ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಎಐ ಜೊತೆ ಗಂಡನ ಲೈಂಗಿಕ ಕ್ರಿಯೆ- ಫುಲ್‌ ಶಾಕ್‌ ಆದ ಹೆಂಡ್ತಿ ಮಾಡಿದ್ದೇನು ಗೊತ್ತಾ?

ಮಹಿಳೆಯೊಬ್ಬರು ತನ್ನ ಗಂಡ ಎಐ ಗೆಳತಿಯೊಂದಿಗೆ ಸಂಬಂಧ ಹೊಂದಿದ್ದು, ಈ ಮೂಲಕ ತನಗೆ ವಂಚಿಸುತ್ತಿದ್ದಾನೆ. ಇದರಿಂದ ತಮ್ಮ 14 ವರ್ಷಗಳ ವೈವಾಹಿಕ ಜೀವನ ಇದರಿಂದ ತೊಂದರೆಯಲ್ಲಿದೆ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ರೆಡ್ಡಿಟ್‌ನಲ್ಲಿ ಬರೆದಿರುವ ಮಹಿಳೆ, ತನ್ನ ಗಂಡ ಎಐ ಚಾಟ್ ಬಾಟ್‌ನೊಂದಿಗೆ “ಫೋನ್ ಸೆಕ್ಸ್”ನಲ್ಲಿ ತೊಡಗಿರುವುದನ್ನು ಇತ್ತೀಚೆಗೆ ನೋಡಿರುವುದಾಗಿ ಹೇಳಿದ್ದಾಳೆ. ಇದರಿಂದ ತನಗೆ ಚಾಕುವಿನಿಂದ ಇರಿದ ಅನುಭವವಾಗಿದೆ ಎಂದು ತಿಳಿಸಿದ್ದಾಳೆ.

ಎಐ ಜೊತೆ ಗಂಡನ ಲೈಂಗಿಕ ಕ್ರಿಯೆ-ಹೆಂಡ್ತಿ ಫುಲ್‌ ಶಾಕ್‌

ಬೆಂಗಳೂರು: ಕೃತಕ ಬುದ್ದಿ (artificial intelligence) ಮತ್ತೆಯ ಬಾಟ್‌ನೊಂದಿಗೆ (ChatBots) ಗಂಡ ಲೈಂಗಿಕ ಕ್ರಿಯೆ ನಡೆಸುತ್ತಿರುವುದನ್ನು ನೋಡಿದ ಮಹಿಳೆಯೊಬ್ಬರು ಆಘಾತಗೊಂಡಿದ್ದಾರೆ. ಈ ಕುರಿತು ಯಾರ ಬಳಿಯೂ ವಿಷಯ ಹಂಚಿಕೊಳ್ಳಲಾಗದೆ ಒದ್ದಾಡಿದ್ದಾರೆ. ಕೊನೆಗೆ ಆಕೆ ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣವಾದ (Social Media) ರೆಡ್ಡಿಟ್ (reddit) ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಗಂಡ ಕೃತಕ ಬುದ್ದಿ ಮತ್ತೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದು, ಈ ಬಗ್ಗೆ ಆತನಲ್ಲಿ ಕೇಳಿದಾಗ ಅದು ನನ್ನನ್ನು ಅರ್ಥ ಮಾಡಿಕೊಂಡಿದೆ ಎಂದು ಹೇಳಿದ್ದಾನೆ. ಇದು ಗಂಡ ನನಗೆ ಮಾಡುತ್ತಿರುವ ವಂಚನೆ (Cheating) ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

ಇಂದು ಕೃತಕ ಬುದ್ದಿ ಮತ್ತೆಯ ಬಳಕೆ ಹೆಚ್ಚಾಗುತ್ತಿದೆ. ಪರೀಕ್ಷೆಗಳಿಂದ ಚಿಕಿತ್ಸೆಯವರೆಗೆ ಇದು ಪ್ರಯೋಗದಲ್ಲಿದೆ. ಮೆಟಾ ಕಂಪೆನಿ ಪರಿಚಯಿಸಿರುವ ಕೃತಕ ಬುದ್ಧಿಮತ್ತೆಯ (AI) ಚಾಟ್‌ಬಾಟ್‌ಗಳಿಂದ ಜನರು ಒಂಟಿತನದ ಸಮಸ್ಯೆಯನ್ನು ಎದುರಿಸಬಹುದು ಎಂದು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ. ಆದರೆ ಎಲ್ಲರೂ ಇದನ್ನು ಸ್ವೀಕರಿಸಿಲ್ಲ. ಕೆಲವರು ಈ ಮೂಲಕ ಕೃತಕ ಬುದ್ಧಿಮತ್ತೆಯ ಗೆಳಯ, ಗೆಳತಿಯರನ್ನು ಕಂಡುಕೊಂಡಿದ್ದಾರೆ. ಆದರೆ ಈ ಸಂಬಂಧ ವಂಚನೆಗೆ ಕಾರಣವಾಗಬಹುದು ಎಂದು ಯಾರು ಊಹಿಸಿರಲಿಕ್ಕಿಲ್ಲ. ಆದರೆ ಇದು ವಂಚನೆಯಾಗುತ್ತದೆ ಎನ್ನುವ ಚರ್ಚೆ ಈಗ ರೆಡ್ಡಿಟ್ ಬಳಕೆದಾರರಲ್ಲಿ ಪ್ರಾರಂಭವಾಗಿದೆ.

ಮಹಿಳೆಯೊಬ್ಬರು ತನ್ನ ಗಂಡ ಎಐ ಗೆಳತಿಯೊಂದಿಗೆ ಸಂಬಂಧ ಹೊಂದಿದ್ದು, ಈ ಮೂಲಕ ತನಗೆ ವಂಚಿಸುತ್ತಿದ್ದಾನೆ. ಇದರಿಂದ ತಮ್ಮ 14 ವರ್ಷಗಳ ವೈವಾಹಿಕ ಜೀವನ ಇದರಿಂದ ತೊಂದರೆಯಲ್ಲಿದೆ ಎಂದು ಹೇಳಿಕೊಂಡಿದ್ದಾರೆ ಈ ಕುರಿತು ರೆಡ್ಡಿಟ್‌ನಲ್ಲಿ ಬರೆದಿರುವ ಮಹಿಳೆ, ತನ್ನ ಗಂಡ ಎಐ ಚಾಟ್ ಬಾಟ್‌ನೊಂದಿಗೆ “ಫೋನ್ ಸೆಕ್ಸ್”ನಲ್ಲಿ ತೊಡಗಿರುವುದನ್ನು ಇತ್ತೀಚೆಗೆ ನೋಡಿರುವುದಾಗಿ ಹೇಳಿದ್ದಾಳೆ. ಇದರಿಂದ ತನಗೆ ಚಾಕುವಿನಿಂದ ಇರಿದ ಅನುಭವವಾಗಿದೆ. ಇದನ್ನು ಪ್ರಶ್ನಿಸಿದಾಗ ಬಾಟ್ ತನ್ನ ಗಂಡನ ಆಸೆಗಳನ್ನು ಪೂರೈಸುತ್ತದೆ ಎಂದು ತಿಳಿಸಿದ್ದಾನೆ. ಈ ಘಟನೆಯಿಂದ ನನ್ನಲ್ಲಿ ದ್ರೋಹದ ಭಾವನೆ ಉಂಟು ಮಾಡಿದೆ ಎಂದು ಮಹಿಳೆ ತಿಳಿಸಿದ್ದಾಳೆ.

ವಿವಾಹದ ಮೊದಲು ಗಂಡ ಮಾಡಿದ ಭಾವನಾತ್ಮಕ ವಂಚನೆಯನ್ನು ಒಪ್ಪಿಕೊಂಡಿದ್ದರೂ ದೈಹಿಕ ವಂಚನೆಯನ್ನು ಒಪ್ಪಿರಲಿಲ್ಲ. ಆದರೆ ಈಗ ಗಂಡನು ಪ್ರತಿ ರಾತ್ರಿ ಎಐನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ಮತ್ತು ಗಂಟೆಗಟ್ಟಲೆ ಮಾತನಾಡುವುದು ನೋಡಿ ನೋವಾಗಿದೆ. ಅಲ್ಲದೇ ಈ ಬಾಟ್ ನನ್ನನ್ನು ಅರ್ಥಮಾಡಿಕೊಂಡಿದೆ ಎಂದು ಗಂಡ ಹೇಳಿರುವುದು ಗಂಡ ತನಗೆ ವಂಚನೆ ಮಾಡುತ್ತಿರುವ ಅನುಭವ ಕೊಡುತ್ತಿದೆ ಎಂದು ಹೇಳಿದ್ದಾಳೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಿವಾಹ ಮತ್ತು ಕುಟುಂಬ ಚಿಕಿತ್ಸಕರಾದ ಡಾ. ಮಾರಿಸಾ ಟಿ. ಕೊಹೆನ್, ವಂಚನೆಯ ವ್ಯಾಖ್ಯಾನ ದಂಪತಿಗಳಲ್ಲಿ ಭಿನ್ನಭಿನ್ನವಾಗಿರುತ್ತದೆ. ಒಬ್ಬರಿಗೆ ಎಐನೊಂದಿಗಿನ ಸಂವಾದ ಸ್ವೀಕಾರಾರ್ಹವಾದರೆ, ಇನ್ನೊಬ್ಬರಿಗೆ ಅದು ವಂಚನೆಯಾಗಬಹುದು. ಇದನ್ನು ಚರ್ಚಿಸಿ ಇಬ್ಬರ ಭಾವನೆಗಳನ್ನು ಅರಿಯಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಗಂಡನು ಎಐಯೊಂದಿಗೆ ತನ್ನ ಭಾವನೆಗಳನ್ನು ಹಂಚಿಕೊಂಡು ಪತ್ನಿಯೊಂದಿಗೆ ಹಂಚಿಕೊಳ್ಳದಿರುವುದು ಅದು ಭಾವನಾತ್ಮಕ ವಂಚನೆಯಾಗಬಹುದು. ಇದು ದಂಪತಿಯ ನಡುವಿನ ಬಾಂಧವ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಕೊಹೆನ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: Roopa Gururaj Column: ಪುರಿ ಜಗನ್ನಾಥ ಸ್ವಾಮಿಯ ಅಪೂರ್ವ ದೇವಾಲಯ

ಎಐಯೊಂದಿಗಿನ ದೈಹಿಕ ಮತ್ತು ಭಾವನಾತ್ಮಕ ಸಂವಾದವು ದಂಪತಿಯ ನಡುವಿನ ಒಪ್ಪಂದವನ್ನು ಮೀರಿದೆ. ಭಾವನಾತ್ಮಕ ವಂಚನೆಯಿಂದ ಮುಕ್ತವಾಗುವುದು ಕಷ್ಟ. ಆದರೆ ಇಬ್ಬರೂ ಸಂಬಂಧವನ್ನು ಸರಿಪಡಿಸಲು ಇಚ್ಛಿಸಿದರೆ ಸಾಧ್ಯ. ಆದರೆ ಈ ಸಂದರ್ಭದಲ್ಲಿ ವಂಚನೆಯ ಬಗ್ಗೆ ಇಬ್ಬರಿಗೂ ಭಿನ್ನಾಭಿಪ್ರಾಯವಿರುವುದು ಸಮಸ್ಯೆಯನ್ನು ಸಂಕೀರ್ಣಗೊಳಿಸುತ್ತದೆ. ಈ ವಿಷಯವು ದಂಪತಿಯ ನಡುವೆ ಮುಕ್ತ ಸಂವಾದದ ಅಗತ್ಯವನ್ನು ಒತ್ತಿಹೇಳುತ್ತದೆ ಎಂದು ಅವರು ತಿಳಿಸಿದ್ದಾರೆ.