ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shivam Dube: ಅಥ್ಲೀಟ್‌ಗಳಿಗೆ 70 ಸಾವಿರ ಪ್ರೋತ್ಸಾಹಧನ ಘೋಷಿಸಿದ ಕ್ರಿಕೆಟಿಗ ಶಿವಂ ದುಬೆ

ತಮಿಳುನಾಡು ಕ್ರೀಡಾ ಪತ್ರಕರ್ತರ ಸಂಘವು ಆಯೋಜಿಸಿದ್ದ ಕ್ರೀಡಾಪಟುಗಳಿಗೆ ಪ್ರಶಸ್ತಿ ಮತ್ತು ಸ್ಕಾಲರ್‌ಷಿಪ್ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದುಬೆ, ಅಥ್ಲೀಟ್‌ಗಳಿಗೆ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದರು. ಸಂಘವು ಕ್ರೀಡಾಪಟುಗಳಿಗೆ ತಲಾ 30 ಸಾವಿರ ಸ್ಕಾಲರ್‌ಶಿಪ್ ನೀಡಿ ಗೌರವಿಸಿತ್ತು. ಇದಲ್ಲದೇ ದುಬೆ ಪ್ರತ್ಯೇಕವಾಗಿ 70 ಸಾವಿರ ನೀಡುವುದಾಗಿ ಘೋಷಿಸಿದರು.

ಅಥ್ಲೀಟ್‌ಗಳಿಗೆ 70 ಸಾವಿರ ಪ್ರೋತ್ಸಾಹಧನ ಘೋಷಿಸಿದ ಕ್ರಿಕೆಟಿಗ ಶಿವಂ ದುಬೆ

Profile Abhilash BC Apr 23, 2025 7:16 AM

ಚೆನ್ನೈ: ಟೀಮ್‌ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡದ ಆಲ್‌ರೌಂಡರ್‌ ಶಿವಂ ದುಬೆ(Shivam Dube) ಅವರು ಉದಯೋನ್ಮುಖ ಅಥ್ಲೀಟ್‌ಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ತಮಿಳುನಾಡಿನ 10 ಮಂದಿ ಉದಯೋನ್ಮುಖ ಅಥ್ಲೀಟ್‌ಗಳಿಗೆ ತಲಾ 70 ಸಾವಿರ ಪ್ರೋತ್ಸಾಹಧನ ನೀಡುವುದಾಗಿ ದುಬೆ ಘೋಷಿಸಿದ್ದಾರೆ. ಅವರ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಚಿಕ್ಕ ವಯಸ್ಸಿನಲ್ಲಿ ಪ್ರತಿಯೊಂದು ಪೈಸೆಯ ಗೌರವವೂ ದೊಡ್ಡದೇ. ಅದರಿಂದ ಪ್ರೇರಣೆಗೊಂಡು ದೊಡ್ಡ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ದುಬೆ ಹೇಳಿದರು.

ತಮಿಳುನಾಡು ಕ್ರೀಡಾ ಪತ್ರಕರ್ತರ ಸಂಘವು ಆಯೋಜಿಸಿದ್ದ ಕ್ರೀಡಾಪಟುಗಳಿಗೆ ಪ್ರಶಸ್ತಿ ಮತ್ತು ಸ್ಕಾಲರ್‌ಷಿಪ್ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದುಬೆ, ಅಥ್ಲೀಟ್‌ಗಳಿಗೆ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದರು. ಸಂಘವು ಕ್ರೀಡಾಪಟುಗಳಿಗೆ ತಲಾ 30 ಸಾವಿರ ಸ್ಕಾಲರ್‌ಶಿಪ್ ನೀಡಿ ಗೌರವಿಸಿತ್ತು. ಇದಲ್ಲದೇ ದುಬೆ ಪ್ರತ್ಯೇಕವಾಗಿ 70 ಸಾವಿರ ನೀಡುವುದಾಗಿ ಘೋಷಿಸಿದರು.

ಪಿ.ಬಿ. ಅಭಿನಂದನ್ (ಟೇಬಲ್ ಟೆನಿಸ್), ಕೆ.ಎಸ್‌. ವೆನಿಸಾ ಶ್ರೀ (ಆರ್ಚರಿ), ಮುತ್ತುಮೀನಾ ವೆಲ್ಲಾಸಾಮಿ (ಪ್ಯಾರಾ ಅಥ್ಲೆಟಿಕ್ಸ್), ಶಮೀನಾ ರಿಯಾಜ್ (ಸ್ಕ್ವಾಷ್), ಆರ್.ಕೆ. ಜಯಂತ್, ಎಸ್‌. ನಂದನ್ (ಇಬ್ಬರೂ ಕ್ರಿಕೆಟ್), ಪಿ. ಕಮಲಿ (ಸರ್ಫಿಂಗ್), ಆರ್. ಅಭಿನಯ, ಆರ್‌.ಸಿ. ಜಿತಿನ್ ಅರ್ಜುನನ್ (ಇಬ್ಬರೂ ಅಥ್ಲೆಟಿಕ್ಸ್), ಎ. ತಕ್ಷಾಂತ್ (ಚೆಸ್) ಪ್ರಶಸ್ತಿ ಪಡೆದ ಕ್ರೀಡಾಪಟುಗಳು.

ಇದನ್ನೂ ಓದಿ IPL 2025 Points Table: ದ್ವಿತೀಯ ಸ್ಥಾನದಲ್ಲೇ ಮುಂದುವರಿದ ಡೆಲ್ಲಿ ಕ್ಯಾಪಿಟಲ್ಸ್‌

ಹಾಲಿ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸತತ ಸೋಲಿನಿಂದ ಕಂಗೆಟ್ಟು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಶಿವಂ ದಿಬೆ ಕೂಡ ಈ ಬಾರಿ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ತೋರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕಳೆದ ಬಾರಿ ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ಸದ್ದು ಮಾಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಇವರ ಬ್ಯಾಟಿಂಗ್‌ ವೈಫಲ್ಯ ಕೂಡ ತಂಡದ ಹಿನ್ನಡೆಗೆ ಕಾರಣವಾಗಿದೆ.

ಸದ್ಯ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಇನ್ನು 6 ಪಂದ್ಯಗಳು ಬಾಕಿ ಉಳಿದಿವೆ. ಈ ಎಲ್ಲ 6 ಪಂದ್ಯಗಳನ್ನು ಗೆದ್ದರೆ 16 ಅಂಕ ಸಂಪಾದಿಸಲಿದೆ. ಆಗ ಪ್ಲೇ-ಆಫ್‌ ಅವಕಾಶವೊಂದು ಸಿಗಲಿದೆ. ಒಂದೊಮ್ಮೆ ಚೆನ್ನೈ ಮುಂದಿನ ಪಂದ್ಯ ಸೋತರೆ ಟೂರ್ನಿಯಿಂದ ಮೊದಲ ತಂಡವಾಗಿ ಬಹುತೇಕ ಹೊರಬೀಳಲಿದೆ.