Asian Athletics 2025: ಸಚಿನ್‌ಗೆ ಬೆಳ್ಳಿ; ಕಂಚು ಗೆದ್ದ ವಿಥ್ಯಾ, ಕುಜುರ್
ಪುರುಷರ 200 ಮೀ ಫೈನಲ್‌ನಲ್ಲಿ ಕುಜುರ್ ಅತ್ಯುತ್ತಮ ಪ್ರದರ್ಶನ ನೀಡಿ 20.32 ಸೆಕೆಂಡುಗಳಲ್ಲಿ ಗುರಿ ತಲುಪಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸುವ ಮೂಲಕ ಕಂಚಿನ ಪದಕ ಗೆದ್ದರು. 21 ವರ್ಷದ ಅವರು ಈ ವರ್ಷದ ಆರಂಭದಲ್ಲಿ ನಡೆದ ರಾಷ್ಟ್ರೀಯ ಫೆಡರೇಶನ್ ಸೀನಿಯರ್ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ತಮ್ಮ ಹಿಂದಿನ 20.40 ಸೆಕೆಂಡುಗಳ ದಾಖಲೆಯನ್ನು ಉತ್ತಮಗೊಳಿಸಿದರು.


ಗುಮಿ (ದಕ್ಷಿಣ ಕೊರಿಯ): ಏಷ್ಯನ್ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ(Asian Athletics 2025) ಭಾರತದ ಸಚಿನ್ ಯಾದವ್(Sachin Yadav) ಅವರು ಶನಿವಾರ ನಡೆದ ಪುರುಷರ ಜಾವೆಲಿನ್ ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಹಾಲಿ ಒಲಿಂಪಿಕ್ ಚಾಂಪಿಯನ್, ಪಾಕಿಸ್ತಾನದ ಅರ್ಷದ್ ನದೀಮ್(Arshad Nadeem) ಚಿನ್ನ ಗೆದ್ದರು. ಮತೋರ್ವ ಭಾರತೀಯ ಯಶ್ವೀರ್ ಸಿಂಗ್( Yashvir Singh) 5ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಸಚಿನ್ ಯಾದವ್ ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದರೂ ಅರ್ಷದ್ ನದೀಮ್ ಅವರನ್ನು ಸೋಲಿಸಲು ಅದು ಸಾಕಾಗಲಿಲ್ಲ. ಅರ್ಷದ್ ತಮ್ಮ ಮೂರನೇ ಥ್ರೋನಿಂದ ಸ್ಪರ್ಧೆಯಲ್ಲಿ ಪ್ರಾಬಲ್ಯ ಸಾಧಿಸಿದರು. 86.40 ಮೀಟರ್ ಎಸೆತದೊಂದಿಗೆ ಚಿನ್ನವನ್ನು ಗೆದ್ದರು. ಸಚಿನ್ ಯಾದವ್ ಕೊನೆಯ ಎರಡು ಪ್ರಯತ್ನಗಳಲ್ಲಿ 83.03 ಮೀ ಮತ್ತು 85.16 ಮೀ. ದೂರ ಎಸೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಸಚಿನ್ ಹೊರತುಪಡಿಸಿ, ಯಶ್ವೀರ್ ಸಿಂಗ್ 82.57 ಮೀ ವೈಯಕ್ತಿಕ ಅತ್ಯುತ್ತಮ ಎಸೆತದೊಂದಿಗೆ 5 ನೇ ಸ್ಥಾನ ಪಡೆದರು. ಸಚಿನ್ ಯಾದವ್ ಬೆಳ್ಳಿ ಮತ್ತು ಯಶ್ವೀರ್ ಸಿಂಗ್ ವೈಯಕ್ತಿಕ ಅತ್ಯುತ್ತಮ ಎಸೆತ ಎಸೆದರೂ ಇಬ್ಬರೂ ಭಾರತೀಯರು ವಿಶ್ವ ಚಾಂಪಿಯನ್‌ಶಿಪ್ ಅರ್ಹತೆ ಪಡೆಯುವಲ್ಲಿ ವಿಫಲರಾದರು.
ಭಾರತದ ಅನಿಮೇಶ್ ಕುಜುರ್ ಮತ್ತು ವಿಥ್ಯಾ ರಾಮರಾಜ್ ಕ್ರಮವಾಗಿ ಪುರುಷರ 200 ಮೀಟರ್ ಫೈನಲ್ ಮತ್ತು ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ತಲಾ ಕಂಚಿನ ಪದಕ ಗೆದ್ದರು. ಸದ್ಯ ಭಾರತ 8 ಚಿನ್ನ, 8 ಬೆಳ್ಳಿ ಹಾಗೂ 5 ಕಂಚು ಸೇರಿದಂತೆ ಭಾರತ ಒಟ್ಟು 21 ಪದಕ ಜಯಿಸಿದೆ.
ಪುರುಷರ 200 ಮೀ ಫೈನಲ್‌ನಲ್ಲಿ ಕುಜುರ್ ಅತ್ಯುತ್ತಮ ಪ್ರದರ್ಶನ ನೀಡಿ 20.32 ಸೆಕೆಂಡುಗಳಲ್ಲಿ ಗುರಿ ತಲುಪಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸುವ ಮೂಲಕ ಕಂಚಿನ ಪದಕ ಗೆದ್ದರು. 21 ವರ್ಷದ ಅವರು ಈ ವರ್ಷದ ಆರಂಭದಲ್ಲಿ ನಡೆದ ರಾಷ್ಟ್ರೀಯ ಫೆಡರೇಶನ್ ಸೀನಿಯರ್ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ತಮ್ಮ ಹಿಂದಿನ 20.40 ಸೆಕೆಂಡುಗಳ ದಾಖಲೆಯನ್ನು ಉತ್ತಮಗೊಳಿಸಿದರು.
ಮಹಿಳೆಯರ 400 ಮೀ ಹರ್ಡಲ್ಸ್‌ನಲ್ಲಿ, ಏಷ್ಯನ್ ಕ್ರೀಡಾಕೂಟದ ಪದಕ ವಿಜೇತೆ ವಿಥ್ಯಾ ರಾಮರಾಜ್ 56.46 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚು ಗೆದ್ದರು.
BREAKING: ARSHAD NADEEM WINS GOLD MEDAL FOR PAKISTAN! 🥇🇵🇰💚
— Muneeb Farrukh (@Muneeb313_) May 31, 2025
His final throw was 86.40m in the #AsianAthleticsChampionships2025! pic.twitter.com/N1fA6wUeb6
ಶುಕ್ರವಾರ ಗುಲ್ವೀರ್ ಸಿಂಗ್, ಹೈಜಂಪರ್ ಪೂಜಾ ಸಿಂಗ್, ಹೆಪ್ಟತ್ಲೀಟ್ ನಂದಿನ ಅಗಾಸರಾ ಬಂಗಾರ ಗೆದ್ದಿದ್ದರು. ಗುಲ್ವೀರ್ ಸಿಂಗ್ 5 ಸಾವಿರ ಮೀ. ಓಟದಲ್ಲಿಯೂ ಚಿನ್ನ ಗೆಲ್ಲುವ ಮೂಲಕ ಕೂಟದಲ್ಲಿ ಎರಡನೇ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಅವರು 10 ಸಾವಿರ ಮೀ. ಓಟದಲ್ಲಿ ಚಾಂಪಿಯನ್ ಆಗಿ ಭಾರತದ ಬಂಗಾರದ ಖಾತೆ ತೆರೆದಿದ್ದರು.
18 ವರ್ಷದ ಹರಿಯಾಣದ ಹೈಜಂಪರ್ ಪೂಜಾ ಸಿಂಗ್ 1.89 ಮೀ. ಎತ್ತರಕ್ಕೆ ಜಿಗಿದು ಚಿನ್ನ ಗೆದಿದ್ದರು. ನಂದಿನಿ ಹೆಪ್ಟತ್ಲಾನ್‌ನಲ್ಲಿ ಸರ್ವಾಧಿಕ 5,941 ಅಂಕ ಗಳಿಸಿ ಚಿನ್ನ ಗೆದಿದ್ದರು.