ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಮೆಜಾನ್ ನಿಂದ ಭಾರತದಲ್ಲಿ ತನ್ನ ಫುಲ್ ಫಿಲ್ಮೆಂಟ್ ಸೆಂಟರ್ ಗಳಿಗೆ ಸಾರ್ವಜನಿಕ ಪ್ರವಾಸಕ್ಕೆ ಅವಕಾಶ

ತನ್ನ ಬಾಗಿಲುಗಳನ್ನು ತೆರೆಯುವ ಮೂಲಕ ಅಮೆಜಾನ್ ಸಂದರ್ಶಕರನ್ನು ಅವರ ಖರೀದಿಯ ಅನುಭವಕ್ಕೆ ಶಕ್ತಿ ತುಂಬುವ ಪ್ರಕ್ರಿಯೆಗಳು ಮತ್ತು ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳುವ ಅವಕಾಶ ನೀಡುತ್ತದೆ, ಅಲ್ಲದೆ ಲಾಜಿಸ್ಟಿಕ್ಸ್ ಕುರಿತಂತೆ ಆಸಕ್ತರಿಗೆ ಮೌಲ್ಯಯುತ ಮಾಹಿತಿ, ಉದ್ಯೋಗಾವಕಾಶಗಳು ಅಥವಾ ಮಾಹಿತಿಪೂರ್ಣ ದಿನ ಕಳೆಯಲು ಅವಕಾಶ ನೀಡುತ್ತದೆ

ಫುಲ್ ಫಿಲ್ಮೆಂಟ್ ಸೆಂಟರ್ ಗಳಿಗೆ ಸಾರ್ವಜನಿಕ ಪ್ರವಾಸಕ್ಕೆ ಅವಕಾಶ

Profile Ashok Nayak Jul 1, 2025 2:48 PM

ಅಮೆಜಾನ್ ಇಂದು ತನ್ನ ಸಾರ್ವಜನಿಕ ಟೂರ್ ಕಾರ್ಯಕ್ರಮ ಅಮೆಜಾನ್ ಟೂರ್ಸ್ ಅನ್ನು ಭಾರತಕ್ಕೆ ವಿಸ್ತರಿಸಿದೆ. ಈ ಉಪಕ್ರಮವು ಆಸಕ್ತ ಸಂದರ್ಶಕರಿಗೆ ಅಮೆಜಾನ್ ನ ಅತ್ಯಾಧುನಿಕ ಫುಲ್ ಫಿಲ್ ಮೆಂಟ್ ಸೆಂಟರ್ ಗಳ ಒಳಗಡೆ ಭೇಟಿ ನೀಡಲು ಆಹ್ವಾನಿಸುತ್ತಿದ್ದು ಇದು ಗ್ರಾಹಕರ ಪೂರೈಕೆಗಳಿಗೆ ಶಕ್ತಿ ತುಂಬಲು ಬಳಸುವ ಅತ್ಯಾಧುನಿಕ ತಂತ್ರಜ್ಞಾನದ ಪರಿಚಯ ಮಾಡಿಕೊಳ್ಳುವ ಮತ್ತು ಅಲ್ಲಿ ಕಾರ್ಯ ನಿರ್ವಹಿಸುವ ಜನರನ್ನು ಭೇಟಿ ಮಾಡುವ ಅವಕಾಶ ಕಲ್ಪಿಸುತ್ತದೆ. ಈ ಪ್ರಕಟಣೆಯನ್ನು ಟೋಕಿಯೋದಲ್ಲಿ ನಡೆದ ಡೆಲಿವರಿಂಗ್ ದಿ ಫ್ಯೂಚರ್ ಕಾರ್ಯಕ್ರಮದಲ್ಲಿ ನೀಡಲಾಗಿದ್ದು ಅದು ಗ್ರಾಹಕರು, ಮಾರಾಟಗಾರರು, ಉದ್ಯೋಗಿಗಳು, ಅಸೋಸಿಯೇಟ್ ಗಳು ಮತ್ತು ಸಮುದಾಯಗಳಿಗೆ ಅಮೆಜಾನ್ ನ ಆವಿಷ್ಕಾರಗಳನ್ನು ಪ್ರದರ್ಶಿಸುತ್ತದೆ.

2025ರ 4ನೇ ತ್ರೈಮಾಸಿಕದಿಂದ ಪ್ರಾರಂಭಿಸಿ ಅಮೆಜಾನ್ ತನ್ನ ದೆಹಲಿ ಎನ್.ಸಿ.ಆರ್ ಮತ್ತು ಬೆಂಗಳೂರು ನಗರಗಳ ಫುಲ್ ಫಿಲ್ ಮೆಂಟ್ ಸೆಂಟರ್ ಗಳಿಗೆ ಉಚಿತ ವೈಯಕ್ತಿಕ ಪ್ರವಾಸಗಳನ್ನು ಒದಗಿಸಲಿದೆ. ಈ 45ರಿಂದ 60 ನಿಮಿಷದ ಗೈಡೆಡ್ ಟೂರ್ ಗಳಲ್ಲಿ ಸಂದರ್ಶಕರು ಲಕ್ಷಾಂತರ ಉತ್ಪನ್ನಗಳನ್ನು ಸಂಗ್ರಹಿಸಿದ ಮತ್ತು ಗ್ರಾಹಕರ ಆರ್ಡರ್ ಗಳನ್ನು ಸಂಸ್ಕರಿಸಿ ಪ್ರತಿನಿತ್ಯ ಗ್ರಾಹಕರ ಮನೆಬಾಗಿಲಿಗೆ ಕಳುಹಿಸುವ ಮುನ್ನ ಪ್ಯಾಕೇಜ್ ಹೇಗೆ ಪ್ರಯಾಣಿಸುತ್ತದೆ ಎನ್ನುವುದನ್ನು ಕಾಣಬಹುದು.

ಇದನ್ನೂ ಓದಿ: Amazon: ಅಮೆಜಾನ್‌ ಗ್ರಾಹಕರಿಗೆ ಬಿಗ್‌ ಶಾಕ್‌; 5 ರೂ. ಪ್ಲಾಟ್ ಫಾರ್ಮ್ ಶುಲ್ಕ ವಿಧಿಸಿದ ಕಂಪನಿ

“ನಾವು ಭಾರತದ ಅತ್ಯಂತ ವೇಗದ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಕಾರ್ಯಾಚರಣೆಗಳ ಜಾಲವನ್ನು ನಿರ್ಮಿಸಿದ್ದೇವೆ ಮತ್ತು ಈಗ ನಾವು ಜನರಿಗೆ ಅದರ ನೇರ ಪರಿಚಯ ಮಾಡಿಕೊಳ್ಳುವ ಅವಕಾಶ ನೀಡಲು ಉತ್ಸುಕರಾಗಿದ್ದೇವೆ” ಎಂದು ಇಂಡಿಯಾ ಮತ್ತು ಆಸ್ಟ್ರೇಲಿಯಾ ವಿಪಿ ಆಪರೇಷನ್ಸ್ ವಿಪಿ ಅಭಿನವ್ ಸಿಂಗ್ ಹೇಳಿದರು. “ಈ ಟೂರ್ ಗಳು ಸಂದರ್ಶಕರಿಗೆ ಹಿನ್ನೆಲೆಯ ತಂತ್ರಜ್ಞಾನ ಮತ್ತು ಪ್ರತಿನಿತ್ಯ ನಮ್ಮ ಗ್ರಾಹಕರಿಗೆ ಪೂರೈಸಲು ಜನರು ಒಟ್ಟಿಗೆ ಕೆಲಸ ಮಾಡುವುದನ್ನು ತೋರಿಸುತ್ತವೆ” ಎಂದರು.

ದೆಹಲಿ ಎನ್.ಸಿ.ಆರ್.ನಲ್ಲಿ ಅಮೆಜಾನ್ ಎಫ್.ಸಿ. ಉತ್ತರ ಭಾರತದಲ್ಲಿ ಅತ್ಯಂತ ದೊಡ್ಡ ಫುಲ್ ಫಿಲ್ ಮೆಂಟ್ ಸೆಂಟರ್ ಆಗಿದ್ದು 450 ಚದರ ಅಡಿ ಇದ್ದು ಎಂಟು ಫುಟ್ ಬಾಲ್ ಕ್ರೀಡಾಂಗಣಗಳಷ್ಟು ದೊಡ್ಡದಾಗಿದೆ. ಈ ಬೆಂಗಳೂರು ಸೌಲಭ್ಯವು ಅಮೆಜಾನ್ ನ ದೇಶದ ಅತ್ಯಂತ ದೊಡ್ಡ ಫುಲ್ ಫಿಲ್ ಮೆಂಟ್ ಸೆಂಟರ್ ಆಗಿದ್ದು 2 ಮಿಲಿಯನ್ ಕ್ಯೂಬಿಕ್ ಅಡಿಯಷ್ಟು ದಾಸ್ತಾನು ಸ್ಥಳ ಹೊಂದಿದ್ದು ಅದು ಸುಮಾರು 800 ಒಲಂಪಿಕ್ ಗಾತ್ರದ ಈಜುಕೊಳಗಳಷ್ಟು ಸಾಮರ್ಥ್ಯಕ್ಕೆ ಸಮಾನವಾಗಿದೆ.

“ನಾವು ವಿಶ್ವದ ಹಲವು ಭಾಗಗಳಿಂದ ಸಂದರ್ಶಕರನ್ನು ಆಹ್ವಾನಿಸಿದ ನಂತರ ಅಮೆಜಾನ್ ಟೂರ್ಸ್ ಪ್ರೋಗ್ರಾಮ್ ಅನ್ನು ಭಾರತಕ್ಕೆ ತರಲು ಬಹಳ ಸಂತೋಷ ಹೊಂದಿದ್ದೇವೆ ಎಂದು ಅಮೆಜಾನ್ ನಲ್ಲಿ ಸಾರ್ವಜನಿಕ ಪ್ರವಾಸಗಳ ಕಾರ್ಯಕ್ರಮದ ನೇತೃತ್ವ ವಹಿಸಿರುವ ನಿಕ್ ಊನ್-ಲುಟ್ಝ್ ಹೇಳಿದರು. “2014ರಿಂದಲೂ ನಾವು ಯು.ಎಸ್., ಕೆನಡಾ, ಯು.ಕೆ., ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ ಮತ್ತು ಇಟಲಿಯ 35 ತಾಣಗಳಿಂದ 2 ಮಿಲಿಯನ್ ಸಂದರ್ಶಕರನ್ನು ಸ್ವಾಗತಿಸಿದ್ದೇವೆ” ಎಂದರು.

ಈ ಟೂರ್ಸ್ ಅಮೆಜಾನ್ ನ ಕಾರ್ಯಾಚರಣೆಯ ವ್ಯಾಪ್ತಿ ಮತ್ತು ಉದ್ಯೋಗಪಡೆಯ ಬದ್ಧತೆಯನ್ನು ತೋರುತ್ತದೆ. ಸಂದರ್ಶಕರು ಉಷ್ಣತೆಯ ಮೇಲ್ವಿಚಾರಣೆ, ವೈದ್ಯಕೀಯ ಸೌಲಭ್ಯಗಳು, ಏರ್-ಕಂಡೀಷನ್ಡ್ ಬ್ರೇಕ್ ರೂಂಗಳು ಮತ್ತು ಉದ್ಯೋಗಿಗಳು ಮತ್ತು ಅಸೋಸಿಯೇಟ್ ಗಳಿಗೆ ಅಭಿವೃದ್ಧಿ ಯ ಅವಕಾಶಗಳಂತಹ ಸುರಕ್ಷತೆಯ ಕ್ರಮಗಳನ್ನು ಕಾಣಬಹುದು. ಸುರಕ್ಷತೆಗೆ ಸಂದರ್ಶಕರು ಅನುಕೂಲಕರ ಬೆರಳು ಮುಚ್ಚಿದ ಶೂಗಳನ್ನು ಧರಿಸಬೇಕು, ಉದ್ದದ ಕೂದಲನ್ನು ಬಿಗಿಯಾಗಿ ಕಟ್ಟಿಕೊಳ್ಳಬೇಕು ಮತ್ತು ಸಡಿಲ ವಸ್ತುಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಬೇಕು.

ಟೂರ್ ವಿವರಗಳು

ತನ್ನ ಬಾಗಿಲುಗಳನ್ನು ತೆರೆಯುವ ಮೂಲಕ ಅಮೆಜಾನ್ ಸಂದರ್ಶಕರನ್ನು ಅವರ ಖರೀದಿಯ ಅನುಭವಕ್ಕೆ ಶಕ್ತಿ ತುಂಬುವ ಪ್ರಕ್ರಿಯೆಗಳು ಮತ್ತು ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳುವ ಅವಕಾಶ ನೀಡುತ್ತದೆ, ಅಲ್ಲದೆ ಲಾಜಿಸ್ಟಿಕ್ಸ್ ಕುರಿತಂತೆ ಆಸಕ್ತರಿಗೆ ಮೌಲ್ಯಯುತ ಮಾಹಿತಿ, ಉದ್ಯೋಗಾವಕಾಶಗಳು ಅಥವಾ ಮಾಹಿತಿಪೂರ್ಣ ದಿನ ಕಳೆಯಲು ಅವಕಾಶ ನೀಡುತ್ತದೆ. ಈ ಪ್ರವಾಸವು:

● ಸಾರ್ವಜನಿಕರಿಗೆ ಉಚಿತ ಮತ್ತು ಮುಕ್ತವಾಗಿದೆ. ಅಮೆಜಾನ್ ಟೂರ್ಸ್ ಆರು ವರ್ಷ ಮೇಲ್ಪಟ್ಟು ಎಲ್ಲರನ್ನೂ ಸ್ವಾಗತಿಸುತ್ತದೆ (18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅತಿಥಿಗಳಿಗೆ ಹಿರಿಯರ ಜೊತೆ ಯಲ್ಲಿರಬೇಕು).

● ಅಮೆಜಾನ್ ನ ಸುರಕ್ಷತೆಯ ರೂಢಿಗಳು, ಸುಸ್ಥಿರತೆಯ ಉಪಕ್ರಮಗಳು ಮತ್ತು ಆವಿಷ್ಕಾರ ಕುರಿತು ಒಳನೋಟಗಳನ್ನು ನೀಡುತ್ತದೆ

● ದೈನಂದಿನ ಕಾರ್ಯಾಚರಣೆಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸವ ಜ್ಞಾನ ಉಳ್ಳ ಗೈಡ್ ಗಳನ್ನು ಒಳಗೊಂಡಿರುತ್ತದೆ

ಕ್ಯೂ4, 25ರಿಂದ ಪ್ರಾರಂಭವಾಗುವ ಈ ಪ್ರವಾಸಗಳು ದೆಹಲಿ ಎನ್.ಸಿ.ಆರ್ ಮತ್ತು ಬೆಂಗಳೂರು ಎಫ್.ಸಿ. ಎರಡರಲ್ಲೂ ವಾರಕ್ಕೆ ಮೂರು ಬಾರಿ ಲಭ್ಯವಿದ್ದು ಪ್ರತಿ ಟೂರ್ ಗೆ 20 ಅಭ್ಯರ್ಥಿಗಳು ಭಾಗವಹಿಸಬಹುದು. ಈ ಟೂರ್ ಪಡೆಯಲು ಇಚ್ಛಿಸುವವರು ಈ ವರ್ಷದ ನಂತರದಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಬಹುದು ಮತ್ತು ಕಾರ್ಯಾಚರಣೆಗಳ ಹಿಂದಿನ ವಾಸ್ತವಾಂಶದ ಅನುಭವ ಪಡೆದುಕೊಳ್ಳಬಹುದು.