ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Babban Singh Raghuvanshi: ಡ್ಯಾನ್ಸರ್‌ ಜತೆ ಬಿಜೆಪಿ ನಾಯಕನ ಅನುಚಿತ ವರ್ತನೆ; ತೊಡೆ ಮೇಲೆ ಕೂರಿಸಿ ಮುತ್ತಿನ ಮಳೆಗೆರೆದ!

Viral Video: ಉತ್ತರ ಪ್ರದೇಶದ ಬಿಜೆಪಿ ನಾಯಕ ಬಬ್ಬನ್‌ ಸಿಂಗ್‌ ರಘುವಂಶಿ ಮಹಿಳೆಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದು, ಸದ್ಯ ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 70 ವರ್ಷದ ಬಿಜೆಪಿ ನಾಯಕ ಬಬ್ಬನ್‌ ನರ್ತಕಿಯೊಬ್ಬಳನ್ನು ತೊಡೆ ಮೇಲೆ ಕೂರಿಸಿಕೊಂಡು ಆಕೆಯ ಎದೆಯನ್ನು ಸ್ಪರ್ಶಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಡ್ಯಾನ್ಸರ್‌ ಜತೆ ಬಿಜೆಪಿ ನಾಯಕನ ಅನುಚಿತ ವರ್ತನೆ

ಬಬ್ಬನ್‌ ಸಿಂಗ್‌ ರಘುವಂಶಿ.

Profile Ramesh B May 15, 2025 4:00 PM

ಲಖನೌ: ಉತ್ತರ ಪ್ರದೇಶದ ಬಿಜೆಪಿ ನಾಯಕ ಬಬ್ಬನ್‌ ಸಿಂಗ್‌ ರಘುವಂಶಿ (Babban Singh Raghuvanshi) ಮಹಿಳೆಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದು, ಸದ್ಯ ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (Viral Video) ಆಗಿದೆ. 70 ವರ್ಷದ ಬಿಜೆಪಿ ನಾಯಕ ಬಬ್ಬನ್‌ ನರ್ತಕಿಯೊಬ್ಬಳನ್ನು ತೊಡೆ ಮೇಲೆ ಕೂರಿಸಿಕೊಂಡು ಆಕೆಯ ಎದೆಯನ್ನು ಸ್ಪರ್ಶಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಮಾತ್ರವಲ್ಲ ಸುತ್ತಲೂ ಜನ ನೆರೆದಿದ್ದರೂ ಆಕೆಯನ್ನು ಚುಂಬಿಸಿದ್ದಾರೆ. ಸದ್ಯ ಈ ವಿಡಿಯೊ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ನಾಯಕn ವರ್ತನೆಗೆ ಜನ ಸಾಮಾನ್ಯರು ಛೀ ಥೂ ಎಂದು ಉಗಿಯುತ್ತಿದ್ದಾರೆ. ಅಲ್ಲದೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.

ಬಬ್ಬನ್ ಸಿಂಗ್ ರಘುವಂಶಿ ಆರ್ಕೆಸ್ಟ್ರಾ ಹುಡುಗಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಈ ವಿಡಿಯೊವನ್ನು ಸಮಾಜವಾದಿ ಪಕ್ಷದ ನಾಯಕ ಪಂಕಜ್ ರಾಜ್‌ಭರ್ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಬಬ್ಬನ್‌ ಸಿಂಗ್‌ ಈ ಅರೋಪವನ್ನು ನಿರಾಕರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ; ಬಿಜೆಪಿ ಸಚಿವನ ಮನೆಯ ನಾಮಫಲಕಕ್ಕೆ ಮಸಿ ಬಳಿದ ಕಾಂಗ್ರೆಸ್ ನಾಯಕ

ವಿಡಿಯೊದಲ್ಲಿ ಏನಿದೆ?

ಮದುವೆ ಸಮಾರಂಭವೊಂದರಲ್ಲಿ ಇತ್ತೀಚೆಗೆ ಬಬ್ಬನ್‌ ಸಿಂಗ್‌ ಭಾಗವಹಿಸಿದ್ದರು. ಕುರ್ಜಿಯೊಂದರಲ್ಲಿ ಕುಳಿತಿದ್ದ ಅವರ ತೊಡೆ ಮೇಲೆ ಡ್ಯಾನ್ಸರ್‌ ಒಬ್ಬಳು ಕುಳಿತು ಅಶ್ಲೀಲವಾಗಿ ವರ್ತಿಸಿದ್ದಾಳೆ. ಎಲ್ಲರೂ ನೋಡುತ್ತಿದ್ದಂತೆ ಬಬ್ಬರ್‌ ಸಿಂಗ್‌ ತಾನೇನೂ ಕಡಿಮೆ ಇಲ್ಲ ಎನ್ನುವಂತೆ ಆಕೆಯನ್ನು ಎದೆಯನ್ನೆಲ್ಲ ಸ್ಪರ್ಶಿಸಿದ್ದಲ್ಲದೆ ಎಲ್ಲರೂ ನೋಡುತ್ತಿದ್ದಂತೆಗೆ ಆಕೆಗೆ ಚುಂಬಿಸಿ ಅನುಚಿತವಾಗಿ ವರ್ತಿಸಿದ್ದಾರೆ. ಅದಾಗ್ಯೂ ಅವರು ಇದು ನಕಲಿ ವಿಡಿಯೊ, ತಮ್ಮ ಮಾನಹಾನಿ ಮಾಡುವ ಉದ್ದೇಶದಿಂದ ಇದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಯಬಿಡಲಾಗುತ್ತಿದೆ ಎಂದು ಸಮರ್ಥನೆಯನ್ನೂ ನೀಡಿದ್ದಾರೆ.



ಸಮರ್ಥನೆ ಏನು?

ದಶಕಗಳಿಂದ ತಾವು ರಾಜಕೀಯದಲ್ಲಿ ಸಕ್ರಿಯವಾಗಿದ್ದು, ಇದುವರೆಗೆ ಯಾರೊಂದಿಗೂ ಕೆಟ್ಟದಾಗಿ ವರ್ತಿಸಿಲ್ಲ ಎಂದಿದ್ದಾರೆ. ʼʼನನಗೀಗ 70 ವರ್ಷ ವಯಸ್ಸು. ಈ ರೀತಿ ನಾನು ಮಾಡಲಾರೆ. ನಾನು ಇದುವರೆಗೆ ಯಾವುದೇ ವಿವಾದದಲ್ಲಿ ಸಿಲುಕಿಕೊಂಡಿಲ್ಲ. ಇದು ನಕಲಿ ವಿಡಿಯೊ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸದ್ಯದಲ್ಲೇ ಚುನಾವಣೆ ನಡೆಯಲಿದ್ದು, ಈ ಕಾರಣಕ್ಕೆ ರಾಜಕೀಯ ಪಿತೂರಿ ಮಾಡಲಾಗಿದೆ. ಇದರ ಹಿಂದೆ ಸ್ಥಳೀಯ ಶಾಸಕಿ ಕೇಟ್ಕಿ ಸಿಂಗ್‌ ಮತ್ತು ಆಕೆಯ ಪತಿಯ ಕೈವಾಡವಿದೆ. ನಾನು ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದೇನೆʼʼ ಎಂದು ತಿಳಿಸಿದ್ದಾರೆ.

ಮದುವೆ ಸಮಾರಂಭವೊಂದರಲ್ಲಿ ನಡೆದ ಘಟನೆ ಇದು ಎಂದು ವಿಡಿಯೊದಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ʼʼಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದೆ. ಡ್ಯಾನ್ಸರ್‌ಗೆ ಹಣವನ್ನೂ ಕೊಟ್ಟಿದ್ದೆ. ಆದರೆ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿಲ್ಲ. ಇದು ನಕಲಿ ವಿಡಿಯೊ. ನನ್ನ ರಾಜಕೀಯ ಜೀವನವನ್ನು ಕೊನೆಗೊಳಿಸಲು ಇದನ್ನು ವಿರೋಧಿಗಳು ಹರಿಯಬಿಟ್ಟಿದ್ದಾರೆʼʼ ಎಂದು ಪುನರುಚ್ಚರಿಸಿದ್ದಾರೆ.

ಇದೀಗ ವಿಪಕ್ಷಗಳು ಬಿಜೆಪಿ ವಿರುದ್ಧ ಮುಗಿಬಿದ್ದಿವೆ. ಪಕ್ಷ ಇದಕ್ಕೆ ಉತ್ತರಿಸಲೇಬೇಕು ಎಂದು ಆಗ್ರಹಿಸಿವೆ. ಕಾಂಗ್ರೆಸ್‌ ಮುಖಂಡ ಸುರೇಂದ್ರ ರಾಜಪೂತ್‌ ಘಟನೆಯನ್ನು ಖಂಡಿಸಿದ್ದು, ಇದು ನಾಚಿಕೆಗೇಡಿನ ಸಂಗತಿ ಎಂದು ಕರೆದಿದ್ದಾರೆ. ಸಂಸ್ಕೃತಿಯ ಪಾಠ ಮಾಡುವ ಬಿಜೆಪಿ ಇದಕ್ಕೆ ಉತ್ತರ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಇದು ಉತ್ತರ ಪ್ರದೇಶ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.