Star Cannes Fashion: ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ದುಬಾರಿ ಗಿಣಿ ಕ್ಲಚ್ ಹಿಡಿದು ಪೋಸ್ ನೀಡಿದ ಊರ್ವಶಿ ರೌಟೇಲಾ
Star Cannes Fashion: ಈ ಬಾರಿಯ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ, ರಂಗು ರಂಗಾಗಿ ಕಾಣಿಸುವ ಕಾರ್ನಿವಲ್ ಥೀಮ್‌ನ ಪ್ರಿಂಟೆಡ್ ಬಾಡಿಕಾನ್ ಗೌನ್‌ನಲ್ಲಿ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಕಾಣಿಸಿಕೊಂಡಿದ್ದು, ಕೈಯಲ್ಲಿ ದುಬಾರಿ ಗಿಣಿ ಕ್ಲಚ್ ಹಿಡಿದು ಪೋಸ್ ನೀಡಿದ್ದಾರೆ. ಇವರ ಲುಕ್ ಹಾಗೂ ಕ್ಲಚ್ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಊರ್ವಶಿ ರೌತೇಲಾ, ಬಾಲಿವುಡ್ ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್ ನಟಿ ಊರ್ವಶಿ ರೌಟೇಲಾ ಮುದ್ದುಮುದ್ದಾಗಿ ಕಾಣಿಸುವ ಬೆಲೆ ಬಾಳುವ ಗಿಣಿಯ ವಿನ್ಯಾಸ ಕ್ಲಚ್ ಹಿಡಿದು ಪೋಸ್ ನೀಡಿ, ಸುದ್ದಿಯಾಗಿದ್ದಾರೆ. ಹೌದು, ಈ ಬಾರಿಯ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಊರ್ವಶಿ ರೌಟೇಲಾ (Star Cannes Fashion) ಅವರ ಔಟ್‌ಫಿಟ್‌ಗಿಂತ ಅವರು ಕೈಯಲ್ಲಿ ಹಿಡಿದಿದ್ದ ಗಿಣಿಯೇ ಸುದ್ದಿಯಾಗಿದೆ. ಆ ಮಟ್ಟಿಗೆ ಆ ಕಲರ್‌ಫುಲ್ ವಿನ್ಯಾಸದ ಗಿಣಿಯ ಕ್ಲಚ್ ಎಲ್ಲರ ಕಣ್ಣನ್ನು ತನ್ನತ್ತ ಸೆಳೆದಿದೆ. ಜತೆಗೆ ಅವರು ಧರಿಸಿದ್ದ ರಂಗು ರಂಗಾದ ಮಲ್ಟಿ ಶೇಡ್‌ನ ಆಫ್ ಶೋಲ್ಡರ್‌ನ ಕಾರ್ನಿವಲ್ ಥೀಮ್‌ಗೆ ಮ್ಯಾಚ್ ಆಗುವ ಬಾಡಿಕಾನ್ ಗೌನ್ ಕೂಡ ಇದಕ್ಕೆ ಮ್ಯಾಚ್ ಆಗಿದೆ.

ದುಬಾರಿ ಗಿಣಿ ಕ್ಲಚ್
ನಟಿ ಊರ್ವಶಿ ರೌಟೇಲಾ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸದ್ದಾಗಲೆಲ್ಲಾ, ಒಂದಲ್ಲ ಒಂದು ಹೊಸ ಥೀಮ್‌ನ ಕಾಸ್ಟ್ಯೂಮ್ ಇಲ್ಲವೇ ಆಕ್ಸೆಸರೀಸ್ ಹಿಡಿದು ಪೋಸ್ ನೀಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಈ ಬಾರಿ ಅವರು, ತಮ್ಮ ಡಿಸೈನರ್‌ವೇರ್‌ಗಿಂತ ಹೆಚ್ಚು ಮಹತ್ವ ನೀಡಿರುವುದು ಅತ್ಯಾಕರ್ಷಕ ಗಿಣಿ ಕ್ಲಚ್‌ಗೆ ಅಂದರೆ ಕಿರಿದಾದ ಕೈಯಲ್ಲಿ ಹಿಡಿಯಬಹುದಾದ ಪರ್ಸ್‌ಗೆ. ಅದು ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಇನ್ನು, ಈ ಗಿಣಿ ಕ್ಲಚ್ ಸಾಮಾನ್ಯವಾದುದ್ದೇನಲ್ಲ! ಅತ್ಯಂತ ಆಕರ್ಷಕ ವಿನ್ಯಾಸ ಹೊಂದಿದ್ದು, ದುಬಾರಿ ಬೆಲೆ ಬಾಳುವಂತದ್ದಾಗಿದೆ.

ನಾಲ್ಕು ಲಕ್ಷ ರೂ. ಗಳ ಕ್ರಿಸ್ಟಲ್ ಕ್ಲಚ್
ಪ್ರತಿಷ್ಠಿತ ಜುಡಿತ್ ಬ್ರ್ಯಾಂಡ್‌ನ ಈ ಕ್ಲಚ್ ಶೈಲಿಯ ಮಿನಿ ಹ್ಯಾಂಡ್ ಬ್ಯಾಗ್/ಪರ್ಸ್ ಥೇಟ್ ಗಿಣಿಯ ತದ್ರೂಪ ಹೊಂದಿದೆ. ಕಲರ್‌ಫುಲ್ ಕ್ರಿಸ್ಟಲ್‌ನಿಂದ ಸಿದ್ಧಪಡಿಸಿರುವ ಈ ಕ್ಲಚ್ ಸರಿ ಸುಮಾರು 4,68,068 ರೂ. ಬೆಲೆಬಾಳುತ್ತದೆ ಎಂದು ಮೂಲಗಳು ತಿಳಿಸಿವೆ. ಕಾನ್ಸ್ ಫೆಸ್ಟಿವಲ್‌ನಲ್ಲಿ ಗಿಣಿ ಕ್ಲಚ್ ಹಿಡಿದು ಪೋಸ್ ನೀಡಿರುವುದು ಇದೇ ಮೊದಲು ಎನ್ನಲಾಗಿದೆ.

ಊರ್ವಶಿ ರೌಟೇಲಾ ಕಾರ್ನಿವಲ್ ಗೌನ್
ಇನ್ನು, ಕಾರ್ನಿವಲ್ ಥೀಮ್‌ಗೆ ಮ್ಯಾಚ್ ಆಗುವ ಗೌನ್ ರಂಗು ರಂಗಾಗಿದೆ ಎಂದು ಕೆಲವು ಫ್ಯಾಷನ್ ಪ್ರಿಯರು ಹೊಗಳಿದರೆ, ಪ್ರಯೋಗಾತ್ಮಕ ಡಿಸೈನರ್‌ವೇರ್ ಧರಿಸುವಲ್ಲಿ ಊರ್ವಶಿ ಸದಾ ಮೊದಲಿಗರು ಎಂದು ಒಂದಿಷ್ಟು ಮಂದಿ ಹೇಳಿದ್ದಾರೆ. ಇನ್ನು ಕೆಲವರು, ಕೀರೀಟದ ಜತೆಗೆ ಡಿಸೈನ್ ಸ್ಟುಡಿಯೋವನ್ನೇ ಹೊತ್ತು ತಂದಂತಿದೆ ಎಂದು ಕಾಲೆಳೆದಿದ್ದಾರೆ.
ಈ ಸುದ್ದಿಯನ್ನೂ ಓದಿ | Summer Fashion, Beauty: ಸಮ್ಮರ್‌ನಲ್ಲಿ ವೈಬ್ರೆಂಟ್ ಕಲರ್ಸ್ ಹಂಗಾಮ
ಒಟ್ಟಾರೆ, ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನ ಆರಂಭದಲ್ಲೆ ನಟಿ ಊರ್ವಶಿ, ತನ್ನ ಪ್ರಯೋಗಾತ್ಮಕ ಫ್ಯಾಷನ್‌ವೇರ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ನಿಂದ ಸಾಕಷ್ಟು ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)