Mangalapuram Movie: ಮಂಗಳಾಪುರಂ ಸಿನಿಮಾದ ಫಸ್ಟ್ ಲುಕ್ ರಿಲೀಸ್- ಮರ್ಡರ್ ಮಿಸ್ಟ್ರಿ ಕಥೆ ಹೇಳೋಕೆ ಬರ್ತಿದ್ದಾರೆ ರಿಷಿ
Mangalapuram First Look:ನಟ ರಿಷಿ ಅಭಿನಯಿಸುತ್ತಿರೋ ಹೊಸ ಚಿತ್ರಕ್ಕೆ ಮಂಗಳಾಪುರಂ ಎಂದು ಹೆಸರಿಟ್ಟಿದ್ದು ಸದ್ಯ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ ಸಿನಿಮಾತಂಡ. ರಿಷಿ ಜೊತೆಯಲ್ಲಿ ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ಅಭಿನಯಮಾಡುತ್ತಿದ್ದು ಇದೇ ಮೊದಲ ಬಾರಿಗೆ ಅಭಿಮನ್ಯು ಹಾಗೂ ರಿಷಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.



ನಟ ರಿಷಿ ಸದಾ ವಿಭಿನ್ನ ಕಥೆಗಳನ್ನ ಆಯ್ಕೆ ಮಾಡಿಕೊಂಡು ಪ್ರೇಕ್ಷಕರ ಮುಂದೆ ಬರುವ ಕಲಾವಿದ. ಸದ್ಯ ಸಾಲುಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ರಿಷಿ ಮಂಗಳೂರು ಮೂಲದ ತಂಡದ ಜೊತೆಗೆ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಹಿಂದೆ ತುಳು ಚಿತ್ರರಂಗದಲ್ಲಿ ಉಮಿಲ್ ಹಾಗೂ ದೊಂಬರಾಟ ಸಿನಿಮಾ ಮಾಡಿ ಸಕ್ಸಸ್ ಕಂಡಿರುವ ರಂಜಿತ್ ರಾಜ್ ಸುವರ್ಣ ರಿಷಿ ನಟನೆಯ ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ರಿಷಿ ಅಭಿನಯಿಸುತ್ತಿರೋ ಹೊಸ ಚಿತ್ರಕ್ಕೆ ಮಂಗಳಾಪುರಂ ಎಂದು ಹೆಸರಿಟ್ಟಿದ್ದು, ಸದ್ಯ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ ಸಿನಿಮಾತಂಡ. ರಿಷಿ ಜೊತೆಯಲ್ಲಿ ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ಅಭಿನಯಮಾಡುತ್ತಿದ್ದು ಇದೇ ಮೊದಲ ಬಾರಿಗೆ ಅಭಿಮನ್ಯು ಹಾಗೂ ರಿಷಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.

ಮಂಗಳಾಪುರಂ ಸಿನಿಮಾ ಒಂದು ಊರಿನಲ್ಲಿ ನಡೆಯುವ ಮರ್ಡರ್ ಮಿಸ್ಟ್ರಿ ಕಥೆ. ನಂಬಿಕೆ - ಮೂಡನಂಬಿಕೆ, ಕೈವಾಡ ಹಾಗೂ ಪವಾಡ ವಿಚಾರದ ಮೇಲೆ ಕಥೆ ಸಾಗಲಿದೆ. ಇನ್ನು ಈ ಸಿನಿಮಾಗೆ ವಿದ್ವಾನ್ ಪ್ರಸನ್ನ ತಂತ್ರಿ ಮೂಡಬಿದ್ರೆ ಹಾಗೂ,ರಾಮ್ ಪ್ರಸಾದ್ ಬಂಡವಾಳ ಹಾಕಿದ್ದಾರೆ. ಈ ಮೂಲಕ ಮೊದಲ ಬಾರಿಗೆ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಸದ್ಯ ಫಸ್ಟ್ ಲುಕ್ ರಿವಿಲ್ ಮಾಡಿರೋ ತಂಡ ಜೂನ್ನಲ್ಲಿ ಚಿತ್ರೀಕರಣ ಶುರುಮಾಡಲಿದೆ. ಕಾರ್ಕಳ, ತೀರ್ಥಹಳ್ಳಿ, ಮಡಿಕೆರಿ ,ಬೆಂಗಳೂರು ಸುತ್ತಾಮುತ್ತಾ ಚಿತ್ರೀಕರಣ ನಡೆಯಲಿದೆ. ಅನೂಪ್ ಸಿಳೀನ್ ಸಂಗೀತ ನಿರ್ದೇಶನ ಸಿನಿಮಾಗೆ ಇರಲಿದ್ದು ಅಭಿಷೇಕ್ ಕಾಸರಗೋಡು ಕ್ಯಾಮೆರಾ ವರ್ಕ್ ಮಾಡಲಿದ್ದಾರೆ. ಸದ್ಯ ಇಂಟ್ರೆಸ್ಟಿಂಗ್ ಆಗಿರೋ ಫಸ್ಟ್ ಲುಕ್ ರಿವಿಲ್ ಮಾಡಿರೋ ತಂಡ ಆದಷ್ಟು ಬೇಗಶೂಟಿಂಗ್ ಮುಗಿಸಿ ಪ್ರೇಕ್ಷಕರ ಮುಂದೆ ಬರುವ ಕಾತುರದಲ್ಲಿದೆ.

ಬೆಳ್ಳಿತೆರೆಗೆ ಬರುವ ಮೊದಲು ಮಹಾಪರ್ವ ಹಾಗೂ ಅನುರೂಪ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ರೇಡಿಯೋ ಜಾಕಿ ಆಗಿಯೂ ಕೂಡ ಗುರುತಿಸಿಕೊಂಡಿದ್ದರು. ಇನ್ನೂ, ಆಪರೇಷನ್ ಅಲಮೇಲಮ್ಮ, ಕವಲುದಾರಿ ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರಿಗೆ ಪರಿಚಿತರಾದರು.