ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anath Ambani: ಬಾಡಿಗಾರ್ಡ್ಸ್‌ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಅನಂತ್ ಅಂಬಾನಿ; ವಿಡಿಯೊ ನೋಡಿ

ಏಪ್ರಿಲ್ 10ರಂದು 30ನೇ ವಯಸ್ಸಿಗೆ ಕಾಲಿಟ್ಟ ಅನಂತ್ ಅಂಬಾನಿ ತಮ್ಮ ಹುಟ್ಟುಹಬ್ಬವನ್ನು ಬಾಡಿಗಾರ್ಡ್ಸ್‌ ಆಚರಿಸಿಕೊಂಡು ಸರಳತೆ ಮೆರೆದಿದ್ದಾರೆ. ಅವರೊಂದಿಗೆ ಕೇಕ್ ಕತ್ತರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಬಾಡಿಗಾರ್ಡ್ಸ್‌ ಜತೆ ಅನಂತ್‌ ಅಂಬಾನಿ ಬರ್ತ್‌ಡೇ ಸಂಭ್ರಮ

Profile pavithra Apr 12, 2025 5:58 PM

ಮುಂಬೈ: ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anath Ambani) ಸೋಶಿಯಲ್‌ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಈಗ ಹುಟ್ಟುಹಬ್ಬದ ಆಚರಣೆಯ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಾಮಾನ್ಯವಾಗಿ ಹುಟ್ಟುಹಬ್ಬವನ್ನು ನಾವು ನಮ್ಮ ಕುಟುಂಬದ ಸದಸ್ಯರ ಜತೆ ಆಚರಿಸುತ್ತೇವೆ. ಆದರೆ ದೇಶದ ಆಗರ್ಭ ಶ್ರೀಮಂತ ಕುಟುಂಬದ ಕುಡಿ ಅನಂತ್‌ ಅಂಬಾನಿ ಮಾತ್ರ ತಮ್ಮ ಹುಟ್ಟುಹಬ್ಬವನ್ನು ಪ್ರಾಣವನ್ನು ಪಣಕ್ಕಿಟ್ಟು ರಕ್ಷಣೆಗಾಗಿ ಜತೆ ನಿಲ್ಲುವ ಬಾಡಿಗಾರ್ಡ್ಸ್‌ನೊಂದಿಗೆ ಆಚರಿಸಿದ್ದಾರೆ. ಅವರೊಂದಿಗೆ ಕೇಕ್ ಕತ್ತರಿಸಿ ಸರಳತೆ ಮೆರೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅನಂತ್‍ ಅಂಬಾನಿಯ ಈ ನಡೆಯ ಕುರಿತು ಫುಲ್‌ ಫಿದಾ ಆಗಿದ್ದಾರೆ.

@ambani_update ಎಂಬ ಸೋಶಿಯಲ್ ಮಿಡಿಯಾ ಪೇಜ್‍ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ವಿಡಿಯೊದಲ್ಲಿ ಅನಂತ್ ಅಂಬಾನಿ ತನ್ನ ಬಾಡಿಗಾರ್ಡ್ಸ್‌ ಜತೆ ಕೇಕ್ ಕತ್ತರಿಸುವುದು ಸೆರೆಯಾಗಿದೆ. ಅನಂತ್ ಅಂಬಾನಿ ಏ. 10ರಂದು 30ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ಅನಂತ್ ತಮ್ಮ ಪೂರ್ವಜರ ಹುಟ್ಟೂರಾದ ಜಾಮ್‍ನಗರದಿಂದ ಗುಜರಾತ್‍ನ ಪವಿತ್ರ ನಗರ ದ್ವಾರಕಾಕ್ಕೆ 140 ಕಿಲೋ ಮೀಟರ್ ಪಾದಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ. ಅವರು ಮಾರ್ಚ್ 29ರಂದು ಈ ಆಧ್ಯಾತ್ಮಿಕ ಪ್ರಯಾಣವನ್ನು ಮತ್ತು ಏಪ್ರಿಲ್ 8ರಂದು ಮುಕ್ತಾಯಗೊಳಿಸಿದ್ದಾರೆ.

ಬಾಡಿಗಾರ್ಡ್ಸ್‌ ಜೊತೆ ಅನಂತ್ ಅಂಬಾನಿ ಕೇಕ್ ಕತ್ತರಿಸಿದ ವಿಡಿಯೊ ಇಲ್ಲಿದೆ ನೋಡಿ...

ಹಲವು ವರ್ಷಗಳಿಂದ ಅನಂತ್ ಅಂಬಾನಿ ಬದರೀನಾಥ್, ಕೇದಾರನಾಥ, ಕಾಮಾಕ್ಯ, ನಾಥದ್ವಾರ, ಕಾಳಿಘಾಟ್ ಮತ್ತು ಕುಂಭಮೇಳ ಸೇರಿದಂತೆ ಭಾರತದಾದ್ಯಂತ ಹಲವಾರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ತಮ್ಮ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಅನಂತ್ ಅವರು ದ್ವಾರಕಾಧೀಶನ ಸನ್ನಿಧಿಯಲ್ಲಿ ಪತ್ನಿ ರಾಧಿಕಾ ಮರ್ಚೆಂಟ್ ಮತ್ತು ಅವರ ತಾಯಿ ನೀತಾ ಅಂಬಾನಿ ಅವರೊಂದಿಗೆ ಸೇರಿಕೊಂಡು ದ್ವಾರಕಾಧೀಶನಿಗೆ ಅದ್ದೂರಿಯಾಗಿ ಪೂಜೆ ಪುನಸ್ಕಾರ ನೇರವೇರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಮಹಿಳೆಯ ಕೈಯಿಂದ ಗುಟ್ಕಾ ಪ್ಯಾಕೆಟ್‌ ಕಸಿದುಕೊಂಡ ಕೇಂದ್ರ ಸಚಿವ; ವಿಡಿಯೊ ನೋಡಿ!

ಅನಂತ್ ಅಂಬಾನಿ ಅವರು ಆಗಾಗ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಈ ಹಿಂದೆ ಅನಂತ್ ಅಂಬಾನಿ ಇತ್ತೀಚೆಗೆ ಗುಜರಾತ್‌ನ ಜಾಮ್‍ನಗರದಿಂದ ದ್ವಾರಕಾಗೆ ಪಾದಯಾತ್ರೆ ಮಾಡುವ ಸಮಯದಲ್ಲಿ ವ್ಯಾನ್‌ನಲ್ಲಿ ಸಾಗಿಸುತ್ತಿದ್ದ ಬಾಯ್ಲರ್ ಕೋಳಿಗಳನ್ನು ಕಂಡು ಅವುಗಳನ್ನು ರಕ್ಷಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಎಲ್ಲರ ಮೆಚ್ಚುಗೆ ಗಳಿಸಿತ್ತು. ವಿಡಿಯೊದಲ್ಲಿ ಅವರು ಕೋಳಿಗಳನ್ನು ಕೊಲ್ಲುವುದನ್ನು ತಪ್ಪಿಸಲು ತನ್ನೊಂದಿಗೆ ಪಾದಯಾತ್ರೆ ನಡೆಸುತ್ತಿದ್ದ ಸಹಚರರ ಬಳಿ ಆ ಕೋಳಿಗಳನ್ನು ಖರೀದಿಸಲು ಹೇಳಿರುವುದು ಕಂಡು ಬಂದಿತ್ತು. ಅವರ ಈ ಕಾರ್ಯ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ವಿಡಿಯೊದಲ್ಲಿ ಅವರು ಕೋಳಿ ಒಂದನ್ನು ಹಿಡಿದುಕೊಂಡಿರುವುದು ಸೆರೆಯಾಗಿದೆ. ಗುಜರಾತ್‍ನ ರಸ್ತೆಗಳಲ್ಲಿ ಅವರು ಇತ್ತೀಚೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.