Viral News: ಮೂವರು ಹೆಂಡಿರ ಮುದ್ದಿನ ಗಂಡನಿಗೆ 54 ಮಕ್ಕಳು ಬೇಕಂತೆ; ಏನಿದು ಕತೆ...?
ತಿಂಗಳಿಗೆ 7 ಲಕ್ಷ ರೂಪಾಯಿ ಸಂಪಾದಿಸುವ ಜಪಾನಿನ ಈ ವ್ಯಕ್ತಿಗೆ ಮನೆ ಖರ್ಚು ನಿಭಾಯಿಸಲು 3 ಪತ್ನಿಯರ ಸಂಬಳ ಬೇಕಂತೆ. ಜೊತೆಗೆ 54 ಮಕ್ಕಳಿಗೆ ತಂದೆಯಾಗಿ ಜಪಾನಿನ ಶೋಗುನ್ ಟೊಕುಗವಾ ಇನಾರಿ ದಾಖಲೆಯನ್ನು ಮುರಿಯಬೇಕು ಎಂಬ ಆಸೆ ಕೂಡ ಇದೆಯಂತೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.
ಟೊಕಿಯೊ: ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಜಪಾನಿನ ವ್ಯಕ್ತಿಯೊಬ್ಬ ತಿಂಗಳಿಗೆ ಸುಮಾರು 1.25 ಮಿಲಿಯನ್ ಯೆನ್ (ಸುಮಾರು ರೂ 7 ಲಕ್ಷ) ಹಣ ಸಂಪಾದಿಸುತ್ತಾನಂತೆ. ಇಷ್ಟು ಹಣ ಸಂಪಾದಿಸಿದ್ರೂ ಮನೆಯ ಖರ್ಚುಗಳನ್ನೆಲ್ಲಾ ನೋಡಿಕೊಳ್ಳುವುದು ಆತನ ಮೂವರು ಪತ್ನಿಯರಂತೆ. ಇದರ ನಡುವೆ ಆತನಿಗೆ 54 ಮಕ್ಕಳನ್ನು ಮಾಡಿಕೊಳ್ಳುವ ಆಸೆ ಕೂಡ ಇದೆಯಂತೆ. ಇದ್ಯಾಕೆ 54 ಮಕ್ಕಳು ಎಂಬ ಪ್ರಶ್ನೆ ಮೂಡ್ತಿದೆಯಾ....? ಇದಕ್ಕೂ ಕಾರಣವಿದೆ. ಅದೇನೆಂದರೆ 53 ಮಕ್ಕಳಿಗೆ ತಂದೆಯಾದ ಜಪಾನಿನ ಶೋಗುನ್ ಟೊಕುಗವಾ ಇನಾರಿ ದಾಖಲೆಯನ್ನು ಮುರಿಯಬೇಕೆಂದು ಇವನ ಬಯಕೆಯಂತೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral News) ಆಗ್ತಿದೆ
ರ್ಯುಟಾ ವಟನಾಬೆ ಎಂಬ ಹೆಸರಿನ 36 ವರ್ಷದ ಈ ವ್ಯಕ್ತಿ ತನ್ನನ್ನು ತಾನು "ಹಿಮೋ ಒಟೊಕೊ" ಎಂದು ಕರೆದುಕೊಳ್ಳುತ್ತಾನಂತೆ. ‘ಆರ್ಥಿಕವಾಗಿ ಮಹಿಳೆಯನ್ನು ಅವಲಂಬಿಸಿರುವ ಸ್ಟ್ರಾಂಗ್ ಬಾಡಿ ಮ್ಯಾನ್ ಎಂಬುದು ಈ ಪದದ ಅರ್ಥ. ಈತನಿಗೆ ಮೂವರು ಹೆಂಡತಿಯರು ಹಾಗೂ ನಾಲ್ಕು ಮಕ್ಕಳಿದ್ದಾರಂತೆ. ಜಪಾನ್‍ನಲ್ಲಿ ಬಹುಪತ್ನಿತ್ವಕ್ಕೆ ಅನುಮತಿ ಇಲ್ಲವಾದ್ದರಿಂದ, ಆ ಮಹಿಳೆಯರನ್ನು ಕಾನೂನಿನ ಪ್ರಕಾರ ಅವನ ಹೆಂಡತಿಯರಲ್ಲ ಎನ್ನಲಾಗಿದೆ.
ಉತ್ತರ ಜಪಾನಿನ ಹೊಕ್ಕೈಡೋ ಪ್ರಾಂತ್ಯದಿಂದ ಬಂದ ಆತನಿಗೆ ನಾಲ್ಕನೇ ಪತ್ನಿಯೂ ಇದ್ದಾಳಂತೆ. ಅವಳು ವಟನಾಬೆಯೊಂದಿಗೆ ಆನ್ ಅಂಡ್ ಆಫ್ ಸಂಬಂಧವನ್ನು ಹೊಂದಿದ್ದಾಳಂತೆ. ಈತ ಪ್ರೌಢ ಶಿಕ್ಷಣವನ್ನು ಮುಗಿಸಿದ ನಂತರ, 20 ಕ್ಕೂ ಹೆಚ್ಚು ಅರೆಕಾಲಿಕ ಉದ್ಯೋಗಗಳನ್ನು ಮಾಡಿದ್ದಾನೆ ಎಂದು ಬಹಿರಂಗಪಡಿಸಿದ್ದಾನೆ. ಈತ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾನೆ. ಹಾಗೇ ಅದರಲ್ಲಿ ತನ್ನ ಬಹುಪತ್ನಿತ್ವದ ಜೀವನಶೈಲಿಯ ಕುರಿತು ಹಂಚಿಕೊಂಡಿದ್ದಾನೆ.
ಈತನ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. "ಮದುವೆ ಬೇಡ ಮತ್ತು ಮಕ್ಕಳು ಬೇಕು ಎನ್ನುವ ಈತ ಮಹಿಳೆಯರಿಗೆ ಹೇಗೆ ಉತ್ತಮ ಆಯ್ಕೆಯಾಗಬಹುದು ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ. "ನಾನು ಅವರ ಮಕ್ಕಳ ಯೋಗಕ್ಷೇಮದ ಬಗ್ಗೆ ಚಿಂತೆ ಮಾಡುತ್ತೇನೆ ಎಂದು ಇನ್ನೊಬ್ಬ ನೆಟ್ಟಿಗರು ಹೇಳಿದ್ದಾರೆ. ಹಿಂದಿನ ಸಂದರ್ಶನವೊಂದರಲ್ಲಿ, ವಟನಾಬೆ ಹೆಚ್ಚು ಮಕ್ಕಳನ್ನು ಪಡೆಯುವುದಕ್ಕಾಗಿ ವಾರದಲ್ಲಿ 28 ಕ್ಕೂ ಹೆಚ್ಚು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾನೆ ಎಂದು ಬಹಿರಂಗಪಡಿಸಿದ್ದಾನೆ.
ಈ ಸುದ್ದಿಯನ್ನೂ ಓದಿ: Viral Video: ಜಪಾನ್‌ನಲ್ಲೂ 'ಮೈಸೂರು ಕೆಫೆ': ಕನ್ನಡತಿಯ ರಿಯಾಕ್ಷನ್ ಹೇಗಿತ್ತು ಗೊತ್ತಾ?
ಆಫ್ರಿಕಾದಲ್ಲೊಬ್ಬ ಬರೋಬ್ಬರಿ15 ಪತ್ನಿಯರು ಮತ್ತು 107 ಮಕ್ಕಳೊಂದಿಗೆ ಒಟ್ಟಿಗೆ ಜೀವನ ನಡೆಸುತ್ತಿರುವ ಸುದ್ದಿ ಕೆಲವು ದಿನಗಳ ಹಿಂದೆ ಭಾರೀ ಸುದ್ದಿ ಆಗಿತ್ತು. ಆಫ್ರಿಕಾದ (Africa) ಡೇವಿಡ್ ಸಕಾಯೋ ಕಲುಹಾನಾ ಎಂಬ ಈ ವ್ಯಕ್ತಿಗೆ ವಯಸ್ಸು 61 ಆಗಿದ್ದು, ಪಶ್ಚಿಮ ಕೀನ್ಯಾದಲ್ಲಿ (Kenya) ತನ್ನ 15 ಜನ ಹೆಂಡತಿಯರೊಂದಿಗೆ ವಾಸವಾಗಿದ್ದಾನೆ. ಈತ ತನ್ನನ್ನು 700 ಜನ ಹೆಂಡತಿಯರು 300 ಪ್ರೇಯಸಿಯರಿದ್ದ ಕಿಂಗ್ ಸೊಲೋಮನ್ ಜೊತೆ ಹೋಲಿಸಿಕೊಂಡಿದ್ದಾನೆ. ಡೇವಿಡ್ ಸಕಾಯೋ ಕಲುಹಾನಾ ಎಂಬ ಆಫ್ರಿಕನ್ ವ್ಯಕ್ತಿಗೆ 15 ಹೆಂಡತಿಯರು ಮತ್ತು 107 ಮಕ್ಕಳಿದ್ದಾರೆ.