ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs BAN: ಟೀಮ್‌ ಇಂಡಿಯಾದ ಬಾಂಗ್ಲಾ ಪ್ರವಾಸ ಡೌಟ್!

ಇತ್ತೀಚೆಗೆ ಭಾರತ ಮತ್ತು ಪಾಕ್‌ ಯದ್ಧದ ಸಂದರ್ಭದಲ್ಲಿ,ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಿದರೆ, ಚೀನಾದಿಂದ ಸಹಾಯವನ್ನು ಪಡೆದು ನಾವು ಭಾರತದ ಈಶಾನ್ಯದ 7 ರಾಜ್ಯಗಳನ್ನು ವಶಪಡಿಸಿಕೊಳ್ಳಲಿದ್ದೇವೆ ಎಂದು ಬಾಂಗ್ಲಾದ ಮಧ್ಯಂತರ ಸರ್ಕಾರಕ್ಕೆ ಆಪ್ತನಾಗಿರುವ ನಿವೃತ್ತ ಸೇನಾಧಿಕಾರಿ ಫೇಸ್​ಬುಕ್​ನಲ್ಲಿ ಪೋಸ್ಟ್‌ ಹಾಕಿದ್ದ. ಇದರಿಂದ ಬಾಂಗ್ಲಾ ವಿರುದ್ಧದ ಭಾರತೀಯರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.

ಟೀಮ್‌ ಇಂಡಿಯಾದ ಬಾಂಗ್ಲಾ ಪ್ರವಾಸ ಡೌಟ್!

Profile Abhilash BC Jul 1, 2025 4:57 PM

ಢಾಕಾ: ಆಗಸ್ಟ್​ನಲ್ಲಿ ನಿಗದಿಯಾಗಿರುವ ತಲಾ 3 ಏಕದಿನ, ಟಿ20 ಪಂದ್ಯಗಳ ಬಾಂಗ್ಲಾದೇಶ(IND Vs BAN) ವಿರುದ್ಧದ ವೈಟ್-ಬಾಲ್ ಸರಣಿಯ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕೇಂದ್ರ ಸರ್ಕಾರದ ಅನುಮತಿಗೆ ಕಾಯುತ್ತಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅಮೀನುಲ್ ಇಸ್ಲಾಂ(Aminul Islam) ಹೇಳಿದ್ದಾರೆ. ಹೀಗಾಗಿ ಬಾಂಗ್ಲಾ ಪ್ರವಾಸಕ್ಕೆ ಭಾರತ ತಂಡವನ್ನು ಬಿಸಿಸಿಐ ಕಳುಹಿಸುವುದು ಅನುಮಾನವೆನಿಸಿದೆ.

ಹಿಂದುಗಳ ಮೇಲಿನ ದೌರ್ಜನ್ಯದಿಂದ ಭಾರತದ ಜತೆ ಸಂಬಂಧ ಕೆಡಿಸಿಕೊಂಡಿರುವ ಕಾರಣ ಬಾಂಗ್ಲಾ ಜತೆ ಕ್ರಿಕೆಟ್​ ಆಡಬೇಕಾದರೆ ಕೇಂದ್ರ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವೆನಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಿಸಿಸಿಐಗೆ ಕೇಂದ್ರ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇಲ್ಲವೆನಿಸಿದೆ.

ಸರಣಿ ಆಯೋಜನೆ ಬಗ್ಗೆ ಮಾತನಾಡಿರುವ ಅಮೀನುಲ್ ಇಸ್ಲಾಂ, "ಆಗಸ್ಟ್‌ನಲ್ಲಿ ಭಾರತ ವಿರುದ್ಧ ಸರಣಿ ಆಯೋಜಿಸಲು ಸಾಧ್ಯವಾಗದಿದ್ದರೂ, ಮುಂಬರುವ ದಿನಗಳಲ್ಲಿ ಭಾರತ ಜತೆ ಕ್ರಿಕೆಟ್ ಸರಣಿ ಆಯೋಜಿಸುವ ಭರವಸೆ ಇದೆ" ಎಂದು ಹೇಳಿದ್ದಾರೆ. ಅವರ ಈ ಮಾತುಗಳನ್ನು ಕೇಳುವಾಗ ಹಾಲಿ ಸನ್ನಿವೇಳದಲ್ಲಿ ಭಾರತ- ಬಾಂಗ್ಲಾ ಪ್ರವಾಸ ರದ್ದುಗೊಳಿಸುವ ಸಾಧ್ಯತೆ ಹೆಚ್ಚಿದೆ.

"ನಾವು ಬಿಸಿಸಿಐ ಜತೆ ಸಕಾರಾತ್ಮಕ ಚರ್ಚೆಗಳನ್ನು ನಡೆಸುತ್ತಿದ್ದೇವೆ. ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ (ಭಾರತವನ್ನು ಆತಿಥ್ಯ ವಹಿಸುವುದು) ನಾವು ಸರಣಿಯನ್ನು ಹೇಗೆ ಮಾಡಬಹುದು ಎಂಬುದರ ಕುರಿತು ಚರ್ಚೆ ನಡೆಸುತ್ತಿದ್ದೇವೆ ಮತ್ತು ಈಗ ಅದನ್ನು ಆಯೋಜಿಸಲು ಸಾಧ್ಯವಾಗದಿದ್ದರೆ ನಾವು ಅದನ್ನು ಮತ್ತೊಂದು ಸಂಭವನೀಯ ಸಮಯದಲ್ಲಿ ಮಾಡುತ್ತೇವೆ. ಬಿಸಿಸಿಐ ಸದ್ಯ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ IND vs ENG 2nd Test: ಭಾರತ-ಇಂಗ್ಲೆಂಡ್‌ ದ್ವಿತೀಯ ಟೆಸ್ಟ್‌ಗೆ ಮಳೆ ಭೀತಿ; ಪಿಚ್‌ ರಿಪೋರ್ಟ್‌ ಹೇಗಿದೆ?

ಇತ್ತೀಚೆಗೆ ಭಾರತ ಮತ್ತು ಪಾಕ್‌ ಯದ್ಧದ ಸಂದರ್ಭದಲ್ಲಿ,ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಿದರೆ, ಚೀನಾದಿಂದ ಸಹಾಯವನ್ನು ಪಡೆದು ನಾವು ಭಾರತದ ಈಶಾನ್ಯದ 7 ರಾಜ್ಯಗಳನ್ನು ವಶಪಡಿಸಿಕೊಳ್ಳಲಿದ್ದೇವೆ ಎಂದು ಬಾಂಗ್ಲಾದ ಮಧ್ಯಂತರ ಸರ್ಕಾರಕ್ಕೆ ಆಪ್ತನಾಗಿರುವ ನಿವೃತ್ತ ಸೇನಾಧಿಕಾರಿ ಫೇಸ್​ಬುಕ್​ನಲ್ಲಿ ಪೋಸ್ಟ್‌ ಹಾಕಿದ್ದ. ಇದರಿಂದ ಬಾಂಗ್ಲಾ ವಿರುದ್ಧದ ಭಾರತೀಯರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.