ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಆಮ್ಲೆಟ್ ತಯಾರಿಸಿದ ಬೀದಿ ಬದಿ ವ್ಯಾಪಾರಿಯನ್ನು ಜೈಲಿಗೆ ಕಳುಹಿಸಿ ಎಂದ ನೆಟ್ಟಿಗರು; ಕಾರಣವೇನು?

Viral Video: ಬೀದಿ ಬದಿಯ ವ್ಯಾಪಾರಿಯೊಬ್ಬ ಆಮ್ಲೇಟ್‍ಗೆ ಓರಿಯೋ ಬಿಸ್ಕತ್ತನ್ನು ಮಿಕ್ಸ್ ಮಾಡುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಚಿತ್ರ ಪಾಕಪದ್ಧತಿಯ ವಿಡಿಯೊ ನೋಡಿ ನೆಟ್ಟಿಗರು ಮುಖ ಸಿಂಡರಿಸಿದ್ದಾರೆ ಹಾಗೂ ಬೀದಿ ಬದಿ ವ್ಯಾಪಾರಿಯನ್ನು ಟೀಕಿಸಿದ್ದಾರೆ.

ಸಿಕ್ಕಾಪಟ್ಟೆ ವೈರಲ್‌ ಆಯ್ತು ಆಮ್ಲೆಟ್‌ ವಿಡಿಯೊ; ಏನಿದು ವಿಚಿತ್ರ ಪಾಕವಿಧಾನ?

Profile pavithra Mar 10, 2025 12:20 PM

ಹೊಸದಿಲ್ಲಿ: ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ವಿಚಿತ್ರ ಆಹಾರ ಪ್ರಯೋಗಗಳ ವಿಡಿಯೊ ಹರಿದಾಡುತ್ತಿರುತ್ತದೆ. ಇದರಲ್ಲಿ ಕೆಲವೊಂದು ಆಹಾರಪ್ರಿಯರನ್ನು ಆಕರ್ಷಿಸಿದರೆ ಇನ್ನು ಕೆಲವು ಶಾಕ್‌ ನೀಡುವ ಹಾಗೇ ಇರುತ್ತದೆ. ಇತ್ತೀಚೆಗಷ್ಟೇ ಬಿಸಿ ಬಿಸಿ ಟೀಗೆ ಮ್ಯಾಗಿ ಹಾಕಿದ ವಿಡಿಯೊವೊಂದು ಸಖತ್‌ ಸದ್ದು ಮಾಡಿತ್ತು. ಅದರ ಬೆನ್ನಲ್ಲೆ ಈಗ ಓರಿಯೋ ಬಿಸ್ಕೆಟ್‌ನಿಂದ ಆಮ್ಲೆಟ್‌ ತಯಾರಿಸುವ ವಿಡಿಯೊವೊಂದು ವೈರಲ್‌ ಆಗಿದೆ (Viral Video). ವಿಡಿಯೊವೊಂದರಲ್ಲಿ ಬೀದಿ ಬದಿಯ ವ್ಯಾಪಾರಿಯೊಬ್ಬ ಆಮ್ಲೇಟ್‍ಗೆ ಓರಿಯೋ ಬಿಸ್ಕತ್ತನ್ನು ಮಿಕ್ಸ್ ಮಾಡಿದ್ದಾನೆ. ಇದನ್ನು ನೋಡಿ ನೆಟ್ಟಿಗರು ಮುಖ ಕಿವುಚಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ಬೀದಿ ಬದಿ ವ್ಯಾಪಾರಿ ದೊಡ್ಡ ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆಯನ್ನು ಹಾಕಿದ್ದಾನೆ. ನಂತರ ಮೊಟ್ಟೆ ಮಿಶ್ರಿತ ಹಿಟ್ಟನ್ನು ಒಂದು ಬಟ್ಟಲಿನಲ್ಲಿ ಕಲಕಿ, ಅದನ್ನು ಬಾಣಲೆಯ ಮೇಲೆ ಹರಡಿ, ಸ್ವಲ್ಪ ಸಮಯ ಬೇಯಲು ಬಿಟ್ಟಿದ್ದಾನೆ. ಕೊನೆಗೆ ಆಮ್ಲೆಟ್ ಮೇಲೆ ಓರಿಯೋ ಬಿಸ್ಕೆಟ್‌ಗಳನ್ನು ಇಟ್ಟಿದ್ದಾನೆ. ಪ್ಯಾಕ್‍ನಲ್ಲಿರುವ ಎಲ್ಲ ಬಿಸ್ಕೆಟ್‌ಗಳನ್ನು ಆಮ್ಲೆಟ್‌ಗೆ ಹಾಕಿದ್ದಾನೆ. ಇದು ಬೆಂದು ಸ್ವಲ್ಪ ಕಂದು ಬಣ್ಣಕ್ಕೆ ಬಂದಾಗ ಅದನ್ನು ಪ್ಲೇಟ್‍ಗೆ ಹಾಕಿ ಅದರ ಮೇಲೆ ಸಾಸ್ ಹಾಕಿದ್ದಾನೆ.

ಫುಡ್ ವ್ಲಾಗರ್ ಶಿವಂ ಶರ್ಮಾ ಪೋಸ್ಟ್ ಮಾಡಿದ ರೀಲ್ ಈಗಾಗಲೇ 5 ಮಿಲಿಯನ್ ವ್ಯೂವ್ಸ್ ಪಡೆದುಕೊಂಡಿದೆ. ಈ ವಿಡಿಯೊ ನೋಡಿದವರು ಬೀದಿ ಬದಿ ವ್ಯಾಪಾರಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಟೀಕಿಸಿದ್ದಾರೆ. ಓರಿಯೊ ಆಮ್ಲೆಟ್ ಪಾಕವಿಧಾನವನ್ನು ಕೆಲವರು ಟೀಕಿಸಿದರೆ ಇನ್ನೂ ಕೆಲವರು ಈ ವಿಚಿತ್ರ ಆಹಾರ ಪ್ರಯೋಗಕ್ಕಾಗಿ ಅವನನ್ನು ಜೈಲಿಗೆ ಕಳುಹಿಸಬೇಕೆಂದು ಸಲಹೆ ನೀಡಿದ್ದಾರೆ.

ಈ ರೀತಿಯ ಆಹಾರ ತಯಾರಿಸುವುದು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿ ಬಿಟ್ಟಿದೆ. ಈ ಹಿಂದೆ ಬೀದಿಬದಿ ವ್ಯಾಪಾರಿಯೊಬ್ಬ 'ಜೀರಾ ಸೋಡಾ' ಮತ್ತು ಪುಡಿ ಮಾಡಿದ ಚಾಕೊಲೇಟ್ ಕ್ರೀಮ್ ಓರಿಯೋ ಕುಕೀಗಳಿಂದ ತಯಾರಿಸಿದ ಆಮ್ಲೆಟ್‍ ಅನ್ನು ತೋರಿಸುವ ವಿಲಕ್ಷಣ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ಆಮ್ಲೆಟ್‌ ಪ್ರಿಯರಲ್ಲಿ ಅಸಹ್ಯವನ್ನುಂಟು ಮಾಡಿತ್ತು.