Viral News: ರೀಲ್ಸ್‌ನಿಂದ ಹರಾಜಾಯ್ತು ಮಾನ; ಹೊಟ್ಟೆನೋವಿನ ನೆಪವೊಡ್ಡಿ ಕೊಡಗು ಟ್ರಿಪ್‌ಗೆ ಹೋದವ ಸಿಕ್ಕಿಬಿದ್ದ!
ಸುಳ‍್ಳು ಅನಾರೋಗ್ಯದ ನೆಪ ಹೇಳಿ ರಜೆ ತೆಗೆದುಕೊಂಡು ಪ್ರವಾಸಕ್ಕೆ ಹೋದ ಉದ್ಯೋಗಿಯೊಬ್ಬ ಕೆಲಸ ಕಳೆದುಕೊಂಡ ಪ್ರಸಂಗ ನಡೆದಿದೆ. ಪ್ರವಾಸದ ವೇಳೆ ಅಪರಿಚಿತನೊಬ್ಬ ಮಾಡಿದ ರೀಲ್ಸ್‌ನಿಂದ ಆತ ಸಿಕ್ಕಿಬಿದ್ದಿದ್ದಾನೆ. ಈ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಮ್ಯಾನೇಜರ್ ಗಮನಕ್ಕೆ ಬಂದಿದೆ. ಇದು ಅವನ ಕೆಲಸಕ್ಕೆ ಕುತ್ತು ತಂದಿದೆ.

ಸಾಂದರ್ಭಿಕ ಚಿತ್ರ.

ಕೆಲವರು ಕೆಲಸದ ಜಂಜಾಟದಿಂದ ತಪ್ಪಿಸಿಕೊಳ್ಳಲು ಅನಾರೋಗ್ಯದ ಸುಳ್ಳು ನೆಪವೊಡ್ಡಿ ರಜೆ ತೆಗೆದುಕೊಳ್ಳುತ್ತಾರೆ. ಆದರೆ ಸುಳ್ಳನ್ನು ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ. ಅದು ಒಂದಲ್ಲ ಒಂದು ದಿನ ಬಯಲಾಗುತ್ತದೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿ. ಸುಳ್ಳು ನೆಪವೊಡ್ಡಿ ಕೆಲಸಕ್ಕೆ ರಜೆ ತೆಗೆದುಕೊಂಡು ತಿರುಗಾಡಲು ಹೋದ ವ್ಯಕ್ತಿಯೊಬ್ಬ, ಅಪರಿಚಿತನೊಬ್ಬ ಮಾಡಿದ ರೀಲ್ಸ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ! ಹೌದು ಈ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಇದು ಆತನ ಮ್ಯಾನೇಜರ್‌ಗೆ ಗೊತ್ತಾಗಿ ಕೆಲಸಕ್ಕೆ ಕುತ್ತು ಬಂದಿದೆ. ಈ ವಿಚಾರವನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದೀಗ ವೈರಲ್ (Viral Video) ಆಗಿದೆ.
ವೈರಲ್ ಆಗಿರುವ ಪೋಸ್ಟ್‌ನಲ್ಲಿ ಕಚೇರಿಯ ಜಂಜಾಟದಿಂದ ತಪ್ಪಿಸಿಕೊಳ್ಳಲು ಈತ, ಕೊಡಗಿಗೆ ಹೋಗುವ ಪ್ಲ್ಯಾನ್ ಮಾಡಿ ರಜೆ ಪಡೆಯಲು ಹೊಟ್ಟೆ ನೋವಿನ ನೆಪ ಹೇಳಿದ್ದಾನೆ. ಸುಳ್ಳನ್ನು ಸತ್ಯವೆಂದು ನಂಬಿದ ಮ್ಯಾನೇಜರ್ ಈತನಿಗೆ ರಜೆ ಕೂಡ ನೀಡಿದ್ದಾನಂತೆ. ಆದರೆ ಆತ ಪ್ರವಾಸದ ವೇಳೆ ಹೋಂಸ್ಟೇಯಲ್ಲಿ ನೃತ್ಯ ಮಾಡುತ್ತಿರುವುದು ಅಪರಿಚಿತನೊಬ್ಬ ಮಾಡಿದ ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ 13,000 ಲೈಕ್‌ಗಳನ್ನು ಗಳಿಸಿದೆ. ಆದರೆ ದುರಾದೃಷ್ಟವಶಾತ್ ಈ ವಿಡಿಯೊ ಆ ಉದ್ಯೋಗಿಯ ಮ್ಯಾನೇಜರ್ ಕಣ್ಣಿಗೆ ಬಿದ್ದಿದೆ.
ಮರುದಿನ, ಮ್ಯಾನೇಜರ್ ವೈರಲ್ ರೀಲ್ಸ್ ಜತೆಗೆ "ನಿಮ್ಮ ಹೊಟ್ಟೆ ಈಗ ಚೆನ್ನಾಗಿದೆ ಅಂದುಕೊಳ್ಳುತ್ತೇನೆ" ಎಂಬ ಮೆಸೇಜ್ ಆ ಉದ್ಯೋಗಿಗೆ ಕಳುಹಿಸಿದ್ದಾನೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ಮೊಮ್ಮಗಳ DNA ಟೆಸ್ಟ್ ಮಾಡಿಸಿದ ಅಜ್ಜಿ... ಸಮಾಧಿಯಾಗಿದ್ದ ಸೊಸೆ ಬದುಕಿನ ಭಯಾನಕ ರಹಸ್ಯ ಬಯಲಾಯ್ತು!
ಇದೇ ರೀತಿಯ ಪೋಸ್ಟ್ ಒಂದು ಈ ಹಿಂದೆ ವೈರಲ್ ಆಗಿತ್ತು. ಅದರಲ್ಲಿ ಉದ್ಯೋಗಿಯೊಬ್ಬಳು ತನ್ನ ಬಾಸ್ ತಾನು ರಜೆಯಲ್ಲಿದ್ದಾಗ ತಾನಿದ್ದ ಲೋಕೇಷನ್ ಕಳುಹಿಸಲು ಕೇಳಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಆಘಾತಕಾರಿ ಹೇಳಿಕೆ ನೀಡಿದ್ದಾಳೆ. ಈ ಪೋಸ್ಟ್‌ನಲ್ಲಿ ಮಹಿಳೆ, ತನ್ನ ಕುಟುಂಬ ಸದಸ್ಯರೊಬ್ಬರ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಾಗಿ ಕಚೇರಿಯ ಕೆಲಸಕ್ಕೆ ರಜೆ ತೆಗೆದುಕೊಂಡಿದ್ದಳು. ಆದರೆ ಅವಳ ಮೇಲೆ ನಂಬಿಕೆ ಇಲ್ಲದ ಬಾಸ್ ತನ್ನ ರಜೆಯ ಸಮಯದಲ್ಲಿ ಪದೇ ಪದೆ ಸಂದೇಶ ಕಳುಹಿಸುತ್ತಿದ್ದನಂತೆ. ಜತೆಗೆ ಶಸ್ತ್ರಚಿಕಿತ್ಸೆಗೆ ಒಳಗಾದ ಕುಟುಂಬ ಸದಸ್ಯರ ಫೋಟೊಗಳನ್ನು ಹಂಚಿಕೊಳ್ಳಲು ಒತ್ತಾಯಿಸುತ್ತಿದ್ದರು ಎಂದು ಅವಳು ಹೇಳಿಕೊಂಡಿದ್ದಾಳೆ. ಅವಳು ತನ್ನ ಮತ್ತು ತನ್ನ ಬಾಸ್ ನಡುವಿನ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಳು.