B Saroja devi: ಅಭಿನಯ ಸರಸ್ವತಿಗೆ ಒಲಿದು ಬಂದ ಪ್ರಶಸ್ತಿಗಳಾವುವು? ಅಪರೂಪದ ಫೋಟೋಗಳು ಇಲ್ಲಿವೆ
ಹಿರಿಯ ನಟಿ ಬಿ. ಸರೋಜಾದೇವಿ (B. Sarojadevi) ಇಂದು ವಿಧಿವಶರಾಗಿದ್ದಾರೆ. ಸರೋಜಾದೇವಿ ಅವರು 1969ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 1992ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನಿಂದ ಕಲೈಮಾಮಣಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಆ ಕುರಿತ ಮಾಹಿತಿ ಮತ್ತು ಅಪರೂಪದ ಫೋಟೋಗಳು ಇಲ್ಲಿವೆ ನೋಡಿ.



ಸರೋಜಾದೇವಿ ಅವರು ತಮ್ಮ 31ನೇ ವಯಸ್ಸಿನಲ್ಲೇ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ 'ಪದ್ಮಶ್ರೀ' (1969)ಗೆ ಭಾಜನರಾದರು. ನಂತರ 1992ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಸಿಕ್ಕಿತ್ತು.

ಜೀವಮಾನ ಸಾಧನೆಗಾಗಿ ತಮಿಳುನಾಡು ಸರ್ಕಾರದಿಂದ ನೀಡುವ ಕಲೈಮಾಮಣಿ ಪ್ರಶಸ್ತಿಯನ್ನು 2009ರಲ್ಲಿ ಬಿ. ಸರೋಜಾದೇವಿಗೆ ನೀಡಲಾಗಿತ್ತು. ಸರೋಜಾದೇವಿ ಅವರಿಗೆ ರಾಜ್ಯ ಸರ್ಕಾರವು 2009ರಲ್ಲಿ 'ಡಾ. ರಾಜ್ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ' ಪ್ರಶಸ್ತಿಯನ್ನು ನೀಡಿ, ಗೌರವಿಸಿತ್ತು.

1988ರಲ್ಲಿ ಬಿ ಸರೋಜಾ ದೇವಿ ಅವರಿಗೆ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಬಿ. ಸರೋಜಾದೇವಿ ಅವರಿಗೆ 2006ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿತ್ತು. ಸಿನಿಜಗತ್ತಿನಲ್ಲಿ ಸರೋಜಾದೇವಿ ಅವರು ಮಾಡಿದ ಸಾಧನೆಗಾಗಿ 1994ರಲ್ಲಿ ಫಿಲ್ಮ್ಫೇರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು

ಸರೋಜಾದೇವಿ ಅವರ ಸಾಧನೆಗೆ ಗೌರವವಾಗಿ ಅಭಿನಯ ಸರಸ್ವತಿ ಎಂದು ಕನ್ನಡಿಗರು ಕರೆದರೆ, ತಮಿಳುನಾಡು ಮಂದಿ 'ಕನ್ನಡತು ಪೈಂಗಿಳಿ' (ಕನ್ನಡದ ಗಿಳಿ) ಎಂದು ಕರೆಯಲಾಗುತ್ತಿತ್ತು.

ಸರೋಜಾದೇವಿ ಅವರನ್ನು 'ಸ್ಟಾರ್' ಹೀರೋಗಳ 'ಸೂಪರ್ ಸ್ಟಾರ್' ಹೀರೋಯಿನ್ ಅಂತಲೇ ಕರೆಯಬಹುದು. ಯಾಕೆಂದರೆ, ಅವರಿಗೆ ಆ ಕಾಲದಲ್ಲಿನ ಭಾರತದ ಸ್ಟಾರ್ ಹೀರೋಗಳಾದ ಡಾ. ರಾಜ್ಕುಮಾರ್, ಎಂ.ಜಿ. ರಾಮಚಂದ್ರನ್ (ಎಂಜಿಆರ್), ಶಿವಾಜಿ ಗಣೇಶನ್, ಜೆಮಿನಿ ಗಣೇಶನ್, ಅಕ್ಕಿನೇನಿ ನಾಗೇಶ್ವರ ರಾವ್, ಎನ್.ಟಿ. ರಾಮರಾವ್ (ಎನ್ಟಿಆರ್), ಹಿಂದಿಯ ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಶಮ್ಮಿ ಕಪೂರ್, ಸುನಿಲ್ ದತ್ ಮುಂತಾದವರ ಜೊತೆಗೆ ತೆರೆಹಂಚಿಕೊಂಡಿದ್ದರು.