ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಅಡುಗೆ ಕೋಣೆಯ ಸಿಂಕ್ ಈ ಐದು ವಸ್ತುಗಳನ್ನು ಇಡಲೇಬಾರದು

ಮನೆಯಲ್ಲಿ ವಾಸ್ತು (Vastu for home) ಅಂಶಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬೇಕಾದರೆ ಪ್ರತಿಯೊಂದು ವಸ್ತುಗಳನ್ನು ನಾವು ಇಡುವ ಸ್ಥಳದ ಬಗ್ಗೆ ಹೆಚ್ಚು ಯೋಚಿಸಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ಅಡುಗೆ ಮನೆಯ ಕೆಲವೊಂದು ಭಾಗಗಳಲ್ಲಿ ಕೆಲವು ವಸ್ತುಗಳನ್ನು ಸಂಗ್ರಹಿಸಿ ಇಡುವಂತಿಲ್ಲ ಎಂಬುದು ತಿಳಿದಿರಲಿ. ಇದರಲ್ಲಿ ಅಡುಗೆ ಮನೆಯ ಸಿಂಕ್ ಕೆಳಗೆ ಏನೆಲ್ಲಾ ಇಡಬಾರದು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಅಡುಗೆ ಕೋಣೆಯ ಸಿಂಕ್ ಕೆಳಗೆ ಇವುಗಳನ್ನು ಇಡಲೇಬಾರದು

ಅಡುಗೆ ಮನೆಯ (Vastu for Kitchen) ಕೆಲವೊಂದು ಕಡೆಗಳಲ್ಲಿ ಎಲ್ಲ ರೀತಿಯ ವಸ್ತುಗಳನ್ನು ಸಂಗ್ರಹಿಸುವಂತಿಲ್ಲ. ಅದರಲ್ಲೂ ಅಡುಗೆಕೋಣೆಯ ಸಿಂಕ್ (vastu for kitchen sink) ಅಡಿಯಲ್ಲಿ ಈ ಐದು ವಸ್ತುಗಳನ್ನು ಇಡಲೇ ಬಾರದು ಎನ್ನುತ್ತದೆ ವಾಸ್ತು ನಿಯಮಗಳು. ಅಡುಗೆ ಕೋಣೆಯ ಸಿಂಕ್ ಅಡಿಯಲ್ಲಿ ಏನನ್ನು ಸಂಗ್ರಹಿಸುತ್ತೀರಿ ಎಂಬುದರ ಬಗ್ಗೆ ಸದಾ ಜಾಗರೂಕರಾಗಿರಬೇಕು. ಯಾಕೆಂದರೆ ಈ ಸ್ಥಳ ಹೆಚ್ಚಾಗಿ ನಾವು ಕಡೆಗಣಿಸಿರುತ್ತೇವೆ. ಆದರೆ ವಾಸ್ತು ತತ್ತ್ವಗಳಲ್ಲಿ (Vastu tips) ಪ್ರತಿಯೊಂದು ಸ್ಥಳವು ಪ್ರಮುಖವಾಗಿರುತ್ತದೆ ಎನ್ನುವುದನ್ನು ನೆನಪಿನಲ್ಲಿಡಬೇಕು.

ಮನೆಗಳಲ್ಲಿ, ಸಾಮರಸ್ಯ ಮತ್ತು ಸಮತೋಲಿತ ವಾಸ ಸ್ಥಾನವನ್ನು ಸೃಷ್ಟಿಸುವಲ್ಲಿ ವಾಸ್ತು ಶಾಸ್ತ್ರವು ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲೂ ಮನೆಯಲ್ಲಿ ಸಕಾರಾತ್ಮಕತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಅಡುಗೆ ಕೋಣೆ ಪ್ರಮುಖ ಕೇಂದ್ರವಾಗಿದೆ. ಹೀಗಾಗಿ ಈ ಕೋಣೆ ಪೂಜನೀಯವೂ ಆಗಿರುತ್ತದೆ.

ಮನೆಯ ಪ್ರತಿಯೊಂದು ಮೂಲೆಯೂ ಶಕ್ತಿಯ ಹರಿವಿನ ಮೇಲೆ ಪ್ರಭಾವ ಬೀರುತ್ತದೆ. ಸಾಮಾನ್ಯವಾಗಿ ನಾವು ಕೆಲವೊಂದು ಸ್ಥಳಗಳನ್ನು ಶೇಖರಣಾ ಸ್ಥಳವೆಂದು ಪರಿಗಣಿಸಿರುತ್ತೇವೆ. ಅದರಲ್ಲೂ ಅಡುಗೆ ಮನೆಯ ಸಿಂಕ್ ಅಡಿಯಲ್ಲಿರುವ ಪ್ರದೇಶವನ್ನು ಸರಿಯಾಗಿ ಬಳಸದೇ ಇದ್ದರೆ ಅದು ಮನೆಯ ಸಂಪೂರ್ಣ ವಾಸ್ತು ಶಕ್ತಿಯ ಮೇಲೂ ಪರಿಣಾಮ ಬೀರಬಹುದು.

ವಾಸ್ತು ತತ್ತ್ವಗಳ ಪ್ರಕಾರ ಅಡುಗೆ ಮನೆಯ ಸಿಂಕ್ ಅಡಿಯಲ್ಲಿ ಈ ಐದು ವಸ್ತುಗಳನ್ನು ಇಡುವಂತಿಲ್ಲ.

1.ಕಸ ಮತ್ತು ತ್ಯಾಜ್ಯ ತೊಟ್ಟಿಗಳು

ಅಡುಗೆ ಮನೆಯ ಸಿಂಕ್ ಅಡಿಯಲ್ಲಿ ಕಸ ಅಥವಾ ತ್ಯಾಜ್ಯ ತೊಟ್ಟಿಗಳನ್ನು ಸಂಗ್ರಹಿಸಿಡುವುದು ಸಾಮಾನ್ಯ. ಆದರೆ ವಾಸ್ತು ಪ್ರಕಾರ ಇದು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡಬಹುದು. ತ್ಯಾಜ್ಯ ವಸ್ತುಗಳು ಕೊಳೆತ ಮತ್ತು ನಿಶ್ಚಲತೆಗೆ ಸಂಬಂಧಿಸಿವೆ. ಇದು ಅಡುಗೆ ಮನೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ನಿರ್ಬಂಧಿಸುತ್ತದೆ. ಕಸದ ತೊಟ್ಟಿಗಳನ್ನು ಚೆನ್ನಾಗಿ ಗಾಳಿ ಇರುವ ಪ್ರದೇಶದಲ್ಲಿ ಇರಿಸಬೇಕು. ಅಲ್ಲದೇ ಇದನ್ನು ಅಡುಗೆ ಮನೆಯ ಹೊರಗೆ ಇರಿಸುವುದು ಒಳ್ಳೆಯದು. ಯಾವುದೇ ನಕಾರಾತ್ಮಕ ಪರಿಣಾಮವನ್ನು ಕಡಿಮೆ ಮಾಡಲು ಸರಿಯಾದ ಮುಚ್ಚಳವನ್ನು ಹೊಂದಿರುವ ತೊಟ್ಟಿಗಳನ್ನು ಬಳಸುವುದು ಸೂಕ್ತ.

2.ಶುಚಿಗೊಳಿಸುವ ರಾಸಾಯನಿಕ ಮತ್ತು ಸಾಬೂನುಗಳು

ಮನೆಯನ್ನು ಶುಚಿಗೊಳಿಸಲು ಬಳಸಲಾಗುವ ಕೆಲವೊಂದು ವಸ್ತುಗಳನ್ನು ಸಿಂಕ್ ಅಡಿಯಲ್ಲಿ ಇಡುವುದು ಸೂಕ್ತವಲ್ಲ. ರಾಸಾಯನಿಕಗಳು ಋಣಾತ್ಮಕ ಶಕ್ತಿಯನ್ನು ಹೊಂದಿರುತ್ತವೆ. ಈ ವಸ್ತುಗಳನ್ನು ನೀರಿನ ಸಮೀಪ ಅಂದರೆ ಸಿಂಕ್ ಅಡಿಯಲ್ಲಿ ಇಡುವುದರಿಂದ ನಕಾರಾತ್ಮಕ ಕಂಪನಗಳನ್ನು ಉಂಟು ಮಾಡುತ್ತದೆ. ಇದು ವಾಸ್ತು ಅಂಶಗಳ ಸಮತೋಲನಕ್ಕೆ ಅಡ್ಡಿಪಡಿಸುತ್ತದೆ. ಶುಚಿತ್ವ ಮತ್ತು ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಆ ಶುಚಿಗೊಳಿಸುವ ರಾಸಾಯನಿಕ ಮತ್ತು ಸಾಬೂನುಗಳನ್ನು ಅಡುಗೆ ಮನೆಯ ಹೊರಗೆ ಕ್ಯಾಬಿನೆಟ್‌ಗಳಲ್ಲಿ ಇಡುವುದು ಸೂಕ್ತ.

4.ಆಹಾರ ವಸ್ತುಗಳುಾನಿಗೊಳಗಾದ ವಸ್ತುಗಳು

ಸಿಂಕ್ ಅಡಿಯಲ್ಲಿ ಯಾವುದೇ ರೀತಿಯ ಮುರಿದ ವಸ್ತುಗಳನ್ನು ಇಡುವುದು ಅಪೂರ್ಣ ಅಥವಾ ನಿಶ್ಚಲ ಶಕ್ತಿಯನ್ನು ಉತ್ತೇಜಿಸಿದಂತಾಗುತ್ತದೆ. ಈ ವಸ್ತುಗಳು ಮನೆಯಲ್ಲಿ ಶಕ್ತಿಯ ಸುಗಮ ಹರಿವಿಗೆ ಅಡ್ಡಿಯಾಗಬಹುದು. ಹೀಗಾಗಿ ಮುರಿದ ವಸ್ತುಗಳನ್ನು ಅಡುಗೆ ಮನೆಯಿಂದ ತಕ್ಷಣವೇ ಹೊರಗೆ ಹಾಕುವುದು ಸೂಕ್ತ. ಒಂದು ವೇಳೆ ಅಗತ್ಯವಿದ್ದರೆ ಅವುಗಳನ್ನು ದುರಸ್ತಿ ಮಾಡಿ. ಸಿಂಕ್ ಅಡಿಯ ಜಾಗವನ್ನು ಅಗತ್ಯ ವಸ್ತುಗಳಿಗೆ ಮೀಸಲಿಡಿ.

ಇವುಗಳನ್ನೂ ಓದಿ: Padma Shri Award: ಎಂಜಿನಿಯರಿಂಗ್‌ನಿಂದ ಆಧ್ಯಾತ್ಮದವರೆಗೆ.. ಒಬ್ಬರಿಗೆ ಪದ್ಮಶ್ರೀ, ಮತ್ತೊಬ್ಬರಿಗೆ ಐಐಟಿ ಬಾಬಾ ಪಟ್ಟ

3.ಆಹಾರ ವಸ್ತುಗಳು

ಸಿಂಕ್ ಅಡಿಯಲ್ಲಿ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸುವುದು ಸೂಕ್ತವಲ್ಲ. ಯಾಕೆಂದರೆ ಈ ಪ್ರದೇಶವು ತೇವಾಂಶ, ಸೋರಿಕೆ ಮತ್ತು ಮಾಲಿನ್ಯವನ್ನು ಉಂಟು ಮಾಡುತ್ತದೆ. ಇದರಿಂದ ಆಹಾರ ಸಾಮಗ್ರಿಗಳು ಬಹುಬೇಗನೆ ಹಾಳಾಗುತ್ತವೆ. ಅಲ್ಲದೇ ಅಡುಗೆ ಮನೆಯ ಸಕಾರಾತ್ಮಕ ಶಕ್ತಿಗೆ ತೊಂದರೆಯನ್ನು ಉಂಟು ಮಾಡುತ್ತದೆ. ಆಹಾರ ಪದಾರ್ಥಗಳನ್ನು ಸ್ವಚ್ಛ, ಒಣ ಕ್ಯಾಬಿನೆಟ್‌ಗಳಲ್ಲಿ ಇಡುವುದು ಸೂಕ್ತ.

5.ಪವಿತ್ರ ಅಥವಾ ಅಲಂಕಾರಿಕ ವಸ್ತುಗಳು

ಸಿಂಕ್ ಅಡಿಯಲ್ಲಿ ಪವಿತ್ರ ಚಿಹ್ನೆ, ವಿಗ್ರಹ ಅಥವಾ ಅಲಂಕಾರಿಕ ವಸ್ತುಗಳನ್ನು ಇಡುವುದು ವಾಸ್ತು ತತ್ತ್ವಗಳಿಗೆ ಸೂಕ್ತವಾದುದಲ್ಲ. ಅಡುಗೆ ಕೋಣೆಯ ಸಿಂಕ್ ಇರುವ ಸ್ಥಳವು ತ್ಯಾಜ್ಯ ಮತ್ತು ನೀರಿನೊಂದಿಗೆ ಸಂಬಂಧಿಸಿದೆ. ಇದು ಮನೆಯ ಶಕ್ತಿಯನ್ನು ಹೆಚ್ಚಿಸಲು ಅಥವಾ ಅಲಂಕರಿಸಲು ಉದ್ದೇಶಿಸಿರುವ ಯಾವುದಕ್ಕೂ ಸೂಕ್ತವಾದ ಸ್ಥಳವಲ್ಲ.