ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DPL 2025: ಡೆಲ್ಲಿ ಪ್ರೀಮಿಯರ್‌ ಲೀಗ್‌ ಹರಾಜಿನಲ್ಲಿ ರಿಷಭ್‌ ಪಂತ್‌ ಸೇರಿ 10 ಐಪಿಎಲ್‌ ಸ್ಟಾರ್‌ಗಳು!

ಜುಲೈ 6 ರಿಂದ ಜುಲೈ 7 ರವರೆಗೆ ನವದೆಹಲಿಯಲ್ಲಿ ನಡೆಯಲಿರುವ 2025ರ ಡೆಲ್ಲಿ ಪ್ರೀಮಿಯರ್‌ ಲೀಗ್‌ ಟೂರ್ನಿಯ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿನಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಅತ್ಯಂತ ದುಬಾರಿ ಆಟಗಾರ ರಿಷಭ್‌ ಪಂತ್‌ ಸೇರಿದಂತೆ ಒಟ್ಟು 10 ಮಂದಿ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

ಡಿಪಿಎಲ್‌ ಹರಾಜಿನಲ್ಲಿ ರಿಷಭ್‌ ಪಂತ್‌ ಸೇರಿ 10  ಐಪಿಎಲ್‌ ಸ್ಟಾರ್‌ಗಳು!

ರಿಷಭ್‌ ಪಂತ್‌-ದಿಗ್ವೇಶ್‌ ಸಿಂಗ್‌ ರಾಥಿ

Profile Ramesh Kote Jul 1, 2025 5:42 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL) ಟೂರ್ನಿಯ ಅತ್ಯಂತ ದುಬಾರಿ ಆಟಗಾರ ರಿಷಭ್‌ ಪಂತ್‌ (Rishabh Pant), ಸ್ಪಿನ್ನರ್‌ ದಿಗ್ವೇಶ್‌ ಸಿಂಗ್‌ ಸೇರಿದಂತೆ ಒಟ್ಟು 10 ಮಂದಿ ಐಪಿಎಲ್‌ ಆಟಗಾರರು 2025ರ ಡೆಲ್ಲಿ ಪ್ರೀಮಿಯರ್‌ ಲೀಗ್‌ (DPL 2025) ಟೂರ್ನಿಯ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಜುಲೈ 6 ಹಾಗೂ 7 ರಲ್ಲಿ ನಡೆಯಲಿರುವ ಹರಾಜಿನಲ್ಲಿ ರಿಷಭ್‌ ಪಂತ್‌ ಜೊತೆಗೆ ಪ್ರಿಯಾಂಶ್‌ ಆರ್ಯ ಹಾಗೂ ದಿಗ್ವೇಶ್‌ ಸಿಂಗ್‌ ರಾಥಿ ಸೇರಿದಂತೆ ಕೆಲ ಆಟಗಾರರು ಹರಾಜಿನಲ್ಲಿ ಗಮನ ಸೆಳೆಯಲಿದ್ದಾರೆ. ಪುರುಷರ ಹರಾಜು ಪ್ರಕ್ರಿಯೆ ನಡೆದ ಬಳಿಕ ಮಹಿಳೆಯರ ಹರಾಜು ಪ್ರಕ್ರಿಯೆ ಜುಲೈ 7 ರಂದು ನಡೆಯಲಿದೆ.

ಡೆಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್‌ ಅಸೋಸಿಯೇಷನ್‌ (ಡಿಡಿಸಿಎ) ಜುಲೈ ಒಂದರಂದು, ಡೆಲ್ಲಿ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಎರಡು ನೂತನ ತಂಡಗಳನ್ನು ಹೆಸರಿಸಿದೆ. ಈ ಹಿನ್ನೆಲೆಯಲ್ಲಿ ಎರಡನೇ ಸೀಸನ್‌ ಟೂರ್ನಿಯು ಇನ್ನಷ್ಟು ಆಸಕ್ತಿಯಿಂದ ಕೂಡಿರುತ್ತದೆ. ಉದ್ಘಾಟನಾ ಆವೃತ್ತಿಯ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಇದೀಗ ಇದರ ಸಂಖ್ಯೆಯನ್ನು ಎಂಟಕ್ಕೆ ಏರಿಸಲಾಗಿದೆ. ಸವಿತಾ ಪೇಂಟ್ಸ್ ಪ್ರೈವೇಟ್ ಲಿಮಿಟೆಡ್ ನೇತೃತ್ವದ ಒಕ್ಕೂಟವು ಔಟರ್ ಡೆಲ್ಲಿ ಫ್ರಾಂಚೈಸಿಯನ್ನು 10.6 ಕೋಟಿ ರೂ.ಗೆ ಪಡೆದುಕೊಂಡಿತು. ಭೀಮಾ ಟೋಲಿಂಗ್ ಮತ್ತು ಟ್ರಾಫಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಕ್ರೇಯಾನ್ ಅಡ್ವರ್ಟೈಸಿಂಗ್ ಲಿಮಿಟೆಡ್‌ನ ಒಕ್ಕೂಟವು ನವದೆಹಲಿ ಫ್ರಾಂಚೈಸಿಯನ್ನು 9.2 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿತು.

IND vs ENG: ಜಸ್‌ಪ್ರೀತ್‌ ಬುಮ್ರಾ ಸ್ಥಾನದಲ್ಲಿ ಆಕಾಶ್‌ ದೀಪ್‌ಗೆ ಸ್ಥಾನ ನೀಡಿ ಎಂದ ಇರ್ಫಾನ್‌ ಪಠಾಣ್‌!

2025ರ ಆವೃತ್ತಿಯ ಟೂರ್ನಿಗಾಗಿ ಎರಡು ಹೊಸ ತಂಡಗಳು, ಆರು ಫ್ರಾಂಚೈಸಿಗಳಾದ ಸೆಂಟ್ರಲ್ ಡೆಲ್ಲಿ ಕಿಂಗ್ಸ್, ಈಸ್ಟ್ ಡೆಲ್ಲಿ ರೈಡರ್ಸ್, ನಾರ್ಥ್‌ ಡೆಲ್ಲಿ ಸ್ಟ್ರೈಕರ್ಸ್, ಪುರಾನಿ ಡಿಲ್ಲಿ 6, ಸೌಥ್‌ ಡೆಲ್ಲಿ ಸೂಪರ್‌ಸ್ಟಾರ್ಸ್‌ ಮತ್ತು ವೆಸ್ಟ್ ಡೆಲ್ಲಿ ಲಯನ್ಸ್ ಜೊತೆಗೆ ಸೇರಲಿವೆ. ರಿಷಭ್‌ ಪಂತ್‌ ಜೊತೆಗೆ ದಿಗ್ವೇಶ್‌ ಸಿಂಗ್‌ ರಾಥಿ, ಪ್ರಿಯಾಂಶ್‌ ಆರ್ಯ, ಇಶಾಂತ್‌ ಶರ್ಮಾ, ಆಯುಷ್‌ ಬದೋನಿ, ಹರ್ಷಿತ್‌ ರಾಣಾ, ಹಿಮಾತ್‌ ಸಿಂಗ್‌, ಸುಯಶ್‌ ಶರ್ಮಾ, ಮಯಾಂಕ್‌ ಯಾದವ್‌ ಹಾಗೂ ಅನುಜ್‌ ರಾವತ್‌ ಅವರು ಜುಲೈ 6ರಂದು ನಡೆಯುವ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.

ಡಿಡಿಸಿಎ ಅಧ್ಯಕ್ಷ ರೋಹನ್‌ ಜೆಟ್ಲಿ ಮಾತನಾಡಿ, "ಡೆಲ್ಲಿ ಪ್ರೀಮಿಯರ್‌ ಲೀಗ್‌ ಟೂರ್ನಿಗಿಂತ ದೊಡ್ಡದು-ಇದು ರಾಜಧಾನಿಯ ಆಳವಾಗಿ ಬೇರೂರಿರುವ ಕ್ರಿಕೆಟ್ ಸಂಸ್ಕೃತಿಯ ಆಚರಣೆಯಾಗಿದೆ. ಸೀಸನ್‌ ಒಂದರಲ್ಲಿ ನಾವು ಹಲವು ಪ್ರತಿಭೆಗಳನ್ನು ನೋಡಿದ್ದೆವು. ಇದರ ವಿಸ್ತರಣೆಯೊಂದಿಗೆ ಇನ್ನೂ ಹೆಚ್ಚಿನ ಆಟಗಾರರಿಗೆ ಅವಕಾಶ ನೀಡಲಿದ್ದೇವೆ. ಪ್ರಿಯಾಂಶ್‌ ಆರ್ಯ, ದಿಗ್ವೇಶ್‌ ಸಿಂಗ್‌ ರಾಥಿ ಸೇರಿದಂತೆ ಹಲವು ಡಿಪಿಎಲ್‌ ಆಟಗಾರರು 2025ರ ಐಪಿಎಲ್‌ ಟೂರ್ನಿಯಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಭವಿಷ್ಯದ ತಾರೆಗಳಿಗೆ ನಿಜವಾದ ಸಂತಾನೋತ್ಪತ್ತಿಯ ನೆಲವಾಗಿ ಲೀಗ್‌ನ ಮೌಲ್ಯವನ್ನು ಸಾಬೀತುಪಡಿಸುವುದು ಇದಾಗಿದೆ," ಎಂದು ಅವರು ಹೇಳಿದ್ದಾರೆ.

IND vs ENG: ಜಸ್‌ಪ್ರೀತ್‌ ಬುಮ್ರಾ ಇಲ್ಲ? ಎರಡನೇ ಟೆಸ್ಟ್‌ಗೆ ಇಬ್ಬರು ಸ್ಪಿನ್ನರ್‌ಗಳು!

"ಜುಲೈನಲ್ಲಿ ನಡೆಯುವ ಹರಾಜಿನ ಈ ಋತುವಿನ ಕಾರ್ಯ ಪ್ರಕ್ರಿಯೆ ಆರಂಭವಾಗಲಿದೆ. ಫ್ರಾಂಚೈಸಿಗಳು, ಆಟಗಾರರು ಮತ್ತು ಅಭಿಮಾನಿಗಳ ಅನುಭವ ಸುಗಮ ಮತ್ತು ಪರಿಣಾಮಕಾರಿಯಾಗುವಂತೆ ನೋಡಿಕೊಳ್ಳಲು ನಾವು ಕೆಲಸ ಮಾಡುತ್ತಿದ್ದೇವೆ. ಎರಡನೇ ಆವೃತ್ತಿಯ ಲೀಗ್ ಪ್ರಯಾಣದಲ್ಲಿ ಒಂದು ಹೆಗ್ಗುರುತಾಗಿ ಮಾಡಲು ನಾವು ಬದ್ಧರಾಗಿದ್ದೇವೆ," ಎಂದು ಅವರು ತಿಳಿಸಿದ್ದಾರೆ.

ನವದೆಹಲಿಯ ಅರುಣ್‌ ಜೆಟ್ಲಿ ಕ್ರೀಡಾಂಗಣವು ಟೂರ್ನಿಗೆ ಮತ್ತೊಮ್ಮೆ ಆತಿಥ್ಯವನ್ನು ವಹಿಸಲಿದೆ. ಹರಾಜು ಪ್ರಕ್ರಿಯೆ ಮುಗಿದ ಬಳಿಕ ತಂಡಗಳ ಆಟಗಾರರು, ಟೂರ್ನಿಯ ದಿನಾಂಕ ಸೇರಿದಂತೆ ಪ್ರಮುಖ ಮಾಹಿತಿಯನ್ನು ಪ್ರಕಟಿಸಲಾಗುತ್ತದೆ.