Harbhajan daughter: ಕೊಹ್ಲಿಗೆ ಭಾವನಾತ್ಮಕ ಸಂದೇಶ ಕಳುಹಿಸಿದ ಹರ್ಭಜನ್ ಸಿಂಗ್ ಪುತ್ರಿ
2011ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಕೊಹ್ಲಿ, ಭಾರತ ಪರ 123 ಪಂದ್ಯಗಳಲ್ಲಿ 46.85ರ ಸರಾಸರಿಯಲ್ಲಿ 9230 ರನ್ ಕಲೆಹಾಕಿದ್ದಾರೆ. ಇದರಲ್ಲಿ 30 ಶತಕ, 31 ಅರ್ಧಶತಕಗಳೂ ಒಳಗೊಂಡಿವೆ. 10 ಸಾವಿರ ರನ್ ಮೈಲುಗಲ್ಲು ಸಾಧಿಸುವ ಬಯಕೆ ಹೊಂದಿದ್ದ ಕೊಹ್ಲಿ, ಅದಕ್ಕೂ ಮುನ್ನವೇ ನಿವೃತ್ತಿ ಪ್ರಕಟಿಸಿ ಅಚ್ಚರಿ ಮೂಡಿಸಿದ್ದರು.


ಮುಂಬಯಿ: ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಸಾಲಲ್ಲಿ ಗುರುತಿಸಿಕೊಳ್ಳುವ, ಭಾರತೀಯ ಟೆಸ್ಟ್ ತಂಡದ ಅತ್ಯಂತ ಯಶಸ್ವಿ ನಾಯಕ ವಿರಾಟ್ ಕೊಹ್ಲಿ(Virat Kohli) ಅವರು ಇತ್ತೀಚೆಗೆ ಟೆಸ್ಟ್ ಮಾದರಿ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದರು. ಅವರ ಈ ದಿಢೀರ್ ನಿರ್ಧಾರ ಹಲವರಿಗೆ ಅಚ್ಚರಿ ಮೂಡಿಸಿತ್ತು. ಹರ್ಭಜನ್ ಸಿಂಗ್ ಪುತ್ರಿ(Harbhajan daughter) ಕೂಡ ಕೊಹ್ಲಿಗೆ ನಿವೃತ್ತಿ ಕುರಿತು ಸಂದೇಶ ಕಳುಹಿಸಿದ್ದಾಗಿ ಅವರು ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಸಂದೇಶಕ್ಕೆ ಕೊಹ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಸಿದ್ದರು ಎಂದು ಹರ್ಭಜನ್ ಹೇಳಿದಾರೆ.
"ನಾನು ಟ್ವೀಟ್ ಮಾಡಿ ವಿರಾಟ್ ಯಾಕೆ? ನೀವು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದೀರಿ? ಎಂದು ಹೇಳಿದೆ. ಇದೇ ವೇಳೆ ನನ್ನ ಮಗಳು ಹಿನಾಯಾ(Hinaya) ಕೂಡ 'ಅಪ್ಪಾ, ವಿರಾಟ್ ಯಾಕೆ ನಿವೃತ್ತಿ ಹೊಂದಿದ್ದಾರೆ?' ಎಂದು ಕೇಳಿದಳು ಎಂದು ಸಂದೇಶ ಕಳುಹಿಸಿದ್ದೆ. ಈ ವೇಳೆ ವಿರಾಟ್ ಮುಗುಳ್ನಗುವಿನ ಎಮೊಜಿ ಕಳುಹಿಸಿ ಮಗು, ಇದು ಸಮಯ' ಎಂದು ಉತ್ತರಿಸಿದ್ದರು" ಎಂದು ಹರ್ಭಜನ್ ಸಿಂಗ್ ಸಂದರ್ಶನದಲ್ಲಿ ಹೇಳಿಕೊಂಡರು.
2011ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಕೊಹ್ಲಿ, ಭಾರತ ಪರ 123 ಪಂದ್ಯಗಳಲ್ಲಿ 46.85ರ ಸರಾಸರಿಯಲ್ಲಿ 9230 ರನ್ ಕಲೆಹಾಕಿದ್ದಾರೆ. ಇದರಲ್ಲಿ 30 ಶತಕ, 31 ಅರ್ಧಶತಕಗಳೂ ಒಳಗೊಂಡಿವೆ. 10 ಸಾವಿರ ರನ್ ಮೈಲುಗಲ್ಲು ಸಾಧಿಸುವ ಬಯಕೆ ಹೊಂದಿದ್ದ ಕೊಹ್ಲಿ, ಅದಕ್ಕೂ ಮುನ್ನವೇ ನಿವೃತ್ತಿ ಪ್ರಕಟಿಸಿ ಅಚ್ಚರಿ ಮೂಡಿಸಿದ್ದರು.
ಇದನ್ನೂ ಓದಿ IPL 2025: ಪಂಜಾಬ್ ತಂಡದ ವಿರುದ್ಧ ವಿಶೇಷ ದಾಖಲೆ ಬರೆಯಲು ಸಜ್ಜಾದ ಕೊಹ್ಲಿ
2024ರ ಟಿ20 ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಿಂದ ವಿದಾಯ ಹೇಳಿದ್ದ ವಿರಾಟ್, ಇನ್ನು ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಮುಂದುವರಿಯಲಿದ್ದಾರೆ. ಜೊತೆಗೆ ಐಪಿಎಲ್ನಲ್ಲೂ ಅವರು ಕಣಕ್ಕಿಳಿಯಲಿದ್ದಾರೆ.