R Ashwin Loses Cool: ಔಟ್ ವಿಚಾರವಾಗಿ ಮಹಿಳಾ ಅಂಪೈರ್ ಜತೆ ವಾಗ್ವಾದ ನಡೆಸಿದ ಅಶ್ವಿನ್
ಪಂದ್ಯದಲ್ಲಿ ಅತ್ಯಂತ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿದ ದಿಂಡಿಗಲ್ ಡ್ರಾಗನ್ಸ್ 16.2 ಓವರ್ಗಳಲ್ಲಿ ಕೇವಲ 93 ರನ್ಗೆ ಸರ್ವಪತನ ಕಂಡಿತು. ಅಲ್ಪ ಮೊತ್ತವನ್ನು ಬೆನ್ನಟ್ಟಿದ ಐಡ್ರೀಮ್ ತಿರುಪ್ಪೂರ್ 11.5 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 94 ರನ್ ಬಾರಿಸಿ 9 ವಿಕೆಟ್ ಅಂತರದ ಭರ್ಝರಿ ಗೆಲುವು ಸಾಧಿಸಿತು.


ಚೆನ್ನೈ: ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದ ಮಾಜಿ ಟೀಮ್ ಇಂಡಿಯಾದ ಸ್ಪಿನ್ ಆಲ್ರೌಂಡರ್, ರವಿಚಂದ್ರನ್ ಅಶ್ವಿನ್(R Ashwin Loses Cool) ಅವರು ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ(Tamil Nadu Premier League 2025 ) ಆಡುತ್ತಿದ್ದಾರೆ. ಆದರೆ ಪಂದ್ಯ ವೇಳೆ ತಾಳ್ಮೆ ಕಳೆದುಕೊಂಡು ಮಹಿಳಾ ಅಂಪೈರ್ ಜತೆ ಔಟ್ ವಿಚಾರವಾಗಿ ವಾಗ್ವಾದ ನಡೆಸಿದ ಘಟನೆ ನಡೆದಿದೆ.
38 ವರ್ಷದ ಅಶ್ವಿನ್ 2025 ರ ಟಿಎನ್ಪಿಎಲ್ ಆವೃತ್ತಿಯಲ್ಲಿ ದಿಂಡಿಗಲ್ ಡ್ರಾಗನ್ಸ್ ತಂಡದ ನಾಯಕನಾಗಿದ್ದು. ಭಾನುವಾರ ನಡೆದಿದ್ದ ಐಡ್ರೀಮ್ ತಿರುಪ್ಪೂರ್ ತಮಿಳನ್ಸ್ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ತಿರುಪ್ಪೂರು ತಂಡದ ನಾಯಕ ಆರ್. ಸಾಯಿ ಕಿಶೋರ್ ಅವರ ಓವರ್ನ 5ನೇ ಎಸೆತದಲ್ಲಿ ಎಲ್ಬಿಡಬ್ಲ್ಯೂಗೆ ವಿಕೆಟ್ ಕಳೆದುಕೊಂಡರು. ಈ ವೇಳೆ ಅಶ್ವಿನ್ ಫೀಲ್ಡ್ ಅಂಪೈರ್ ಜತೆ ವಾಗ್ವಾದ ನಡೆಸಿ ಇದು ಔಟ್ ಅಲ್ಲ ನಾಟೌಟ್ ಎಂದು ಪಟ್ಟು ಹಿಡಿದರು. ಆದರೆ ಅಂಪೈರ್ ಔಟ್ ನೀಡಿದ ಕಾರಣ ಅಂತಿಮವಾಗಿ ಸಿಟ್ಟಿನಲ್ಲೇ ಪ್ಯಾಟ್ಗೆ ಬ್ಯಾಟ್ನಿಂದ ಜೋರಾಗಿ ಬಡಿದಅಶ್ವಿನ್ ಮೈದಾನ ತೊರೆದರು.
Ashwin was controlling himself just because the umpire was a female 😭🙏pic.twitter.com/3XM6WAMPgy
— Kusha Sharma (@Kushacritic) June 9, 2025
ವಾಸ್ತವವಾಗಿ ಇದು ಅಂಪೈರಿಂಗ್ ಪ್ರಮಾದವಾಗಿತ್ತು. ಓವರ್ ದಿ ವಿಕೆಟ್ನಿಂದ, ಸಾಯಿ ಕಿಶೋರ್ ನಿಯಮಿತ ಆಫ್ ಬ್ರೇಕ್ ಎಸೆದರು. ಚೆಂಡು ಅಶ್ವಿನ್ ಅವರ ಪ್ಯಾಡ್ಗೆ ಬಡಿಯಿತು. ಆದರೆ ಚೆಂಡು ವಿಕೆಟ್ನಿಂದ ದೂರ ಇದ್ದರೂ ಅಂಪೈರ್ ಔಟ್ ನೀಡಿದರು. ಇದು ಅಶ್ವಿನ್ಗೆ ಪಿತ್ತ ನೆತ್ತಿಗೇರುವಂತೆ ಮಾಡಿತು. ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಅಶ್ವಿನ್ 1 ಸಿಕ್ಸ್ ಮತ್ತು 2 ಬೌಂಡರಿ ನೆರವಿನಿಂದ 18 ರನ್ ಗಳಿಸಿದರು.
ಇದನ್ನೂ ಓದಿ ಸಿಎಸ್ಕೆಯನ್ನು ಬಿಟ್ಟು ತೊಲಗಿ ಎಂದ ಅಭಿಮಾನಿಗೆ ಅಶ್ವಿನ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತೆ?
ಪಂದ್ಯ ಸೋತ ದಿಂಡಿಗಲ್ ಡ್ರಾಗನ್ಸ್
ಪಂದ್ಯದಲ್ಲಿ ಅತ್ಯಂತ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿದ ದಿಂಡಿಗಲ್ ಡ್ರಾಗನ್ಸ್ 16.2 ಓವರ್ಗಳಲ್ಲಿ ಕೇವಲ 93 ರನ್ಗೆ ಸರ್ವಪತನ ಕಂಡಿತು. ಅಲ್ಪ ಮೊತ್ತವನ್ನು ಬೆನ್ನಟ್ಟಿದ ಐಡ್ರೀಮ್ ತಿರುಪ್ಪೂರ್ 11.5 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 94 ರನ್ ಬಾರಿಸಿ 9 ವಿಕೆಟ್ ಅಂತರದ ಭರ್ಝರಿ ಗೆಲುವು ಸಾಧಿಸಿತು.
ಚೇಸಿಂಗ್ ವೇಳೆ ತುಷಾರ್ ರಹೇಜಾ ಅಜೇಯ 65 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಬೌಲಿಂಗ್ನಲ್ಲಿ ಮಿಂಚಿದ ಎಸಕ್ಕಿಮುತ್ತು 26 ರನ್ಗೆ 4 ವಿಕೆಟ್ ಕಿತ್ತರು.