ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ವಿದೇಶಿ ಮಹಿಳೆಯರಿಗೆ ಸಿಂದೂರ ಹಚ್ಚಿದ ಮುಸ್ಲಿಂ ಯುವಕ; ಮುಂದೇನಾಯ್ತು? ಈ ವಿಡಿಯೊ ನೋಡಿ!

ಕೇರಳ ಮೂಲದ ಟ್ರಾವೆಲ್ ವ್ಲೋಗರ್ ಮಹೀನ್ ಶಾಜಹಾನ್ ವಿದೇಶಿ ಮಹಿಳೆಯರೊಂದಿಗೆ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಅವರ ಹಣೆಗೆ ಸಿಂಧೂರ ಹಚ್ಚಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಟೀಕೆಗೆ ಗುರಿಯಾಗಿದೆ. ಅನೇಕರು ಇದನ್ನು ಅಗೌರವ ಮತ್ತು ಅನುಚಿತ ಎಂದು ಕರೆದಿದ್ದಾರೆ.

ವಿದೇಶಿ ಮಹಿಳೆಯರ ಹಣೆಗೆ ಸಿಂದೂರ ಹಚ್ಚಿದ ಮುಸ್ಲಿಂ ಯುವಕ!

Profile pavithra Jun 9, 2025 3:56 PM

ನವದೆಹಲಿ: ಕೇರಳ ಮೂಲದ ಟ್ರಾವೆಲ್ ವ್ಲೋಗರ್ ಮಹೀನ್ ಶಾಜಹಾನ್ ಕೆಲವು ವಿದೇಶಿ ಮಹಿಳೆಯರೊಂದಿಗೆ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಅವರ ಹಣೆಗೆ ಸಿಂದೂರ(Sindoor) ಹಚ್ಚಿದ್ದಾನೆ. ಈ ವಿಡಿಯೊವನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಈಗ ಎಲ್ಲರ ಗಮನ ಸೆಳೆದು ವೈರಲ್(Viral Video) ಆಗಿ ನೆಟ್ಟಿಗರು ಆತನ ವಿರುದ್ಧ ಕಿಡಿಕಾರಿದ್ದಾರೆ. ಸಿಂದೂರವನ್ನು ಪತಿಯಾದವನು ಪತ್ನಿಯ ಹಣೆಗೆ ಹಚ್ಚಬೇಕು. ಬೇರೆಯವರು ಹೀಗೆಲ್ಲಾ ಹಚ್ಚಬಾರದು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಶಾಜಹಾನ್ ಸ್ಪಷ್ಟೀಕರಣವನ್ನು ನೀಡಿದ್ದು, ವಿವಾಹಿತರು ಸಿಂದೂರ್ ಹಾಕುತ್ತಾರೆಂದು ತನಗೆ ತಿಳಿದಿತ್ತು. ಆದರೆ ಇದನ್ನು ಬೇರೆಯವರು ಹಾಕಬಾರದು ಎಂದು ತನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾನೆ. ತಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ಸಿಂದೂರವನ್ನು ಗಂಡ ಮಾತ್ರ ಹಾಕಬೇಕು ಮತ್ತು ಮದುವೆಯಲ್ಲಿ ಅದಕ್ಕೆ ತುಂಬಾ ಮಹತ್ವವಿದೆ ಎಂದು ತಿಳಿದಿದ್ದರೆ ತಾನು ಈ ಕೃತ್ಯ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ...



ಶಾಜಹಾನ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ, ಅವನು ವಿದೇಶಿ ಮಹಿಳೆಯರ ಗುಂಪಿನೊಂದಿಗೆ ಕೇರಳದ ದೇವಾಲಯಕ್ಕೆ ಭೇಟಿ ನೀಡಿರುವುದು ಸೆರೆಯಾಗಿದೆ. ಅಲ್ಲಿ ಅವನು ಮಹಿಳೆಯರ ಹಣೆಯ ಮೇಲೆ ಸಿಂದೂರವನ್ನು ಹಚ್ಚಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾಕಷ್ಟು ಜನ ಈತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಸಿಕ್ಕಾಪಟ್ಟೆ ವೈರಲ್‌ ಆಯ್ತು ವಂದೇ ಭಾರತ್‍ ರೈಲುಗಳ ಈ ವಿಡಿಯೊ; ಅಂತಹದ್ದೇನಿದೆ ಇದರಲ್ಲಿ?

ವಿಡಿಯೊಗೆ ಅನೇಕರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದು ಸಿಂದೂರಕ್ಕೆ ಅವಮಾನವಲ್ಲವೇ?" ಎಂದು ಮಹಿಳೆಯೊಬ್ಬಳು ಪ್ರಶ್ನಿಸಿದ್ದಾಳೆ. ಮುಸಲ್ಮಾನರು ವಿದೇಶಿ ಮಹಿಳೆಯರಿಗೆ ಸಿಂದೂರ ಹಚ್ಚಲು ಹೇಗೆ ಅವಕಾಶ ನೀಡಲಾಯಿತು? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.