ನಿಮ್ಮ ಬಳಿ 100 ರೂ. ನೋಟು ಇದೆಯೇ? ಅದರಲ್ಲಿ ಈ ಸಂಖ್ಯೆ ಇದ್ಯಾ? ಹಾಗಿದ್ರೆ ನಿಮಗೆ ಜಾಕ್ಪಾಟ್ ಗ್ಯಾರಂಟಿ!
ನೀವು ಕೋಟ್ಯಾಧಿಪತಿಯಾಗುವ ಕನಸು ಕಾಣುತ್ತಿದ್ದೀರಾ? ಹಾಗಾದ್ರೆ ನಿಮ್ಮ ಪರ್ಸ್ ಅಥವಾ ಪಿಗ್ಗಿ ಬ್ಯಾಂಕ್ ಈಗಲೇ ಪರಿಶೀಲಿಸಿ. ಯಾಕಂದ್ರೆ ನಿಮ್ಮ ಬಳಿ ಒಂದು ವಿಶೇಷ 100 ರೂಪಾಯಿ ನೋಟು ಇದ್ದರೆ ಅದು 6 ಲಕ್ಷ ರೂ. ಬೆಲೆ ಬಾಳಬಹುದು. ಅದೇಗೆ ಎನ್ನುವುದನ್ನು ತಿಳಿಯಲು ಈ ಸುದ್ದಿ ಓದಿ.

ನೂರು ರೂಪಾಯಿ ನೋಟು


ಎಲ್ಲರೂ ಶ್ರೀಮಂತರಾಗುವ ಕನಸು ಕಾಣುತ್ತಾರೆ. ಆದರೆ ರಾತ್ರೋರಾತ್ರಿ ಶ್ರೀಮಂತರಾಗುವುದು ಅಪರೂಪ. ಸಾಮಾನ್ಯವಾಗಿ ಕಠಿಣ ಪರಿಶ್ರಮ ಮತ್ತು ಸಾಧನೆಯಿಂದ ಸಂಪತ್ತನ್ನು ಗಳಿಸಲಾಗುತ್ತದೆ. ಆದರೆ ಕೆಲವರು ಲಾಟರಿಗಳನ್ನು ಗೆದ್ದು ಅಥವಾ ವಿಶೇಷ ಯೋಜನೆಗಳಿಂದ ಬೇಗ ಶ್ರೀಮಂತರಾಗುತ್ತಾರೆ. ನಿಮ್ಮ ಪರ್ಸ್ನಲ್ಲಿರುವ ಒಂದು ನೋಟು ಕೂಡ ನಿಮಗೆ ಇಂತಹ ಅವಕಾಶವನ್ನು ಒದಗಿಸಬಹುದು.

ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳೆಯ ಕರೆನ್ಸಿ ನೋಟುಗಳು ಮತ್ತು ಅಪರೂಪದ ನಾಣ್ಯಗಳಿಗೆ ಭಾರೀ ಬೇಡಿಕೆಯಿದೆ. ಇಂತಹ ನೋಟುಗಳನ್ನು ಮಾರಾಟ ಮಾಡಿ ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಿರುವವರು ಅನೇಕರಿದ್ದಾರೆ. ಒಂದು 100 ರೂಪಾಯಿ ನೋಟನ್ನು ಮಾರಾಟ ಮಾಡಲು ಬಯಸಿದರೆ, ಅದರ ವಿಶೇಷ ಗುಣಲಕ್ಷಣಗಳನ್ನು ಮೊದಲು ಅರಿತುಕೊಳ್ಳುವುದು ಮುಖ್ಯ. ಕೇವಲ 100 ರೂಪಾಯಿ ನೋಟಿನಿಂದ ಯಾವುದೇ ವ್ಯತ್ಯಾಸ ಆಗಲ್ಲ. ಆದರೆ ಒಂದು ವಿಶಿಷ್ಟ ಕ್ರಮಸಂಖ್ಯೆಯನ್ನು ಹೊಂದಿದ್ದರೆ, ಅದು 6 ಲಕ್ಷ ರೂಪಾಯಿಗಳವರೆಗೆ ಬೆಲೆ ಬಾಳುತ್ತದೆ. ಈ ನೋಟಿನ ಮುಖ್ಯ ಗುಣಲಕ್ಷಣವೆಂದರೆ, ಅದರ ಮುಂಭಾಗದ ಕ್ರಮಸಂಖ್ಯೆ ‘786’ ಆಗಿರಬೇಕು. ಜತೆಗೆ ನೋಟಿನ ಮೇಲೆ ಮಹಾತ್ಮ ಗಾಂಧಿಯವರ ಅಥವಾ ಅಶೋಕ ಸ್ತಂಭದ ಚಿತ್ರವಿರಬೇಕು.

ʼ786’ ಸಂಖ್ಯೆಯನ್ನು ಶಾಂತಿ, ಸಮೃದ್ಧಿ ಮತ್ತು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಮುಸ್ಲಿಂ ಸಮುದಾಯದವರು ಈ ಸಂಖ್ಯೆಯಿರುವ ವಸ್ತುಗಳನ್ನು ಹೆಚ್ಚಾಗಿ ಬಯಸುತ್ತಾರೆ. ಈ ಸಂಖ್ಯೆಯಿರುವ ನೋಟನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಈ ಕಾರಣದಿಂದ, ‘786’ ಕ್ರಮಸಂಖ್ಯೆಯ ಒಂದು 100 ರೂಪಾಯಿ ನೋಟು 6 ಲಕ್ಷ ರೂಪಾಯಿಗಳವರೆಗೆ ಬೆಲೆ ಬಾಳುತ್ತದೆ. ನಿಮ್ಮ ಬಳಿ ಇಂತಹ ಮೂರು ನೋಟುಗಳಿದ್ದರೆ, 18 ಲಕ್ಷ ರೂಪಾಯಿಗಳನ್ನು ಗಳಿಸಬಹುದು. ನಿಮ್ಮ ವಿಶೇಷ 100 ರೂಪಾಯಿ ನೋಟನ್ನು ಮಾರಾಟ ಮಾಡಲು, ಮೊದಲು OLXನಂತಹ ವೆಬ್ಸೈಟ್ನಲ್ಲಿ ಖಾತೆಯನ್ನು ತೆರೆಯಿರಿ. ನಂತರ, ನೋಟಿನ ಕ್ರಮಸಂಖ್ಯೆ ಮತ್ತು ಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸುವ ಫೋಟೊವನ್ನು ಅಪ್ಲೋಡ್ ಮಾಡಿ. ಒಮ್ಮೆ ಪಟ್ಟಿಮಾಡಿದ ಬಳಿಕ, ಆಸಕ್ತ ಖರೀದಿದಾರರು ನಿಮ್ಮನ್ನು ನೇರವಾಗಿ ಸಂಪರ್ಕಿಸಬಹುದು. ಈ ಪ್ರಕ್ರಿಯೆ ಸರಳ ಮತ್ತು ಬಳಕೆದಾರ ಸ್ನೇಹಿಯಾಗಿದೆ.