ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

NZ vs PAK: ಏಕದಿನ ಕ್ರಿಕೆಟ್‌ನಲ್ಲಿ ಕೃಣಾಲ್‌ ಪಾಂಡ್ಯ ದಾಖಲೆ ಮುರಿದ ಮುಹಮ್ಮದ್‌ ಅಬ್ಬಾಸ್‌!

Muhammad Abbas Creates History: ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್‌ ಪದಾರ್ಪಣೆ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ನ್ಯೂಜಿಲೆಂಡ್‌ ತಂಡದ ಮುಹಮ್ಮದ್‌ ಅಬ್ಬಾಸ್‌ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಪದಾರ್ಪಣೆ ಪಂದ್ಯದಲ್ಲಿಯೇ 25ಕ್ಕೂ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

ಒಡಿಐ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಮುಹಮ್ಮದ್‌ ಅಬ್ಬಾಸ್‌!

ವೇಗದ ಅರ್ಧಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಮುಹಮ್ಮದ್‌ ಅಬ್ಬಾಸ್‌.

Profile Ramesh Kote Mar 29, 2025 5:05 PM

ನೇಪಿಯರ್:‌ ಪಾಕಿಸ್ತಾನ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ಒಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಪಾಕ್‌ ಮೂಲದ ಮುಹಮ್ಮದ್‌ ಅಬ್ಬಾಸ್‌ ಅವರು ಚೊಚ್ಚಲ ಅರ್ಧಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ತಮ್ಮ ಚೊಚ್ಚಲ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ಅವರು, ಕೇವಲ 26 ಎಸೆತಗಳಲ್ಲಿ 52 ರನ್‌ಗಳನ್ನು ಗಳಿಸಿದ್ದಾರೆ. ಇದರೊಂದಿಗೆ ಕಿವೀಸ್‌ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 344 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಪಾಕಿಸ್ತಾನ ತಂಡಕ್ಕೆ 345 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.

ಇಲ್ಲಿನ ಮೆಕ್‌ಲಿನ್‌ ಅಂಗಣದಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ನ್ಯೂಜಿಲೆಂಡ್‌ ತಂಡ 50 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ಮಾರ್ಕ್‌ ಚಾಂಪ್ಮನ್‌ ಹಾಗೂ ಡ್ಯಾರಿಲ್‌ ಮಿಚೆಲ್‌ ಜೋಡಿ 199 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಕಿವೀಸ್‌ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದ್ದರು. ಅತ್ಯುತ್ತಮ ಬ್ಯಾಟ್‌ ಮಾಡಿ ಡ್ಯಾರಿಲ್‌ ಮಿಚೆಲ್‌ 76 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೆ, ಮಾರ್ಕ್‌ ಚಾಪ್ಮನ್‌ ಅವರು 111 ಎಸೆತಗಳಲ್ಲಿ 132 ರನ್‌ಗಳನ್ನು ಕಲೆ ಹಾಕಿದ್ದರು.

NZ vs PAK: ಯೂಟರ್ನ್‌ ಹೊಡೆದ ಪಿಸಿಬಿ, ಪಾಕಿಸ್ತಾನ ಏಕದಿನ ತಂಡಕ್ಕೆ ಹ್ಯಾರಿಸ್‌ ರೌಫ್‌ ಸೇರ್ಪಡೆ!

47ನೇ ಓವರ್‌ನಲ್ಲಿ ಪಾಕಿಸ್ತಾನ ತಂಡ ಬೌಲಿಂಗ್‌ನಲ್ಲಿ ಕಮ್‌ಬ್ಯಾಕ್‌ ಮಾಡಿತ್ತು. ಈ ವೇಳೆ ಕಿವೀಸ್‌ 306 ರನ್‌ಗಳಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ನ್ಯೂಜಿಲೆಂಡ್‌ ತಂಡ 320 ರನ್‌ಗಳನ್ನು ಗಳಿಸಬಹುದೆಂದು ಅಂದಾಜಿಸಲಾಗಿತ್ತು. ಮುಹಮ್ಮದ್‌ ಅಬ್ಬಾಸ್‌ ಅವರು ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ನ್ಯೂಜಿಲೆಂಡ್‌ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 350ರ ಸನಿಹ ಬರಲು ಸಾಧ್ಯವಾಗಿತ್ತು.

ನೂತನ ದಾಖಲೆ ಬರೆದ ಮುಹಮ್ಮದ್‌ ಅಬ್ಬಾಸ್‌

ಈ ಪಂದ್ಯದಲ್ಲಿ ಮುಹಮ್ಮದ್‌ ಅಬ್ಬಾಸ್‌ ಅವರು ಕೇವಲ24 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿದ್ದರು. ಆ ಮೂಲಕ ಏಕದಿನ ಕ್ರಿಕೆಟ್‌ ಪದಾರ್ಪಣೆ ಪಂದ್ಯದಲ್ಲಿ 25ಕ್ಕಿಂತ ,ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ತಮ್ಮ ಏಕದಿನ ಕ್ರಿಕೆಟ್‌ ಪದಾರ್ಪಣೆ ಪಂದ್ಯದಲ್ಲಿ 26 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಭಾರತದ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ಅವರನ್ನು ಹಿಂದಿಕ್ಕಿದ್ದಾರೆ.



ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳು

24 ಎಸೆತಗಳಲ್ಲಿ-ಮುಹಮ್ಮದ್‌ ಅಬ್ಬಾಸ್‌-ನ್ಯೂಜಿಲೆಂಡ್‌ vs ಪಾಕಿಸ್ತಾನ 2025

26 ಎಸೆತಗಳಲ್ಲಿ-ಕೃಣಾಲ್‌ ಪಾಂಡ್ಯ-ಭಾರತ vs ಇಂಗ್ಲೆಂಡ್‌ 2021

26 ಎಸೆತಗಳಲ್ಲಿ- ಎಲಿಕ್‌ ಅಥನಾಝೆ-ವೆಸ್ಟ್‌ ಇಂಡೀಸ್‌ vs ಯುಎಇ, 2023

33 ಎಸೆತಗಳಲ್ಲಿ-ಇಶಾನ್‌ ಕಿಶನ್‌-ಭಾರತ vs ಶ್ರೀಲಂಕಾ 2021



ಮೊದಲನೇ ಏಕದಿನ ಪಂದ್ಯ ಸೋತ ಪಾಕಿಸ್ತಾನ

ಈಗಾಗಲೇ ಐದು ಪಂದ್ಯಗಳ ಟಿ20ಐ ಸರಣಿಯನ್ನು 1-4 ಅಂತರದಲ್ಲಿ ಸೋಲು ಅನುಭವಿಸಿದ್ದ ಪಾಕಿಸ್ತಾನ ತಂಡ, ಇದೀಗ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿಯೂ ಸೋಲು ಅನುಭವಿಸಿದೆ. ಕಿವೀಸ್‌ ನೀಡಿದ್ದ 345 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡ, ಒಂದು ಹಂತದಲ್ಲಿ 193 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು 193 ರನ್‌ಗಳನ್ನು ಕಲೆ ಹಾಕಿತ್ತು. ಆದರೆ, ಅಂತಿಮವಾಗಿ 44. 1 ಓವರ್‌ಗಳಿಗೆ 271 ರನ್‌ಗಳಿಗೆ ಆಲ್‌ಔಟ್‌ ಆಯಿತು.