Viral Video: ಬೀದಿಗೆ ಕಸ ಎಸೆದ ಕಿಡಿಗೇಡಿಗಳ ಗ್ರಹಚಾರ ಬಿಡಿಸಿದ ವಿದೇಶಿ ಪ್ರವಾಸಿ; ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೊ
ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಅಮಿಯಾನಾ ಫೈಂಡ್ಸ್ ಕಸವನ್ನು ಬೀದಿಯಲ್ಲಿ ಎಸೆದ ಇಬ್ಬರು ಪುರುಷರನ್ನು ಕರೆದು ಅದನ್ನು ಎಲ್ಲೆಂದರಲ್ಲಿ ಎಸೆಯದೇ ಕಸದ ಬುಟ್ಟಿಗೆ ಹಾಕುವಂತೆ ಸಲಹೆ ನೀಡಿದ್ದಾಳೆ. ಆಕೆ ಇದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ಎಲ್ಲರ ಗಮನಸೆಳೆದು ವೈರಲ್ ಆಗಿದೆ.


ಸರ್ಕಾರ ಮತ್ತು ಸ್ಥಳೀಯ ಆಡಳಿತವು ಸ್ವಚ್ಛತೆಯನ್ನು ಕಾಪಾಡುವ ಬಗ್ಗೆ ನಿರಂತರ ಪ್ರಯತ್ನಗಳನ್ನು ಮಾಡಿದರೂ ಕಸ ವಿಲೇವಾರಿ ಮಾಡುವುದು ಒಂದು ಸವಾಲಾಗಿ ಉಳಿದಿದೆ. ಇತ್ತೀಚೆಗೆ ವಿದೇಶಿ ಪ್ರವಾಸಿಗರೊಬ್ಬರು ಕಸವನ್ನು ಬೀದಿಯಲ್ಲಿ ಎಸೆದ ಇಬ್ಬರು ವ್ಯಕ್ತಿಗಳನ್ನು ಕರೆದು ಬೀದಿಗಳಲ್ಲಿ ಕಸ ಬಿಸಾಡದಂತೆ ಸಲಹೆ ನೀಡಿದ್ದಾರೆ. ಇವರು ಇದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈಗ ಎಲ್ಲರ ಗಮನ ಸೆಳೆದು ವೈರಲ್ (Viral Video) ಆಗಿದೆ. ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಅಮಿಯಾನಾ ಫೈಂಡ್ಸ್ (Ameana Finds) ಹಂಚಿಕೊಂಡ ಈ ವಿಡಿಯೊ ನೋಡಿ ನೆಟ್ಟಿಗರು ಕಸ ಎಸೆದವರ ವಿರುದ್ಧ ಕಿಡಿಕಾರಿದ್ದಾರೆ.
ವೈರಲ್ ವಿಡಿಯೊದಲ್ಲಿ ಕೆಳಗೆ ಬಿಸಾಕಿದ ಪೇಪರ್ ಅನ್ನು ಕಂಡು ವಿದೇಶಿ ಮಹಿಳೆ ಅದನ್ನು ಇಬ್ಬರ ಬಳಿ ಕಸದ ಡಬ್ಬಿಗೆ ಹಾಕಲು ಹೇಳಿರುವುದು ಸೆರೆಯಾಗಿದೆ. ಕಸದ ಬುಟ್ಟಿ ಇದ್ದರೂ ಜನರು ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುತ್ತಾರೆ ಎಂದು ಅಮಿಯಾನಾ ನಿರಾಶೆಯಿಂದ ಹೇಳಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ವೈರಲ್ ಆಗಿ, ಸಾಕಷ್ಟು ಪ್ರಶಂಸೆ ಮತ್ತು ಮೆಚ್ಚುಗೆ ಗಳಿಸಿದೆ. ಒಬ್ಬರು, "ನೀವು ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮಂತಹ ಜನರು ನಮಗೆ ಬೇಕು" ಎಂದು ಬರೆದರೆ, ಮತ್ತೊಬ್ಬರು, "ಜನರಿಗೆ ನಾಗರಿಕ ಪ್ರಜ್ಞೆ ಅನ್ನೋದೆ ಇಲ್ಲ, ಸರಿಯಾಗಿ ಮಾಡಿದ್ದೀರಿ" ಎಂದು ಹೇಳಿದ್ದಾರೆ. ನೆಟ್ಟಿಗರರಲ್ಲಿ ಒಬ್ಬರು "ಜನರು ತಮ್ಮ ಮನೆಗಳನ್ನು ದಿನಕ್ಕೆ 3 ಬಾರಿ ಗುಡಿಸುತ್ತಾರೆ. ಆದರೆ ಉಳಿದ ಕಡೆಯಲ್ಲೆಲ್ಲಾ ಕಸದ ತೊಟ್ಟಿಯಂತೆ ಕಸ ಎಸೆಯುತ್ತಾರೆ. ಕಸವನ್ನು ಕಸದ ಬುಟ್ಟಿಗೆ ಹಾಕದಿದ್ದರೆ ನೀವು ಎಂದಿಗೂ ದೇಶವನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ" ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಬೆಂಗಳೂರಲ್ಲಿ ಚಲಿಸುತ್ತಿದ್ದ ಕಾರಿನಲ್ಲೇ ರೊಮ್ಯಾನ್ಸ್; ಸನ್ ರೂಫ್ ತೆಗೆದು ಯುವತಿಗೆ ಚುಂಬಿಸಿದ ಯುವಕ!
ಇಂತಹ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಇಬ್ಬರು ಡ್ಯಾನಿಶ್ ಪ್ರವಾಸಿಗರು ಉತ್ತರ ಸಿಕ್ಕಿಂನಲ್ಲಿ ಪ್ರಯಾಣಿಸುವಾಗ ರಸ್ತೆಯ ಉದ್ದಕ್ಕೂ ಕಸ ಎತ್ತುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅವರ ಈ ಕೆಲಸ ನೋಡಿ ಇತರ ಪ್ರವಾಸಿಗರು ಹಾಗೂ ಸ್ಥಳೀಯರು ಕೂಡ ಕೈ ಜೋಡಿಸಿದ್ದರು.