ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs PBKS: ʻಪಂದ್ಯ ಶ್ರೇಷ್ಠ ಪ್ರಶಸ್ತಿ ನನಗಲ್ಲ, ಕನ್ನಡಿಗನಿಗೆ ಸಲ್ಲಬೇಕಿತ್ತುʼ-ವಿರಾಟ್‌ ಕೊಹ್ಲಿ!

Virat Kohli on his Man of the match award: ಪಂಜಾಬ್‌ ಕಿಂಗ್ಸ್‌ ವಿರುದ್ಧ ಅಜೇಯ 73 ರನ್‌ ಗಳಿಸುವ ಮೂಲಕ ವಿರಾಟ್‌ ಕೊಹ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ 7 ವಿಕೆಟ್‌ಗೆ ನೆರವಾದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ಮಾತನಾಡಿದ ಅವರು, ಪಂದ್ಯ ಶ್ರೇಷ್ಠ ಪ್ರಶಸ್ತಿ ನನಗೆ ನೀಡಿದ್ದು ಅಚ್ಚರಿಯಾಗಿದ್ದು,ಇದು ದೇವದತ್‌ ಪಡಿಕ್ಕಲ್‌ಗೆ ನೀಡಬೇಕಿತ್ತು ಎಂದಿದ್ದಾರೆ.

ಪಂದ್ಯ ಶ್ರೇಷ್ಠ ಪ್ರಶಸ್ತಿ ದೇವದತ್‌ ಪಡಿಕ್ಕಲ್‌ಗೆ ನೀಡಬೇಕಿತ್ತೆಂದ ಕೊಹ್ಲಿ!

ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ದೇವದತ್‌ ಪಡಿಕ್ಕಲ್‌ ಅರ್ಹರು: ವಿರಾಟ್‌ ಕೊಹ್ಲಿ

Profile Ramesh Kote Apr 20, 2025 11:22 PM

ಚಂಡೀಗಢ: ಪಂಜಾಬ್‌ ಕಿಂಗ್ಸ್‌ (PBKS) ವಿರುದ್ದ 73 ರನ್‌ ಸಿಡಿಸುವ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ 7 ವಿಕೆಟ್‌ಗಳ ಗೆಲುವಿಗೆ ವಿರಾಟ್‌ ಕೊಹ್ಲಿ (Virat Kohli) ನೆರವಾಗಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಪಂದ್ಯದ ಬಳಿಕ ಮಾತನಾಡಿದ್ದ ವಿರಾಟ್‌ ಕೊಹ್ಲಿ, ಪಂದ್ಯ ಶ್ರೇಷ್ಠ ಪ್ರಶಸ್ತಿ ನನಗೆ ಏಕೆ ನೀಡಲಾಗಿದೆ ಎಂಬುದು ಗೊತ್ತಿಲ್ಲ, ಆದರೆ ಈ ಪ್ರಶಸ್ತಿ ನನಗಿಂತ ದೇವದತ್‌ ಪಡಿಕ್ಕಲ್‌ಗೆ ನೀಡಬೇಕಾಗಿತ್ತು ಎಂದು ಹೇಳಿದ್ದಾರೆ. ಈ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಆರ್‌ಸಿಬಿ ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಪ್ರವೇಶ ಮಾಡಿದೆ. ಆದರೆ, ಸೋಲು ಅನುಭವಿಸಿದ ಪಂಜಾಬ್‌ ಕಿಂಗ್ಸ್‌ ನಾಲ್ಕನೇ ಸ್ಥಾನಕ್ಕೆ ಇಳಿದಿದೆ.

ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್‌ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ 2025ರ ಐಪಿಎಲ್‌ ಟೂರ್ನಿಯ 37ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ನೀಡಿದ್ದ 158 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ವಿರಾಟ್‌ ಕೊಹ್ಲಿ 54 ಎಸೆತಗಳಲ್ಲಿ ಅಜೇಯ 73 ರನ್‌ಗಳನ್ನು ಸಿಡಿಸಿದ್ದರು. ಇವರ ಜೊತೆ ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ದೇವದತ್‌ ಪಡಿಕ್ಕಲ್‌ 35 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 61 ರನ್‌ಗಳನ್ನು ಸಿಡಿಸಿದ್ದರು. ಇವರು 174.29ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಸಿಡಿಸಿದ್ದರು. ಆದರೆ, ವಿರಾಟ್‌ ಕೊಹ್ಲಿ 135ರ ಸ್ಟೈಕ್‌ ರೇಟ್‌ನಲ್ಲಿ ಒಂದು ಸಿಕ್ಸರ್‌ ಹಾಗೂ 7 ಬೌಂಡರಿಗಳನ್ನು ಬಾರಿಸಿದ್ದರು.

RCB vs PBKS: ಕೊಹ್ಲಿ-ಪಡಿಕ್ಕಲ್‌ ಮಿಂಚು, ಪಂಜಾಬ್‌ ಕಿಂಗ್ಸ್‌ ಎದುರು ಸೇಡು ತೀರಿಸಿಕೊಂಡ ಆರ್‌ಸಿಬಿ!

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡಿಕ್ಕಲ್‌ಗೆ ನೀಡಬೇಕಿತ್ತು

ಗೆಲುವಿನ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, "ನಾನು ಇನ್ನಷ್ಟು ವೇಗವಾಗಿ ಬ್ಯಾಟ್‌ ಮಾಡಬೇಕೆಂದು ಬಯಸಿದ್ದೆ. ದೇವದತ್‌ ಪಡಿಕ್ಕಲ್‌ ಇಂದು (ಭಾನುವಾರ) ಸ್ವಲ್ಪ ವಿಭಿನ್ನವಾಗಿ ಕಂಡಿದ್ದಾರೆ; ಪಂದ್ಯ ಶ್ರೇಷ್ಠ ಪ್ರಶಸ್ತಿ ಅವರಿಗೆ ಲಭಿಸಬೇಕು. ನನಗೆ ಏಕೆ ನೀಡಿದ್ದಾರೆಂದು ನನಗೆ ಗೊತ್ತಿಲ್ಲ," ಎಂದು ಹೇಳಿದ್ದಾರೆ.

ತಮ್ಮ ಬ್ಯಾಟಿಂಗ್‌ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನಾನು ಕ್ರೀಸ್‌ನಲ್ಲಿ ದೀರ್ಘಾವಧಿ ನಿಲ್ಲಬೇಕು ಹಾಗೂ ಒಂದು ತುದಿಯಲ್ಲಿ ಗಟ್ಟಿಯಾಗಿ ಅಲಂಕರಿಸಬೇಕು, ನಂತರ ತಡವಾಗಿ ತನ್ನ ಬ್ಯಾಟಿಂಗ್‌ ವೇಗವನ್ನು ಹೆಚ್ಚಿಸಬೇಕೆಂದು ಬಯಸಿದ್ದೆ. ಅದೇ ರೀತಿಯಲ್ಲಿ ಮುಂದುವರಿಯಲು ಯಾವಾಗಲೂ ಒಂದು ಪ್ರಲೋಭನೆ ಇರುತ್ತದೆ," ಎಂದು ತಿಳಿಸಿದ್ದಾರೆ.



ಸಹ ಆಟಗಾರರನ್ನು ಶ್ಲಾಘಿಸಿದ ವಿರಾಟ್‌ ಕೊಹ್ಲಿ

"ನಾನು ವೇಗವಾಗಿ ಆಡಬಹುದು, ಆದರೆ ಇತರೆ ಆಟಗಾರರ ಸಾಮರ್ಥ್ಯವನ್ನು ನಾನು ಅರ್ಥ ಮಾಡಿಕೊಳ್ಳಬೇಕಾಗಿದೆ. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತುಕೊಳ್ಳುವುದು ನಮ್ಮ ತಂಡಕ್ಕೆ ತುಂಬಾ ವರ್ಕ್‌ಔಟ್‌ ಆಗುತ್ತಿದೆ," ಎಂದು ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ತಂಡದ ಒಟ್ಟಾರೆ ಪ್ರದರ್ಶನ ಹಾಗೂ ಆಕ್ರಮಣಕಾರಿ ಪ್ರವೃತ್ತಿಯನ್ನು ವಿರಾಟ್‌ ಕೊಹ್ಲಿ ಇದೇ ವೇಳೆ ಶ್ಲಾಘಿಸಿದ್ದಾರೆ. "ಹುಡುಗರು ಆಕ್ರಮಣಕಾರಿಯಾಗಿ ದಾಳಿ ನಡೆಸಬಲ್ಲರು, ಹುಡುಗರು ಹಸಿವಿನಿಂದ ಕೂಡಿದ್ದಾರೆ. ಅವರು ಮೈದಾನದಲ್ಲಿ ಸುತ್ತಾಡುತ್ತಿರುವಾಗ ಆ ತೀವ್ರತೆಯನ್ನು ನೀವು ನೋಡಬಹುದು. ಇದನ್ನು ನೋಡಲು ತುಂಬಾ ಖುಷಿಯಾಗುತ್ತದೆ. ನೀವು ಯಾವಾಗ ಈ ರೀತಿ ಆಡುತ್ತೀರಿ, ಆಗ ನಿಮ್ಮ ಗೆಲುವಿನ ಅವಕಾಶಗಳು ಉತ್ತಮವಾಗುತ್ತವೆ," ಎಂದು ತಿಳಿಸಿದ್ದಾರೆ.

RCB vs PBKS: ಆರ್‌ಸಿಬಿಯನ್ನು ಗೆಲ್ಲಿಸಿ ಶ್ರೇಯಸ್‌ ಅಯ್ಯರ್‌ಗೆ ಕೌಂಟರ್‌ ಕೊಟ್ಟ ವಿರಾಟ್‌ ಕೊಹ್ಲಿ!

ಪಂದ್ಯದಲ್ಲಿ 2 ಅಂಕ ತುಂಬಾ ಮುಖ್ಯ

ಪಂದ್ಯವನ್ನು ಗೆಲ್ಲುವುದರ ಮಹತ್ವದ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ, "ನಮಗೆ ತುಂಬಾ ಮುಖ್ಯವಾದ ಪಂದ್ಯ ಇದಾಗಿದೆ. ಅರ್ಹತಾ ಮಾನದಂಡದ ನಿಟ್ಟಿನಲ್ಲಿ ಎರಡು ಅಂಕಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಾವು ಹೊರಗಿನ ಸ್ಥಳಗಳಲ್ಲಿ ಅದ್ಭುತ ಕ್ರಿಕೆಟ್‌ ಅನ್ನು ಆಡಿದ್ದೇವೆ. ಆಡಿದ 8 ಪಂದ್ಯಗಳಲ್ಲಿ 10 ಅಂಕಗಳನ್ನು ಪಡೆದರೆ, ಅದು ಪಾಯಿಂಟ್ಸ್‌ ಟೇಬಲ್‌ನಲ್ಲಿ ದೊಡ್ಡ ವ್ಯತ್ಯಾಸವನ್ನುಂಡು ಮಾಡುತ್ತದೆ. ಪ್ರತಿಯೊಂದು ಪಂದ್ಯದಲ್ಲಿಯೂ ಎರಡು ಅಂಕವನ್ನು ಪಡೆಯುವುದು ನಮ್ಮ ಉದ್ದೇಶವಾಗಿದೆ," ಎಂದು ವಿರಾಟ್‌ ಕೊಹ್ಲಿ ಹೇಳಿದ್ದಾರೆ.