ತಮಿಳುನಾಡಿನ ಯುವ ಕ್ರೀಡಾಪಟುಗಳಿಗೆ ತಲಾ 70 ಸಾವಿರ ಸಹಾಯಧನ ನೀಡಿದ ಶಿವಂ ದುಬೆ!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ಶಿವಂ ದುಬೆ ಅವರು ತಮಿಳುನಾಡಿನ 10 ಮಂದಿ ಉದಯೋನ್ಮುಖ ಕ್ರೀಡಾಪಟುಗಳಿಗೆ ತಲಾ 70 ಸಾವಿರ ಸಹಾಯ ಧನವನ್ನು ನೀಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆ ಮೂಲಕ ಇತರೆ ಕ್ರೀಡೆಗಳಿಗೂ ಬೆಂಬಲವನ್ನು ಸೂಚಿಸುವ ಮೂಲಕ ಹೃದಯವಂತಿಕೆಯನ್ನು ಮೆರೆದಿದ್ದಾರೆ.

ಕ್ರೀಡಾಪಟುಗಳಿಗೆ 70000 ಸಹಾಯಧನ ಪ್ರಕಟಿಸಿದ ಶಿವಂ ದುಬೆ.

ಚೆನ್ನೈ: ಪ್ರಸ್ತುತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಪರ ಆಡುತ್ತಿರುವ ಆಲ್‌ರೌಂಡರ್ ಶಿವಂ ದುಬೆ (Shivam Dube) ಇತರೆ ಕ್ರೀಡೆಯನ್ನು ಬೆಂಬಲಿಸುವ ಹೃದಯವಂತಿಕೆಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ತಮಿಳುನಾಡಿನ 10 ಮಂದಿ ಉದಯೋನ್ಮುಖ ಕ್ರೀಡಾಪಟುಗಳಿಗೆ ತಲಾ 70000 ಸಹಾಯ ಧನವನ್ನು ನೀಡಲು ಶಿವಂ ದುಬೆ ಭರವಸೆಯನ್ನು ನೀಡಿದ್ದಾರೆ. ಅದರಂತೆ ದೇಶದಲ್ಲಿ ಕ್ರಿಕೆಟ್‌ನಂತೆ ಇತರೆ ಕ್ರೀಡೆಗಳು ಕೂಡ ಬೆಳೆಯಬೇಕೆಂದು ಪಣ ತೊಟ್ಟಿದ್ದಾರೆ. ಚೆನ್ನೈನಲ್ಲಿ ನಡೆದಿದ್ದ ತಮಿಳುನಾಡು ಕ್ರೀಡಾ ಪತ್ರಕರ್ತರ ಅಸೋಸಿಯೇಷನ್ ವಾರ್ಷಿಕ ಪ್ರಶಸ್ತಿ ಹಾಗೂ ವಿದ್ಯಾರ್ಥಿ ವೇತನ ಕಾರ್ಯದಲ್ಲಿ ಶಿವಂ ದುಬೆ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ವೇಳೆ ಚೆನೈ ಸೂಪರ್ ಕಿಂಗ್ಸ್ ತಂಡದ ಸಿಇಓ ಕಾಶಿ ವಿಶ್ವನಾಥ್ ಕೂಡ ಉಪಸ್ಥಿತರಿದ್ದರು.
2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ ತಂಡದಲ್ಲಿದ್ದ ಶಿವಂ ದುಬೆ, ಇದೀಗ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಕೀ ಆಟಗಾರರಾಗಿದ್ದಾರೆ. ಈಗಾಗಲೇ ತಮಿಳುನಾಡು ಕ್ರೀಡಾ ಪತ್ರಕರ್ತರಿಂದ ಉದಯೋನ್ಮುಖ ಕ್ರೀಡಾಪಟುಗಳಿಗೆ 30000 ಸಹಾಯಧನವನ್ನು ನೀಡಲಾಗುತ್ತಿದೆ. ಇದೀಗ ಇದರ ಜೊತೆಗೆ ಶಿವಂ ದುಬೆ ಕೂಡ 10 ಮಂದಿ ಕ್ರೀಡಾಪಟುಗಳಿಗೆ ತಲಾ 70000 ಸಹಾಯ ಧನವನ್ನು ಘೋಷಿಸಿದ್ದಾರೆ.
IPL 2025: ಚೆನ್ನೈ ಸೂಪರ್ ಕಿಂಗ್ಸ್ ವೈಫಲ್ಯಕ್ಕೆ ನೈಜ ಕಾರಣ ಬಹಿರಂಗಪಡಿಸಿದ ಸುರೇಶ್ ರೈನಾ!
"ತಂಡದ ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ಪ್ರಯಾಣ ಮಾಡುತ್ತಿದ್ದ ವೇಳೆ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಡಾ ಬಾಬಾ ಅವರು, ಇಲ್ಲಿನ ಯುವ ಕ್ರೀಡಾಪಟುಗಳಿಗೆ ಏನಾದರೂ ಸಹಾಯ ಮಾಡಬೇಕೆಂದು ನನಗೆ ತಿಳಿಸಿದ್ದರು. ಹಾಗಾಗಿ ಇದು ಎಲ್ಲಾ ಕ್ರೀಡಾಪಟುಗಳಿಗೆ ಉತ್ತೇಜನಕಾರಿಯಾಗಿದೆ," ಎಂದು ಶಿವಂ ದುಬೆ ತಿಳಿಸಿದ್ದಾರೆ.
"ಈ ಸಣ್ಣ ವಿಷಯಗಳು ಅವರಿಗೆ ಹೆಚ್ಚು ಶ್ರಮಿಸಲು ಮತ್ತು ರಾಷ್ಟ್ರಕ್ಕೆ ಹೆಮ್ಮೆ ತರಲು ಹೆಚ್ಚುವರಿ ಪ್ರೇರಣೆಯನ್ನು ನೀಡುತ್ತವೆ. ನಾನು ಮುಂಬೈನಲ್ಲಿ ಇಂತಹ ಉಪಕ್ರಮಗಳನ್ನು ನೋಡಿದ್ದೇನೆ, ಆದರೆ ಇತರ ರಾಜ್ಯಗಳ ಬಗ್ಗೆ ನನಗೆ ಖಚಿತವಿಲ್ಲ. ಅಂತಹ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ನಾನು ಖಂಡಿತವಾಗಿಯೂ ಇತರ ರಾಜ್ಯಗಳಿಗೆ ಹೇಳುತ್ತೇನೆ," ಎಂದು ಅವರು ಹೇಳಿದ್ದಾರೆ.
At the Tamil Nadu Sports Journalists' Association annual scholarship awards, @IamShivamDube decided to add to the Rs.30,000 bursary with a personal contribution of Rs. 70,000 for each of the 10 winners. 👏
— Sportstar (@sportstarweb) April 22, 2025
More details ➡️ https://t.co/CBtoojUMpS@ChennaiIPL | #TNSJA pic.twitter.com/z5h4M1PmqN
ಸಹಾಯ ಧನ ಪಡೆದ ತಮಿಳುನಾಡಿನ 10 ಮಂದಿ ಕ್ರೀಡಾಪಟುಗಳು
ಪಿಬಿ ಅಭಿನಂದನ್ (ಟೇಬಲ್ ಟೆನಿಸ್)
ಕೆಎಸ್ ವ್ಹೆನೀಸಾ ಶ್ರೀ (ಆರ್ಚರಿ)
ಮುತ್ತುಮೀನಾ ವೆಲ್ಲಸಾಮಿ (ಪ್ಯಾರಾ ಅಥ್ಲಿಟ್)
ಶಮೀನಾ ರಿಯಾಝ್ ( ಸ್ಕ್ವಾಷ್)
ಜಯಂತ್ ಆರ್‌ಕೆ (ಕ್ರಿಕೆಟ್)
ಎಸ್ ನಂದನ (ಕ್ರಿಕೆಟ್)
ಕಮಲಿ ಪಿ (ಸರ್ಫಿಂಗ್)
ಆರ್ ಅಭಿನಯ (ಅಥ್ಲೆಟಿಕ್ಸ್)
ಆರ್‌ಸಿಬಿ ಜಿತಿನ್ ಅರ್ಜುನನ್ (ಅಥ್ಲೆಟಿಕ್ಸ್)
ಎ ತಕ್ಷನಾಥ್ (ಚೆಸ್)
"ಈ 30,000 ರೂ ಗಳು ಸಣ್ಣ ಮೊತ್ತದಂತೆ ಕಾಣಿಸಬಹುದು, ಆದರೆ ಇದು ಪ್ರೋತ್ಸಾಹದ ಕೆಲಸ ಮಾಡುತ್ತದೆ. ನೀವು ಚಿಕ್ಕವರಿದ್ದಾಗ, ಪ್ರತಿಯೊಂದು ಪೈಸೆ ಮತ್ತು ಪ್ರತಿಯೊಂದು ಪ್ರಶಸ್ತಿಯು ನಿಜವಾಗಿಯೂ ಮುಖ್ಯ," ಎಂದು ದುಬೆ ತಿಳಿಸಿದ್ದಾರೆ.
IPL 2025: ಆರ್‌ಸಿಬಿ ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು? ಎಲ್ಲಾ ತಂಡಗಳ ಪ್ಲೇಆಫ್ಸ್ ಲೆಕ್ಕಾಚಾರ!
ಕೊನೆಯ ಸ್ಥಾನದಲ್ಲಿ ಸಿಎಸ್‌ಕೆ
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೂ ಸೂಪರ್ ಕಿಂಗ್ಸ್ ನೀರಸ ಪ್ರದರ್ಶನವನ್ನು ತೋರುತ್ತಿದೆ. ಇಲ್ಲಿಯತನಕ ಆಡಿದ 8 ಪಂದ್ಯಗಳಲ್ಲಿ ಸಿಎಸ್‌ಕೆ ಗೆದ್ದಿರುವುದು ಕೇವಲ ಎರಡು ಪಂದ್ಯಗಳು ಮಾತ್ರ ಹಾಗೂ ಇನ್ನುಳಿದ ಆರು ಪಂದ್ಯಗಳಲ್ಲಿ ಸಿಎಸ್‌ಕೆ ಸೋಲು ಅನುಭವಿಸಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.