Viral Video: ಚಿತ್ರಮಂದಿರಕ್ಕೆ ದೊಡ್ಡ ದೊಡ್ಡ ಪಾತ್ರೆ, ಡಬ್ಬಗಳನ್ನು ಹಿಡಿದುಕೊಂಡು ಬಂದ ಪ್ರೇಕ್ಷಕರು; ಕಾರಣವೇನು?
ಸೌದಿ ಅರೇಬಿಯಾದ ವಿಒಎಕ್ಸ್ ಸಿನೆಮಾಸ್‍ನಲ್ಲಿ ಅನಿಯಮಿತ ಪಾಪ್‍ಕಾರ್ನ್ ನೀಡುವುದಾಗಿ ಘೋಷಿಸಲಾಗಿದೆ. ಸಿಕ್ಕಿದ್ದೇ ಛಾನ್ಸ್ ಎಂದು ಜನ ಪಾಪ್‍ಕಾರ್ನ್ ಸಂಗ್ರಹಿಸಲು ದೊಡ್ಡ ದೊಡ್ಡ ಪಾತ್ರೆಗಳನ್ನು ತೆಗೆದುಕೊಂಡು ಚಿತ್ರಮಂದಿರಕ್ಕೆ ಹೋಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದೆ.
ರಿಯಾದ್: ಸಿನಿಮಾ ನೋಡಲು ಹೋದಾಗ ಸಾಮಾನ್ಯವಾಗಿ ಎಲ್ಲರೂ ಪಾಪ್‌ಕಾರ್ನ್ ತಿನ್ನಲು ಇಷ್ಟಪಡುತ್ತಾರೆ. ಪಾಪ್‌ಕಾರ್ನ್ ತಿನ್ನುತ್ತಾ ಸಿನಿಮಾ ನೋಡುವ ಖುಷಿಯೇ ಬೇರೆ. ಆದರೆ ದೊಡ್ಡ ದೊಡ್ಡ ಸಿನಿಮಾ ಥಿಯೇಟರ್‌ನಲ್ಲಿ ಪಾಪ್‌ಕಾರ್ನ್ ಕೂಡ ದುಬಾರಿಯಾಗಿರುತ್ತದೆ. ಸಿನಿಮಾ ನೋಡುವಾಗ ಎಷ್ಟು ಬೇಕಾದರೂ ಅಷ್ಟು ಪಾಪ್‌ಕಾರ್ನ್ ತಿನ್ನಬಹುದು ಎಂದು ಥಿಯೇಟರ್‌ನಲ್ಲಿ ಆಫರ್ ಕೊಟ್ಟರೆ ಯಾರು ತಾನೇ ಬೇಡ ಅಂತಾರೆ ಹೇಳಿ? ಹೌದು, ಸೌದಿ ಅರೇಬಿಯಾದ ಚಿತ್ರಮಂದಿರವೊಂದರಲ್ಲಿ ಅನಿಯಮಿತ ಪಾಪ್‍ಕಾರ್ನ್ ನೀಡುವುದಾಗಿ ಘೋಷಿಸಲಾಗಿದೆ. ಹೀಗಾಗಿ ಜನರು ಪಾಪ್‍ಕಾರ್ನ್ ಸಂಗ್ರಹಿಸಲು ದೊಡ್ಡ ಪಾತ್ರೆಗಳನ್ನು ತೆಗೆದುಕೊಂಡು ಚಿತ್ರಮಂದಿರಕ್ಕೆ ಹೋಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ (Viral Video) ಆಗಿದೆ.
ಸೌದಿ ಅರೇಬಿಯಾದ ವಿಒಎಕ್ಸ್ ಸಿನೆಮಾಸ್‍ನಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಸಿಸಿಟಿವಿಯಲ್ಲಿ ಜನರು ತಮ್ಮ ಮನೆಯಲ್ಲಿರುವ ದೊಡ್ಡ ದೊಡ್ಡ ಪಾತ್ರೆ, ಡ್ರಮ್‍ಗಳನ್ನು ತೆಗೆದುಕೊಂಡು ಬಂದು ಮತ್ತು ಪಾಪ್‍ಕಾರ್ನ್ ತುಂಬಿಸಿಕೊಳ್ಳಲು ಸಾಲಿನಲ್ಲಿ ನಿಂತಿರುವುದು ಸೆರೆಯಾಗಿತ್ತು.
ಚಿತ್ರಮಂದಿರವು ಕೇವಲ 30 ರಿಯಾಲ್ (700 ರೂ.)ಗೆ ಅನಿಯಮಿತ ಪಾಪ್‍ಕಾರ್ನ್ ಅನ್ನು ಆಫರ್ ಮಾಡಿದೆ. ವಿಡಿಯೊದಲ್ಲಿ ವ್ಯಕ್ತಿಯೊಬ್ಬ ತನ್ನ ತಲೆಯ ಮೇಲೆ ದೊಡ್ಡ ಗಾತ್ರದ ಪ್ಲಾಸ್ಟಿಕ್ ಡ್ರಮ್ ಅನ್ನು ಹೊತ್ತುಕೊಂಡು ಕೌಂಟರ್ ಕಡೆಗೆ ಹೋಗಿರುವುದು ಕೂಡ ಕಂಡು ಬಂದಿದೆ.
ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳ ಆಧಾರದ ಮೇಲೆ ಸೌದಿ ಅರೇಬಿಯಾದಲ್ಲಿ ಚಿತ್ರಮಂದಿರಗಳನ್ನು ವರ್ಷಗಳ ಕಾಲ ನಿಷೇಧಿಸಲಾಗಿತ್ತು. ಆದರೆ 35 ವರ್ಷಗಳ ಹಳೆಯ ನಿಷೇಧವನ್ನು 2018ರಲ್ಲಿ ತೆಗೆದುಹಾಕಲಾಯಿತು. ಆ ಮೂಲಕ ಜನರು ಚಿತ್ರಮಂದಿರಗಳಿಗೆ ಭೇಟಿ ನೀಡಲು ಮತ್ತು ಮನರಂಜನೆಗಾಗಿ ಚಲನಚಿತ್ರಗಳನ್ನು ಆನಂದಿಸಲು ಅನುವು ಮಾಡಿಕೊಡಲಾಗಿದೆ.
ಈ ಸುದ್ದಿಯನ್ನೂ ಓದಿ:Mahakumbh 2025: ಸೌದಿ ಶೇಖ್ ಅವತಾರದಲ್ಲಿ ಮಹಾಕುಂಭ ಮೇಳಕ್ಕೆ ಬಂದ ಯೂಟ್ಯೂಬರ್- ಸಾಧುಗಳಿಂದ ಬಿತ್ತು ಗೂಸಾ!
ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ (Mahakumbh 2025) ನಡೆಯುತ್ತಿದ್ದು, ಕೋಟ್ಯಂತರ ಭಕ್ತರು ಆಗಮಿಸುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಸದ್ಯ ಕುಂಭ ಮೇಳದಲ್ಲಿ ಐಐಟಿ ಬಾಬಾ, ಕೆಲ ನಾಗಾ ಸಾಧುಗಳು ಹಾಗೂ ಮೊನಾಲಿಸಾ ಸೇರಿದಂತೆ ಹಲವರು ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. ಇದೀಗ ಮಹಾ ಕುಂಭಮೇಳದಲ್ಲಿ ತಮಾಷೆಗಾಗಿ ದುಬೈ ಶೇಖ್‌ನಂತೆ ವೇಷ ಧರಿಸಿದ್ದ ಯೂಟ್ಯೂಬರ್ ಒಬ್ಬರನ್ನು ಸಾಧುಗಳು ಥಳಿಸಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದೆ.