Dhadak 2 Trailer Launch: ಧಡಕ್–2 ಟ್ರೈಲರ್ ಲಾಂಚ್ ಇವೆಂಟ್ಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಬಾಲಿವುಡ್ ಸೆಲೆಬ್ರಿಟಿಗಳು!
ಶಾಜಿಯಾ ಇಕ್ಬಾಲ್ ಅವರ ‘ಧಡಕ್–2’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ಸಿದ್ಧಾಂತ್ ಚತು ರ್ವೇದಿ ಹಾಗೂ ತೃಪ್ತಿ ದಿಮ್ರಿ ಕಾಲೇಜು ಪ್ರೇಮಿಗಳಾಗಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮವು ಮುಂಬೈನಲ್ಲಿ ಅದ್ದೂರಿಯಾಗಿ ನಡೆದಿದ್ದು ತೃಪ್ತಿ ದಿಮ್ರಿ, ಸಿದ್ಧಾಂತ್ ಚತುರ್ವೇದಿ, ಕರಣ್ ಜೋಹರ್ ತಮ್ಮ ಅದ್ಬುತ ಲುಕ್ ಮೂಲಕ ಗಮನ ಸೆಳೆದಿದ್ದಾರೆ.

Dhadak 2 Trailer Launch


ನಟಿ ತೃಪ್ತಿ ದಿಮ್ರಿ ಅವರು ಶ್ರೀದೇವಿ ಅವರ ಮಾಮ್ ಸಿನಿಮಾ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದರು. ಈ ಸಿನಿಮಾದ ನಂತರ ಅವರು ಬುಲ್ ಬುಲ್ ಸಿನಿಮಾ ಮೂಲಕ ಹೆಚ್ಚು ಖ್ಯಾತಿಗಳಿಸಿದರು. ಸದ್ಯ ಅವರು ಧಡಕ್ 2 ಚಿತ್ರದಲ್ಲಿ ನಟಿಸುತ್ತಿದ್ದು ಈ ಇವೆಂಟ್ ನಲ್ಲಿ ಸಂಪೂರ್ಣ ಬಿಳಿ ಬಣ್ಣದ ಡ್ರೆಸ್ ನಲ್ಲಿ ಕಂಗೊಳಿದರು. ನಟಿಯ ನ್ಯಾಚುರಲ್ ಮೇಕಪ್ ಹಾಗೂ ಸಿಂಪಲ್ ಹೇರ್ ಸ್ಟೈಲ್ ಈ ಡ್ರೆಸ್ ಗೆ ಬಹಳ ಸೂಟ್ ಆಗುವಂತೆ ಮಾಡಿದೆ.

ಬಹುನಿರೀಕ್ಷಿತ ಡಧಕ್ 2 ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಮುಂಬೈನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ನಟ ಸಿದ್ಧಾಂತ್ ಚತುರ್ವೇದಿ ತಮ್ಮ ಸ್ಟೈಲಿಶ್ ಔಟ್ಫಿಟ್ ನಿಂದ ಎಲ್ಲರ ಗಮನ ಸೆಳೆದರು. ಸಿದ್ಧಾಂತ್ ಚತುರ್ವೇದಿ ಲೈಟ್ ಬ್ಲೂ ಡೆನಿಮ್ ಜೀನ್ಸ್, ಟ್ರೆಂಡಿ ಜಾಕೆಟ್ ಹಾಗೂ ವೈಟ್ ಟೀ-ಶರ್ಟ್ನಲ್ಲಿ ಯಂಗ್ ಲುಕ್ ನಲ್ಲಿ ಮಿಂಚಿದರು.

ಚಿತ್ರದ ನಿರ್ಮಾಪಕ ಕರಣ್ ಜೋಹರ್ ವೈಟ್ ಹಾಗೂ ಗ್ರೇ ಔಟ್ಫಿಟ್ನಲ್ಲಿ ಗಮನ ಸೆಳೆದರು. ಅಗಸ್ಟ್ 1, 2025 ರಂದು ಬಿಡುಗಡೆಯಾಗಲಿರುವ ಡಧಕ್ 2 ಧರ್ಮಾ ಪ್ರೊಡಕ್ಷನ್ಸ್, ಝೀ ಸ್ಟುಡಿ ಯೋಸ್ ಹಾಗೂ ಕ್ಲೌಡ್ 9 ಪಿಕ್ಚರ್ಸ್ ಬ್ಯಾನರ್ಗಳಡಿ ನಿರ್ಮಾಣವಾಗಿದೆ.

ಖ್ಯಾತ ಔಷಧ ಉದ್ಯಮಿ ಆಧಾರ್ ಪೂನಾವಾಲಾ ಅವರೂ ಈ ಸಿನಿಮಾಕ್ಕೆ ಬಂಡವಾಳ ಹೂಡಿ ದ್ದಾರೆ. ಶಾಜಿಯಾ ಇಕ್ಬಾಲ್ ಅವರು ಈ ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದು ಕಥೆಯೂ ಇಂಟ್ರಸ್ಟಿಂಗ್ ಆಗಿದೆ.

ಆಶಿಶ್ ಚೌಧರಿ, ವಿಪಿನ್ ಶರ್ಮಾ, ಮಂಜಿರಿ ಪುಪಾಲಾ ಸೇರಿದಂತೆ ಅನೇಕ ಖ್ಯಾತ ನಟ ನಟಿಯರು ಈ ಚಿತ್ರದಲ್ಲಿ ನಟಿಸಿದ್ದಾರೆ. ಜಾತಿ ತಾರತಮ್ಯದ ವಿರುದ್ಧ ಹೋರಾಡುತ್ತಿರುವ ಪ್ರೇಮಿಗಳ ಕಥೆಯನ್ನು ಈ ಸಿನಿಮಾ ಹೊಂದಿದೆ.

2018ರಲ್ಲಿ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿದ್ದ ಕಧೀರ್ ನಟನೆಯ ‘ಪಾರಿಯೂರ್ ಪೆರುಮಾಳ್’ ಸಿನಿಮಾ ಆಧರಿಸಿ ಧಡಕ್–2 ಬರುತ್ತಿದೆ. ಇದೀಗ ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.