ಯಮಹಾ ರೇ ಝಡ್ಆರ್ RayZR 125 Fi Hybrid ಬೆಲೆಯ ಮೇಲೆ 10,000 ರೂಗಳ ಆಫರ್
RayZR 125 Fi Hybrid ವಿನ್ಯಾಸ, ಕಾರ್ಯಕ್ಷಮತೆ ಮತ್ತು ಪ್ರಾಯೋಗಿಕತೆ ಎರಡನ್ನೂ ಬಯಸುವ ಇಂದಿನ ನಗರ ಸವಾರರ ಅಗತ್ಯಗಳಿಗೆ ಸೂಕ್ತವಾಗಿದೆ. ಹೈಬ್ರಿಡ್ ಪವರ್ ಅಸಿಸ್ಟ್ ಇರುವ ಇದರ 125cc Fi ಬ್ಲೂ ಕೋರ್ ಎಂಜಿನ್, ಹೆಚ್ಚಿನ ವೇಗವರ್ಧನೆ ಮತ್ತು ಇಂಧನ ದಕ್ಷತೆಯನ್ನು ನೀಡುವುದರಿಂದ ನಗರ ಪ್ರಯಾಣಕ್ಕೆ ಸೂಕ್ತವಾಗಿದೆ. ಸುಗಮ, ಸದ್ದಿಲ್ಲದ ಆರಂಭಕ್ಕಾಗಿ ಸ್ಮಾರ್ಟ್ ಮೋಟಾರ್ ಜನರೇಟರ್ (SMG) ಇದ್ದು ನಿತ್ಯ ಓಡಾಡಲು ಹೆಚ್ಚು ಅನುಕೂಲಕರವಾಗಿದೆ. E20 ಇಂಧನಕ್ಕೆ ಹೊಂದಿಕೊಳ್ಳುವ ಇದು ಭವಿಷ್ಯಕ್ಕೆ ಸಿದ್ಧವಾಗಿದೆ


ಬೆಂಗಳೂರು, ಜುಲೈ 01, 2025: ಯಮಹಾ ಮೋಟಾರ್ ಕಂಪನಿ, ಲಿಮಿಟೆಡ್(ವೈಎಂಸಿ) ತನ್ನ 70 ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ – ಪ್ರಪಂಚದಾದ್ಯಂತ ಗ್ರಾಹಕರಿಗೆ ನಾವೀನ್ಯತೆ, ಉತ್ತಮ ಕಾರ್ಯಕ್ಷಮತೆ ಮತ್ತು ರೈಡಿಂಗ್ ಅನುಭವವನ್ನು ನೀಡುತ್ತ ಬಂದಿರುವ ಯಮಹಾ ಸಂಸ್ಥೆ ಗೆ ಇದೊಂದು ಮಹತ್ವದ ಮೈಲುಗಲ್ಲು. 1955ರಿಂದಲೂ ಯಮಹಾ ಕಠಿಣ ಸವಾಲುಗಳನ್ನು ದಿಟ್ಟ ವಾಗಿ ಎದುರಿಸುತ್ತ, ಲಕ್ಷಾಂತರ ಜನರಿಗೆ ಎಂಜಿನಿಯರಿಂಗ್ ಶ್ರೇಷ್ಠತೆ, ಮತ್ತು ಅತ್ಯುತ್ತಮ ರೈಡಿಂಗ್ ಅನುಭವವನ್ನು ನೀಡುತ್ತ ಬಂದಿದೆ.
ಈ ವಿಶೇಷ ಸಂದರ್ಭದ ನೆನಪಿಗಾಗಿ ಇಂಡಿಯಾ ಯಮಹಾ ಮೋಟಾರ್ ತನ್ನ ಜನಪ್ರಿಯ RayZR 125 Fi Hybrid ಮತ್ತು RayZR 125 Fi Hybrid ಸ್ಟ್ರೀಟ್ ರ್ಯಾಲಿ ಗಳಿಗೆ ₹7,000 (ಎಕ್ಸ್-ಶೋರೂಂ ಬೆಲೆಯ ಮೇಲೆ) ಬೆಲೆಯ ಬೆನಿಫಿಟ್ ನೀಡುತ್ತಿದೆ. ಈ ಸೀಮಿತ ಸಮಯದ, ಸಂಭ್ರಮಾಚರಣೆಯ ಕೊಡುಗೆ, ದಶಕಗಳಿಂದಲೂ ಗ್ರಾಹಕರು ನಿರಂತರವಾಗಿ ಇಟ್ಟಿರುವ ನಂಬಿಕೆ ಮತ್ತು ಬೆಂಬಲಕ್ಕೆ ಅವರಿಗೆ ಧನ್ಯವಾದಗಳನ್ನು ಹೇಳುವುದಕ್ಕಾಗಿ. ಈ ಪ್ರಯೋಜನದೊಂದಿಗೆ, ಗ್ರಾಹಕರಿಗೆ ಈಗ ಅಂತಿಮ ಆನ್-ರೋಡ್ ಬೆಲೆಯಲ್ಲಿ ₹10,000 ವರೆಗೆ ಉಳಿಯುತ್ತದೆ. ಈ ಕೊಡುಗೆಯಲ್ಲಿ ಯಮಹಾದ ಉದ್ಯಮದಲ್ಲೆ ಮೊದಲೆನ್ನಬಹುದಾದ 10-ವರ್ಷಗಳ 'ಟೋಟಲ್ ವಾರಂಟಿ' ಸಹ ಸೇರಿದೆ. ಈಗ RayZR 125 ಸಿಸಿ ವಿಭಾಗದಲ್ಲಿ ಇನ್ನಷ್ಟು ಜನಪ್ರಿಯವಾಗಲಿದೆ.
ಇದನ್ನೂ ಓದಿ: Yamaha: ಬೆಂಗಳೂರು ಕಾಮಿಕ್ ಕಾನ್ 2025ರಲ್ಲಿ ಅತ್ಯಪೂರ್ವ ಅನುಭವ ಒದಗಿಸಿದ ಯಮಹಾ
ಈ 10-ವರ್ಷಗಳ 'ಟೋಟಲ್ ವಾರಂಟಿ' 2-ವರ್ಷಗಳ ಪ್ರಮಾಣಿತ ಖಾತರಿ ಮತ್ತು 8-ವರ್ಷಗಳ ವಿಸ್ತೃತ ಖಾತರಿಯನ್ನು ಒಳಗೊಂಡಿರುತ್ತದೆ. ಈ ವಾರಂಟಿ 1,00,000 ಕಿ.ಮೀ ವರೆಗೆ ಇಂಧನ ಇಂಜೆಕ್ಷನ್ ((Fi) ವ್ಯವಸ್ಥೆಯನ್ನು ಒಳಗೊಂಡಂತೆ ನಿರ್ಣಾಯಕ ಎಂಜಿನ್ ಮತ್ತು ವಿದ್ಯುತ್ ಘಟಕಗಳಿಗೂ ಅನ್ವಯವಾಗುತ್ತದೆ. ಜೊತೆಗೆ, ಈ ವಾರಂಟಿಯನ್ನು ಮುಂದಿನ ಮಾಲೀಕರಿಗೆ ಸಂಪೂರ್ಣವಾಗಿ ವರ್ಗಾಯಿಸಬಹುದಾಗಿದೆ. ಇದು, ಯಮಹಾ ಗೆ ತನ್ನ ಉತ್ಪನ್ನದ ಬಾಳಿಕೆಯ ಬಗ್ಗೆ ಇರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಮತ್ತು ದೀರ್ಘಕಾಲೀನ ಮಾಲೀಕತ್ವದ ಮೌಲ್ಯವನ್ನು ಹೆಚ್ಚಿಸುತ್ತದೆ.
RayZR 125 Fi Hybrid ವಿನ್ಯಾಸ, ಕಾರ್ಯಕ್ಷಮತೆ ಮತ್ತು ಪ್ರಾಯೋಗಿಕತೆ ಎರಡನ್ನೂ ಬಯಸುವ ಇಂದಿನ ನಗರ ಸವಾರರ ಅಗತ್ಯಗಳಿಗೆ ಸೂಕ್ತವಾಗಿದೆ. ಹೈಬ್ರಿಡ್ ಪವರ್ ಅಸಿಸ್ಟ್ ಇರುವ ಇದರ 125cc Fi ಬ್ಲೂ ಕೋರ್ ಎಂಜಿನ್, ಹೆಚ್ಚಿನ ವೇಗವರ್ಧನೆ ಮತ್ತು ಇಂಧನ ದಕ್ಷತೆಯನ್ನು ನೀಡುವುದರಿಂದ ನಗರ ಪ್ರಯಾಣಕ್ಕೆ ಸೂಕ್ತವಾಗಿದೆ. ಸುಗಮ, ಸದ್ದಿಲ್ಲದ ಆರಂಭಕ್ಕಾಗಿ ಸ್ಮಾರ್ಟ್ ಮೋಟಾರ್ ಜನರೇಟರ್ (SMG) ಇದ್ದು ನಿತ್ಯ ಓಡಾಡಲು ಹೆಚ್ಚು ಅನುಕೂಲಕರವಾಗಿದೆ. E20 ಇಂಧನಕ್ಕೆ ಹೊಂದಿಕೊಳ್ಳುವ ಇದು ಭವಿಷ್ಯಕ್ಕೆ ಸಿದ್ಧವಾಗಿದೆ ಮತ್ತು 21-ಲೀಟರ್ ಅಂಡರ್-ಸೀಟ್ ಸ್ಟೋರೇಜ್ ಇರುವುದರಿಂದ ದೈನಂದಿನ ಬಳಕೆಗೆ ಅತ್ಯುತ್ತಮವಾಗಿದೆ. ಉತ್ತಮ ಸವಾರಿ ಸೌಕರ್ಯಕ್ಕಾಗಿ ಮುಂಭಾಗದ ಟೆಲಿಸ್ಕೋಪಿಕ್ ಸಸ್ಪೆನ್ಷನ್, ಹೆಚ್ಚುವರಿ ಸುರಕ್ಷತೆಗಾಗಿ ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸ್ವಿಚ್, ಟ್ರಾಫಿಕ್ನಲ್ಲಿ ಸುಧಾರಿತ ಮೈಲೇಜ್ಗಾಗಿ ಸ್ವಯಂಚಾಲಿತ ಸ್ಟಾಪ್-ಅಂಡ್-ಸ್ಟಾರ್ಟ್ ಸಿಸ್ಟಮ್ ಮತ್ತು ಪ್ರಯಾಣದಲ್ಲಿರುವಾಗ ಮಾಹಿತಿ ಮತ್ತು ಸಂಪರ್ಕಕ್ಕಾಗಿ ವೈ-ಕನೆಕ್ಟ್ ಬ್ಲೂಟೂತ್ ಸಂಪರ್ಕ ಸಹಿತವಾಗಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್... ಇತ್ಯಾದಿ ವೈಶಿಷ್ಟ್ಯಗಳಿವೆ.
ಅತ್ಯಾಕರ್ಷಕ ಉತ್ಪನ್ನಗಳು ಮತ್ತು ಗ್ರಾಹಕ-ಕೇಂದ್ರಿತ ಉಪಕ್ರಮಗಳ ಮೂಲಕ ಸವಾರರಿಗೆ ಅತ್ಯುತ್ತಮ ಮೌಲ್ಯವನ್ನು ಸೃಷ್ಟಿಸುವತ್ತ ಯಮಹಾ ಗಮನಹರಿಸಿದೆ. 1955 ರಲ್ಲಿ ಯಾವ ಮನೋಭಾವದೊಂಡಿಗೆ ಸ್ಥಾಪನೆಗೊಂಡಿತೋ ಇಂದಿಗೂ ಅದೇ ಮನೋಭಾವದೊಂದಿಗೆ ಯಮಹಾ ಕೆಲಸಮಾಡುತ್ತಿದೆ; ತನ್ನ ಗ್ರಾಹಕರ ನಂಬಿಕೆ ಮತ್ತು 70 ವರ್ಷಗಳ ಸುಪ್ರಸಿದ್ಧ ಪರಂಪರೆಯನ್ನು ಉಳಿಸಿಕೊಳ್ಳುತ್ತಲೇ ಹೊಸ ಸವಾಲುಗಳನ್ನು ಎದುರಿಸುತ್ತ ಮುಂದೊಡುತ್ತಿದೆ.