಗ್ಗೆ ಅವನ ಮನೆಯವರು ದೂರು ನೀಡಿದ ಕಾರಣ ಪೊಲೀಸರು ಕಾಣೆಯಾಗಿದ್ದ ಸೌರಭ್ ಹುಡುಕಾಟದಲ್ಲಿದ್ದಾಗ ತನಿಖೆಯ ವೇಳೆ ಆತನ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದಾಳೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ನಂತರ ಪೊಲೀಸರು ಆತನ ಕೊಳೆತ ಅವಶೇಷಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಮೂಲಗಳು ಬಹಿರಂಗಪಡಿಸಿರುವ ಪ್ರಕಾರ, ಆರಂಭದಲ್ಲಿ ಮುಸ್ಕಾನ್‌ನ ತಾಯಿ ಎಂದು ನಂಬಲಾಗಿದ್ದ ಮಹಿಳೆ ವಾಸ್ತವವಾಗಿ ಆಕೆಯ ಮಲತಾಯಿ. ಮಲತಾಯಿ ಮುಸ್ಕಾನ್ ಮತ್ತು ಸಾಹಿಲ್‌ಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ತನಿಖೆಯಲ್ಲಿ ಹೆಚ್ಚಿನ ವಿಷಯಗಳು ಬೆಳಕಿಗೆ ಬಂದಿದ್ದು, , ಮುಸ್ಕಾನ್ ಮತ್ತು ಸಾಹಿಲ್ ಸೌರಭ್‌ನ ಕತ್ತರಿಸಿದ ತಲೆ ಮತ್ತು ಅಂಗೈಯನ್ನು ಚೀಲದಲ್ಲಿ ಹೊತ್ತುಕೊಂಡು ಹೋಗಿದ್ದಾರೆ ಎನ್ನುವುದು ತಿಳಿದಿದೆ.

ಸೌರಭ್‌ಗೂ ತಿಳಿದಿತ್ತು ಹೆಂಡತಿಯ ಕಳ್ಳಾಟ

2021 ರಲ್ಲಿಯೇ ಸೌರಭ್‌ಗೆ ತನ್ನ ಹೆಂಡತಿಯ ಕಳ್ಳಾಟಗಳು ತಿಳಿದಿದ್ದವು. ಈಗಾಗಲೇ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೂ ಮುಸ್ಕಾನ್‌ ಸೌರಭ್‌ನನ್ನು ಕೊಲೆ ಮಾಡಿದ್ದಾಳೆ. ಕೊಲೆಗೂ ಮುನ್ನ ಸೌರಭ್‌ಗೆ ಮಾದಕ ದ್ರವ್ಯಗಳನ್ನು ನೀಡಲಾಗಿತ್ತು ಎನ್ನಲಾಗಿದೆ. ಸದ್ಯ ಇದೆಲ್ಲದರ ವಿಚಾರಣೆ ನಡೆಯುತ್ತಿದೆ.