ಯೂ ಟರ್ನ್ ಹೊಡೆದ ಯಶಸ್ವಿ ಜೈಸ್ವಾಲ್, ಮುಂಬೈ ಪರ ಮುಂದುರಿಲಿರುವ ಓಪನರ್!
ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರು ಮುಂದಿನ ದೇಶಿ ಕ್ರಿಕೆಟ್ ಆವೃತಿಯಲ್ಲಿಯೂ ತಮ್ಮ ತವರು ತಂಡ ಮುಂಬೈ ಪರ ಮುಂದುವರಿಯಲಿದ್ದಾರೆ. ಆ ಮೂಲಕ ಅವರು ಗೋವಾಗೆ ಹೋಗುವ ನಿರ್ಧಾರವನ್ನು ಕೈ ಬಿಟ್ಟಿದ್ದಾರೆ. ಮೇ ತಿಂಗಳಲ್ಲಿ ಇವರು ಗೋವಾ ತಂಡಕ್ಕೆ ಸೇರುವ ನಿರ್ಧಾರವನ್ನು ಹೊಂದಿದ್ದರು.

ಗೋವಾ ತಂಡಕ್ಕೆ ಆಡುವ ನಿರ್ಧಾರದಿಂದ ಹಿಂದೆ ಸರಿದ ಯಶಸ್ವಿ ಜೈಸ್ವಾಲ್.

ನವದೆಹಲಿ: ಭಾರತ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ( Yashasvi Jaiswal) ಅವರು ಮುಂದಿನ ದೇಶಿ ಕ್ರಿಕೆಟ್ ಋತುವಿನಲ್ಲಿಯೂ ತಮ್ಮ ತವರು ತಂಡವಾದ ಮುಂಬೈ (Mumbai) ಪರ ಮುಂದುವರಿಯಲಿದ್ದಾರೆ. ಆ ಮೂಲಕ ಗೋವಾ (Goa) ತಂಡಕ್ಕೆ ಹೋಗುವ ಬಗ್ಗೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಮುಂಬೈ ತಂಡಕ್ಕೆ ಜೈಸ್ವಾಲ್ ಕೀ ಬ್ಯಾಟ್ಸ್‌ಮನ್ ಆಗಿದ್ದಾರೆ. ಹಲವು ವರ್ಷಗಳಿಂದ ಅವರು ಈ ತಂಡದ ಪರ ಸಾಕಷ್ಟು ಸಾಧನೆ ಮಾಡಿದ್ದಾರೆ. ಸದ್ಯ ಅವರು ಭಾರತ ಟೆಸ್ಟ್ ತಂಡದ ಜೊತೆ ಇಂಗ್ಲೆಂಡ್ ಪ್ರವಾಸದಲ್ಲಿ ಇದ್ದಾರೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ ಅವರು ಶತಕ ಬಾರಿಸಿದ್ದರು. ಆದರೂ ಈ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿತ್ತು.
ಕಳೆದ ಏಪ್ರಿಲ್ ತಿಂಗಳಲ್ಲಿ ಅವರು ಬೇರೆ ರಾಜ್ಯದ ಪರ ಆಡಬೇಕೆಂಬ ಉದ್ದೇಶದಿಂದ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ಎನ್‌ಒಸಿ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಗೋವಾ ತಂಡಕ್ಕೆ ತೆರಳಿ ನಾಯಕ ನಾಗಬೇಕೆಂಬ ಉದ್ದೇಶವನ್ನು ಅವರು ಹೊಂದಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಎನ್ಒಸಿಗೆ ಸಲ್ಲಿಸಿದ್ದ ಅರ್ಜಿಯನ್ನು ವಿಥ್‌ಡ್ರಾ ಮಾಡಿಕೊಂಡಿದ್ದಾರೆ.
IND vs ENG: ಜಸ್‌ಪ್ರೀತ್ ಬುಮ್ರಾ ಇಲ್ಲ? ಎರಡನೇ ಟೆಸ್ಟ್‌ಗೆ ಇಬ್ಬರು ಸ್ಪಿನ್ನರ್‌ಗಳು!
"ಬೇರೆ ರಾಜ್ಯವನ್ನು ಪ್ರತಿನಿಧಿಸಲು ಯಶಸ್ವಿ ಜೈಸ್ವಾಲ್ ಅವರು ಈ ಹಿಂದೆ ವಿನಂತಿಸಿದ್ದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಹಿಂಪಡೆಯಲು ಅಪೆಕ್ಸ್ ಕೌನ್ಸಿಲ್ ಅನುಮೋದನೆ ನೀಡಿದೆ. ಅವರು ಮುಂಬೈಗೆ ಲಭ್ಯವಿರುತ್ತಾರೆ," ಎಂದು ಎಂಸಿಎ ತನ್ನ ಅಧೀಕೃತ ಹೇಳಿಕೆಯಲ್ಲಿ ತಿಳಿಸಿದೆ.
"ಯಶಸ್ವಿ ಜೈಸ್ವಾಲ್ ಯಾವಾಗಲೂ ಮುಂಬೈ ಕ್ರಿಕೆಟ್‌ನ ಹೆಮ್ಮೆಯ ಆಟಗಾರ. ಜೈಸ್ವಾಲ್ ಅವರ ಎನ್‌ಒಸಿ ಹಿಂಪಡೆಯುವಿಕೆ ಅರ್ಜಿಯನ್ನು ನಾವು ಸ್ವೀಕರಿಸಿದ್ದೇವೆ ಮತ್ತು ಮುಂಬರುವ ದೇಶಿ ಋತುವಿನಲ್ಲಿ ಅವರು ಮುಂಬೈ ಪರ ಲಭ್ಯವಿರುತ್ತಾರೆ," ಎಂದು ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್ ಹೇಳಿದರು.
IND vs ENG: ಜೋಫ್ರಾ ಆರ್ಚರ್ ಇಲ್ಲ, ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್‌ನ ಪ್ಲೇಯಿಂಗ್ XI ಪ್ರಕಟ!
ಮೇ ತಿಂಗಳಲ್ಲಿ ಎಂಸಿಎಗೆ ಬರೆದ ಪತ್ರದಲ್ಲಿ ಜೈಸ್ವಾಲ್, "ಗೋವಾಕ್ಕೆ ಸ್ಥಳಾಂತರವಾಗುವ ನನ್ನ ಕೌಂಟುಂಬಿಕ ಯೋಜನೆಗಳು ರದ್ದಾಗಿವೆ. ಹಾಗಾಗಿ ತಾವು ನನಗೆ ನೀಡಿರುವ ಎನ್‌ಒಸಿಯನ್ನು ರದ್ದುಗೊಳಿಸಬೇಕೆಂಬ ನನ್ನ ಮನವಿಯನ್ನು ತಾವುಗಳು ಸ್ವೀಕರಿಸಬೇಕೆಂದು ವಿನಂತಿಸುತ್ತೇನೆ," ಎಂದು ತಮ್ಮ ಪತ್ರದಲ್ಲಿ ಯಶಸ್ವಿ ಜೈಸ್ವಾಲ್ ಈ ರೀತಿ ತಿಳಿಸಿದ್ದಾರೆ.
ಈ ಸೀಸನ್‌ನಲ್ಲಿಯೂ ಮುಂಬೈ ತಂಡದ ಪರ ಆಡಲು ನನಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅವಕಾಶ ಮಾಡಿಕೊಡಬೇಕೆಂದು ನಾನು ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತೇನೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಥವಾ ಗೋವಾ ಕ್ರಿಕೆಟ್ ಅಸೋಸಿಯೇಷನ್‌ಗೆ ನಾನು ಎನ್‌ಒಸಿಯನ್ನು ನೀಡಿಲ್ಲ," ಎಂದು ಆರಂಭಿಕ ಬ್ಯಾಟ್ಸ್‌ಮನ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.