Viral Video: ಫೋಟೊ ಕ್ರೇಜ್ ಇರ್ಬೇಕು, ಆದ್ರೆ ಇಷ್ಟಲ್ಲ...! ಯಾಕೆ ಅಂತೀರಾ? ಈ ವಿಡಿಯೊ ನೋಡಿ
ಚೀನಾ ಮೂಲದ 35 ವರ್ಷದ ಮಹಿಳೆಯೊಬ್ಬಳು ಶ್ರೀಲಂಕಾದಲ್ಲಿ ರೈಲು ಪ್ರಯಾಣದ ಸಮಯದಲ್ಲಿ ರೈಲಿನ ಬಾಗಿಲಿನಲ್ಲಿ ಬಾಗಿ ಫೋಟೋಗಳನ್ನು ಕ್ಲಿಕ್ಕಿಸುವಾಗ ಸುರಂಗದ ಗೋಡೆಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದಾಳೆ. ಅವಳ ಸ್ಥಿತಿ ಗಂಭೀರವಾಗಿದ್ದು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News)ಆಗಿದೆ.


ಕೊಲಂಬೊ: ರೀಲ್ಸ್ ಮಾಡುವುದು, ಸೆಲ್ಫಿ ತೆಗೆದುಕೊಳ್ಳುವುದು ಈಗ ಕ್ರೇಜ್ ಆಗಿದೆ. ಈ ರೀತಿ ಫೋಟೊ ಕ್ಲಿಕ್ಕಿಸಿಕೊಳ್ಳಲು ಹೋಗಿ ಇತ್ತೀಚೆಗೆ ಚೀನಾದ ಮಹಿಳೆಯೊಬ್ಬಳು ಜೀವಕ್ಕೆ ಕುತ್ತು ತಂದುಕೊಂಡ ಘಟನೆಯೊಂದು ನಡೆದಿದೆ. ಚೀನಾ ಮೂಲದ 35 ವರ್ಷದ ಮಹಿಳೆಯೊಬ್ಬಳು ಶ್ರೀಲಂಕಾದಲ್ಲಿ ರೈಲು ಪ್ರಯಾಣದ ಸಮಯದಲ್ಲಿ ಫೋಟೋಗಳನ್ನು ಕ್ಲಿಕ್ಕಿಸುವಾಗ ಸುರಂಗದ ಗೋಡೆಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದಾಳೆ. ಆಕೆ ರಜಾದಿನಗಳನ್ನು ಕಳೆಯಲು ಶ್ರೀಲಂಕಾಗೆ ಬಂದಿದ್ದು, ಅಲ್ಲಿ ರೈಲಿನಲ್ಲಿ ಪ್ರಯಾಣಿಸುವ ವೇಳೆ ಈ ದುರಂತ ಸಂಭವಿಸಿದೆ. ಫೋಟೊ ಕ್ಲಿಕ್ಕಿಸುವ ವೇಳೆ ಅವಳು ಸುರಂಗದ ಗೋಡೆಗೆ ಡಿಕ್ಕಿ ಹೊಡೆದು ನೇರವಾಗಿ ಹಳಿಗಳ ಮೇಲೆ ಬಿದ್ದು ಗಾಯಗೊಂಡಿದ್ದಾಳೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಓಯಾ ಮತ್ತು ಬದುಲ್ಲಾ ನಡುವಿನ ರೈಲ್ವೆ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಈ ದುರಂತದಲ್ಲಿ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ವರದಿಗಳ ಪ್ರಕಾರ, ಈ ಘಟನೆಯಿಂದ ಅವಳ ತಲೆ ಮತ್ತು ಕಾಲಿಗೆ ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾಳೆ ಎನ್ನಲಾಗಿದೆ. ಅವಳನ್ನು ತಕ್ಷಣ ದಿಯಾತಲವಾ ಬೇಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾದುಲ್ಲಾ ಬೋಧನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಈ ದುರಂತ ಘಟನೆಯ ದೃಶ್ಯ ಇಲ್ಲಿದೆ ನೋಡಿ...
In Sri Lanka a russian tourist wanted to take a "cool" photo hanging off the side of a moving train. She got the photo but failed to see the large rock and hit her head.
— 🚨⚡BroSINT 69™⚡🚨 (@osint_69) February 20, 2025
- 1 pic.twitter.com/OYRp3jtHvX
ಈ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಲಂಕಾದ ಅಧಿಕಾರಿಗಳು ಸುರಕ್ಷತಾ ಮಾರ್ಗಸೂಚಿಗಳ ಬಗ್ಗೆ ಮತ್ತೆ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರು ರೈಲಿನ ಬಾಗಿಲುಗಳಲ್ಲಿ ನಿಲ್ಲುವುದು, ನೇತಾಡುವುದು, ಬಾಗುವುದನ್ನು ತಪ್ಪಿಸುವಂತೆ ಒತ್ತಾಯಿಸಿದ್ದಾರೆ. ಶ್ರೀಲಂಕಾದಲ್ಲಿನ ಚೀನಾದ ರಾಯಭಾರ ಕಚೇರಿಯ ಅಧಿಕಾರಿಗಳು ಕೂಡ ಪ್ರಯಾಣಿಸುವಾಗ ಅನಗತ್ಯ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದೆ.
ಶ್ರೀಲಂಕಾ ಪ್ರವಾಸಿ ಚಾಲಕರ ಸಂಘದ ಮಾಜಿ ಕಾರ್ಯದರ್ಶಿ ಕ್ರಿಶ್, "ಇಂತಹ ಕ್ರಮಗಳು ಗಮನಾರ್ಹ ಅಪಾಯಗಳನ್ನುಂಟುಮಾಡುತ್ತವೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಹಲವಾರು ಗಾಯಗಳು ಮತ್ತು ಸಾವುನೋವುಗಳಿಗೆ ಕಾರಣವಾಗಿವೆ" ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ರೀತಿಯ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ರೈಲು ಪ್ರಯಾಣದ ಸಮಯದಲ್ಲಿ ರಮಣೀಯ ದೃಶ್ಯಗಳನ್ನು ಸೆರೆಹಿಡಿಯಲು ಪ್ರಯತ್ನಿಸುವಾಗ ಚೀನಾದ ಪ್ರವಾಸಿಯೊಬ್ಬ ಇದೇ ರೀತಿಯ ಅಪಘಾತಕ್ಕೆ ಬಲಿಯಾಗಿದ್ದಾನೆ. ಹಾಗೇ ಡಿಸೆಂಬರ್‌ನಲ್ಲಿ ಮಹಿಳಾ ಪ್ರವಾಸಿಯೊಬ್ಬರು ಹೊರಗೆ ಬಾಗಿ ರೈಲಿನ ಬಾಗಿಲಿನ ಹ್ಯಾಂಡ್ರೈಲ್‍ಗಳ ಬಳಿ ಕೈಗಳನ್ನು ಹಿಡಿದುಕೊಂಡು ರೀಲ್‍ಗಳನ್ನು ತಯಾರಿಸುವಾಗ ಅವಳು ರೈಲಿನಿಂದ ಕೆಳಗೆ ಬಿದ್ದಿದ್ದಳು. ಕೊಲಂಬೋದಲ್ಲಿ ವೆಲ್ಲವಟ್ಟೆ ಮತ್ತು ಬಂಬಲಪಿಟಿಯ ನಡುವಿನ ಕರಾವಳಿಯನ್ನು ದಾಟುವಾಗ ಈ ಘಟನೆ ನಡೆದಿದ್ದು, ಅವಳು ಪವಾಡಸದೃಶವಾಗಿ ಬದುಕುಳಿದ್ದಳಂತೆ.
ಈ ಸುದ್ದಿಯನ್ನೂ ಓದಿ:Viral Video: ಚಲಿಸುತ್ತಿದ್ದ ರೈಲಿನಲ್ಲಿ ಸ್ಟಂಟ್ ಮಾಡಿ ಜಾರಿಬಿದ್ದ ವ್ಯಕ್ತಿ; ಇದೆಂಥಾ ಹುಚ್ಚುತನ...? ವಿಡಿಯೊ ನೋಡಿ
ರೈಲಿನಲ್ಲಿ ರೀಲ್ಸ್ ಮಾಡುವುದು,ಸ್ಟಂಟ್ ಮಾಡುವುದು ಇತ್ತೀಚೆಗೆ ಹೆಚ್ಚಾಗಿವೆ. ಇದರಿಂದ ಪ್ರಾಣಕ್ಕೆ ಕುತ್ತು ತಂದುಕೊಂಡ ಘಟನೆಗಳು ನಡೆದಿವೆ. ಇತ್ತೀಚೆಗೆ ವೇಗವಾಗಿ ಚಲಿಸುತ್ತಿದ್ದ ರೈಲಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಲು ಸಹ ಪ್ರಯಾಣಿಕನ ಕೈ ಹಿಡಿದು ರೈಲಿನ ಕಿಟಿಕಿಯ ಬಳಿ ನೇತಾಡಿದ್ದಾನೆ. ಸ್ವಲ್ಪ ಸಮಯದವರೆಗೆ ನೇತಾಡಿದ ನಂತರ ಆತ ರೈಲಿನಿಂದ ಜಿಗಿದು ಕೆಳಗೆ ಬಿದ್ದಿದ್ದಾನೆ. ಅದೃಷ್ಟವಶಾತ್, ರೈಲು ಅಷ್ಟರಲ್ಲೇ ನಿಂತಿದ್ದರಿಂದ ದೊಡ್ಡ ಅಪಘಾತ ತಪ್ಪಿದೆ ಮತ್ತು ವ್ಯಕ್ತಿಗೆ ಯಾವುದೇ ರೀತಿಯ ತೀವ್ರವಾದ ಗಾಯಗಳಾಗಲಿಲ್ಲವಂತೆ.