NZ vs PAK: ಯೂಟರ್ನ್ ಹೊಡೆದ ಪಿಸಿಬಿ, ಪಾಕಿಸ್ತಾನ ಏಕದಿನ ತಂಡಕ್ಕೆ ಹ್ಯಾರಿಸ್ ರೌಫ್ ಸೇರ್ಪಡೆ!
Haris Rauf joins Pakistan ODI Squad: ನ್ಯೂಜಿಲೆಂಡ್ ಟಿ20ಐ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ವೇಗಿ ಹ್ಯಾರಿಸ್ ರೌಫ್ ಅವರನ್ನು ಪಾಕಿಸ್ತಾನ ಏಕದಿನ ತಂಡಕ್ಕೂ ಸೇರಿಸಲಾಗಿದೆ. ಆರಂಭದಲ್ಲಿ ಅವರನ್ನು ಏಕದಿನ ತಂಡದಿಂದ ದೂರ ಇಡಲು ಚಿಂತನೆ ನಡೆಸಲಾಗಿತ್ತು. ಆದರೆಮ ಇದೀಗ ಅವರು ಮಾರ್ಚ್ 29 ರಂದು ಆರಂಭವಾಗಲಿರುವ ಏಕದಿನ ಸರಣಿಗೂ ಸೇರ್ಪಡೆಗೊಳಿಸಲಾಗಿದೆ ಎಂದು ವರದಿಯಾಗಿದೆ.

ಪಾಕಿಸ್ತಾನ ಏಕದಿನ ತಂಡಕ್ಕೆ ಹ್ಯಾರಿಸ್ ರೌಫ್ ಸೇರ್ಪಡೆ.

ನವದೆಹಲಿ: ನ್ಯೂಜಲೆಂಡ್ ವಿರುದ್ಧದ ಏಕದಿನ ಸರಣಿಗೂ (NZ vs PAK) ಮುನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಯೂಟರ್ನ್ ಹೊಡೆದಿದೆ. ಕಿವೀಸ್ ಟಿ20ಐ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದ ಹಿರಿಯ ವೇಗಿ ಹ್ಯಾರಿಸ್ ರೌಫ್ (Haris Rauf) ಅವರನ್ನು ಪಾಕ್ ಏಕದಿನ ತಂಡಕ್ಕೂ ಸೇರ್ಪಡೆಗೊಳಿಸಲಾಗಿದೆ. ಮಾರ್ಚ್ 29 ರಿಂದ ಏಪ್ರಿಲ್ 5ರ ವರೆಗೆ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದ ಕಾರಣ ಹ್ಯಾರಿಸ್ ರೌಫ್ ಅವರನ್ನು ಕಿವೀಸ್ ಏಕದಿನ ಸರಣಿಗೆ ಆರಂಭದಲ್ಲಿ ಆಯ್ಕೆ ಮಾಡಿರಲಿಲ್ಲ. ಆದರೆ, ಟಿ20ಐ ಸರಣಿಯಲ್ಲಿ ಚೆನ್ನಾಗಿ ಆಡಿದ್ದರಿಂದ ಅವರನ್ನು ಇದೀಗ ತಂಡದಲ್ಲಿ ಅವಕಾಶ ನೀಡಲಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಆಡುವ ಪಾಕಿಸ್ತಾನ ಏಕದಿನ ತಂಡಕ್ಕೆ ಹ್ಯಾರಿಸ್ ರೌಫ್ ಸೇರ್ಪಡೆಯಾಗಿದ್ದಾರೆಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಅದರಂತೆ ಅವರು ಇದೀಗ ತಂಡದ ಜೊತೆ ತರಬೇತಿ ಪಡೆಯುತ್ತಿದ್ದಾರೆ. ಪಾಕಿಸ್ತಾನ ಏಕದಿನ ತಂಡಕ್ಕೆ ಮೀಸಲು ವಿಕೆಟ್ ಕೀಪರ್ ಬೇಕೆಂದು ಸೆಲೆಕ್ಟರ್ ಆಕಿಬ್ ಜಾವೆದ್‌ಗೆ ಮನವಿ ಮಾಡಲಾಗಿತ್ತು. ಅದರಂತೆ ಟಿ20ಐ ಸರಣಿ ಆಡಿದ್ದ ಉಸ್ಮಾನ್ ಖಾನ್ ಅವರನ್ನು ಕೂಡ ತಂಡದಲ್ಲಿ ಇರಿಸಿಕೊಳ್ಳಲಾಗಿದೆ. ಮಾರ್ಚ್ 29 ರಂದು ಶನಿವಾರ ನೇಪಿಯರ್‌ನಲ್ಲಿ ಮೊದಲನೇ ಏಕದಿನ ಪಂದ್ಯ ನೆಡಯಲಿದೆ.
NZ vs PAK: ಪಾಕಿಸ್ತಾನಕ್ಕೆ 5ನೇ ಪಂದ್ಯದಲ್ಲಿಯೂ ಸೋಲು, ಕಿವೀಸ್ ಮುಡಿಗೆ ಟಿ20ಐ ಸರಣಿ!
ಕಿವೀಸ್ ಟಿ20ಐ ಸರಣಿಯ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಬಾಬರ್ ಆಝಮ್ ಹಾಗೂ ನಾಯಕ ಮೊಹಮ್ಮದ್ ರಿಝ್ವಾನ್ ಏಕದಿನ ತಂಡಕ್ಕೆ ಮರಳಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ನಿರಾಶೆ ಮೂಡಿಸಿದ್ದ ಹ್ಯಾರಿಸ್ ರೌಫ್ ಹಾಗೂ ಶಾಹೀನ್ ಶಾ ಅಫ್ರಿದಿ ಅವರನ್ನು ನ್ಯೂಜಿಲೆಂಡ್ ಏಕದಿನ ಸರಣಿಯಿಂದ ಕೈ ಬಿಡಲಾಗಿತ್ತು. ಇತ್ತೀಚೆಗೆ ಅಂತ್ಯವಾಗಿರುವ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿಯೂ ಈ ಇಬ್ಬರೂ ವೇಗಿಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಇವರ ಪೈಕಿ ಹ್ಯಾರಿಸ್ ರೌಫ್‌ಗೆ ಅವಕಾಶ ನೀಡಲಾಗಿದೆ.
ಕಿವೀಸ್ ಟಿ20ಐ ಸರಣಿಯಲ್ಲಿ ಹ್ಯಾರಿಸ್ ರೌಫ್ 7 ವಿಕೆಟ್‌ಗಳನ್ನು ಕಬಳಿಸಿದ್ದರು. ಅಲ್ಲದೆ ವೇಗದ ಬೌಲಿಂಗ್ ಸ್ನೇಹಿ ವಿಕೆಟ್ ಕಾರಣ ಹ್ಯಾರಿಸ್ ರೌಫ್‌ಗೆ ಅವಕಾಶವನ್ನು ನೀಡಲಾಗಿದೆ. ಹ್ಯಾರಿಸ್ ರೌಫ್ ಅವರ ಉತ್ತಮ ಬೌಲಿಂಗ್ ಹೊರತಾಗಿಯೂ ನ್ಯೂಜಿಲೆಂಡ್ ಎದುರು ಪಾಕಿಸ್ತಾನ ತಂಡ ಟಿ20ಐ ಸರಣಿಯನ್ನು 1-4 ಅಂತರದಲ್ಲಿ ಕಳೆದುಕೊಂಡಿತ್ತು.
New Zealand win the five-match series 4-1#NZvPAK | #BackTheBoysInGreen pic.twitter.com/sKMXOMWiDQ
— Pakistan Cricket (@TheRealPCB) March 26, 2025
ಟಿ20ಐ ಸರಣಿಯಲ್ಲಿ ಹ್ಯಾರಿಸ್ ರೌಫ್ ಉತ್ತಮ ಪ್ರದರ್ಶನ ತೋರಿದ ಬಳಿಕ ಆಯ್ಕೆದಾರರು ವೇಗಿಯ ಬಗ್ಗೆ ಮರು ಚಿಂತನೆ ನಡೆಸಿದ್ದರು. ಕೊನೆಯ ಟಿ20ಐ ಪಂದ್ಯದಿಂದ ಹೊರಗುಳಿದಿದ್ದ ಶಾಹೀನ್ ಶಾ ಅಫ್ರಿದಿ ಅವರನ್ನು ಏಕದಿನ ತಂಡಕ್ಕೆ ಪರಿಗಣಿಸಿಲ್ಲ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಪಾಕಿಸ್ತಾನ ತಂಡ: ಮೊಹಮ್ಮದ್ ರಿಝ್ವಾನ್ (ನಾಯಕ), ಸಲ್ಮಾನ್ ಅಲಿ ಅಘಾ (ಉಪ ನಾಯಕ), ಅಬ್ದುಲ್ ಶಫಿಕ್, ಅಬ್ರಾರ್ ಅಹ್ಮದ್, ಆಕಿಫ್ ಜಾವೇದ್, ಬಾಬರ್ ಆಝಮ್, ಫಹೀಮ್ ಅಶ್ರಫ್, ಇಮಾಮ್ ಉಲ್ ಹಕ್, ಖುಷ್ದಿಲ್ ಶಾ, ಮೊಹಮ್ಮದ್ ಅಲಿ, ಮೊಹಮ್ಮದ್ ವಸೀಮ್, ಮುಹಮ್ಮದ್ ಇರ್ಫಾನ್ ಖಾನ್, ನಸೀಮ್ ಶಾ, ಸುಫ್ಯಾನ್ ಮೊಕಿಮ್,ತಯಬ್ ತಾಹಿರ್ ಹಾಗೂ ಹ್ಯಾರಿಸ್ ರೌಫ್