Shreya Chaudhary: ನಟಿ ಶ್ರೇಯಾ ಚೌಧರಿಯ ಆಕರ್ಷಕ ಬೋಲ್ಡ್ ಲುಕ್ ವೈರಲ್
ʼಬಂದೀಶ್ ಬ್ಯಾಂಡಿಟ್ಸ್ʼ ವೆಬ್ ಸಿರೀಸ್ ಮೂಲಕ ಖ್ಯಾತಿ ಗಳಿಸಿದ್ದ ನಟಿ ಶ್ರೇಯಾ ಚೌಧರಿ ಫ್ಯಾಷನ್ ಪ್ರಿಯರು ಹೌದು. ತಮ್ಮ ಫಿಟ್ನೆಸ್ನಿಂದಲೂ ಜನಪ್ರಿಯತೆ ಹೊಂದಿರುವ ನಟಿಯ ಕೆಲ ಬೋಲ್ಡ್ ಲುಕ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Sherya Chaudhary


ʼಬಂದೀಶ್ ಬ್ಯಾಂಡಿಟ್ಸ್ʼ ಖ್ಯಾತಿಯ ನಟಿ ಶ್ರೇಯಾ ಚೌಧರಿ ವಿಭಿನ್ನ ಫೋಟೊ ಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅಂತೆಯೇ ಈ ಭಾರಿ ನಟಿ ಬ್ಲ್ಯಾಕ್ ಕಲರ್ ಟ್ರೆಂಡಿಂಗ್ ಡ್ರೆಸ್ ಧರಿಸಿ ಪ್ರೇಕ್ಷಕರನ್ನು ದಂಗಾಗಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಟಿ ಹಾಟ್ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಬ್ಲ್ಯಾಕ್ ಔಟ್ಫಿಟ್ನಲ್ಲಿ ಶ್ರೇಯಾ ಚೌಧರಿ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಅವರು ತಮ್ಮ ಫಿಟ್ ಟೋನ್ಡ್ ಅಬ್ಸ್ ತೋರಿಸಿದ್ದಾರೆ.

ಯಾವುದೇ ಆಭರಣಗಳಿಲ್ಲದೆ, ಫ್ರೀ ಹೇರ್ ಸ್ಟೈಲ್ ಮತ್ತು ಫಿಟ್ ಫಿಗರ್ನಿಂದ ಗ್ಲ್ಯಾಮರ್ ಲುಕ್ ನೀಡಿದ್ದಾರೆ. ನಟಿಯ ಈ ಬೋಲ್ಡ್ ಲುಕ್ನ ಫೋಟೊಗಳು ಬಹಳಷ್ಟು ವೈರಲ್ ಆಗಿದ್ದು ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ.

ನಟಿಯ ಈ ಸೆಕ್ಸಿ ಲುಕ್ಗೆ ನೆಟ್ಟಿಗರೊಬ್ಬರು ಸಖತ್ ಫಿಗರ್ ಎಂದು ಕಾಮೆಂಟ್ ಮಾಡಿದ್ದಾರೆ. ಮೊತ್ತೊಬ್ಬರು ವೆರಿ ಅಟ್ರ್ಯಾಕ್ಟಿವ್ ಲುಕ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮುಂಬೈಯಲ್ಲಿ ಬೆಳೆದ ಶ್ರೇಯಾ ಚೌದರಿ ಸೌಂದರ್ಯ ಸ್ಪರ್ಧೆಗಳಲ್ಲಿ ಅಲ್ಲದೆ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ʼಬಂದೀಶ್ ಬ್ಯಾಂಡಿಟ್ಸ್ʼನಲ್ಲಿ ನಟಿಸಿದ ನಂತರ ಅವರು ಹೆಚ್ಚು ಫೇಮ್ ಗಿಟ್ಟಿಸಿಕೊಂಡರು.