Viral Video: ಅತಿ ವೇಗವಾಗಿ ಬಂದ ಬೈಕ್ ಮಾಡಿದ ಅವಾಂತರ ಒಂದಾ... ಎರಡಾ...? ಈ ವಿಡಿಯೊ ನೋಡಿ!
ಮುಂಬೈನಲ್ಲಿ ಟ್ರಾಫಿಕ್ ಸಿಗ್ನಲ್‍ನಲ್ಲಿ ಅತಿ ವೇಗವಾಗಿ ಬಂದ ಬೈಕ್ ಎರಡು ಸ್ಕೂಟರ್‌ಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಹಾಗೂ ಸ್ಕೂಟರ್‌ಗಳಲ್ಲಿದ್ದ ಆರು ಮಂದಿಗೆ ಗಾಯಗಳಾಗಿವೆ. ಇಡೀ ಘಟನೆಯು ರಸ್ತೆಯಲ್ಲಿ ಅವರನ್ನು ಹಿಂಬಾಲಿಸುತ್ತಿದ್ದ ಬೈಕ್ ಸವಾರನ ಹೆಲ್ಮೆಟ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಮುಂಬೈ: ಮುಂಬೈನಲ್ಲಿ ನಡೆದ ಸರಣಿ ಅಪಘಾತಗಳ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದ ಬೈಕ್ ಮುಂದೆ ಹೋಗುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಆ ಸ್ಕೂಟರ್ ಬಿದ್ದು ಮತ್ತೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಸ್ಕೂಟರ್‌ನಲ್ಲಿದ್ದವರು ಸಹ ರಸ್ತೆಗೆ ಬಿದ್ದಿದ್ದಾರೆ.
ಈ ಅಪಘಾತವು ಎರಡು ಸ್ಕೂಟರ್‌ಗಳು ಮತ್ತು ಒಂದು ಬೈಕ್‍ನ ನಡುವೆ ನಡೆದಿದ್ದರಿಂದ ಅದರಲ್ಲಿದ್ದ ಆರು ಮಂದಿಗೆ ಗಾಯಗಳಾಗಿವೆ. ಈ ಇಡೀ ಘಟನೆಯು ರಸ್ತೆಯಲ್ಲಿ ಅವರನ್ನು ಹಿಂಬಾಲಿಸುತ್ತಿದ್ದ ಬೈಕ್ ಸವಾರನ ಹೆಲ್ಮೆಟ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು ಇದು ವೈರಲ್(Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಹೋಂಡಾ ಎಕ್ಸ್‌ಪಲ್ಸ್‌ನಲ್ಲಿ ಅತಿ ವೇಗವಾಗಿ ಬಂದ ಬೈಕ್ ಸವಾರರಿಬ್ಬರು ನಿಯಂತ್ರಣ ತಪ್ಪಿ ಪುರುಷ ಮತ್ತು ಮಹಿಳೆ ಪ್ರಯಾಣಿಸುತ್ತಿದ್ದ ಕಪ್ಪು ಸ್ಕೂಟರ್‌ವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ಪರಿಣಾಮದಿಂದಾಗಿ ಅವರಿಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಅವರು ಕೆಳಗೆ ಬೀಳುತ್ತಿದ್ದಂತೆ ಅವರ ಸ್ಕೂಟರ್ ಇನ್ನೂ ಮುಂದೆ ಹೋಗಿ ರಸ್ತೆಯ ಬದಿಯಲ್ಲಿ ನಿಂತ ಕಾರಿಗೆ ಡಿಕ್ಕಿ ಹೊಡೆದಿದೆ. ಇತ್ತಕಡೆ ಕೆಳಗೆ ಬಿದ್ದ ಎಕ್ಸ್ ಪಲ್ಸ್ ಬೈಕ್ ರಸ್ತೆಯ ಎಡಭಾಗದಲ್ಲಿ ಚಲಿಸುತ್ತಿದ್ದ ಮತ್ತೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸ್ಕೂಟರ್‌ನಲ್ಲಿದ್ದ ಇಬ್ಬರು ಸಹ ರಸ್ತೆಗೆ ಬಿದ್ದಿದ್ದಾರೆ.
ಭೀಕರ ಅಪಘಾತದ ದೃಶ್ಯದ ವಿಡಿಯೊ ಇಲ್ಲಿದೆ...
A Series Of Crashes!
— MotorOctane (@MotorOctane) March 13, 2025
Here is a video which shows how reckless driving causes accidents and how innocent people suffer!
Don't Miss The End & Don't Be Like This Guy!@Oggy_F pic.twitter.com/s6pGCWMy98
ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊಗೆ ಸೋಶಿಯಲ್ ಮೀಡಿಯಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ನೆಟ್ಟಿಗರೊಬ್ಬರು, "ದ್ವಿಚಕ್ರ ವಾಹನ ಸವಾರರ ಸಮಸ್ಯೆಯೆಂದರೆ, ಎಡಭಾಗದಲ್ಲಿ ಸಾಕಷ್ಟು ಸ್ಥಳವಿದ್ದರೂ ಅವರು ಯಾವಾಗಲೂ ಬಲಕ್ಕೆ ಬರಲು ಬಯಸುತ್ತಾರೆ. ಟ್ರಾಫಿಕ್ ಲೈಟ್‍ಗಳು ಮತ್ತು ಸ್ಪೀಡ್ ಬ್ರೇಕರ್‌ಗಳನ್ನು ದಾಟಿದ ನಂತರ ಅವರು ಹೆಚ್ಚಾಗಿ ಇಂತಹ ಕೆಲಸ ಮಾಡುತ್ತಾರೆ” ಎಂದಿದ್ದಾರೆ. " ಈ ಹುಡುಗರು ತಮ್ಮನ್ನು ಉತ್ತಮ ರೈಡರ್ ಎಂದುಕೊಂಡಿದ್ದಾರೆ. ಅವರಿಗೆ ಸುರಕ್ಷಿತವಾಗಿ ಬೈಕ್ ಓಡಿಸುವುದು ಹೇಗೆ ಎಂದು ಸಹ ತಿಳಿದಿಲ್ಲ, ಅಂತವರು ತಮಗೆ ಮಾತ್ರವಲ್ಲದೆ ಇತರರಿಗೂ ಅಪಾಯವನ್ನುಂಟುಮಾಡುತ್ತಾರೆ" ಎಂದು ಮತ್ತೊಬ್ಬರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:MP Road Accident: ಮಧ್ಯಪ್ರದೇಶದಲ್ಲಿ ಟ್ರಕ್-ಎಸ್ ಯುವಿ ಡಿಕ್ಕಿ: 8 ಜನರ ಸಾವು; 13 ಮಂದಿಗೆ ಗಾಯ
ಇತ್ತೀಚೆಗೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಮುಂಜಾನೆ ಟ್ರಕ್ ಮತ್ತು ಸ್ಪೋರ್ಟ್ಸ್ ಯುಟಿಲಿಟಿ ವಾಹನ (ಎಸ್ ಯುವಿ) ನಡುವೆ ಸಂಭವಿಸಿದ ಅಪಘಾತದಲ್ಲಿ 8 ಜನರು ಮೃತಪಟ್ಟಿದ್ದಾರೆ ಮತ್ತು 13 ಜನರು ಗಾಯಗೊಂಡಿದ್ದಾರೆ. ಸಿಧಿ-ಬಹ್ರಿ ರಸ್ತೆಯ ಉಪ್ನಿ ಪೆಟ್ರೋಲ್ ಪಂಪ್ ಬಳಿ ಈ ಘಟನೆ ನಡೆದಿದೆ.ಕುಟುಂಬದ ಸದಸ್ಯರನ್ನು ಹೊತ್ತೊಯ್ಯುತ್ತಿದ್ದ ಎಸ್‌ಯುವಿ ಟ್ರಕ್ ಮೈಹಾರ್ ಕಡೆಗೆ ಹೋಗುತಿತ್ತು. ಆಗ ಎರಡೂ ವಾಹನಗಳಿಗೆ ಡಿಕ್ಕಿ ಹೊಡೆದಿವೆ. ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ 8 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 13 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.