ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನವಜಾತ ಶಿಶುವಿಗೆ ಯಶಸ್ವಿ ಯಕೃತ್ತು ಶಸ್ತ್ರಚಿಕಿತ್ಸೆ: ಸಾಕ್ರಾ ಆಸ್ಪತ್ರೆಯ ತಜ್ಞವೈದ್ಯರ ಸಾಧನೆ

ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಮಗುವಿನ ತೂಕ 2.18 ಕೆ.ಜಿ ಇತ್ತು. ಹೊಟ್ಟೆಯು ದೊಡ್ಡದಾ ಗಿದ್ದು, ಊದಿಕೊಂಡಿತ್ತು. ಅದು ಶ್ವಾಸಕೋಶದ ಮೇಲೆ ಹೆಚ್ಚಿನ ಒತ್ತಡ ತರುತ್ತಿದ್ದರಿಂದ ಉಸಿರಾಟಕ್ಕೆ ತೀವ್ರ ತೊಂದರೆ ಉಂಟಾಗಿತ್ತು. ಆರಂಭದಲ್ಲಿ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಯಿತು. ರೋಗನಿರ್ಣಯದ ಪತ್ತೆಗಾಗಿ ವಿವಿಧ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಒಳಹೊಟ್ಟೆಯ ಭಾಗದಲ್ಲಿ ಗಡ್ಡೆ ಇರುವುದು ಪತ್ತೆಯಾಯಿತು. ಅದಕ್ಕೆ ಕಾರಣ ತಿಳಿದುಬಂದಿಲ್ಲ

ನವಜಾತ ಶಿಶುವಿಗೆ ಯಶಸ್ವಿ ಯಕೃತ್ತು ಶಸ್ತ್ರಚಿಕಿತ್ಸೆ

Profile Ashok Nayak May 14, 2025 11:30 AM

ಬೆಂಗಳೂರು: ಊದಿದ ಹೊಟ್ಟೆಯಿಂದಾಗಿ ಉಸಿರಾಡಲು ತೊಂದರೆ ಪಡುತ್ತಿದ್ದ ಮೂರು ದಿನಗಳ ನವಜಾತ ಶಿಶುವಿಗೆ ಸಾಕ್ರಾ ವರ್ಲ್ಡ್‌ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ, ಯಕೃತ್ತಿ ನಿಂದ ಗಡ್ಡೆಯನ್ನು ಹೊರತೆಗೆದಿದ್ದಾರೆ. ಆ ಮೂಲಕ ಮಗುವಿನ ಪ್ರಾಣ ರಕ್ಷಣೆ ಮಾಡಿದ್ದಾರೆ.

ಆಗಿದ್ದೇನು?

ಭ್ರೂಣದಲ್ಲಿ ತೊಂದರೆ ಉಂಟಾಗಿದ್ದರಿಂದ ಗರ್ಭಿಣಿಯೊಬ್ಬರಿಗೆ 33ವಾರಕ್ಕೆ ಖಾಸಗಿ ಆಸ್ಪತ್ರೆ ಯೊಂದರಲ್ಲಿ ಅಕಾಲಿಕವಾಗಿ ಹೆರಿಗೆಯಾಯಿತು. ಆದರೆ, ನವಜಾತ ಶಿಶುವಿಗೆ ತೀವ್ರ ಉಸಿರಾಟದ ತೊಂದರೆಯಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ತಕ್ಷಣವೇ ಸಾಕ್ರಾ ವರ್ಲ್ಡ್‌ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಮಗುವಿನ ತೂಕ 2.18 ಕೆ.ಜಿ ಇತ್ತು. ಹೊಟ್ಟೆಯು ದೊಡ್ಡದಾ ಗಿದ್ದು, ಊದಿಕೊಂಡಿತ್ತು. ಅದು ಶ್ವಾಸಕೋಶದ ಮೇಲೆ ಹೆಚ್ಚಿನ ಒತ್ತಡ ತರುತ್ತಿದ್ದರಿಂದ ಉಸಿರಾಟಕ್ಕೆ ತೀವ್ರ ತೊಂದರೆ ಉಂಟಾಗಿತ್ತು. ಆರಂಭದಲ್ಲಿ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾ ಯಿತು. ರೋಗನಿರ್ಣಯದ ಪತ್ತೆಗಾಗಿ ವಿವಿಧ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಒಳಹೊಟ್ಟೆಯ ಭಾಗದಲ್ಲಿ ಗಡ್ಡೆ ಇರುವುದು ಪತ್ತೆಯಾಯಿತು. ಅದಕ್ಕೆ ಕಾರಣ ತಿಳಿದುಬಂದಿಲ್ಲ.

ಹೊಟ್ಟೆ ಊದಿಕೊಂಡಿದ್ದರಿಂದ ಮಗುವಿನ ವಿವಿಧ ಅಂಗಗಳ ಮೇಲೆ ಒತ್ತಡ ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು ಊತವನ್ನು ತೆಗೆದುಹಾಕಲು ನಿರ್ಧರಿಸಲಾಯಿತು. ಚಿಕಿತ್ಸೆ ಆರಂಭಿಸಿದ ವೈದ್ಯರು ಯಕೃತ್ತಿನಲ್ಲಿ ದೊಡ್ಡ ಮಟ್ಟದ ಗಡ್ಡೆ ಇರುವುದನ್ನು ಪತ್ತೆ ಹಚ್ಚಿದರು. ಈ ಗಡ್ಡೆ 10*8*7 ಸೆಂ.ಮೀ. ಆಗಿತ್ತು. ಯಕೃತ್ತಿನ ಎಡ ಭಾಗದಲ್ಲಿದ್ದ ಈ ಗಡ್ಡೆಯು ಕಿಬ್ಬೊಟ್ಟೆಯವರೆಗೂ ಆಕ್ರಮಿಸಿ ಕೊಂಡಂತೆ ಕಾಣುತ್ತಿತ್ತು. ಮೂರು ದಿನಗಳ ಹಿಂದಷ್ಟೆ ಹುಟ್ಟಿದ ನವಜಾತ ಶಿಶುವಿನ ಯಕೃತ್ತಿನಲ್ಲಿ ರುವ ಗಡ್ಡೆಯನ್ನು ತೆಗೆದುಹಾಕುವುದು ದೊಡ್ಡ ಸವಾಲಾಗಿತ್ತು. ಅದರಲ್ಲಿಯೂ ಆ ಮಗುವಿನ ತೂಕವು ಕಡಿಮೆ ಇತ್ತು ಎಂದು ಡಾ. ಅನಿಲ್‌ ಚಿಕಿತ್ಸೆಯ ವೇಳೆ ಎದುರಾದ ಸವಾಲುಗಳ ಬಗ್ಗೆ ಹಂಚಿಕೊಂಡರು.

ಇದನ್ನೂ ಓದಿ: S Suresh Vathsa Column: ಪಾಠ ಕಲಿಯದಿದ್ದರೆ ಪಾಕಿಸ್ತಾನಕ್ಕೇ ನಷ್ಟ !

ತೀವ್ರ ರಕ್ತಸ್ರಾವ ಉಂಟಾಗುವುದರಿಂದ ದೊಡ್ಡ ಪ್ರಮಾಣದಲ್ಲಿ ರಕ್ತವನ್ನು ನೀಡಬೇಕಾಗಿತ್ತು. ಯಕೃತ್ತಿನಿಂದ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಯಿತು. ಶಸ್ತ್ರಚಿಕಿತ್ಸೆ ಸವಾಲಿನಿಂದ ಕೂಡಿದಷ್ಟೆ ನಂತರದ ಅವಧಿಯು ದೊಡ್ಡ ಪ್ರಮಾಣದ ಸವಾಲುಗಳನ್ನು ಒಡ್ಡಿತು.

ಈ ಬಗ್ಗೆ ಡಾ. ಶಿವಕುಮಾರ್‌ ಸಂಬರಗಿ ಹೇಳಿದ್ದಿಷ್ಟು, ‘ಗಡ್ಡೆಯನ್ನು ಮೆಸೆಂಕಿಮಲ್‌ ಹಮಾ ರ್ಟೋಮಾ ಎಂದು ಗುರುತಿಸಲಾಗಿದ್ದು, ಇದು ನವಜಾತ ಶಿಶುಗಳಲ್ಲಿ ಕಂಡುಬರುವ ಅಪರೂಪದ ಆರೋಗ್ಯ ಸಮಸ್ಯೆಯಾಗಿದೆ. ಸಂಪೂರ್ಣವಾಗಿ ಇದನ್ನು ತೆಗೆದುಹಾಕುವುದು ಬಿಟ್ಟರೆ ಬೇರೆ ಪರಿಹಾರವಿಲ್ಲ‘ ಎಂದು ಹೇಳಿದರು.

ಆರಂಭದಲ್ಲಿಯೇ ಈ ಸಮಸ್ಯೆ ಕಂಡುಹಿಡಿಯಲಾಗುತ್ತದೆ. ಮೆಸೆಂಕಿಮಲ್ ಹಮಾರ್ಟೋಮಾ (MHL) ಹಾನಿಕರವಲ್ಲದ ಗಡ್ಡೆಯಾಗಿದ್ದು, ಇದು ಘನ ಮತ್ತು ದ್ರವದ ಮಿಶ್ರಣದಂತೆ ಕಂಡು ಬರುತ್ತದೆ. ಹೆಮಾಂಜಿಯೋಮಾದಂತೆ ಇದು ಕೂಡ ಹಾನಿಕರವಲ್ಲದ ಯಕೃತ್ತಿನ ಗಡ್ಡೆಯಾಗಿದೆ. ಆದರೆ, ಗಡ್ಡೆ ದೊಡ್ಡದಾದಂತೆ ಇತರೆ ಅಂಗಗಳ ಕಾರ್ಯವೈಖರಿಯ ಮೇಲೆ ತೀವ್ರ ತರಹದ ಪರಿಣಾಮ ಬೀರುತ್ತದೆ.

ಗಡ್ಡೆಯನ್ನು ತೆಗೆದ ನಂತರದ ಅವಧಿಯು ಬಹುಸವಾಲಿನಿಂದ ಕೂಡಿತ್ತು. ಇಷ್ಟು ಪುಟ್ಟ ಶಿಶುವಿಗೆ ಅರಿವಳಿಕೆ ಮದ್ದು ನೀಡಿ, ರಕ್ತವನ್ನು ವರ್ಗಾಯಿಸುವುದು ದೊಡ್ಡ ಸವಾಲಾಗಿತ್ತು. ಆದರೆ, ತಂಡವು ಪ್ರತಿ ಕ್ಷಣವೂ ಮಗುವಿನ ಆರೋಗ್ಯ ಸ್ಥಿರವಾಗಿರುವುದನ್ನು ಖಾತ್ರಿಪಡಿಸಿಕೊಳ್ಳುತ್ತಿತ್ತು ಎಂದು ಡಾ. ಶಿಶಿರ್‌ ಚಂದ್ರಶೇಖರ್‌ ಹೇಳಿದ್ದಾರೆ.

ಎರಡು ಕೆ.ಜಿ. ತೂಕವಿರುವ 3 ದಿನಗಳ ಹಿಂದೆ ಹುಟ್ಟಿದ ಶಿಶುವಿಗೆ ಯಕೃತ್ತಿನ ಗಡ್ಡೆಯನ್ನು ತೆಗೆದು ಹಾಕುವ ಪ್ರಕರಣಗಳು ಈವರೆಗೆ ಎಲ್ಲಿಯೂ ವರದಿಯಾಗಿಲ್ಲ. ಆದರೆ, ಸಾಕ್ರಾ ಆಸ್ಪತ್ರೆಯ ನುರಿತ ವೈದ್ಯರ ತಂಡ ಇದನ್ನು ಸವಾಲಾಗಿ ಸ್ವೀಕರಿಸಿ, ಶಸ್ತ್ರಚಿಕಿತ್ಸೆಯಿಂದ ಗಡ್ಡೆ ತೆಗೆದುಹಾಕುವಲ್ಲಿ ಯಶಸ್ವಿಯಾಗಿದೆ.

ಆಧುನಿಕ ತಂತ್ರಜ್ಞಾನವನ್ನು ಶಸ್ತ್ರಚಿಕಿತ್ಸೆಯಲ್ಲಿ ಅಳವಡಿಸಿಕೊಂಡಿದ್ದರಿಂದ ಇಷ್ಟು ಚಿಕ್ಕಶಿಶುವಿಗೆ ದೊಡ್ಡಮಟ್ಟದ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಯಿತು. ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದಂತೆ ನವಜಾತ ಶಿಶು ಹಾಗೂ ವೃದ್ಧರಿಗೂ ಯಕೃತ್ತಿನಲ್ಲಿ ಗಡ್ಡೆ ತೆಗೆದುಹಾಕುವುದು ಮತ್ತು ಕಸಿ ಮಾಡು ವುದು ಸಾಧ್ಯವಾಗಿದೆ. ಮಗುವಿನ ಪೋಷಕರು ವೈದ್ಯರ ತಂಡದ ಮೇಲೆ ನಂಬಿಕೆ ಇಟ್ಟಿದ್ದರಿಂದಲೂ ಇದು ಸಾಧ್ಯವಾಗಿದೆ ಎಂದು ಡಾ. ಶ್ರುತಿ ರೆಡ್ಡಿ ಹೇಳಿದರು.

‘ ನನ್ನ ಮಗುವಿಗೆ ಆದ ಆರೋಗ್ಯ ಸಮಸ್ಯೆಯನ್ನು ತಂಡ ಸವಾಲಾಗಿ ಸ್ವೀಕರಿಸಿ, ಗುಣಪಡಿಸಿದ್ದಕ್ಕೆ ನಾನೆಂದೂ ಋಣಿ. ಈಗ ಮಗು ಚೇತರಿಸಿಕೊಳ್ಳುತ್ತಿದೆ‘ ಎಂದು ಮಗುವಿನ ತಾಯಿ ಸುನೀತಾ (ಹೆಸರು ಬದಲಾಯಿಸಲಾಗಿದೆ) ಎಂದು ಖುಷಿ ಪಟ್ಟರು.