Miss Universe Karnataka 2025: ದಿಲ್ಲಿಯಲ್ಲಿ ಸಿಎಂ ಭೇಟಿ ಮಾಡಿದ ಮಿಸ್ ಯೂನಿವರ್ಸ್ ಕರ್ನಾಟಕ ವಂಶಿ ಉದಯ್
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಮಿಸ್ ಯೂನಿವರ್ಸ್ ಕರ್ನಾಟಕ ವಂಶಿ ಉದಯ್ ದಿಲ್ಲಿಯಲ್ಲಿ ಭೇಟಿ ಮಾಡಿದರು. ಮುಂಬರುವ ನ್ಯಾಷನಲ್ ಲೆವೆಲ್ ಪೇಜೆಂಟ್ಗೆ ಭಾಗವಹಿಸುತ್ತಿರುವ ವಿಷಯ ತಿಳಿಸಿ ಆಶೀರ್ವಾದ ಪಡೆದರು. ಅಗಸ್ಟ್ನಲ್ಲಿ ಜೈಪುರ್ನಲ್ಲಿ ನಡೆಯಲಿರುವ ಫಿನಾಲೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ಮಿಸ್ ಯೂನಿವರ್ಸ್ ಕರ್ನಾಟಕ ವಂಶಿ ಉದಯ್ ಕಳೆದ ಕೆಲವು ದಿನಗಳಿಂದ ದಿಲ್ಲಿಯಲ್ಲಿದ್ದಾರೆ.

ಚಿತ್ರಗಳು: ವಂಶಿ ಉದಯ್, ಮಿಸ್ ಯೂನಿವರ್ಸ್ ಕರ್ನಾಟಕ 2025


ಸಿದ್ದರಾಮಯ್ಯ ಭೇಟಿ
ದಿಲ್ಲಿಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಿಸ್ ಯೂನಿವರ್ಸ್ 2025 ವಂಶಿ ಉದಯ್ ಭೇಟಿ ಮಾಡಿ, ಮಾತನಾಡಿದರು.

ಆಗಸ್ಟ್ನಲ್ಲಿ ಫಿನಾಲೆ ಸಾಧ್ಯತೆ
ಅಗಸ್ಟ್ನಲ್ಲಿ ಜೈಪುರ್ನಲ್ಲಿ ನಡೆಯಲಿರುವ ಫಿನಾಲೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ಮಿಸ್ ಯೂನಿವರ್ಸ್ ಕರ್ನಾಟಕ ವಂಶಿ ಉದಯ್ ಕಳೆದ ಕೆಲವು ದಿನಗಳಿಂದ ದಿಲ್ಲಿಯಲ್ಲಿ ಗ್ರೂಮಿಂಗ್ ಟ್ರೈನಿಂಗ್ ಸೇರಿದಂತೆ ಬ್ಯೂಟಿ ಪೇಜೆಂಟ್ ಅಗತ್ಯವಿರುವ ತಯಾರಿಯಲ್ಲಿದ್ದಾರೆ.

ಸಿಎಂ ಜತೆ ಮಾತನಾಡಿದ ವಂಶಿ
ʼʼಮುಖ್ಯಮಂತ್ರಿಯನ್ನು ಇದೇ ಮೊದಲ ಬಾರಿಗೆ ನಾನು ಭೇಟಿ ಮಾಡಿದ್ದೇನೆ. ಈ ಹಿಂದೆ ದೇವರಾಜ್ ಅರಸ್ ಅವರನ್ನು ಹೊರತುಪಡಿಸಿದಲ್ಲಿ ಅತಿ ಹೆಚ್ಚು ಅವಧಿಯಲ್ಲಿದ್ದದ್ದು ನೀವೇ ಎಂಬುದನ್ನು ಹೇಳುವುದರ ಜತೆಗೆ ಒಂದೆರೆಡು ಪ್ರಶ್ನೆಗಳನ್ನು ಕೂಡ ಕೇಳಿದೆ. ನಾನು ಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದರಿಂದ ಭೇಟಿ ಮಾಡಲು ಬಂದಿದ್ದೇನೆ ಎಂದು ತಿಳಿಸಿದೆ. ಅವರು ಕೂಡ ಒಂದೆರೆಡು ಸ್ಪೂರ್ತಿ ಮಾತುಗಳನ್ನು ಹೇಳುವುದರ ಮೂಲಕ ನನಗೆ ಶುಭಾಶಯ ಕೋರಿದರು. ಇದು ನನಗೆ ಅತೀವ ಸಂತೋಷ ನೀಡಿದೆʼʼ ಎಂದು ವಂಶಿ ವಿಶ್ವವಾಣಿ ನ್ಯೂಸ್ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

ದಿಲ್ಲಿಯಿಂದ ವಿಶ್ವವಾಣಿ ನ್ಯೂಸ್ ಜತೆ ಮಾತನಾಡಿದ ವಂಶಿ
ʼʼಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದು ಖುಷಿಯಾಯಿತು. ಅಲ್ಲದೇ, ಅಪ್ಪಟ ಕನ್ನಡತಿಯೊಬ್ಬಳು ಈ ಬ್ಯೂಟಿ ಪೇಜೆಂಟ್ನಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತಸವಾಯಿತು ಎಂದು ಮುಖ್ಯಮಂತ್ರಿ ತಿಳಿಸಿದರು. ಅಲ್ಲದೇ ಕೇವಲ ಫ್ಯಾಷನ್ ಕ್ಷೇತ್ರಕ್ಕೆ ಮಾತ್ರವಲ್ಲ, ಸಮಾಜಮುಖಿ ಕೆಲಸಗಳಲ್ಲೂ ಮುಂದೊಮ್ಮೆ ತೊಡಗಿಸಿಕೊಳ್ಳುವಂತೆ ಸೂಚಿಸಿದರು. ಆಗ ಇದಕ್ಕೆ ಪ್ರತಿಕ್ರಿಯಿಸಿದ ನಾನು ಈಗಾಗಲೇ ಆತ್ಮವಿಶ್ವಾಸದಿಂದ ಮುನ್ನೆಡೆಯುತ್ತಿರುವುದಾಗಿಯೂ ಭವಿಷ್ಯದಲ್ಲಿ ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳುವುದಾಗಿ ತಿಳಿಸಿದೆನುʼʼ ಎಂದು ವಂಶಿ ಉದಯ್ ವಿಶ್ವವಾಣಿ ನ್ಯೂಸ್ಗೆ ದೂರದ ದಿಲ್ಲಿಯಿಂದಲೇ ಮೊಬೈಲ್ ಕರೆಯ ಮೂಲಕ ತಿಳಿಸಿದರು.

ವಂಶಿ ಅವರನ್ನು ಹೊಗಳಿದ ರಿಜಿನಲ್ ಡೈರೆಕ್ಟರ್ ನಂದಿನಿ
ಮಿಸ್ ಯೂನಿವರ್ಸ್ ಕರ್ನಾಟಕ ನಂದಿನಿ ನಾಗರಾಜ್ ವಿಶ್ವವಾಣಿ ನ್ಯೂಸ್ನೊಂದಿಗೆ ಮಾತನಾಡಿ, ʼʼವಂಶಿಯ ಮುಖ್ಯಮಂತ್ರಿ ಭೇಟಿ ನಮಗೆ ಮತ್ತಷ್ಟು ಹುರುಪು ತುಂಬಿದೆ. ಅವರ ಮಾತುಗಳು ಉತ್ಸಾಹ ಹೆಚ್ಚಿಸಿದೆ. ಈ ಬಾರಿ ಕ್ರೌನ್ ನಮ್ದೆ ಎಂದು ಆತ್ಮವಿಶ್ವಾಸದಿಂದ ಹೇಳಿದರು. ಅಂದಹಾಗೆ, ವಂಶಿ ಮೂಲತಃ ಚಿಕ್ಕಮಗಳೂರಿನ ಹುಡುಗಿ. ಈಗಾಗಲೇ ಸಾಕಷ್ಟು ಫ್ಯಾಷನ್ ಶೂಟ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ನಮ್ಮ ನಾಡನ್ನು ಹೆಮ್ಮೆಯಿಂದ ಪ್ರತಿನಿಧಿಸಲಿದ್ದಾರೆʼʼ ಎಂದು ನಂದಿನಿ ನಾಗರಾಜ್ ಹೇಳಿದರು.