ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs PBKS: ಆರ್‌ಸಿಬಿ ಗೆಲುವಿನ ಶ್ರೇಯ ಬೌಲರ್‌ಗಳಿಗೆ ಸಲ್ಲಬೇಕೆಂದ ರಜತ್‌ ಪಾಟಿದಾರ್‌!

Rajat Patidar on RCB's win against PBKS: ಪಂಜಾಬ್‌ ಕಿಂಗ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಭಾನುವಾರ೭ ವಿಕೆಟ್‌ಗಳಿಂದ ಗೆಲುವು ಪಡೆಯಿತು. ಈ ಪಂದ್ಯದ ಬಳಿಕ ಮಾತನಾಡಿದ ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ ಸಂತಸ ವ್ಯಕ್ತಪಡಿಸಿದರು. ಅಲ್ಲದೆ ಈ ಗೆಲುವಿನ ಶ್ರೇಯ ಬೌಲರ್‌ಗಳಿಗೆ ಸಲ್ಲಬೇಕೆಂದು ಹೇಳಿದ್ದಾರೆ.

ಆರ್‌ಸಿಬಿ ಗೆಲುವಿನ ಶ್ರೇಯ ಬೌಲರ್‌ಗಳಿಗೆ ಸಲ್ಲಬೇಕೆಂದ ರಜತ್‌ ಪಾಟಿದಾರ್‌!

ಬೌಲರ್‌ಗಳನ್ನು ಶ್ಲಾಘಿಸಿದ ರಜತ್‌ ಪಾಟಿದಾರ್‌.

Profile Ramesh Kote Apr 21, 2025 6:56 AM

ಚಂಡೀಗಢ: ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ದದ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆಲುವು ಪಡೆದ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡದ ನಾಯಕ ರಜತ್‌ ಪಾಟಿದಾರ್‌ (Rajat Patidar) ಸಂತಸ ವ್ಯಕ್ತಪಡಿಸಿದರು. ಈ ಪಂದ್ಯದ ಗೆಲುವಿನ ಶ್ರೇಯವನ್ನು ತಮ್ಮ ಬೌಲರ್‌ಗಳಿಗೆ ಸಲ್ಲಬೇಕೆಂದು ತಿಳಿಸಿದರು. ಅಲ್ಲದೆ ವಿರಾಟ್‌ ಕೊಹ್ಲಿ ಹಾಗೂ ರಜತ್‌ ಪಾಟಿದಾರ್‌ ಬ್ಯಾಟಿಂಗ್‌ನಲ್ಲಿ ತಮ್ಮ ಯೋಜನೆಯನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಿದ್ದಾರೆಂದು ತಿಳಿಸಿದ್ದಾರೆ. ಅಂದ ಹಾಗೆ ಪಂಜಾಬ್‌ ಕಿಂಗ್ಸ್‌ ಎದುರು ಗೆಲುವಿನ ಬಳಿಕ ಆರ್‌ಸಿಬಿ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೇರಿದೆ.

ಭಾನುವಾರ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದ ನಾಯಕ ರಜತ್‌ ಪಾಟಿದಾರ್‌ ಅವರ ತೀರ್ಮಾನವನ್ನು ಆರ್‌ಸಿಬಿ ಬೌಲರ್‌ಗಳು ಸಮರ್ಥಿಸಿಕೊಂಡರು. ಪವರ್‌ಪ್ಲೇನಲ್ಲಿ ಹಿನ್ನಡೆ ಅನುಭವಿಸಿದ್ದು ಬಿಟ್ಟರೆ ಮಧ್ಯಮ ಹಾಗೂ ಡೆತ್‌ ಓವರ್‌ಗಳಲ್ಲಿ ಆರ್‌ಸಿಬಿ ಬೌಲರ್‌ಗಳು ಪ್ರಾಬಲ್ಯ ಮೆರೆದರು. ಅದರಲ್ಲಿಯೂ ವಿಶೇಷವಾಗಿ ಕೃಣಾಲ್‌ ಪಾಂಡ್ಯ ಹಾಗೂ ಸುಯಶ್‌ ಶರ್ಮಾ ಅವರು ತಲಾ ಎರಡೆರಡು ವಿಕೆಟ್‌ಗಳನ್ನು ಕಿತ್ತರು. ಪಂಜಾಬ್‌ ಕಿಂಗ್ಸ್‌ ಪರ ಯಾವುದೇ ಒಬ್ಬ ಬ್ಯಾಟ್ಸ್‌ಮನ್‌ ದೊಡ್ಡ ಇನಿಂಗ್ಸ್‌ ಆಡಲು ಆರ್‌ಸಿಬಿ ಬೌಲರ್‌ಗಳು ಅವಕಾಶ ನೀಡಲಿಲ್ಲ. ಅಂತಿಮವಾಗಿ ಪಂಜಾಬ್‌ ಕಿಂಗ್ಸ್‌ 157 ರನ್‌ಗಳನ್ನು ಕಲೆ ಹಾಕಿತ್ತು.

RCB vs PBKS: ಕೊಹ್ಲಿ-ಪಡಿಕ್ಕಲ್‌ ಮಿಂಚು, ಪಂಜಾಬ್‌ ಕಿಂಗ್ಸ್‌ ಎದುರು ಸೇಡು ತೀರಿಸಿಕೊಂಡ ಆರ್‌ಸಿಬಿ!

ಪೋಸ್ಟ್‌ ಮ್ಯಾಚ್‌ ಪ್ರಸೆಂಟೇಷನ್‌ನಲ್ಲಿ ಮಾತನಾಡಿದ ರಜತ್‌ ಪಾಟಿದಾರ್‌, "ಇದರ ಶ್ರೇಯ ಬೌಲರ್‌ಗಳಿಗೆ ಸಲ್ಲುತ್ತದೆ. ದೇವದತ್‌ ಪಡಿಕ್ಕಲ್‌ ಮತ್ತು ವಿರಾಟ್‌ ಕೊಹ್ಲಿ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಿದ ರೀತಿ ಅದ್ಭುತವಾಗಿತ್ತು. ವಿವಿಧ ಹಂತಗಳಲ್ಲಿ ಬೌಲರ್‌ಗಳು ಕೊಡುಗೆ ತಂಡಕ್ಕೆ ನೀಡಿದ್ದಾರೆ, ಅವರು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಿದ ರೀತಿ ಅದ್ಭುತವಾಗಿದೆ," ಎಂದು ಶ್ಲಾಘಿಸಿದ್ದಾರೆ.

"ವಿಕೆಟ್ ಸ್ವಲ್ಪ ನಿಧಾನವಾಗಿದ್ದರಿಂದ ನಾವು ಬಿಗಿಯಾದ ರೇಖೆಯಲ್ಲಿ ಬೌಲ್‌ ಮಾಡಬೇಕಾಯಿತು. ಇದು ಎಲ್ಲಾ ಬೌಲರ್‌ಗಳಿಗೆ ಸಂದೇಶವಾಗಿತ್ತು. ನಾವು ನಿನ್ನೆ(ಶನಿವಾರ) ರಾತ್ರಿ ನಮ್ಮ ಫೀಲ್ಡಿಂಗ್ ಬಗ್ಗೆ ಮಾತನಾಡಿದ್ದೇವೆ. ಎಲ್ಲರೂ ತಮ್ಮ-ತಮ್ಮ ಪ್ರಯತ್ನವನ್ನು ಹಾಕಿದ್ದಾರೆ ಮತ್ತು ಅದು ಅದ್ಭುತವಾಗಿತ್ತು," ಎಂದು ಆರ್‌ಸಿಬಿ ನಾಯಕ ತಿಳಿಸಿದ್ದಾರೆ.

RCB vs PBKS: ʻಪಂದ್ಯ ಶ್ರೇಷ್ಠ ಪ್ರಶಸ್ತಿ ನನಗಲ್ಲ, ಕನ್ನಡಿಗನಿಗೆ ಸಲ್ಲಬೇಕಿತ್ತುʼ-ವಿರಾಟ್‌ ಕೊಹ್ಲಿ!

ಆರ್‌ಸಿಬಿ ತಂಡ ತನ್ನ ತವರು ಅಂಗಣ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಸತತವಾಗಿ ಸೋಲು ಅನುಭವಿಸಿದೆ. ಈ ಮೂರೂ ಪಂದ್ಯಗಳಲ್ಲಿ ಆರ್‌ಸಿಬಿ ನಾಯಕ ಟಾಸ್‌ ಸೋತಿದ್ದರು. ಈ ಬಗ್ಗೆ ಪೋಸ್ಟ್‌ ಪ್ರಸೆಂಟೇಷನ್‌ನಲ್ಲಿ ರಜತ್‌ ಪಾಟಿದಾರ್‌ ಮಾತನಾಡಿದ್ದಾರೆ.

"ನಾನು ಅಲ್ಲಿ ಟಾಸ್ ಗೆಲ್ಲಲು ಬಯಸುತ್ತೇನೆ ( ಎಂ ಚಿನ್ನಸ್ವಾಮಿ ಸ್ಟೇಡಿಯಂ). ನಾವು ನಮ್ಮ ತವರು ನೆಲದಲ್ಲಿ ಉತ್ತಮ ಕ್ರಿಕೆಟ್ ಆಡಲು ಪ್ರಯತ್ನಿಸುತ್ತೇವೆ, ಅಲ್ಲಿ ನಮ್ಮ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ," ಎಂದು ರಜತ್‌ ಪಾಟಿದಾರ್‌ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

RCB vs PBKS: ಆರ್‌ಸಿಬಿಯನ್ನು ಗೆಲ್ಲಿಸಿ ಶ್ರೇಯಸ್‌ ಅಯ್ಯರ್‌ಗೆ ಕೌಂಟರ್‌ ಕೊಟ್ಟ ವಿರಾಟ್‌ ಕೊಹ್ಲಿ!

ಪಂಜಾಬ್‌ ಕಿಂಗ್ಸ್‌ ನೀಡಿದ್ದ 158 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಫಿಲ್‌ ಸಾಲ್ಟ್‌ ವಿಕೆಟ್‌ ಬಹುಬೇಗ ಕಳೆದುಕೊಂಡರೂ ವಿರಾಟ್‌ ಕೊಹ್ಲಿ (73*) ಹಾಗೂ ದೇವದತ್‌ ಪಡಿಕ್ಕಲ್‌ (61 ರನ್‌) ಅವರ ಅರ್ಧಶತಕಗಳ ಬಲದಿಂದ ಇನ್ನು 7 ಎಸೆತಗಳು ಬಾಕಿ ಇರುವಂತೆ ಗೆದ್ದು ಬೀಗಿತು. ಈ ಪಂದ್ಯದ ಗೆಲುವಿನ ಬಳಿಕ ಆರ್‌ಸಿಬಿ 10 ಅಂಕಗಳೊಂದಿಗೆ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇಸ್ಥಾನಕ್ಕೆ ಲಗ್ಗೆ ಇಟ್ಟಿದೆ.