Viral Video: ಅಯ್ಯಯ್ಯೋ.. ಗಾಂಧಿ ಬಿಟ್ಟು ಹೋದ್ರು..ಕುಡುಕರಿಬ್ಬರ ಗೋಳಾಟದ ವಿಡಿಯೊ ವೈರಲ್!
ಉತ್ತರ ಪ್ರದೇಶದ ಕನೌಜ್ ನಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ ಮುಂದೆ ಇತ್ತೀ ಚೆಗಷ್ಟೇ ಮಾರ್ಚ್ 13ರಂದು ಭೀಕರ ಅಪಘಾತ ಸಂಭವಿಸಿತ್ತು. ಬ್ಯಾಲೆಸ್ಟ್ ತುಂಬಿದ್ದ ಟ್ರಕ್ ನಿಯಂತ್ರಣ ತಪ್ಪಿ ಗಾಂಧಿ ಪ್ರತಿಮೆಗೆ ಢಿಕ್ಕಿ ಹೊಡೆದಿತ್ತು. ಹೀಗಾಗಿ ಗಾಂಧಿ ಪ್ರತಿಮೆ ಭಾಗಶಃ ಹಾನಿಯಾಗಿದ್ದು ಅದನ್ನು ಸಂಪೂರ್ಣ ತೆಗೆದು ಹಾಕಲಾಗಿತ್ತು. ಜನನಿಬಿಡ ರಸ್ತೆ ಮುಂಭಾಗದಲ್ಲಿಯೇ ಈ ಪ್ರತಿಮೆ ಕೆಡವಿದ್ದ ಬಳಿಕ ಕುಡುಕರಿಬ್ಬರು ರಸ್ತೆ ಮಧ್ಯೆಯೇ ಗೋಳಾಡಿ ಅತ್ತಿದ್ದಾರೆ.


ಲಖನೌ: ಗುಂಡಿನ ಮತ್ತಿನಲ್ಲಿ ಕುಡುಕರಿಬ್ಬರು ಧ್ವಂಸಗೊಂಡ ಗಾಂಧಿ ಪ್ರತಿಮೆ ಮುಂದೆ ಗೋಳಾಡುತ್ತಿರುವ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್(Viral Video) ಆಗಿದೆ. ಉತ್ತರ ಪ್ರದೇಶದ ಕನೌಜ್‌ನಲ್ಲಿ ಈ ಘಟನೆ ನಡೆದಿದ್ದು, ಕುಡುಕರಿಬ್ಬರು ನಡುರಸ್ತೆಯಲ್ಲೇ ಒಬ್ಬರನ್ನೊಬ್ಬರು ತಬ್ಬಿಕೊಂಡು ಆಕ್ರಂದಿಸುತ್ತಿರುವ ದೃಶ್ಯ ನೋಡಿ ನೆಟ್ಟಿಗರೇ ದಂಗಾಗಿದ್ದಾರೆ. ಅಯ್ಯಯ್ಯೋ ಗಾಂಧೀಜಿ ನಮ್ಮನ್ನು ಬಿಟ್ಟು ಹೋದರು ಎಂದು ಇಬ್ಬರು ಜೋರಾಗಿ ಅತ್ತಿದ್ದಾರೆ. ಧ್ವಂಸಗೊಂಡಿರುವ ಗಾಂಧಿ ಪ್ರತಿಮೆ ಕಂಡು ಈ ಮಟ್ಟಿಗೆ ರೋಧಿಸುವ ವಿಡಿಯೊ ಇದೀಗ ಸಿಕ್ಕ ಪಟ್ಟೆ ಟ್ರೆಂಡಿಂಗ್‌ನಲ್ಲಿದ್ದು ಮದ್ಯದ ಅಮಲಿನಲ್ಲಿ ಈ ರೀತಿಯಾಗಿ ವರ್ತಿ ಸುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಕನೌಜ್ ನಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ ಮುಂದೆ ಇತ್ತೀಚೆಗಷ್ಟೇ ಮಾರ್ಚ್ 13ರಂದು ಭೀಕರ ಅಪಘಾತ ಸಂಭವಿಸಿತ್ತು. ಬ್ಯಾಲೆಸ್ಟ್ ತುಂಬಿದ್ದ ಟ್ರಕ್ ನಿಯಂತ್ರಣ ತಪ್ಪಿ ಗಾಂಧಿ ಪ್ರತಿಮೆಗೆ ಢಿಕ್ಕಿ ಹೊಡೆದಿತ್ತು. ಹೀಗಾಗಿ ಗಾಂಧಿ ಪ್ರತಿಮೆ ಭಾಗಶಃ ಹಾನಿಯಾಗಿದ್ದು ಅದನ್ನು ಸಂಪೂರ್ಣ ತೆಗೆದು ಹಾಕಲಾಗಿತ್ತು. ಜನನಿಬಿಡ ರಸ್ತೆ ಮುಂಭಾಗದಲ್ಲಿಯೇ ಈ ಪ್ರತಿಮೆ ಕೆಡವಿದ್ದ ಬಳಿಕ ಕುಡುಕರಿಬ್ಬರು ರಸ್ತೆ ಮಧ್ಯೆಯೇ ಗೋಳಾಡಿ ಅತ್ತಿದ್ದಾರೆ.
कन्नौज के तिर्वा में एक चौराहे पर ट्रक की टक्कर से गांधी प्रतिमा टूट गई शनिवार को शराबियों ने गांधी प्रतिमा टूटने पर रो कर अफसोस जताया। #Kannauj #MahatmaGandhi @NBTLucknow pic.twitter.com/viHokfjAGr
— Praveen Mohta (@MohtaPraveenn) March 15, 2025
ಹೋಳಿ ಹಬ್ಬದ ಸಂಭ್ರಮದಲ್ಲಿ ಮದ್ಯಪಾನ ಸೇವಿಸಿದ್ದ ಇಬ್ಬರು ಪುರುಷರು ರಸ್ತೆ ಮಧ್ಯೆಯಲ್ಲೇ ನಶೆಯಲ್ಲಿ ತೇಲಾಡಿದ್ದಾರೆ. ಗಾಂಧಿ ಪ್ರತಿಮೆ ದ್ವಂಸ ವಾಗಿದ್ದು ಕಂಡು ಅಯ್ಯೋ ಗಾಂಧೀಜಿ ನಮ್ಮನ್ನು ಬಿಟ್ಟು ಹೋದರು ಎಂದು ರಸ್ತೆಯಲ್ಲಿ ಬಿದ್ದು ಹೊರಳಾಡಿದ್ದಾರೆ. ಬಳಿಕ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರನನ್ನು ಅಡ್ಡಗಟ್ಟಿ ಆತನನ್ನು ಕೂಡ ತಬ್ಬಿ ಹಿಡಿದು ಅಳುತ್ತಿದ್ದಾರೆ. ಇವರಿಬ್ಬರ ಈ ದೃಶ್ಯ ಕಂಡು ದಾರಿಹೋಕರೇ ತಬ್ಬಿಬ್ಬಾಗಿದ್ದು ಭಯಭೀತಗೊಂಡು ಕೆಲಜನ ಸೇರಿದ್ದಾರೆ.
ಇದನ್ನು ಓದಿ: Viral News: ಮಹಿಳಾ ಇನ್ಸ್‌ಪೆಕ್ಟರ್ ಕಾಲಿಗೆ ಬಿದ್ದ ಮಾಜಿ ಸಚಿವೆ ; ವಿಡಿಯೋ ವೈರಲ್
ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಈ ಗೋಳಾಟ ಕಂಡರೆ ಗಾಂಧೀಜಿ ಅವರಿಗೂ ಬೇಸರ ಆಗಬಹುದು ಮತ್ತೊರ್ವ ನೆಟ್ಟಿಗ ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ಈ ದೃಶ್ಯ ಗಾಂಧೀಜಿಯನ್ನು ವ್ಯಂಗ್ಯ ಮಾಡಿದಂತೆ... ದಯವಿಟ್ಟು ಯಾರು ಶೇರ್ ಮಾಡಬೇಡಿ ಎಂದು ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಆದ ಅಪಘಾತದಲ್ಲಿ ಗಾಂಧಿ ಪ್ರತಿಮೆಗೆ ಭಾರೀ ಹಾನಿಯಾಗಿದ್ದು, ಟ್ರಕ್ ಕೂಡ ಪಲ್ಟಿಯಾಗಿ ಜಖಂಗೊಂಡಿದೆ. ಮಾರ್ಚ್ 13ರ ರಾತ್ರಿಯೇ ಟ್ರಕ್‌ನಲ್ಲಿದ್ದ ಬ್ಯಾಲಸ್ಟ್ ಅನ್ನು ಅನ್ಲೋಡ್ ಮಾಡಿ ಬೇರೊಂದು ಗಾಡಿ ಮೂಲಕ ಸಾಗಿಸಲಾಗಿದ್ದು ಯಾವುದೇ ಪ್ರಾಣ ಹಾನಿ ಆಗಿರಲಿಲ್ಲ. ಆದರೆ ಘಟನೆ ಬಳಿಕ ಗಾಂಧಿ ಪ್ರತಿಮೆ ಇದ್ದ ಜಂಕ್ಷನ್ ತನ್ನ ಸಹಜ ಸೌಂದರ್ಯ ಕಳೆದು ಹೋಗಿದ್ದು ಗಾಂಧಿ ಪ್ರತಿಮೆ ಸಂಪೂರ್ಣ ಧ್ವಂಸವಾಗಿದೆ.