ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಈ ಮಹಿಳೆಯ ಡ್ರೈವಿಂಗ್‌ ಸ್ಕಿಲ್‌ ನೋಡಿ ನೆಟ್ಟಿಗರು ಫುಲ್‌ ಫಿದಾ; ವಿಡಿಯೊ ವೈರಲ್‌

ಮಹಿಳೆಯೊಬ್ಬಳು ಇಕ್ಕಟ್ಟಾದ ಸ್ಥಳದಲ್ಲಿ ಪಾರ್ಕ್ ಮಾಡಿದ್ದ ತನ್ನ ಕಾರನ್ನು ಅಚ್ಚುಕಟ್ಟಾಗಿ ಬೇರೆ ಕಾರಿಗೆ ಹಾನಿಯಾಗದಂತೆ ಹೊರಗೆ ತೆಗೆದಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೊ ನೋಡಿ ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ.

ಓ ಹೆಣ್ಮಗು...ಹೆಣ್ಮಗು ಎನ್ನುವವರೆಲ್ಲ ಈ ವಿಡಿಯೊ ನೋಡಿ

Profile pavithra May 15, 2025 10:27 PM

ಸಾಮಾನ್ಯವಾಗಿ ಕಾರು ಪಾರ್ಕಿಂಗ್ ಮಾಡಲು ಸ್ಥಳ ಸಿಗದೆ ಸಿಕ್ಕ ಒಂದು ಸಣ್ಣ ಜಾಗದಲ್ಲಿ ಹೇಗೋ ಪಾರ್ಕಿಂಗ್ ಮಾಡುತ್ತೇವೆ. ಆದರೆ ನಂತರ ಅದನ್ನು ಅಲ್ಲಿಂದ ಹೊರ ತೆಗೆಯುವುದು ಬಹಳ ಕಷ್ಟದ ಕೆಲಸ. ಹಿಂದೆ ಮುಂದೆ ನಿಂತಿದ್ದ ಕಾರಿಗೆ ಒಂದು ಸಣ್ಣ ಗೀರು ಬಿದ್ದರೂ ಅದರ ಮಾಲೀಕರು ಕೂಗಾಡುತ್ತಾರೆ. ಹೀಗಿರುವಾಗ ಮಹಿಳೆಯೊಬ್ಬಳು ಇಕ್ಕಟ್ಟಾದ ಸ್ಥಳದಲ್ಲಿ ಪಾರ್ಕ್ ಮಾಡಿದ್ದ ತನ್ನ ಕಾರನ್ನು ಅಚ್ಚುಕಟ್ಟಾಗಿ ಬೇರೆ ಕಾರಿಗೆ ಹಾನಿಯಾಗದಂತೆ ಹೊರಗೆ ತೆಗೆದಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿ ನೆಟ್ಟಿಗರನ್ನು ಆಶ್ಚರ್ಯಗೊಳಿಸಿದೆ.

ವಿಡಿಯೊದಲ್ಲಿ, ಒಬ್ಬ ಮಹಿಳೆ ಇಕ್ಕಟ್ಟಾದ ಜಾಗದಲ್ಲಿದ್ದ ಕಾರನ್ನು ತೆಗೆಯಲಾಗದೇ ಡ್ರೈವಿಂಗ್‌ ಸೀಟಿನಲ್ಲಿ ಕುಳಿತಿದ್ದಳು. ಕೊನೆಗೆ ಇತರ ಕಾರಿನವರ ಬಳಿ ಸಹಾಯ ಕೇಳದೆ ಅವಳು ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ತನ್ನ ಕಾರನ್ನು ಇಕ್ಕಟ್ಟಾದ ಸ್ಥಳದಿಂದ ಹೊರಗೆ ತೆಗೆದಿದ್ದಾಳೆ. ಈ ಸಮಯದಲ್ಲಿ ಹಿಂದೆ ಮುಂದೆ ಇದ್ದ ಕಾರಿಗೆ ಒಂದು ಚೂರು ಹಾನಿಯಾಗಲಿಲ್ಲ. ನೆಟ್ಟಿಗರು ಇದನ್ನು ಕಂಡು ಬೆರಗಾಗಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...

ಈ ಪೋಸ್ಟ್‌ ವೈರಲ್ ಆಗಿ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. "ಅವಳ ಬಳಿಗೆ ಡ್ರೈವಿಂಗ್ ಕಲಿಯಲು ಹೋಗಬೇಕು" ಎಂದು ಒಬ್ಬ ವ್ಯಕ್ತಿ ತಮಾಷೆ ಮಾಡಿದ್ದಾರೆ. ಅವಳ ಕೌಶಲ್ಯವನ್ನು ಮೆಚ್ಚಿದ ಮತ್ತೊಬ್ಬರು, "ಮಹಿಳೆಯರು ವಾದವನ್ನು ಮಾಡಲು ಸಾಧ್ಯವಾಗದೇ ಈ ರೀತಿ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ" ಎಂದು ಇನ್ನೊಬ್ಬರು ಹೇಳಿದ್ದಾರೆ. "ಈ ಮಹಿಳೆಯನ್ನು ಯಾರಾದರೂ ಹುಡುಕಿಕೊಡಿ. ಅವರು ಸೆಲೆಬ್ರೆಷನ್ ಮಾಡಲು ಅರ್ಹರು" ಎಂದು ಮತ್ತೊಬ್ಬರು ಬರೆದಿದ್ದಾರೆ.

ಮಿಯಾಮಿಯಲ್ಲಿ ಈ ಹಿಂದೆ ನಡೆದ ಘಟನೆಯೊಂದರಲ್ಲಿ ಪಾರ್ಕಿಂಗ್ ಮಾಡಲು ವಿಳಂಬ ಮಾಡಿದ್ದಕ್ಕಾಗಿ ಒಬ್ಬ ವ್ಯಕ್ತಿ ಇನ್ನೊಬ್ಬ ಚಾಲಕನನ್ನು ಗುಂಡು ಹಾರಿಸಿ ಕೊಂದಿದ್ದನು. ಆಂಥೋನಿ ಕ್ರಿಸ್ಟೋಫರ್ ರಷ್ಯನ್ ಎಂದು ಗುರುತಿಸಲ್ಪಟ್ಟ ಆ ವ್ಯಕ್ತಿ ತನ್ನ ಪೋರ್ಷೆ ಕಾರಿನಲ್ಲಿ ಕುಳಿತಿದ್ದಾಗ, ಇನ್ನೊಬ್ಬ ಚಾಲಕ ಟೊಯೋಟಾ ಟಕೋಮಾವನ್ನು ಪಾರ್ಕಿಂಗ್ ಮಾಡಲು ಪ್ರಯತ್ನಿಸಿದ್ದನು. ಸ್ಥಳವು ಇಕ್ಕಟ್ಟಾಗಿತ್ತು ಮತ್ತು ಚಾಲಕ ಪಾರ್ಕಿಂಗ್ ಮಾಡಲು ಹೆಣಗಾಡುತ್ತಿದ್ದನು. ಇದನ್ನು ಕಂಡು ಪೋರ್ಷೆಯಲ್ಲಿದ್ದ ವ್ಯಕ್ತಿ ತಾಳ್ಮೆ ಕಳೆದುಕೊಂಡು ಪದೇ ಪದೇ ಹಾರ್ನ್ ಮಾಡಲು ಶುರುಮಾಡಿದ್ದನು. ಟೊಯೋಟಾ ಚಾಲಕ ಕೊನೆಗೆ ಬಹಳ ಸಣ್ಣ ಜಾಗದಲ್ಲಿ ಪಾರ್ಕ್ ಮಾಡಿದ ನಂತರ, ರಷ್ಯನ್ ಬಳಿಗೆ ಬಂದು ವಾದಕ್ಕಿಳಿದಿದ್ದನು.

ಈ ಸುದ್ದಿಯನ್ನೂ ಓದಿ:Viral Video: ಮಸಾಲೆ ದೋಸೆಯನ್ನು ಹೀಗೂ ತಿನ್ನಬಹುದಾ? ನೀವು ಕೂಡ ಟ್ರೈ ಮಾಡಿ ನೋಡಿ

ಆ ವೇಳೆ ಆತ ತನ್ನ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಇದು ಚಾಲಕನ ಬಲಿಗಾಲಿಗೆ ತಗುಲಿದೆ. ತಕ್ಷಣ ಚಾಲಕನನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಮತ್ತು ನಂತರ ಪೊಲೀಸರು ರಷ್ಯನ್‌ ವ್ಯಕ್ತಿಯನ್ನು ಬಂಧಿಸಿದ್ದರು.