ಜನಸ್ನೇಹಿ ಕಾರ್ಯಕ್ರಮಗಳ ಮೂಲಕ ಅಪರಾಧ ತಡೆ
ಜಿಲ್ಲಾ ಪೊಲೀಸ್ ಪರಿಚಯಿಸಿರುವ ಎಐ ಚಾಟ್‌ಬಾಟ್ ಅಸಿಸ್ಟೆಂಟ್ ವಾಟ್ಸ್ಪ್ ಕಾರ್ಯಕ್ರಮವು ಬಹುಶ: ಪೊಲೀಸ್ ಇಲಾಖೆಯಲ್ಲಿಯೇ ಪ್ರಥಮ ಪ್ರಯತ್ನವಾಗಿದೆ. ಕಾರಣ ಸ್ವಾತಂತ್ರö್ಯ ಬಂದು ೭೯ ವರ್ಷಗಳೇ ಕಳೆದರೂ ಪೊಲೀಸ್ ಇಲಾಖೆ ಎಂದರೆ ಸಾರ್ವಜನಿಕರಲ್ಲಿ ಹಿಂಜರಿಕೆ ಹೋಗಿಲ್ಲ. ತಮಗಾಗುತ್ತಿರುವ ಸಮಸ್ಯೆಗಳನ್ನು ನೇರವಾಗಿ ಠಾಣೆಗೆ ಬಂದು ಹೇಳಿಕೊಳ್ಳಲು ಮುಜುಗರ ಪಡುವುದೇ ಹೆಚ್ಚು.