ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs PBKS: 36ನೇ ವಯಸ್ಸಿನಲ್ಲಿಯೂ ಜಿಂಕೆಯಂತೆ 4 ರನ್‌ ಓಡಿದ ವಿರಾಟ್‌ ಕೊಹ್ಲಿಗೆ ಫ್ಯಾನ್ಸ್‌ ಮೆಚ್ಚುಗೆ!

Virat Kohli took 4 Runs by Running:ಫಿಟ್ನೆಸ್ ವಿಷಯದಲ್ಲಿ ಹಲವು ಯುವ ಆಟಗಾರರು ವಿರಾಟ್ ಕೊಹ್ಲಿಗಿಂತ ಬಹಳ ಹಿಂದಿದ್ದಾರೆ. ಅವರ ಫಿಟ್ನೆಸ್ ಅನ್ನು ಎಲ್ಲರೂ ಹೊಗಳುತ್ತಾರೆ. ಅವರು ಪಂಜಾಬ್ ಕಿಂಗ್ಸ್ ವಿರುದ್ಧ ಅದ್ಭುತವಾಗಿ ಬ್ಯಾಟ್‌ ಮಾಡಿದರು. ಅಲ್ಲದೆ ಬ್ಯಾಟಿಂಗ್ ವೇಳೆ ಕೊಹ್ಲಿ 4 ರನ್‌ಗಳನ್ನು ಓಸುವ ಮೂಲಕ ತಮ್ಮ ಫಿಟ್ನೆಸ್‌ ಅನ್ನು ಅವರು ಸಾಬೀತುಪಡಿಸಿದ್ದಾರೆ.

36ನೇ ವಯಸ್ಸಿನಲ್ಲಿಯೂ 4 ರನ್‌ ಓಡಿದ ವಿರಾಟ್‌ ಕೊಹ್ಲಿಗೆ ಮೆಚ್ಚುಗೆ!

ದೇವದತ್‌ ಪಡಿಕ್ಕಲ್‌ ಜೊತೆ 4 ರನ್‌ ಓಡಿದ ವಿರಾಟ್‌ ಕೊಹ್ಲಿ.

Profile Ramesh Kote Apr 21, 2025 7:37 AM

ಚಂಡೀಗಢ: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರುವ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, ಎದುರಾಳಿ ಪಂಜಾಬ್‌ ಕಿಂಗ್ಸ್‌ (PBKS) ಎದುರು 7 ವಿಕೆಟ್‌ಗಳ ಗೆಲುವು ಪಡೆಯಿತು. ಈ ಗೆಲುವಿನ ಮೂಲಕ ಆರ್‌ಸಿಬಿ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆ ಮೂಲಕ ಪಂಜಾಬ್‌ ಎದುರು ಬೆಂಗಳೂರಿನ ಸೋಲಿನ ಸೇಡನ್ನು ಆರ್‌ಸಿಬಿ ತೀರಿಸಿಕೊಂಡಿತು. ಅಂದ ಹಾಗೆ ಈ ಪಂದ್ಯದಲ್ಲಿ ಅಜೇಯ 73 ರನ್‌ ಸಿಡಿಸಿದ ವಿರಾಟ್‌ ಕೊಹ್ಲಿ(Virat Kohli) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬ್ಯಾಟಿಂಗ್‌ ಜೊತೆಗೆ ತಮ್ಮ ಫಿಟ್ನೆಸ್‌ ವಿಚಾರವಾಗಿ ಅಭಿಮಾನಿಗಳು ಕಿಂಗ್‌ ಕೊಹ್ಲಿಯನ್ನು ಶ್ಲಾಘಿಸಿದ್ದಾರೆ.

ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ನೀಡಿದ್ದ 158 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ಪರ ವಿರಾಟ್‌ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅದರಲ್ಲಿಯೂ ವಿಶೇಷವಾಗಿ ವಿರಾಟ್‌ ಕೊಹ್ಲಿ ರನ್‌ ಓಡುವ ವಿಷಯದಲ್ಲಿ ಎಲ್ಲರ ಗಮನವನ್ನು ಸೆಳೆದರು. ದೇವದತ್‌ ಪಡಿಕ್ಕಲ್‌ ಜೊತೆ ಎರಡನೇ ವಿಕೆಟ್‌ಗೆ ಅತ್ಯುತ್ತಮ ಜತೆಯಾಟವನ್ನುಆಡಿದ್ದ ಕೊಹ್ಲಿ, ಒಮ್ಮೆ 4 ರನ್‌ಗಳನ್ನು ಓಡಿದರು. ಆ ಮೂಲಕ ತಮಗೆ 36 ವರ್ಷ ವಯಸ್ಸಾಗಿದ್ದರೂ ಅತ್ಯುತ್ತಮ ಫಿಟ್ನೆಸ್‌ ಹೊಂದಿದ್ದೇನೆಂಬುದನ್ನು ಸಾಬೀತುಪಡಿಸಿದ್ದರು.

RCB vs PBKS: ಕೊಹ್ಲಿ-ಪಡಿಕ್ಕಲ್‌ ಮಿಂಚು, ಪಂಜಾಬ್‌ ಕಿಂಗ್ಸ್‌ ಎದುರು ಸೇಡು ತೀರಿಸಿಕೊಂಡ ಆರ್‌ಸಿಬಿ!

ವಿರಾಟ್‌ ಕೊಹ್ಲಿ ಹಾಗೂ ದೇವದತ್‌ ಪಡಿಕ್ಕಲ್‌ 4 ರನ್‌ ಓಡಿದ ಘಟನೆ ಆರ್‌ಸಿಬಿ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ನಡೆದಿತ್ತು. ಅರ್ಷದೀಪ್‌ ಸಿಂಗ್ ಬೌಲಿಂಗ್‌ನ ಕೊನೆಯ ಎಸೆತದಲ್ಲಿ ದೇವದತ್ ಪಡಿಕ್ಕಲ್ ಲೆಗ್ ಸೈಡ್‌ನಲ್ಲಿ ಶಾಟ್ ಹೊಡೆದರು ಮತ್ತು ತಕ್ಷಣವೇ ರನ್ ತೆಗೆದುಕೊಳ್ಳಲು ಓಡಿಹೋದರು. ಏಕೆಂದರೆ ಡೀಪ್ ಮಿಡ್‌ವಿಕೆಟ್ ಫೀಲ್ಡರ್ ತುಂಬಾ ದೂರದಲ್ಲಿ ನಿಂತಿದ್ದರು ಮತ್ತು ಚೆಂಡು ಬೌಂಡರಿ ತಲುಪುವಷ್ಟು ವೇಗವನ್ನು ಹೊಂದಿರಲಿಲ್ಲ. ಅದಕ್ಕಾಗಿಯೇ ವಿರಾಟ್ ಮತ್ತು ಪಡಿಕ್ಕಲ್ 4 ರನ್ ಗಳಿಸಲು ಸಾಕಷ್ಟು ಸಮಯ ಸಿಕ್ಕಿತು. ಅದರಂತೆ ಕೊಹ್ಲಿ-ಪಡಿಕ್ಕಲ್‌ ಜೋಡಿ ಓಡುವ ಮೂಲಕ 4 ರನ್‌ ಪಡೆಯಿತು. ಈ ವೇಳೆ ವಿರಾಟ್‌ ಕೊಹ್ಲಿ ಫಿಟ್ನೆಸ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ವಿರಾಟ್‌ ಕೊಹ್ಲಿ

ಈ ಪಂದ್ಯದ ಬ್ಯಾಟಿಂಗ್‌ನಲ್ಲಿ ವಿರಾಟ್‌ ಕೊಹ್ಲಿ ಗಮನ ಸೆಳೆದರು. ಆರ್‌ಸಿಬಿ ತಂಡದ ಚೇಸಿಂಗ್‌ ಇನಿಂಗ್ಸ್‌ನಲ್ಲಿ ವಿರಾಟ್‌ ಕೊಹ್ಲಿ ಆಂಕರ್‌ ಪಾತ್ರವನ್ನು ನಿರ್ವಹಿಸಿದರು. ಅವರು ಆಡಿದ 54 ಎಸೆತಗಳಲ್ಲಿ ಅಜೇಯ 73 ರನ್‌ಗಳನ್ನು ಗಳಿಸಿದರು. ಆ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ

ಪಂದ್ಯದ ಬಗ್ಗೆ ಹೇಳುವುದಾದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಎದುರಾಳಿ ಪಂಜಾಬ್ ಕಿಂಗ್ಸ್ ತಂಡವನ್ನು ತಮ್ಮ ತವರು ನೆಲದಲ್ಲಿ ಸೋಲಿಸುವ ಮೂಲಕ ಸೇಡು ತೀರಿಸಿಕೊಂಡಿತು. ಕಳೆದ ಶುಕ್ರವಾರ ಪಂಜಾಬ್ ಕಿಂಗ್ಸ್‌ ತನ್ನ ತವರು ನೆಲದಲ್ಲಿ ಆರ್‌ಸಿಬಿಯನ್ನು ಮಣಿಸಿತ್ತು. ಇದಾದ ಬಳಿಕ ಆರ್‌ಸಿಬಿ ಇಂದಿನ(ಭಾನುವಾರ) ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿತು.

RCB vs PBKS: ʻಪಂದ್ಯ ಶ್ರೇಷ್ಠ ಪ್ರಶಸ್ತಿ ನನಗಲ್ಲ, ಕನ್ನಡಿಗನಿಗೆ ಸಲ್ಲಬೇಕಿತ್ತುʼ-ವಿರಾಟ್‌ ಕೊಹ್ಲಿ!

2025ರ ಐಪಿಎಲ್‌ 37ನೇ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಪಂಜಾಬ್ ಕಿಂಗ್ಸ್‌ 157 ರನ್‌ಗಳ ಕಲೆ ಹಾಕಿತ್ತು. ಇದಕ್ಕೆ ಉತ್ತರವಾಗಿ, ಆರ್‌ಸಿಬಿ 18.5 ಓವರ್‌ಗಳಲ್ಲಿ ಗುರಿಯನ್ನು ತಲುಪಿತು. ಐಪಿಎಲ್ 2025 ರಲ್ಲಿ ಬೆಂಗಳೂರು ತಂಡಕ್ಕೆ ಇದು 5 ನೇ ಗೆಲುವು. ಆರ್‌ಸಿಬಿ ಪರ ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 73 ರನ್ ಗಳಿಸಿದರು. ಈ ಇನಿಂಗ್ಸ್‌ನಲ್ಲಿ ಅವರು 7 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಅದೇ ಸಮಯದಲ್ಲಿ, ದೇವದತ್ ಪಡಿಕ್ಕಲ್ 35 ಎಸೆತಗಳನ್ನು ಎದುರಿಸಿ 61 ರನ್ ಗಳಿಸಿದರು. ಅವರು 5 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದರು.